ಈ ವರ್ಷದಲ್ಲಿ ಪರಿಚಿತಗೊಂಡ ವಾಟ್ಸಾಪ್‌ನ ಈ ಫೀಚರ್ಸ್‌ ಬಗ್ಗೆ ನಿಮಗೆಷ್ಟು ಗೊತ್ತು!?

|

ಈ ವರ್ಷದಲ್ಲಿ ಅತಿ ಹೆಚ್ಚು ನವೀಕರಣ ಪಡೆದುಕೊಂಡ ಆಪ್‌ಗಳಲ್ಲಿ ವಾಟ್ಸಾಪ್‌ ಸಹ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಯಾಕೆಂದರೆ ಈ ವರ್ಷ ವಾಟ್ಸಾಪ್‌ನಲ್ಲಿ ಹಲವು ಫೀಚರ್ಸ್‌ಗಳು ಕಂಡುಬಂದ್ದಿದ್ದು, ಬಳಕೆದಾರರನ್ನು ಸಂತೋಷ ಪಡಿಸಿವೆ. ಸದ್ಯಕ್ಕೆ ವಾಟ್ಸಾಪ್‌ ಕೇವಲ ಮೆಸೆಜ್‌ ಅಥವಾ ಇಂಟರ್ನೆಟ್‌ ಕರೆ ಮಾಡಲು ಅಷ್ಟೇ ಅಲ್ಲದೆ ಮಾಹಿತಿ ಹಾಗೂ ಮನರಂಜನೆಗೂ ಸಹಾಯಕವಾಗುತ್ತಿದೆ. ಇದರ ನಡುವೆ ಈ ಆಪ್‌ಗೆ ಸಹಕಾಯಕವಾಗುವ ಥರ್ಡ್‌ ಪಾರ್ಟಿ ಆಪ್‌ಗಳು ಸಹ ಹೆಚ್ಚು ಗಮನ ಸೆಳೆದಿವೆ.

ವಾಟ್ಸಾಪ್‌

ಹೌದು, ಇನ್ನೇನು ಈ ವರ್ಷ ಅಂತ್ಯವಾಗಲಿದ್ದು, ಹೊಸ ವರ್ಷಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದೇವೆ. ಇದರ ನಡುವೆ ವಾಟ್ಸಾಪ್‌ ಪಡೆದುಕೊಂಡ ಪ್ರಮುಖ ಫೀಚರ್ಸ್‌ಗಳು ಬಳಕೆದಾರರಿಗೆ ವಿಶೇಷ ಅನುಭವ ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿದ್ದು, ಇದರ ಹೊರತಾಗಿ ಥರ್ಡ್‌ ಪಾರ್ಟಿ ಆಪ್‌ಗಳು ಸಹ ವಾಟ್ಸಾಪ್‌ ಅನ್ನು ಇನ್ನಷ್ಟು ಶ್ರೀಮಂತಗೊಳಿವೆ. ಹಾಗಿದ್ರೆ ಯಾವೆಲ್ಲಾ ಫೀಚರ್ಸ್‌ ವಾಟ್ಸಾಪ್‌ನಲ್ಲಿ ಲಭ್ಯ? ಇವುಗಳಿಂದ ಏನೆಲ್ಲಾ ಪ್ರಯೋಜನ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಆಕ್ಸಿಡೆಂಟಲ್‌ ಫೀಚರ್ಸ್‌

ಆಕ್ಸಿಡೆಂಟಲ್‌ ಫೀಚರ್ಸ್‌

ಈ ಫೀಚರ್ಸ್‌ ಅನ್ನು ಈಗಷ್ಟೇ ಪರಿಚಯಿಸಲಾಗಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ಇನ್ನು ಮುಂದೆ ಮುಜುಗರಕ್ಕೆ ಒಳಗಾಗುವುದಿಲ್ಲ. ಯಾರಿಗಾದರೂ ಮೆಸೆಜ್‌ ಮಾಡಿದಾಗ ಅಥವಾ ಗ್ರೂಪ್‌ ನಲ್ಲಿ ಸಂದೇಶ ಕಳುಹಿಸದ ನಂತರ ಅದು ಏನಾದರೂ ತಪ್ಪಾಗಿದ್ದರೆ ಅಥವಾ ಬೇರೆ ಯಾರಿಗಾದರೂ ಅನವಶ್ಯಕವಾಗಿ ಕಳುಹಿಸಿದ್ದರೆ ತಕ್ಷಣಕ್ಕೆ ಡಿಲೀಟ್‌ ಮಾಡುವ ಅವಕಾಶ ನೀಡಲಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಡಿಲೀಟ್‌ ವಿಭಾಗದಲ್ಲಿ ಎರಡು ಆಯ್ಕೆ ಇದ್ದು, ಡಿಲೀಟ್‌ ಫಾರ್‌ ಮಿ ಹಾಗೂ ಡಿಲೀಟ್‌ ಪಾರ್‌ ಎವರಿಒನ್‌ ಎಂಬ ಆಯ್ಕೆ ಇವೆ, ತಪ್ಪಾಗಿ ಡಿಲೀಟ್‌ ಫಾರ್‌ ಮಿ ಆಯ್ಕೆ ಒತ್ತಿದ್ದರೆ, ತಕ್ಷಣವೇ ಅದನ್ನು ಡಿಲೀಟ್‌ ಪಾರ್‌ ಎವರಿಒನ್ ಆಯ್ಕೆಗೆ ಬದಲಾಯಿಸಿಕೊಳ್ಳಲು ಈ ಹೊಸ ಫೀಚರ್ಸ್‌ ಅನುವು ಮಾಡಿಕೊಡುತ್ತದೆ.

ದೀರ್ಘವಾದ ವಾಯ್ಸ್‌ ಮೆಸೆಜ್‌ ಕಳುಹಿಸಬಹುದು

ದೀರ್ಘವಾದ ವಾಯ್ಸ್‌ ಮೆಸೆಜ್‌ ಕಳುಹಿಸಬಹುದು

ದೀರ್ಘವಾದ ವಾಯ್ಸ್‌ ಮೆಸೆಜ್‌ಗಳನ್ನು ತ್ವರಿತವಾಗಿ ಮತ್ತು ವಿಭಿನ್ನ ಸಮಯದ ಮಧ್ಯಂತರದಲ್ಲಿಯೂ ರೆಕಾರ್ಡ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಫೋನ್‌ನ ಕೆಳಗಿನ ಬಲಭಾಗದಲ್ಲಿನ ಚಾಟ್‌ ವಿಭಾಗದಲ್ಲಿ ಕಾಣಿಸಿಕೊಳ್ಳುವ ಮೈಕ್ ಐಕಾನ್ ಮೇಲೆ ದೀರ್ಘವಾಗಿ ಒತ್ತಿದರೆ ಸಾಕು. ಮೈಕ್ ಐಕಾನ್ ಅನ್ನು ದೀರ್ಘವಾಗಿ ಒತ್ತಿ ನಂತರ ಲಾಕ್ ಐಕಾನ್ ಮೇಲೆ ಸ್ಲೈಡ್ ಮಾಡಿ. ಇದಾದ ನಂತರ ವಾಟ್ಸಾಪ್ ನಿಮ್ಮ ವಾಯ್ಸ್‌ ಮೆಸೆಜ್‌ ಅನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತದೆ. ಹಾಗೆಯೇ ನೀವು ಕೆಂಪು ಬಣ್ಣದ ಮೈಕ್ ಐಕಾನ್ ಬಳಸಿ ಅದನ್ನು ವಿರಾಮಗೊಳಿಸಬಹುದು. ಇದಾದ ಬಳಿಕ ಸ್ವಲ್ಪ ಸಮಯ ಬಿಟ್ಟು ಮತ್ತೆ ರೆಕಾರ್ಡ್‌ ಮಾಡಬಹುದು.

ಆನ್‌ಲೈನ್‌ನಲ್ಲಿ ಇರುವುದನ್ನು ಮರೆಮಾಡಬಹುದು

ಆನ್‌ಲೈನ್‌ನಲ್ಲಿ ಇರುವುದನ್ನು ಮರೆಮಾಡಬಹುದು

ಸಾಮಾನ್ಯವಾಗಿ ಈ ಫೀಚರ್ಸ್‌ ಬಹುಪಾಲು ಮಂದಿಗೆ ಈಗಾಗಲೇ ತಿಳಿದಿರುತ್ತದೆ. ಆಪ್‌ನ ಪ್ರೈವೆಸಿ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನೀವು ವಾಟ್ಸಾಪ್‌ನಲ್ಲಿ ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಮರೆಮಾಡಬಹುದು. ಇದಕ್ಕಾಗಿ ನೀವು ಸೆಟ್ಟಿಂಗ್‌ ವಿಭಾಗಕ್ಕೆ ತೆರಳಿ ಅಲ್ಲಿ ಪ್ರೈವೆಸಿ ವಿಭಾಗದ ಮೇಲೆ ಟ್ಯಾಪ್‌ ಮಾಡಿ. ನಂತರ ಇದರಲ್ಲಿ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಸೌಲಭ್ಯದ ಮೂಲಕ ನೀವು ಯಾವಾಗ ಆನ್‌ಲೈನ್‌ನಲ್ಲಿ ಇರುತ್ತೀರ ಅಥವಾ ಆನ್‌ಲೈನ್‌ನಿಂದ ಹೊರಗಿರುತ್ತೀರ ಎಂಬ ಬಗ್ಗೆ ಯಾರಿಗೂ ತಿಳಿಯುವುದಿಲ್ಲ.

ಕ್ಯೂಬ್‌ ಎಸಿಆರ್‌

ಕ್ಯೂಬ್‌ ಎಸಿಆರ್‌

ಕ್ಯೂಬ್‌ ಎಸಿಆರ್‌ (Cube ACR ) ಎಂಬ ಥರ್ಡ್‌ ಪಾರ್ಟಿ ಆಪ್‌ ಮೂಲಕ ವಾಟ್ಸಾಪ್ ಕರೆಗಳನ್ನು ರೆಕಾರ್ಡ್‌ ಮಾಡಿಕೊಳ್ಳಬಹುದಾಗಿದೆ. ಇದು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ನೀವು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ನಿಮ್ಮ ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲು ಮೂಲಭೂತ ಕೆಲವು ಅನುಮತಿಗಳನ್ನು ನೀಡಬೇಕಿರುತ್ತದೆ, ಈ ಬಗ್ಗೆ ಗಮನವಿರಲಿ.

ಅಳಿಸಲಾದ ಮೆಸೆಜ್‌ಗಳನ್ನು ಮರು ಪಡೆಯಬಹುದು

ಅಳಿಸಲಾದ ಮೆಸೆಜ್‌ಗಳನ್ನು ಮರು ಪಡೆಯಬಹುದು

ಅಳಿಸಲಾದ ವಾಟ್ಸಾಪ್‌ ಮೆಸೆಜ್‌ಗಳನ್ನು ಮರುಪಡೆಯಲು ಅಥವಾ ಓದಲು ಬಯಸುವ ಜನರು ಗೆಟ್‌ ಡಿಲೀಟೆಡ್ ಮೆಸೆಜ್ ಎಂಬ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಿದೆ. ಈ ಆಪ್‌ ಕೇವಲ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಯಾವುದೇ ಮೆಸೆಜ್‌ ಡಿಲೀಟ್‌ ಆದರೆ ಅದನ್ನು ಈ ಆಪ್‌ ಮೂಲಕ ಓದಬಹುದಾಗಿದೆ. ಇದರಲ್ಲಿ ಗಮನಿಸುವ ವಿಷಯ ಎಂದರೆ ನಿಮಗೆ ಯಾರೋ ಚಾಟ್‌ ಮಾಡಿ ಅದನ್ನು ನೀವು ಓದುವ ಮೊದಲೇ ಅಳಿಸಿದ್ದರೆ ಮಾತ್ರ ಈ ಆಪ್‌ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

Best Mobiles in India

English summary
useful WhatsApp tricks and tips you should know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X