ಇವೇ ನೋಡಿ, ಮುಂದೆ ಬರಲಿರುವ ಶಿಯೋಮಿಯ ಹೊಸ ಬಜೆಟ್‌ ಬೆಲೆಯ ಫೋನ್‌ಗಳು!

|

ಶಿಯೋಮಿ ರೆಡ್ಮಿ ಸಂಸ್ಥೆಯು ಸ್ಮಾರ್ಟ್‌ಫೋನ್ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ರೆಡ್ಮಿ ಕಂಪನಿಯು ಅಗ್ಗದ ಪ್ರೈಸ್‌ನಿಂದ ದುಬಾರಿ ಬೆಲೆಯ ವರೆಗೂ ಭಿನ್ನ ಸ್ಮಾರ್ಟ್‌ಫೋನ್‌ ಮಾಡೆಲ್‌ಗಳ ಆಯ್ಕೆಯನ್ನು ಒಳಗೊಂಡಿದೆ. ಆದ್ರೆ, ಸಾಮಾನ್ಯವಾಗಿ, ಬಹುತೇಕ ಖರೀದಿದಾರರು 20,000ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಲಭ್ಯವಾಗುವ ಫೋನ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಹೊಸ ವರ್ಷ (2023) ರಲ್ಲಿ ರೆಡ್ಮಿ ಕೆಲವು ಬಜೆಟ್‌ ಫೋನ್‌ಗಳನ್ನು ಲಾಂಚ್ ಮಾಡಲಿದೆ.

ವರ್ಷದಲ್ಲಿ

ಹೌದು, ರೆಡ್ಮಿ ಸಂಸ್ಥೆಯು ಬರಲಿರುವ ನೂತನ ವರ್ಷದಲ್ಲಿ ಕೆಲವು ಬಜೆಟ್‌ ಬೆಲೆಯ ಫೋನ್‌ಗಳಲ್ಲಿ ಪರಿಚಯಿಸಲಿದೆ. ಎಂಟ್ರಿ ಕೊಡಲಿರುವ ಫೋನ್‌ಗಳು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಹಾಗೂ ಮೀಡಿಯಾ ಟೆಕ್ ಹಿಲಿಯೋ ಪ್ರೊಸೆಸರ್‌ ಕಾರ್ಯವೈಖರಿ ಅನ್ನು ಒಳಗೊಂಡಿರಲಿವೆ ಎನ್ನಲಾಗಿದೆ. ಇದರ ಜೊತೆಗೆ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ RAM ಆಯ್ಕೆಗಳನ್ನು ಪಡೆದಿರುವ ನಿರೀಕ್ಷೆಗಳಿವೆ. ಹಾಗಾದರೇ 2023ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಬಜೆಟ್‌ ದರದ ಕೆಲವು ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ ನೋಟ್‌ 12

ರೆಡ್ಮಿ ನೋಟ್‌ 12

ರೆಡ್ಮಿ ನೋಟ್‌ 12 ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್‌ ರೇಟ್‌ ಬೆಂಬಲವನ್ನು ಪಡೆದಿರುವ ಸಾದ್ಯತೆಯಿದೆ. ಜೊತೆಗೆ 1200 ಗರಿಷ್ಠ ಬ್ರೈಟ್‌ನೆಸ್‌ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಡಿಸ್‌ಪ್ಲೇ 85.0% ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದೆ. ಇದರ ರಚನೆಯ ಅನುಪಾತ 20:9 ರಷ್ಟಿದೆ ಎಂದು ಹೇಳಲಾಗಿದೆ. ರೆಡ್ಮಿ ನೋಟ್‌ 12 ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 4 Gen 1SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ರೆಡ್ಮಿ ನೋಟ್‌ 12 5G

ರೆಡ್ಮಿ ನೋಟ್‌ 12 5G

ರೆಡ್ಮಿ ನೋಟ್‌ 12 5G ಫೋನ್‌ 128GB, 256GB ಸಂಗ್ರಹಣೆ / 4GB, 6GB ಮತ್ತು 8GB RAM ರೂಪಾಂತರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಹಾಗೆಯೇ ಇದು 48ಎಂಪಿ + 2ಎಂಪಿ ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8ಎಂಪಿ ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಫೋನಿನ ಡಿಸ್‌ಪ್ಲೇಯು 6.67 ಇಂಚುಗಳ 1080 x 2400 ಪಿಕ್ಸೆಲ್‌ಗಳಾಗಿದ್ದು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್‌ ಕಾರ್ಯನಿರ್ವಹಿಸಲಿದೆ. ಜೊತೆಗೆ 5000 mAh ಬ್ಯಾಟರಿಯಿಂದ ಬ್ಯಾಕ್‌ಅಪ್‌ ಸಹ ಇರಲಿದೆ.

ಶಿಯೋಮಿ ರೆಡ್ಮಿ ನೋಟ್ 13

ಶಿಯೋಮಿ ರೆಡ್ಮಿ ನೋಟ್ 13

ಶಿಯೋಮಿ ರೆಡ್ಮಿ ನೋಟ್ 13 (Xiaomi Redmi Note 13) ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಆಗಿದ್ದು, ಜನವರಿ 26, 2023 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್ 6.52 ಇಂಚಿನ IPS LCD ಜೊತೆಗೆ 90Hz ರಿಫ್ರೆಶ್ ರೇಟ್, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 8ಎಂಪಿ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದು ಮೀಡಿಯಾ ಟೆಕ್‌ ಹಿಲಿಯೋ G88 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 18W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

ಆಂತರಿಕ

ಹಾಗೆಯೇ ಈ ಫೋನ್ 64GB ಆಂತರಿಕ ಸಂಗ್ರಹಣೆಯನ್ನು ಸಹ ಹೊಂದಿದೆ, ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್, ಡ್ಯುಯಲ್ ಸಿಮ್ ಸ್ಲಾಟ್‌ಗಳು ಮತ್ತು 4G, 3G ಮತ್ತು 2G ನೆಟ್‌ವರ್ಕ್‌ಗಳಿಗೆ ಬೆಂಬಲವನ್ನು ಬಳಸಿಕೊಂಡು ವಿಸ್ತರಿಸಬಹುದು, ಜೊತೆಗೆ VoLTE ಸೌಲಭ್ಯ ಪಡೆದಿರಲಿದೆ.

ಶಿಯೋಮಿ ರೆಡ್ಮಿ ನೋಟ್ 13 ಪ್ರೊ ಮ್ಯಾಕ್ಸ್‌ 5G

ಶಿಯೋಮಿ ರೆಡ್ಮಿ ನೋಟ್ 13 ಪ್ರೊ ಮ್ಯಾಕ್ಸ್‌ 5G

ಶಿಯೋಮಿ ರೆಡ್ಮಿ ನೋಟ್ 13 ಪ್ರೊ ಮ್ಯಾಕ್ಸ್‌ 5G ಫೋನ್ 120Hz ರಿಫ್ರೆಶ್ ರೇಟ್ ಪಡೆದಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 720G ಚಿಪ್‌ಸೆಟ್ ಪ್ರೊಸೆಸರ್‌ ಒಳಗೊಂಡಿದೆ. ಈ ಫೋನ್‌ 108ಎಂಪಿ ಹಿಂಬದಿಯ ಕ್ಯಾಮೆರಾ, 32ಎಂಪಿ ಮುಂಭಾಗದ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ ಇದು 67W ವೇಗದ ಚಾರ್ಜಿಂಗ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.

Best Mobiles in India

English summary
Redmi Note 12 series is expected to be released in India in January 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X