2022 ರ ಡಿಸೆಂಬರ್‌ನಲ್ಲಿ ದಾಖಲೆ ಮಟ್ಟದಲ್ಲಿ ಯುಪಿಐ ಪಾವತಿ ಪ್ರಕ್ರಿಯೆ!

|

ಈಗ ಹಣಪಾವತಿ ಆಯ್ಕೆ ಬಹುಪಾಲು ಡಿಜಿಟಲೀಕಣವಾಗಿದೆ. ಇದರ ಭಾಗವಾಗಿರುವುದೇ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ). ಇದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಅಭಿವೃದ್ಧಿಪಡಿಸಲಾದ ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದ್ದು, ಕ್ಷಣಮಾತ್ರದಲ್ಲಿ ಪಾವತಿ ಪ್ರಕ್ರಿಯೆ ನಡೆಸಬಹುದಾಗಿದೆ. ಭಾರತದಲ್ಲಿ ಅದರಲ್ಲೂ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಯುಪಿಐ ದಾಖಲೆ ಬರೆದಿದೆ.

ಯುಪಿಐ

ಹೌದು, ಯುಪಿಐ ಪಾವತಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಡಿಸೆಂಬರ್‌ನಲ್ಲಿ ಗರಿಷ್ಠ ಪಾವತಿಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹಾಗೆಯೇ ದೇಶದಲ್ಲಿ ಡಿಜಿಟಲ್ ಪಾವತಿ ಕ್ರಾಂತಿಯನ್ನು ಉಂಟುಮಾಡುವಲ್ಲಿ ಯುಪಿಐ ಪ್ರಮುಖ ಕೊಡುಗೆ ನೀಡಿದ್ದು, ಕಳೆದ ಡಿಸೆಂಬರ್‌ನಲ್ಲಿ ಜರುಗಿದ ಪಾವತಿ ಪ್ರಕ್ರಿಯೆಗಳೆಷ್ಟು?, ಯಾವ ರೀತಿಯ ವಹಿವಾಟು ನಡೆಸಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ವಿವರಿಸಲಾಗಿದೆ ಓದಿರಿ.

ದಾಖಲೆ ಬರೆದ ಯುಪಿಐ

ದಾಖಲೆ ಬರೆದ ಯುಪಿಐ

ಡಿಸೆಂಬರ್ 2022 ರಲ್ಲಿ ಯುಪಿಐ 12.82 ಟ್ರಿಲಿಯನ್ (12.82 ಲಕ್ಷ ಕೋಟಿ ರೂ.) ಮೌಲ್ಯದ 7.82 ಶತಕೋಟಿ ವಹಿವಾಟುಗಳನ್ನು ದಾಟಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಹಣಕಾಸು ಸೇವೆಗಳ ಇಲಾಖೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಇನ್ನು ಈ ಯುಪಿಐ ಪಾವತಿ ಪ್ಲಾಟ್‌ಫಾರ್ಮ್‌ ಅನ್ನು 2016 ರಲ್ಲಿ ಆರಂಭಿಸಲಾಗಿತ್ತು. ಇದರೊಂದಿಗೆ ಅಕ್ಟೋಬರ್‌ನಲ್ಲಿ 12 ಲಕ್ಷ ಕೋಟಿ ರೂ. ವಹಿವಾಟು, ನವೆಂಬರ್‌ನಲ್ಲಿ 730.9 ಕೋಟಿ ವಹಿವಾಟುಗಳು ನಡೆಸಲಾಗಿದೆ.

ರಹಿತ

ನಗದು ರಹಿತ ವಹಿವಾಟು ತಿಂಗಳಿನಿಂದ ತಿಂಗಳಿಗೆ ಭಾರೀ ಏರಿಕೆ ಕಂಡುಬರುತ್ತಿದೆ. ಈ ಮೂಲಕ ಭಾರತದಲ್ಲಿ ಬರೋಬ್ಬರಿ 381 ಬ್ಯಾಂಕ್‌ಗಳ ವ್ಯವಹಾರ ನಡೆಸಬಹುದಾಗಿದೆ. ತಿಂಗಳಷ್ಟೇ ಅಲ್ಲದೆ ಕಳೆದ ವರ್ಷದಿಂದ ಯುಪಿಐ ವಹಿವಾಟುಗಳ ಪ್ರಕ್ರಿಯೆ ಹೆಚ್ಚಾಗುತ್ತಿರುವುದು ಗಮನಾರ್ಹ ಸಂಗತಿ. ಈ ಬಗ್ಗೆ ಸ್ಪೈಸ್ ಮನಿ ಸಂಸ್ಥಾಪಕ ದಿಲೀಪ್ ಮೋದಿ ಮಾಹಿತಿ ನೀಡಿದ್ದಾರೆ.

ಇದರ ಪ್ರಯೋಜನ ಏನು?

ಇದರ ಪ್ರಯೋಜನ ಏನು?

ಯುಪಿಐ ಪಾವತಿ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಅಂಶ ಎಂದರೆ ಹಲವಾರು ಸೌಲಭ್ಯಗಳು ಇದರಿಂದ ಲಭ್ಯವಾಗಲಿವೆ. ಯುಪಿಐನ ಪ್ರತಿ ವಹಿವಾಟಿಗೆ ಪ್ರತ್ಯೇಕ ಪ್ರೊಫೈಲ್‌ಗಳ ಅಗತ್ಯವಿಲ್ಲದೇ ಬಹು ಖಾತೆಗಳ ನಡುವೆ ಹಣವನ್ನು ವರ್ಗಾಯಿಸಲು ಅನುಮತಿಸುತ್ತದೆ. ಹಾಗೆಯೇ ಮತ್ತೊಂದು ಯುಪಿಐ ಸರಳ ಹಾಗೂ ವೇಗದ ಪ್ರಕ್ರಿಯೆಯಾಗಿದ್ದು, ಬಳಕೆದಾರರು ಸುಲಭವಾಗಿ ಇದರಲ್ಲಿ ಹಣ ಪಾವತಿ ಮಾಡುವುದಕ್ಕೆ ಅನುಮತಿಸುತ್ತದೆ. ಇನ್ನು ಯುಪಿಐ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಡಿಜಿಟಲ್‌ ಪಾವತಿಯಲ್ಲಿ ತಮಿಳುನಾಡಿನ ಕಟ್ಪಾಡಿ ಮೊದಲು

ಡಿಜಿಟಲ್‌ ಪಾವತಿಯಲ್ಲಿ ತಮಿಳುನಾಡಿನ ಕಟ್ಪಾಡಿ ಮೊದಲು

ಕೆಲವು ದಿನಗಳ ಹಿಂದೆ ಪೇಟಿಎಮ್‌ ತನ್ನ 2022 ರ ರೀಕ್ಯಾಪ್ ವರದಿಯನ್ನು ಲಾಂಚ್‌ ಮಾಡಿತ್ತು. ಇದರ ಪ್ರಕಾರ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವು ಭಾರತದ ಡಿಜಿಟಲ್ ಪಾವತಿಗಳ ರಾಜಧಾನಿಯಾಗಿ ಹೊರಹೊಮ್ಮಿದೆ. ಹಾಗೆಯೇ ತಮಿಳುನಾಡಿನ ಕಟ್ಪಾಡಿ 2022 ರಲ್ಲಿ 7X ಬೆಳವಣಿಗೆಯೊಂದಿಗೆ ಡಿಜಿಟಲ್ ಪಾವತಿ ಹಿನ್ನೆಲೆ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.

ಯುಪಿಐ ಪಾವತಿಯಲ್ಲಿ ಗರಿಷ್ಠ ಮಿತಿ ಎಷ್ಟು?

ಯುಪಿಐ ಪಾವತಿಯಲ್ಲಿ ಗರಿಷ್ಠ ಮಿತಿ ಎಷ್ಟು?

ಯುಪಿಐ ಆಧಾರಿತ ಆಪ್‌ಗಳಾದ ಫೋನ್‌ಪೇ, ಗೂಗಲ್‌ಪೇ ಪೇಟಿಎಮ್‌, ಅಮೆಜಾನ್‌ ಪೇ ಸೇರಿದಂತೆ ಇತರೆ ಬ್ಯಾಂಕ್‌ಗಳು ಈ ಯುಪಿಐ ಆಧಾರಿತ ಪಾವತಿಗಳನ್ನು ನಡೆಸಲು ಅನುವು ಮಾಡಿಕೊಟ್ಟಿದ್ದು, ಇದರಲ್ಲಿ ಗೂಗಲ್ ಪೇ ಬಳಕೆದಾರರಿಗೆ ಒಂದು ದಿನದಲ್ಲಿ 1,00,000 ರೂ. ಹಣದ ವ್ಯವಹಾರ ನಡೆಸಬಹುದು. ಹಾಗೆಯೇ ಅಮೆಜಾನ್ ಪೇನಲ್ಲಿ 24 ಗಂಟೆಗಳ ಒಳಗೆ ಬಳಕೆದಾರರು ಗರಿಷ್ಠ 5000 ರೂ.ಗಳನ್ನು ಮಾತ್ರ ವರ್ಗಾಯಿಸಬಹುದು. ಇದರೊಂದಿಗೆ ಫೋನ್‌ ಪೇ ನಲ್ಲಿ ದಿನಕ್ಕೆ 1,00,000 ರೂ. ವಹಿವಾಟು ನಡೆಸಬಹುದಾಗಿದೆ ಹಾಗೂ ಪೇಟಿಎಮ್‌ನಲ್ಲಿ ದಿನಕ್ಕೆ ಗರಿಷ್ಠ 1,00,000 ರೂ. ಗಳ ಯುಪಿಐ ಪಾವತಿ ನಡೆಸಬಹುದಾಗಿದೆ.

Best Mobiles in India

English summary
UPI Reaches Record High of Payment in December 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X