ವಿಡಿಯೋ ಕಾನ್ಫರೆನ್ಸಿಂಗ್ ಆಪ್‌ ಪ್ರಯೋಜನಗಳೆನು?..ಈ ಆಪ್‌ಗಳು ಲೀಡಿಂಗ್‌ನಲ್ಲಿವೆ!

|

ಪ್ರಸ್ತುತ ಟ್ರೆಂಡಿಂಗ್‌ನಲ್ಲಿ ಇರುವ ಪ್ರಮುಖ ಆಪ್‌ ಪೈಕಿ ವಿಡಿಯೊ ಕಾಲಿಂಗ್ ಅಪ್ಲಿಕೇಶನ್‌ಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ವಿಡಿಯೊ ಚಾಟ್‌ ಆಪ್‌ಗಳು ಹಾಗೂ ವಿಡಿಯೋ ಕಾನ್ಫರೆನ್ಸಿಂಗ್ ಆಪ್‌ಗಳು ಪರಿಣಾಮಕಾರಿಯಾದ ಸಂವಹನದ ವೇದಿಕೆಗಳಾಗಿ ಗುರುತಿಸಿಕೊಂಡಿವೆ. ವ್ಯಕ್ತಿಗಳು ಮುಖಾಮುಖಿಯಾಗಿ ಭೇಟಿಯಾಗದಿದ್ದರೂ, ನೇರವಾಗಿ ಸಂಭಾಷಣೆ ಮಾಡಿದ ಅನುಭವ ನೀಡುತ್ತವೆ.

ಕಾಲಿಂಗ್

ವಿಡಿಯೊ ಕಾಲಿಂಗ್ ಆಪ್‌ಗಳ ಬಳಕೆ ಇದೀಗ ಸಾಮಾನ್ಯ ಅನಿಸಿದ್ದು, ಕೆಲವು ಮೆಸೆಜ್‌ ಆಪ್‌ಗಳು ಸಹ ಈಗ ವಿಡಿಯೊ ಕಾಲಿಂಗ್ ಆಯ್ಕೆಯನ್ನು ಸೇರ್ಪಡೆ ಮಾಡಿವೆ. ಹಾಗೆಯೇ ಈ ವಿಡಿಯೊ ಕಾಲಿಂಗ್‌ ಆಪ್‌ಗಳು ಸಂವಹನ ಯಶಸ್ವಿ ಹಾಗೂ ಪರಿಣಾಮಕಾರಿಯಾಗಲು ಹಲವು ಅಗತ್ಯ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿವೆ. ಸದ್ಯ ವಿಡಿಯೊ ಕರೆಯಲ್ಲಿ ಹೆಚ್ಚು ಸದಸ್ಯರನ್ನು ಕನೆಕ್ಟ್ ಮಾಡುವ ಆಯ್ಕೆ, ಆಡಿಯೋ ಮ್ಯೂಟ್, ಬ್ಯಾಕ್‌ಗ್ರೌಂಡ್‌ ಬದಲಿಸುವ ಆಯ್ಕೆ. ಹೀಗೆ ಹತ್ತು ಹಲವು ಅನುಕೂಲಕರ ಸೇವೆಗಳನ್ನು ವಿಡಿಯೊ ಕಾಲಿಂಗ್ ಆಪ್‌ಗಳ ಪರಿಚಯಿಸುತ್ತ ಸಾಗಿವೆ. ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ವಿಡಿಯೊ ಕಾನ್ಫರೆನ್ಸ್‌ ಆಪ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಿಡಿಯೊ ಕಾನ್ಫರೆನ್ಸಿಂಗ್ ಎಂದರೇನು?

ವಿಡಿಯೊ ಕಾನ್ಫರೆನ್ಸಿಂಗ್ ಎಂದರೇನು?

ವಿಡಿಯೋ ಕಾನ್ಫರೆನ್ಸಿಂಗ್ ಅಂತರ್ಜಾಲದಲ್ಲಿ ನಡೆಯುವ ಆನ್‌ಲೈನ್ ಸಭೆಗಳ ವೇದಿಕೆ ಎನ್ನಬಹುದು. ವೀಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಗಳನ್ನು ಮೀಟಿಂಗ್ ರೂಮ್‌ಗಳಲ್ಲಿ ವೈಯಕ್ತಿಕ ಡಿವೈಸ್‌ಗಳಾದ ಲ್ಯಾಪ್‌ಟಾಪ್‌ಗಳು ಅಥವಾ ಎಂಬೆಡೆಡ್ ವೆಬ್‌ಕ್ಯಾಮ್‌ಗಳೊಂದಿಗೆ ಮೊಬೈಲ್ ಸಾಧನಗಳೊಂದಿಗೆ ಸಂಪರ್ಕಿಸುವ ಕೋಣೆಗಳಲ್ಲಿ ಸಂಪರ್ಕಿಸುತ್ತದೆ.

ವಿಡಿಯೊ ಕಾನ್ಫರೆನ್ಸಿಂಗ್ ಪ್ರಯೋಜನಗಳು:

ವಿಡಿಯೊ ಕಾನ್ಫರೆನ್ಸಿಂಗ್ ಪ್ರಯೋಜನಗಳು:

1. ಸಂವಹನವನ್ನು ಸುಧಾರಿಸುತ್ತದೆ
2. ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ
3. ಹಣವನ್ನು ಉಳಿಸುತ್ತದೆ
4. ಸಮಯವನ್ನು ಉಳಿಸುತ್ತದೆ
5. ಸ್ಟ್ರೀಮ್ಲೈನ್ಸ್ ಸಹಯೋಗ
6. ದಕ್ಷತೆಯನ್ನು ಸುಧಾರಿಸುತ್ತದೆ
7. ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
8. ಸಭೆಗಳ ವೇಳಾಪಟ್ಟಿಯನ್ನು ಸುಲಭಗೊಳಿಸುತ್ತದೆ
9. ಸ್ಥಿರವಾದ, ನಿಖರವಾದ ದಾಖಲೆಗಳನ್ನು ರಚಿಸುತ್ತದೆ
10. ಲೈವ್ ಈವೆಂಟ್‌ಗಳನ್ನು ಸಕ್ರಿಯಗೊಳಿಸುತ್ತದೆ

ಗೂಗಲ್ ಡ್ಯೂಯೊ ಆಪ್

ಗೂಗಲ್ ಡ್ಯೂಯೊ ಆಪ್

ಗೂಗಲ್ ಒಡೆತನದ ಗೂಗಲ್ ಡ್ಯುಯೊ ಆಪ್‌ ಸಂಪೂರ್ಣ ಉಚಿತ ಆಪ್‌ ಆಗಿದೆ. ಈ ಆಪ್‌ 32 ಜನರೊಂದಿಗೆ ಗುಂಪು ಚಾಟ್ ಮಾಡಲು ಅನುಮತಿಸುತ್ತದೆ ಮತ್ತು ಎಲ್ಲವನ್ನೂ ಎನ್‌ಕ್ರಿಪ್ಟ್ ಮಾಡಲಾಗಿದೆ. ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬಳಕೆದಾರರು ಅವರ ಸ್ನೇಹಿತರೊಂದಿಗೆ ವೀಡಿಯೊ ಸಂದೇಶಗಳನ್ನು ಹಂಚಿಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಗೂಗಲ್ ಡ್ಯುಯೊ ಲಭ್ಯವಿದೆ.

ಜೂಮ್‌ ವಿಡಿಯೊ ಕಾಲಿಂಗ್ ಆಪ್

ಜೂಮ್‌ ವಿಡಿಯೊ ಕಾಲಿಂಗ್ ಆಪ್

ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೊ ಕಾಲಿಂಗ್‌ ಆಪ್‌ಗಳಲ್ಲಿ ಜೂಮ್‌ ಆಪ್‌ ಸಹ ಒಂದಾಗಿದೆ. ಈ ಆಪ್‌ನಲ್ಲಿ ಬಳಕೆದಾರರು ಹೆಚ್ಚು ಸದಸ್ಯರನ್ನು ಕನೆಕ್ಟ್ ಮಾಡುವ ಆಯ್ಕೆ ಇದೆ. ಕರೆಗಳಿಗೆ ಎನ್‌ಕ್ರಿಪ್ಟ್ ಸೌಲಭ್ಯ ಒದಗಿಸಿದೆ. ಬಹುತೇಕ ಬಳಕೆದಾರರು ಮೀಟಿಂಗ್‌ಗಾಗಿ ಈ ಆಪ್‌ ಬಳಕೆ ಮಾಡುತ್ತಾರೆ ಹಾಗೂ ಮೆಸೆಜ್‌ ಸಹ ಸೆಂಡ್ ಮಾಡಬಹುದಾಗಿದೆ.

ಸ್ಕೈಪ್ ವಿಡಿಯೊ ಕಾಲಿಂಗ್ ಆಪ್

ಸ್ಕೈಪ್ ವಿಡಿಯೊ ಕಾಲಿಂಗ್ ಆಪ್

ಸ್ಕೈಪ್ ಆಪ್‌ ಸಹ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಬಹಳಷ್ಟು ಜನರು ವಿಡಿಯೊ ಕರೆಗಳಿಗೆ ಹಾಗೂ ಚಾಟಿಂಗ್‌ಗೆ ಈ ಆಪ್ ಬಳಕೆ ಮಾಡುತ್ತಾರೆ. ಸ್ಕೈಪ್ ಮೂಲಕ ಬಳಕೆದಾರರು ಒಂದೇ ಸಮಯದಲ್ಲಿ 24 ಜನರೊಂದಿಗೆ ವೀಡಿಯೊ ಕರೆಗಳನ್ನು ಮಾಡಬಹುದು. ಹಾಗೆಯೇ ಸಂದೇಶಗಳನ್ನು ಸಹ ಕಳುಹಿಸಬಹುದಾಗಿದ್ದು, 'SMS Connect' ವೈಶಿಷ್ಟ್ಯವೂ ಲಭ್ಯವಿದೆ. ವಿವಿಧ ಎಮೋಟಿಕಾನ್‌ಗಳೊಂದಿಗೆ ನಿಮ್ಮನ್ನು ವ್ಯಕ್ತಪಡಿಸುವಂತೆ ಅಥವಾ ಜಿಫಿಯನ್ನು ಬಳಸಿಕೊಂಡು GIF ಗಳನ್ನು ಕಳುಹಿಸುವಂತೆಯೇ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವುದು ಒಂದು ಸಾಧ್ಯತೆಯಾಗಿದೆ.

ವೈಬರ್ ಆಪ್

ವೈಬರ್ ಆಪ್

ಹೆಚ್ಚು ಬಳಕೆಯಲ್ಲಿರುವ ವಿಡಿಯೊ ಕಾಲಿಂಗ್ ಆಪ್‌ಗಳ ಪೈಕಿ ವೈಬರ್ ಸಹ ಒಂದಾಗಿದೆ. ವೈಬರ್‌ ಆಪ್‌ 20 ಜನರಿಗೆ ಗುಂಪು ಕರೆ ಮಾಡಲು ಅನುಮತಿಸುತ್ತದೆ. ವಾಟ್ಸಾಪ್ನಂತೆಯೇ, ಈ ಅಪ್ಲಿಕೇಶನ್ ಗುಂಪು ಕರೆಗಳಿಗೆ, ವಿಶೇಷವಾಗಿ ಧ್ವನಿ ಕರೆಗಳಿಗೆ ಉತ್ತಮ ಆಯ್ಕೆಯಾಗಿದೆ. ಧ್ವನಿ ಕರೆಗಳಿಗಾಗಿ ವೈಬರ್ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ, ಆದರೂ ವೀಡಿಯೊ ಕರೆಗಳು ಉತ್ತಮವಾಗಿವೆ. ವೈಬರ್ ವಾಸ್ತವವಾಗಿ ಯಾರನ್ನಾದರೂ ಕರೆಯಲು ಬಂದಾಗ ಅಲ್ಲಿನ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

ವಾಟ್ಸಾಪ್‌ ಆಪ್

ವಾಟ್ಸಾಪ್‌ ಆಪ್

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಸಹ ಜನಪ್ರಿಯ ವಿಡಿಯೊ ಕಾಲಿಂಗ್ ಆಪ್‌ ಆಗಿ ಗುರುತಿಸಿಕೊಂಡಿದೆ. ಈ ಆಪ್‌ನಲ್ಲಿ ಬಳಕೆದಾರರು ಚಾಟಿಂಗ್ ಜೊತೆಗೆ ವಿಡಿಯೊ ಕರೆ ಸಹ ಮಾಡುವ ಆಯ್ಕೆ ಇದೆ. ಬಳಕೆದಾರರು ಈ ಅಪ್ಲಿಕೇಶನ್‌ ಮೂಲಕ ಫೋಟೋಗಳನ್ನು ಸಹ ಕಳುಹಿಸಬಹುದು. ಹಾಗೆಯೇ ವೀಡಿಯೊಗಳು, ಡಾಕ್ಯುಮೆಂಟ್‌ಗಳು ಮತ್ತು ವಾಯಿಸ್‌ ಸಂದೇಶಗಳನ್ನು ಸಹ ಶೇರ್ ಮಾಡಬಹುದು.

Best Mobiles in India

English summary
Use of Video Conferencing Apps: Advantages And Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X