ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಅಮೆಜಾನ್‌ನಲ್ಲಿ ಐಫೋನ್ 12 ಮಿನಿ ಡಿಸ್ಕೌಂಟ್‌ನಲ್ಲಿ ಲಭ್ಯ!

|

ವ್ಯಾಲೆಂಟೈನ್ಸ್ ಡೇ 2021 ಪ್ರಯುಕ್ತ ಕೆಲವು ಪ್ರತಿಷ್ಠಿತ ಮೊಬೈಲ್ ಬ್ರಾಂಡ್‌ಗಳು ತಮ್ಮ ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿವೆ. ಹಾಗೆಯೇ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸಹ ಕೆಲವು ಡಿವೈಸ್‌ಗಳಿಗೆ ವಿಶೇಷ ರಿಯಾಯಿತಿಯನ್ನು ಘೋಷಿಸಿವೆ. ಆ ಪೈಕಿ ಇತ್ತೀಚಿನ ಐಫೋನ್ 12 ಮಿನಿ ಫೋನ್ ಅಮೆಜಾನ್‌ ತಾಣದಲ್ಲಿ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಬ್ಯಾಂಕ್‌ಗಳ ಆಫರ್ ಸಹ ಲಭ್ಯ.

ಪ್ಲಾಟ್‌ಫಾರ್ಮ್

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ ಐಫೋನ್ 12 ಮಿನಿ 65,900ರೂ.ಗಳ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 6,000ರೂ. ಮತ್ತು ನಿಮ್ಮ ಹಳೆಯ ಫೋನ್‌ ಎಕ್ಸ್‌ಚೇಂಜ್ ಮೇಲೆ 12,400ರೂ.ಡಿಸ್ಕೌಂಟ್‌ ಲಭ್ಯ. ಹೆಚ್‌ಡಿಎಫ್‌ಸಿ ಬ್ಯಾಂಕ್ ಈ ಕೊಡುಗೆಯು ಐಫೋನ್ 12 ಸ್ಮಾರ್ಟ್‌ಫೋನ್‌ನಲ್ಲಿಯೂ ಮಾನ್ಯವಾಗಿರುತ್ತದೆ. ಹಾಗಾದರೇ ಐಫೋನ್ 12 ಮಿನಿ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹಾಗೂ ಪ್ರೊಸೆಸರ್

ಡಿಸ್‌ಪ್ಲೇ ಹಾಗೂ ಪ್ರೊಸೆಸರ್

ಐಫೋನ್ 12 ಮಿನಿ ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಗಿಚು ಪ್ರತಿರೋಧಕ ಸಿರಾಮಿಕ ಗ್ಲಾಸ್‌ ಹೊಂದಿರುವ ಜೊತೆಗೆ ಅತ್ಯುತ್ತಮ ಸೌಂಡ್‌ಗಾಗಿ ಡಾಲ್ಬಿ ವಿಷನ್ ಸೌಲಭ್ಯ ಪಡೆದಿದೆ.

ಮೆಮೊರಿ ಹಾಗೂ ಕ್ಯಾಮೆರಾ

ಮೆಮೊರಿ ಹಾಗೂ ಕ್ಯಾಮೆರಾ

ಹಾಗೆಯೇ ಈ ಐಫೋನ್ 4GB RAM+64GB, 4GB RAM+128GB ಮತ್ತು 4GB RAM+256GB ಸಂಗ್ರಹದ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿ ಕ್ಯಾಮೆರಾ ಸಹ 12ಎಂಪಿ ಸೆನ್ಸಾರ್ ಬಲವನ್ನು ಹೊಂದಿದೆ. ಫೇಸ್‌ ಐಡಿ, ಬಾರೊ ಮೀಟರ್, ಸಿರಿ ನಾಚುರಲ್ ಲಾಂಗ್ವೇಜ್ ಸೌಲಭ್ಯಗಳನ್ನು ಒಳಗೊಂಡಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಇನ್ನು ಐಫೋನ್ 12 ಮಿನಿ ಫೋನ್ 2227mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 20W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಈ ಫೋನ್ ಬ್ಲ್ಯಾಕ್, ವೈಟ್, ರೆಡ್, ಗ್ರೀನ್ ಹಾಗೂ ಬ್ಲೂ ಬಣ್ಣಗಳ ಆಯ್ಕೆಯನ್ನು ಪಡೆದಿದೆ.

Best Mobiles in India

English summary
Valentine's Day 2021 discount offers: Amazon is again offering the iPhone 12 mini at a discounted price of Rs 65,900.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X