ಸ್ಮಾರ್ಟ್‌ಫೋನ್‌ ಖರೀದಿಸಬೇಕೇ?.. ಫೆಬ್ರವರಿಯಲ್ಲಿ ಈ ಫೋನ್‌ಗಳು‌ ಲಾಂಚ್‌ ಆಗಲಿವೆ ನೋಡಿ!

|

ಸ್ಮಾರ್ಟ್‌ಫೋನ್‌ಗಳು ಈಗ ವಿವಿಧ ರೀತಿಯ ಫೀಚರ್ಸ್‌ಗಳ ಜೊತೆಗೆ ಬಳಕೆದಾರರ ಕೈ ಸೇರುತ್ತಿವೆ. ಅದರಲ್ಲೂ ಈ ಫೋನ್‌ಗಳಲ್ಲಿ ವಿವಿಧ ಫೀಚರ್ಸ್‌ ನೀಡುವುದಕ್ಕಾಗಿಯೇ ಸ್ಮಾರ್ಟ್‌ಫೋನ್‌ ತಯಾರಿಕಾ ಬ್ರ್ಯಾಂಡ್‌ಗಳು ಒಂದಕ್ಕೊಂದು ಆರೋಗ್ಯಕರ ಪೈಪೋಟಿ ನಡೆಸುತ್ತಾ ಬರುತ್ತಿವೆ. ಪರಿಣಾಮ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಲು ವಿವಿಧ ಆಯ್ಕೆ ಲಭ್ಯವಾಗುತ್ತಿದೆ.

ಸ್ಮಾರ್ಟ್‌ಫೋನ್‌

ಹೌದು, ಈ ವರ್ಷದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸಲು ಮುಂದಾಗಿವೆ. ಅದರಲ್ಲೂ ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಅಥವಾ ಮಾರ್ಚ್‌ನಲ್ಲಿ ಪ್ರಮುಖ ಬ್ರ್ಯಾಂಡ್‌ನ ಫೋನ್‌ಗಳು ಲಾಂಚ್‌ ಆಗಲಿವೆ. ಅದರಲ್ಲೂ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2023 ಬಾರ್ಸಿಲೋನಾದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ನಡೆಯುತ್ತಿರುವುದರಿಂದ ಹಲವಾರು ಫೋನ್‌ಗಳು ಈ ವೇದಿಕೆಯಲ್ಲಿ ಲಾಂಚ್‌ ಆಗಲಿವೆ. ಅದರಂತೆ ಮುಂದಿನ ತಿಂಗಳು ಯಾವೆಲ್ಲಾ ಫೋನ್‌ಗಳು ಲಾಂಚ್‌ ಆಗಬಹುದು ಎಂಬ ಲಿಸ್ಟ್‌ ಅನ್ನು ಇಲ್ಲಿ ನೀಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹಾಗೂ ಜಾಗತಿಕವಾಗಿ ಫೆಬ್ರವರಿ 1, 2023 ಲಾಂಚ್‌ ಆಗುವ ನಿರೀಕ್ಷೆ ಇದೆ. ಈ ವಿಭಾಗದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23, ಗ್ಯಾಲಕ್ಸಿ S23 Plus ಮತ್ತು ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿವೆ. ಅಂತೆಯೇ ಗ್ಯಾಲಕ್ಸಿ S23 ಸರಣಿಯು ಈ ವರ್ಷದ ಅತ್ಯಂತ ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ.

ಒನ್‌ಪ್ಲಸ್‌ 11 5G

ಒನ್‌ಪ್ಲಸ್‌ 11 5G

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಫೆಬ್ರವರಿ 7 ರಂದು ಲಾಂಚ್‌ ಆಗಲಿದೆ. ಈ ಫೋನ್‌ ಅನ್ನು ಈಗಾಗಲೇ ಚೀನಾದಲ್ಲಿ ಅನಾವರಣಗೊಳಿಸಲಾಗಿದ್ದು, ಈ ಫೋನ್‌ನ ನಿರೀಕ್ಷಿತ ಬೆಲೆ ಹಾಗೂ ಪ್ರಮುಖ ಫೀಚರ್ಸ್‌ ಬಹಿರಂಗಗೊಂಡಿದೆ.

ಶಿಯೋಮಿ 13 ಸರಣಿ

ಶಿಯೋಮಿ 13 ಸರಣಿ

ಶಿಯೋಮಿ 13 ಸರಣಿ ಸ್ಮಾರ್ಟ್‌ಫೋನ್‌ಗಳು 2023 ರ ಎರಡನೇ ತ್ರೈಮಾಸಿಕದಲ್ಲಿ ಭಾರತಲ್ಲಿ ಲಾಂಚ್‌ ಆಗಲಿವೆ ಎಂದು ತಿಳಿದುಬಂದಿದೆ. ಹಾಗೆಯೇ MWC 2023 ನಲ್ಲಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ನಿರೀಕ್ಷಿಸಬಹುದಾಗಿದೆ. ಇದರಲ್ಲಿ ಶಿಯೋಮಿ 13, ಶಿಯೋಮಿ 13 ಪ್ರೊ ಮತ್ತು ಶಿಯೋಮಿ 13 ಲೈಟ್‌ ಅನ್ನು ಚೀನಾದಲ್ಲಿ ಅನಾವರಣಗೊಳಿಸಿದೆ.

ಒಪ್ಪೋ ಸ್ಮಾರ್ಟ್‌ಫೋನ್

ಒಪ್ಪೋ ಸ್ಮಾರ್ಟ್‌ಫೋನ್

ಒಪ್ಪೋದ ಫೈಂಡ್ N2 ಮತ್ತು ಫೈಂಡ್ N2 ಫ್ಲಿಪ್ ಫೋನ್‌ಗಳನ್ನು ಕಳೆದ ವರ್ಷದ ಅಂತ್ಯದಲ್ಲಿ ಚೀನಾದಲ್ಲಿ ಲಾಂಚ್ ಮಾಡಲಾಗಿದೆ. ಆದರೂ ಒಪ್ಪೋ ಅಧಿಕೃತವಾಗಿ ಜಾಗತಿಕವಾಗಿ ಈ ಫೋನ್‌ಗಳನ್ನು ಯಾವಾಗ ಲಾಂಚ್‌ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೂ ಸಹ ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ಅನ್ನು ಮುಂದಿನ ತಿಂಗಳು ಲಾಂಚ್‌ ಮಾಡಲಾಗುತ್ತದೆ ಎನ್ನಲಾಗಿದೆ.

ಮೊಟೊರೊಲಾ ಎಡ್ಜ್ 40 ಪ್ರೊ

ಮೊಟೊರೊಲಾ ಎಡ್ಜ್ 40 ಪ್ರೊ

ಮೊಟೊರೊಲಾ ಎಡ್ಜ್ 40 ಪ್ರೊ ಅನ್ನು ಮುಂದಿನ ತಿಂಗಳು ಲಾಂಚ್‌ ಮಾಡುವ ನಿರೀಕ್ಷೆ ಇದೆ. ಇದು ಕಳೆದ ತಿಂಗಳಷ್ಟೇ ಚೀನಾದಲ್ಲಿ ಲಾಂಚ್‌ ಆಗಿದೆ. ಈ ಫೋನ್‌ ಮೊಟೊ X40 ನಮರುಬ್ಯಾಡ್ಜ್ ಆವೃತ್ತಿಯಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ ಮಾರ್ಚ್ 2022 ರವರೆಗೆ ಫೋನ್ ಭಾರತದಲ್ಲಿ ಲಭ್ಯ ಇರುವುದಿಲ್ಲ ಎನ್ನುವ ಮಾತು ಸಹ ಕೇಳಿಬರುತ್ತಿವೆ.

ಐಕ್ಯೂ ನಿಯೋ 7

ಐಕ್ಯೂ ನಿಯೋ 7

ಐಕ್ಯೂ ನಿಯೋ 7 ಸ್ಮರ್ಟ್‌ಫೋನ್‌ ಫೆಬ್ರವರಿ 16 ರಂದು ಭಾರತದ ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ. ಭಾರತದಲ್ಲಿ ಲಾಂಚ್‌ ಆಗಲಿರುವ ಐಕ್ಯೂ ನಿಯೋ 7 ವೇರಿಯಂಟ್‌ ಚೀನಾದಲ್ಲಿ ಲಾಂಚ್‌ ಆದ ಐಕ್ಯೂ ನಿಯೋ 7 SE ಯಂತೆಯೇ ಫೀಚರ್ಸ್‌ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ವಿವೋ X90 ಸರಣಿ

ವಿವೋ X90 ಸರಣಿ

ವಿವೋ X90 ಸರಣಿ ಸ್ಮಾರ್ಟ್‌ಫೋನ್‌ MWC 2023 ರಲ್ಲಿ ಜಾಗತಿಕವಾಗಿ ಲಾಂಚ್‌ ಆಗುವ ನಿರೀಕ್ಷೆ ಇದೆ. ಆದರೂ ಕಂಪೆನಿ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ. ಇನ್ನು ಈ ಸರಣಿಯಲ್ಲಿ ವಿವೋ X90, ವಿವೋ X90 ಪ್ರೊ ಮತ್ತು ವಿವೋ X90 ಪ್ರೊ ಪ್ಲಸ್ ಅನ್ನು ಒಳಗೊಂಡಿದೆ. ಮೂರು ಸ್ಮಾರ್ಟ್‌ಫೋನ್‌ಗಳನ್ನು ನವೆಂಬರ್ 2022 ರಲ್ಲಿ ಚೀನಾದಲ್ಲಿ ಲಾಂಚ್‌ ಮಾಡಲಾಗಿತ್ತು.

ಪೊಕೊ X5 ಸರಣಿ

ಪೊಕೊ X5 ಸರಣಿ

ಪೊಕೊ X5 ಸರಣಿಯ ಸ್ಮಾರ್ಟ್‌ಫೋನ್‌ ಸಹ ಮುಂದಿನ ತಿಂಗಳು ಅನಾವರಣ ಆಗಲಿದೆ ಎಂದು ಹೇಳಲಾಗುತ್ತಿದ್ದು, ಈ ಫೋನ್‌ನ ರಿಯರ್‌ ಭಾಗವನ್ನಷ್ಟೇ ತೋರಿಸಲಾಗಿದೆ. ಇದರಲ್ಲಿ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಕಾಣಿಸಿಕೊಂಡಿದ್ದಾರೆ.

ರಿಯಲ್‌ಮಿ GT ನಿಯೋ 5

ರಿಯಲ್‌ಮಿ GT ನಿಯೋ 5

ರಿಯಲ್‌ಮಿ GT ನಿಯೋ 5 ಸ್ಮಾರ್ಟ್‌ಫೋನ್‌ ಸಹ ಮುಂದಿನ ತಿಂಗಳು ಲಾಂಚ್‌ ಆಗಲಿದೆ. ಈ ಫೋನ್‌ ಬಗ್ಗೆ ಕೆಲವು ಫೀಚರ್ಸ್‌ಗಳು ಲೀಕ್‌ ಆಗಿದ್ದು, ಅದರಂತೆ 240W ಸೂಪರ್‌ವೂಕ್‌ ಚಾರ್ಜಿಂಗ್ ಅನ್ನು ಬೆಂಬಲಿಸುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಇದಾಗಿರಲಿದೆ.

Best Mobiles in India

English summary
Many Smartphone will be launched next month, see the details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X