Subscribe to Gizbot

ರಾನ್‍ಸಮ್‍ವೇರ್ ರಾನ್‍ಸಮ್‍ವೇರ್ ತಿಳಿಯೋಣ

ನಿಮಗೆ ದಿನವೂ ಶಾಲೆಗೆ ಹೋಗುವ ಸುಂದರ ಮಗಳಿದ್ದಾಳೆ . ಒಂದು ದಿನ ಶಾಲೆಯಿಂದ ಬರುವಾಗ ಇಬ್ಬರು ಗಂಡಸರು ಅವಳನ್ನು ಅಪಹರಣ ಮಾಡಿ ಮಗಳನ್ನು ಹಿಂಪಡೆಯಲು ಹಣ ಅಥವಾ ರ್ಯಾನ್ಸಮ್ ನೀಡುವಂತೆ ಹೇಳುತ್ತಾರೆ.

ರಾನ್‍ಸಮ್‍ವೇರ್ ರಾನ್‍ಸಮ್‍ವೇರ್ ತಿಳಿಯೋಣ

ರ್ಯಾನ್ಸಮ್‍ವೇರ್ ಇದಕ್ಕಿಂತ ಭಿನ್ನದ ಕಥೆಯೇನಲ್ಲಾ. ಇಲ್ಲಿ ಹುಡುಗಿಯನ್ನು ಗಣಕಯಂತ್ರ/ಮ್ಯಾಕ್ ಗೆ ಬದಲಾಗಿಯಿಸಿ ಮತ್ತು ಇಬ್ಬರು ಗಂಡಸರನ್ನು ಅಂತರ್ಜಾಲ ಅಪರಾಧಿಗಳೊಂದಿಗೆ ಬದಲಾಯಿಸಿ ಆಗ ನಿಮಗೆ ಗೊತ್ತಾಗುತ್ತದೆ ರಾನ್‍ಸಮ್‍ವೇರ್ ಏನೆಂದು.

ಓದಿರಿ: ಸಂಗಾತಿ ಹುಡುಕಲು ಇರುವ 4 ಬೆಸ್ಟ್‌ ಆಪ್‌ಗಳು!..ಈಗಲೇ ಫ್ರೊಫೈಲ್ ಕ್ರಿಯೇಟ್ ಮಾಡಿ!!

ಇದು ಹೀಗೆ ಸಾಮಾನ್ಯ ಭಾಷೆಯಲ್ಲಿ ರಾನ್‍ಸಮ್‍ವೇರ್ ಬಗ್ಗೆ ಹೇಳಿದಂತಾಯಿತು, ಈಗ ತಾಂತ್ರಿಕ ಭಾಷೆಯಲ್ಲಿ ನೋಡೊಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರ್ಯಾನ್ಸಮ್‍ವೇರ್ ವ್ಯಾಖ್ಯಾನ

ರ್ಯಾನ್ಸಮ್‍ವೇರ್ ವ್ಯಾಖ್ಯಾನ

ರ್ಯಾನ್ಸಮ್‍ವೇರ್ ಅನ್ನೋದು ಒಂದು ರೀತಿಯ ಮಾಲ್‍ವೇರ್, ಇದು ನಿಮ್ಮ ಗಣಕಯಂತ್ರದ ಹೋಸ್ಟ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಸಂಪೂರ್ಣವಾಗಿ ಇಲ್ಲಾ ಪಾಶ್ರ್ವವಾಗಿ ಬಂಧಿಸುತ್ತದೆ ಹಣವನ್ನು ದಾಳಿಕೋರರಿಗೆ ನೀಡುವ ತನಕ (ಸಾಮಾನ್ಯವಾಗಿ ಭೂಗತ ಅಂತರ್ಜಾಲ ಅಪರಾಧಿಗಳು). ಸಾಮಾನ್ಯವಾಗಿ,ಈ ಹಣ ಸಾಮಾನ್ಯವಾಗಿ ಚಿಲ್ಲರೆಯಲ್ಲಿ ಅಥವಾ ಇನ್ನಾವುದಾದರು ಪತ್ತೆ ಹಚ್ಚಲಾಗದಂತಹ ಡಿಜಿಟಲ್ ಹಣ ದಲ್ಲಿ ಪಡೆಯುತ್ತಾರೆ.

ಈ ರ್ಯಾನ್ಸಮ್ ಏನು ಮಾಡುತ್ತದೆ?

ಈ ರ್ಯಾನ್ಸಮ್ ಏನು ಮಾಡುತ್ತದೆ?

ಬಹಳಷ್ಟು ರೀತಿಯ ರ್ಯಾನ್ಸಮ್ ಇದ್ದರೂ ಕೂಡ ಎಲ್ಲರ ಮೂಲ ಉದ್ದೇಶ ಒಂದೆ - ಮುಗ್ಧ ಜನರಿಂದ ಹಣ ವಸೂಲಿ ಮಾಡುವುದು. ಇವರೆಲ್ಲಾ ಮಾಡುವುದೊಂದೆ ಗಣಕಯಂತ್ರದ ಮೇಲೆ ತಮ್ಮ ನಿಯಂತ್ರಣವನ್ನು ಹೊಂದಿ ನಿಮಗೆ ಯಾವುದೇ ಕಡತಗಳನ್ನು ಪಡೆಯದಂತೆ ತಡೆಯುವರು. ಈಗ ನಿಮಗೆ ಆಶ್ಚರ್ಯವಾಗಬಹುದು ಇದು ಹೇಗೆ ಆಗುವುದೆಂದು. ಇಲ್ಲಿದೆ ಅದರ ವಿವರಣೆ.

ಮೂಲಭೂತವಾಗಿ, ರಾನ್‍ಸಮ್‍ವೇರ್ ನಿಮ್ಮ ಗಣಕಯಂತ್ರದೊಳಗೆ ಮುಸುಕುಧಾರಿಯಾಗಿ ಪ್ರವೇಶಿಸುತ್ತದೆ ಒಂದು ಸಾಮಾನ್ಯ ಕಡತದ ರೂಪದಲ್ಲಿ. ಆ ಕಡತ ಉದ್ದೇಶ ಪೂರ್ವಕವಾಗಿ ಇಲ್ಲಾ ತಪ್ಪಿ ಬಂದರೂ ಅದು ಲೆಕ್ಕವಿಲ್ಲಾ, ಒಮ್ಮೆ ಆ ಕಡತ ತೆರೆದರೆ ರಾನ್‍ಸಮ್‍ವೇರ್ ಎಲ್ಲಾ ಕಡತಗಳನ್ನು ಎನ್‍ಕ್ರಿಪ್ಟ್ ಮಾಡಲು ಶುರುಮಾಡುತ್ತದೆ ಮತ್ತು ಮುಗಿದ ನಂತರ ಒಂದು ತಪ್ಪಿನ ಸಂದೇಶ ಪರದೆ ಮೇಲೆ ಬರುತ್ತದೆ ಗಣಕಯಂತ್ರದ ಎಲ್ಲಾ ಕಡತಗಳು ಎನ್‍ಕ್ರಿಪ್ಟ್ ಆಗಿರುವ ಬಗ್ಗೆ.

ಅದರ ಪರಿಹಾರ ವಾದ ಡಿಕ್ರಿಪ್ಷನ್ ಬೀಗವು ದುಡ್ಡು ನೀಡಿದ ನಂತರವೇ ಸಿಗುವುದು. ಕೆಲವೊಮ್ಮೆ ದುಡ್ಡು ಕೊಟ್ಟ ನಂತರವೂ ಡಿಕ್ರಿಪ್ಷನ್ ಬೀಗ ನೀಡುವರೆಂದು ಖಚಿತವಾಗಿ ಹೇಳಲಾಗುವುದಿಲ್ಲಾ.

ನೀವು ರ್ಯಾನ್ಸಮ್ ಪಾವತಿಸದಿದ್ದರೆ ಏನಾಗುವುದು?

ನೀವು ರ್ಯಾನ್ಸಮ್ ಪಾವತಿಸದಿದ್ದರೆ ಏನಾಗುವುದು?

ನೀವು ಒತ್ತಾಯ ಮಾಡಿದಷ್ಟು ಹಣ ಹೇಳಿದ ಸಮಯದೊಳಗೆ ನೀಡದಿದ್ದಾಗ ಎರಡು ರೀತಿ ಆಗಬಹುದು: ಒಂದು, ಹೆಚ್ಚಿನ ಸಮಯ ನೀಡಬಹುದು, ಆದರೆ ಮೊದಲು ಕೇಳಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಕೇಳಬಹುದು. ಇಲ್ಲವೇ ನಿಮ್ಮ ಕಡತಗಳನ್ನು ದಾಳಿಕೋರ ಅಳಿಸಬಹುದು.

ರ್ಯಾನ್ಸಮ್‍ವೇರ್ ಪ್ರವೇಶ ದ್ವಾರಗಳು

ರ್ಯಾನ್ಸಮ್‍ವೇರ್ ಪ್ರವೇಶ ದ್ವಾರಗಳು

ಕೇಳುವಷ್ಟೆ ಕೆಟ್ಟದಾಗಿ ಅನಿಸುವುದು, ಇದಕ್ಕೆ ನಿರ್ದಿಷ್ಟವಾದ ಯಾವುದೇ ಪ್ರವೇಶದ್ವಾರವಿಲ್ಲಾ. ಇದು ನಿಮ್ಮ ಗಣಕಯಂತ್ರವನ್ನು ಎಲ್ಲಿಂದಾದರೂ ಪ್ರವೇಶಿಸಬಹುದು. . ಅನುಮಾನಾಸ್ಪದ, ಪ್ರತಿಬಂಧಿತ ಜಾಲತಾಣಗಳು, ಈಮೇಲ್‍ಗಳು ಮತ್ತು ಇತರೆ ಮಾಲ್‍ವೇರ್ ಗಳಿಂದ. ಹೀಗಾಗಿ, ಮುಂದೆ ನೀವು ಯಾವುದಾದರು ಕೇಳದ ಜಾಲತಾಣ ತೆರೆಯುವವರಿದ್ದರೆ ಎಚ್ಚರವಾಗಿರಿ.

ರ್ಯಾನ್ಸಮ್‍ವೇರ್ ಕುಟುಂಬ

ರ್ಯಾನ್ಸಮ್‍ವೇರ್ ಕುಟುಂಬ

ಮೊದಲೇ ಹೇಳಿದಂತೆ ರಾನ್‍ಸಮ್‍ವೇರ್ ನಲ್ಲಿ ಬಹಳಷ್ಟು ವಿಧಗಳಿವೆ. ಕ್ರಿಪ್ಟೊಲೊಕರ್, ಕ್ರಿಪ್ಟೊವಾಲ್, ಲೊಕಿ, ಸಮಸ್/ಸಮ್ಸಮ್/ಸಮ್ಸಾ ಹೀಗೆ ಹಲವಾರಿವೆ. ಅದೇನಿದ್ದರೂ, ಈ ಲೇಖನದಲ್ಲಿ ನಾವು ಕೆಲ ಸಾಮಾನ್ಯ ರ್ಯಾನ್ಸಮ್ ವಿಧಗಳ ಬಗ್ಗೆ ನೋಡೊಣ.

1. ಕ್ರಿಪ್ಟೊಲೊಕರ್

ಕ್ರಿಪ್ಟೊಲೊಕರ್ ಮೊದಲು ಪತ್ತೆಯಾದದ್ದು ಸೆಪ್ಟೆಂಬರ್ 5, 2013 ರಲ್ಲಿ. ಇದರ ಉದ್ದೇಶ ಮೈಕ್ರೊಸಾಫ್ಟ್ ವಿಂಡೊಸ್ ( ಮತ್ತು ಇತರ ಸಂಪರ್ಕಿಸಲ್ಪಟ್ಟ ಡಿವೈಜ್‍ಗಳು. ಉದಾ: ಪೆನ್ ಡ್ರೈವ್‍ಗಳು) ಅನ್ನು ಹಾಳು ಮಾಡುವುದು. ಇದು ಹರಡುತ್ತದೆ ಈಮೇಲ್ ಅಟ್ಯಾಚ್‍ಮೆಂಟ್ ಗಳಿಂದ ಮತ್ತು ಈಗಾಗಲೆ ಇರುವ ಬೊಟ್ ನೆಟ್ ಗಳಿಂದ. ಮಾಲ್‍ವೇರ್ ಕಾರ್ಯಗತಗೊಂಡಾಗ, ಅದು ಆರ್‍ಎಸ್‍ಎ ಪಬ್ಲಿಕ್ ಕೀ ಉಪಯೋಗಿಸುತ್ತದೆ ಫೈಲ್ ಅನ್ನು ಎನ್‍ಕ್ರಿಪ್ಟ್ ಮಾಡಲು.

2. ಲೊಕಿ

ಲೊಕಿ ಇತ್ತೀಚೆಗೆ ಪತ್ತೆಯಾದದ್ದರಲ್ಲಿ ಒಂದು. ಮೊದಲು ದೊರೆತದ್ದು ಫೆಬ್ರವರಿ 2016 ರಲ್ಲಿ. ಇದು ಕೂಡ ಈಮೇಲ್ ಅಟ್ಯಾಚ್‍ಮೆಂಟ್ ಮೂಲಕ ಹರಡುತ್ತದೆ, ಆದರೆ ಇವರು ತುಂಟತನದಿಂದ ಕಡತಗಳ ನೆರಳಿನ ನಕಲು( ಅಟೊಮೆಟಿಕ್ ಬ್ಯಾಕಪ್ ಪ್ರತಿಗಳು)ಗಳನ್ನು ಅಳಿಸುವಲ್ಲಿ ಪ್ರಖ್ಯಾತರು. ಈ ಹಾಳುಮಾಡುವ ಈ ಮೇಲ್ ಮೈಕ್ರೊಸಾಫ್ಟ್ ವರ್ಡ್ ಕಡತವನ್ನು ಕೆಟ್ಟ ಮ್ಯಾಕ್ರೊಸ್ ನೊಂದಿಗೆ ಹೊಂದಿರುತ್ತದೆ, ಇದು ಯಾರಾದರು ತೆರೆದ ಕೂಡಲೆ ಕಾರ್ಯಗತಗೊಳ್ಳುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are the fundamentals of ransomware and what you should do to protect yourselves.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot