ವಿ ಟೆಲಿಕಾಂನಿಂದ ನಾಲ್ಕು ಹೊಸ ಪ್ಲ್ಯಾನ್ ಬಿಡುಗಡೆ!..ಫುಟ್ಬಾಲ್‌ ಪ್ರಿಯರಿಗೆ ಖುಷಿ!

|

ಫಿಫಾ ವಿಶ್ವಕಪ್ 2022 (FIFA World Cup Qatar 2022) ಕತಾರ್‌ನಲ್ಲಿ ನಡೆಯುತ್ತಾ ಇದ್ದು, ಫುಟ್ಬಾಲ್‌ ಕ್ರೀಡಾಭಿಮಾನಿಗಳು ಪಂದ್ಯಾವಳಿಗಳನ್ನು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಟೆಲಿಕಾಂ ಸಂಸ್ಥೆಗಳು ಫಿಫಾ ವಿಶ್ವಕಪ್ ಪ್ರಯುಕ್ತ ಚಂದಾದಾರರಿಗೆ ಅನುಕೂಲವಾಗಲೆಂದು ಆಕರ್ಷಕ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ಗಳನ್ನು ನೀಡುತ್ತಿವೆ. ಇತ್ತೀಚಿಗಷ್ಟೆ ಜಿಯೋ ಕೆಲವು ಯೋಜನೆಗಳನ್ನು ಪರಿಚಯಿಸಿದ್ದು, ಇದೀಗ ವಿ ಟೆಲಿಕಾಂ (Vi Telecom) ನಾಲ್ಕು ಹೊಸ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳನ್ನು ಪರಿಚಯಿಸಿದೆ.

ಫಿಫಾ ವಿಶ್ವಕಪ್ ಪಂದ್ಯಾವಳಿ

ಹೌದು, ವಿ ಟೆಲಿಕಾಂ ಫಿಫಾ ವಿಶ್ವಕಪ್ ಪಂದ್ಯಾವಳಿಗಳನ್ನು ವೀಕ್ಷಿಸಲು ಪ್ರಯಾಣಿಸುತ್ತಿರುವ ತನ್ನ ಚಂದಾದಾರರಿಗೆ ನಾಲ್ಕು ಹೊಸ ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು 7 ದಿನಗಳಿಂದ 28 ದಿನಗಳವರೆಗೆ ವ್ಯಾಲಿಡಿಟಿ ಪ್ರಯೋಜನಗಳ ಆಯ್ಕೆಯಲ್ಲಿ ದೊರೆಯುತ್ತವೆ. ಅವುಗಳು ಕ್ರಮವಾಗಿ ವಿ 2,999 IR ಪ್ಲ್ಯಾನ್‌, 3,999 IR ಪ್ಲ್ಯಾನ್‌, 4,499 IR ಪ್ಲ್ಯಾನ್‌ ಮತ್ತು 5,999 IR ಪ್ಲ್ಯಾನ್‌ ಆಗಿವೆ. ಹಾಗಾದರೆ ಈ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂನ 2,999 IR ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 2,999 IR ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ ಈ IR ಯೋಜನೆಯು ಭಾರತಕ್ಕೆ 200 ನಿಮಿಷಗಳ ಸ್ಥಳೀಯ ಮತ್ತು ಹೊರಹೋಗುವ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದ್ದು, ಉಚಿತ ಒಳಬರುವ ಕರೆಗಳ ಪ್ರಯೋಜನ ಹೊಂದಿದೆ. ಇದರೊಂದಿಗೆ 2 GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯು 25 ಎಸ್‌ಎಂಎಸ್‌ಗಳೊಂದಿಗೆ ನಿಮಿಷಕ್ಕೆ 35 ರೂ. ಗೆ ಹೊರಹೋಗುವ ಕರೆಗಳನ್ನು ನೀಡುತ್ತದೆ ಮತ್ತು ಇದು ಏಳು ದಿನಗಳ ವ್ಯಾಲಿಡಿಟಿ ಹೊಂದಿದೆ.

ವಿ ಟೆಲಿಕಾಂನ 3,999 IR ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 3,999 IR ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 3,999 IR ಯೋಜನೆಯು ಭಾರತಕ್ಕೆ 300 ನಿಮಿಷಗಳ ಸ್ಥಳೀಯ ಮತ್ತು ಹೊರಹೋಗುವ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದ್ದು, ಉಚಿತ ಒಳಬರುವ ಕರೆಗಳ ಪ್ರಯೋಜನ ಹೊಂದಿದೆ. ಇದರೊಂದಿಗೆ 3 GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯು 50 ಎಸ್‌ಎಂಎಸ್‌ಗಳೊಂದಿಗೆ ನಿಮಿಷಕ್ಕೆ 35 ರೂ. ಗೆ ಹೊರಹೋಗುವ ಕರೆಗಳನ್ನು ನೀಡುತ್ತದೆ ಮತ್ತು 10 ದಿನಗಳ ವ್ಯಾಲಿಡಿಟಿ ಹೊಂದಿದೆ.

ವಿ ಟೆಲಿಕಾಂನ 4,499 IR ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 4,499 IR ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ ಈ IR ಯೋಜನೆಯು ಭಾರತಕ್ಕೆ 500 ನಿಮಿಷಗಳ ಸ್ಥಳೀಯ ಮತ್ತು ಹೊರಹೋಗುವ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದ್ದು, ಉಚಿತ ಒಳಬರುವ ಕರೆಗಳ ಪ್ರಯೋಜನ ಹೊಂದಿದೆ. ಇದರೊಂದಿಗೆ 5 GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯು 100 ಎಸ್‌ಎಂಎಸ್‌ಗಳೊಂದಿಗೆ ನಿಮಿಷಕ್ಕೆ 35 ರೂ. ಗೆ ಹೊರಹೋಗುವ ಕರೆಗಳನ್ನು ನೀಡುತ್ತದೆ ಮತ್ತು 14 ದಿನಗಳ ವ್ಯಾಲಿಡಿಟಿ ಹೊಂದಿದೆ.

ವಿ ಟೆಲಿಕಾಂನ 5,999 IR ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 5,999 IR ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 5,999 IR ಯೋಜನೆಯು ವಿ ಟೆಲಿಕಾಂನ 4,499 IR ಯೋಜನೆಯಂತೆ ಸೌಲಭ್ಯಗಳನ್ನು ಪಡೆದಿದೆ. ಈ ಯೋಜನೆಯಲ್ಲಿ ಭಾರತಕ್ಕೆ 500 ನಿಮಿಷಗಳ ಸ್ಥಳೀಯ ಮತ್ತು ಹೊರಹೋಗುವ ವಾಯಿಸ್‌ ಕರೆಗಳ ಸೌಲಭ್ಯ ಪಡೆದಿದ್ದು, ಉಚಿತ ಒಳಬರುವ ಕರೆಗಳ ಪ್ರಯೋಜನ ಹೊಂದಿದೆ. ಇದರೊಂದಿಗೆ 5 GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯು 100 ಎಸ್‌ಎಂಎಸ್‌ಗಳೊಂದಿಗೆ ನಿಮಿಷಕ್ಕೆ 35 ರೂ. ಗೆ ಹೊರಹೋಗುವ ವಾಯಿಸ್‌ ಕರೆಗಳನ್ನು ನೀಡುತ್ತದೆ ಮತ್ತು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

Best Mobiles in India

English summary
Vi introduces new IR roaming packs for Fifa World Cup fans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X