ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಕಾಣಿಸಿಕೊಂಡ ಫ್ಲೈಯಿಂಗ್‌ ಸಾಸರ್: ವರದಿ

By Suneel
|

ಏಲಿಯನ್‌ಗಳು ಮತ್ತು ಫ್ಲೈಯಿಂಗ್‌ ಸಾಸರ್‌ಗಳ ಬಗ್ಗೆ ದಶಕಗಳಿಂದಲೂ ಸಹ ಅಧ್ಯಯನ ನಡೆಯುತ್ತಲೇ ಇದೆ. 100 ವರ್ಷಗಳಲ್ಲಿ ಮಾನವ ಜಗತ್ತು ಏಲಿಯನ್‌ಗಳು, ರೋಬೋಟ್‌ಗಳು ಮತ್ತು ನ್ಯೂಕ್ಲಿಯಾರ್‌ ಯುದ್ಧದಿಂದ ಕೊನೆಗೊಳ್ಳಲಿದೆ ಎಂದು ಪ್ರಖ್ಯಾತ ಇಂಗ್ಲೀಷ್‌ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾದ 'ಸ್ಟೀಫನ್‌ ಹಾಕಿಂಗ್‌'ರವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಯಾವುದನ್ನು ನಂಬಬೇಕು, ನಂಬಬಾರದು ಎಂಬುದೇ ಗೊಂದಲವಾಗಿದೆ.

'ಸ್ಟೀಫನ್‌ ಹಾಕಿಂಗ್' ಇತ್ತೀಚೆಗೆ ತಾನೆ ಕೇವಲ 100 ವರ್ಷಗಳಲ್ಲಿ ಮನುಕುಲ ಅಂತ್ಯ ಕಾಣುತ್ತದೆ ಎಂದು ಏಲಿಯನ್‌ ಮತ್ತು ರೋಬೋಟ್‌ಗಳನ್ನು ಉದಾಹರಣೆಗೆ ತೆಗೆದುಕೊಂಡು ಹೇಳಿದ್ದರು. ಅದರ ಬೆನ್ನಲ್ಲೇ ಈಗ ಉತ್ತರ ಪ್ರದೇಶದ ಕಾಸ್‌ಗಂಜ್‌ ಎಂಬಲ್ಲಿ (UFO-Unidentified flying object) ಫ್ಲೈಯಿಂಗ್‌ ಸಾಸರ್‌ ಕಾಣಿಸಿಕೊಂಡಿದೆ.

ಫ್ಲೈಯಿಂಗ್‌ ಸಾಸರ್‌ ಕಾಣಿಸಿಕೊಂಡಿರುವ ಮಾಹಿತಿ ಜುಲೈ 7 ರಂದು ವರದಿಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ ಹಾಗೂ ವೀಡಿಯೊವನ್ನು ನೋಡಿರಿ.

ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌

ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಕಾಣಿಸಿಕೊಂಡ ಯುಎಫ್‌ಓ

ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಕಾಣಿಸಿಕೊಂಡ ಯುಎಫ್‌ಓ

ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಫ್ಲೈಯಿಂಗ್‌ ಸಾಸರ್‌ ಕಾಣಿಸಿಕೊಂಡಿದ್ದು ಸಾಮಾಜಿಕ ತಾಣ ವೇದಿಕೆಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಅನ್ವೇಷಣೆ ನೆಡಿಸಿ ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ಒತ್ತಡವನ್ನು ಹೇರಲಾಗಿದೆ.

pradesh18.com

pradesh18.com

pradesh18.com ಪ್ರಕಾರ ಏಲಿಯನ್‌ನ ಫ್ಲೈಯಿಂಗ್‌ ಸಾಸರ್‌ ಚಿತ್ರವನ್ನು ಕಾಸ್‌ಗಂಜ್‌ ಜಿಲ್ಲೆಯ ಮನ್ಪುರ್‌ ಪ್ರದೇಶದಲ್ಲಿ ಮೊಬೈಲ್‌ನಿಂದ ಕ್ಯಾಪ್ಚರ್‌ ಮಾಡಲಾಗಿದ್ದು, ತಕ್ಷಣದಲ್ಲೇ ಫೇಸ್‌ಬುಕ್, ಟ್ವಿಟರ್‌ ಮತ್ತು ವಾಟ್ಸಾಪ್‌ಗಳಲ್ಲಿ ಚಿತ್ರ ಹರಿಯಬಿಡಲಾಗಿದೆ.

ಫೋಟೋ ಕ್ಲಿಕ್ಕಿಸಿದವರು ಯಾರು

ಫೋಟೋ ಕ್ಲಿಕ್ಕಿಸಿದವರು ಯಾರು

ಉತ್ತರ ಪ್ರದೇಶದ ಕಾಸ್‌ಗಂಜ್‌ ಪ್ರದೇಶದಲ್ಲಿ ಕಾಣಿಸಿಕೊಂಡ ಫ್ಲೈಯಿಂಗ್‌ ಸಾಸರ್‌ ಚಿತ್ರವನ್ನು ಸೆರೆಹಿಡಿದವರು ಯಾರು ಎಂಬ ಮಾಹಿತಿ ಮಾತ್ರ ಇದುವರೆಗೂ ತಿಳಿದುಬಂದಿಲ್ಲ. ಅಲ್ಲದೇ ಆ ಮೊಬೈಲ್‌ ಅನ್ನು ವ್ಯಕ್ತಿ ಸ್ವಿಚ್‌ ಆಫ್‌ ಮಾಡಿರುವುದಾಗಿ ತಿಳಿಯಲಾಗಿದೆ.

ಚಿತ್ರವನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ

ಚಿತ್ರವನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ

ಕಾಸ್‌ಗಂಜ್‌ ಪ್ರದೇಶದ ಜಿಲ್ಲಾಧಿಕಾರಿ ವಿಜೇಂದ್ರ ಪಾಂಡಿಯಾನ್‌ಸಹ ಫ್ಲೈಯಿಂಗ್‌ ಸಾಸರ್‌ ಇಮೇಜ್‌ ಅನ್ನು ಸ್ವೀಕರಿಸಿದ್ದು, ಇಮೇಜ್‌ ಕ್ಯಾಪ್ಚರ್‌ ಆಗಿರುವುದು ಮನ್ಪುರ್‌ ನಲ್ಲೋ ಅಥವಾ ಇತರೆ ಪ್ರದೇಶಗಳಲ್ಲೋ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

rn

ಎಂಇಟಿ ಇಲಾಖೆಗೆ ರವಾನೆ ಆದ ಇಮೇಜ್

ಫ್ಲೈಯಿಂಗ್ ಸಾಸರ್‌ ಇಮೇಜ್‌ ಕ್ಯಾಪ್ಚರ್‌ ಆಗಿರುವ ಫೋಟೋವನ್ನು ಭಾರತದ ಹವಾಮಾನ ಇಲಾಖೆಗೆ ಮತ್ತು ತಜ್ಞರಿಗೆ ಇತರ ತನಿಖೆಗಾಗಿ ಕಳುಹಿಸಿಕೊಡಲಾಗಿದೆ. ವೀಡಿಯೊ ನೋಡಿ.

ದೆಹಲಿ

ದೆಹಲಿ

ದೆಹಲಿಯಲ್ಲಿ 2012 ರ ನವೆಂಬರ್‌ 14 ರಂದು ಕಾಣಿಸಿಕೊಂಡ ಫ್ಲೈಯಿಂಗ್‌ ಸಾಸರ್‌ ಫೋಟೋ.

ಕಣ್ಣೂರು

ಕಣ್ಣೂರು

2013 ರಲ್ಲಿ ಕೇರಳದ ಕಣ್ಣೂರಿನಲ್ಲಿ ಕಾಣಿಸಿಕೊಂಡ ಯುಎಫ್‌ಓ ಚಿತ್ರ ಕ್ಯಾಪ್ಚರ್‌ ಆಗಿರುವುದು ಹೀಗೆ.

ಕೋಲ್ಕತ್ತ

ಕೋಲ್ಕತ್ತ

2007 ರಲ್ಲಿ ಕೋಲ್ಕತ್ತ ಪ್ರದೇಶದಲ್ಲಿ ಕಾಣಿಸಿಕೊಂಡ ಯುಎಫ್‌ಓ ಇಮೇಜ್‌.

ಗಿಜ್‌ಬಾಟ್‌

ಗಿಜ್‌ಬಾಟ್‌

100 ವರ್ಷಗಳಲ್ಲಿ ಮನುಕುಲ ಅಂತ್ಯ; ಸ್ಟೀಫನ್‌ ಹಾಕಿಂಗ್‌100 ವರ್ಷಗಳಲ್ಲಿ ಮನುಕುಲ ಅಂತ್ಯ; ಸ್ಟೀಫನ್‌ ಹಾಕಿಂಗ್‌

ಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆ ಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
'UFO' cited in Uttar Pradesh's Kasganj, image goes viral: Reports. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X