Subscribe to Gizbot

ಪಾಕಿಸ್ತಾನದ ಗೂಗಲ್‌ನಲ್ಲಿ ಅತಿಹೆಚ್ಚು ಸರ್ಚ್ ಆಗಿರುವ ಆಟಗಾರ ವಿರಾಟ್ ಕೋಹ್ಲಿ!!

Written By:

ಭಾರತ ಮತ್ತು ಪಾಕಿಸ್ತಾನಕ್ಕೆ ಯಾವಾಗಲೂ ಜಿದ್ದಿರುವುದು ನಿಮಗೆಲ್ಲಾ ಗೊತ್ತಿದೆ. ಆದರೆ, ಕ್ರಿಕೆಟ್ ವಿಷಯದಲ್ಲಿ ಬಂದಾಗ ಪಾಕಿಸ್ತಾನಿಯರಿಗೆ ಪಾಕ್ ಕ್ರಿಕೆಟಿಗರಿಗಿಂತ ವಿರಾಟ್ ಕೊಹ್ಲಿ ಹೆಚ್ಚು ಫೇವರಿಟ್ ಆಗಿದ್ದಾರೆ.! ಹೌದು, ಪಾಕ್ ಕ್ರಿಕೆಟ್ ಅಭಿಮಾನಿಗಳು ಗೂಗಲ್‌ನಲ್ಲಿ ಅತೀ ಹೆಚ್ಚು ಟೀಂ ಇಂಡಿಯಾ ನಾಯಕನನ್ನು ಹುಡುಕಿದ್ದಾರೆ.!!

ಭಾರತದಲ್ಲೇ ಅಲ್ಲದೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಅವರಿಗೆ ಅಭಿಮಾನಿಗಳಿರುವುದಕ್ಕೆ ಗೂಗಲ್ ಟ್ರೆಂಡ್ಸ್ ರಿಪೋರ್ಟ್ ಸಾಕ್ಷಿಯಾಗಿದ್ದು, ಪಾಕಿಸ್ತಾನದ ಕ್ರಿಕೆಟ್ ನಾಯಕ ಸರ್ಫ್ರಜ್ ಅಹ್ಮದ್, ವೇಗದ ಬೌಲರ್ ಮೊಹಮ್ಮದ್ ಅಮೀರ್ ಮತ್ತು ಅಹ್ಮದ್ ಶೆಹಜಾದ್ ಅವರು ಗೂಗಲ್‌ನಲ್ಲಿ ನಡೆದ ಹುಡುಕಾಟದಲ್ಲಿ ವಿರಾಟ್ ಕೊಹ್ಲಿ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.!!

ಪಾಕಿಸ್ತಾನದ ಗೂಗಲ್‌ನಲ್ಲಿ ಅತಿಹೆಚ್ಚು ಸರ್ಚ್ ಆಗಿರುವ ಆಟಗಾರ ವಿರಾಟ್ ಕೋಹ್ಲಿ!!

2016 ರ ಡಿಸೆಂಬರ್ 18 ರಿಂದ 2017 ರ ಡಿಸೆಂಬರ್ 9 ರವರೆಗೆ ಪಾಕಿಸ್ತಾನ ಗೂಗಲ್‌ ಸರ್ಚ್‌ನಲ್ಲಿ ಹೆಚ್ಚು ಹುಡುಕಾಟಕ್ಕೊಳಗಾದ ಕ್ರೀಡಾಪಟು ಎಂಬ ಕೀರ್ತಿ ಕೋಹ್ಲಿಗೆ ಒಲಿದಿದ್ದು, ಪ್ರಸ್ತುತ ವಿಶ್ವ ಶ್ರೇಷ್ಟ ಬ್ಯಾಟಿಂಗ್ ಆಡುತ್ತಿರುವ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದು ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.!!

ಪಾಕಿಸ್ತಾನದ ಗೂಗಲ್‌ನಲ್ಲಿ ಅತಿಹೆಚ್ಚು ಸರ್ಚ್ ಆಗಿರುವ ಆಟಗಾರ ವಿರಾಟ್ ಕೋಹ್ಲಿ!!

ಗೂಗಲ್ ಟ್ರೆಂಡ್ಸ್ ಪಟ್ಟಿಯಲ್ಲಿ ಪಾಕಿಸ್ತಾನದಲ್ಲಿ ಹೆಚ್ಚು ಹುಡುಕಾಟವಾದ ಕ್ರಿಕೆಟಿಗ ವಿರಾಟ್ ಕೋಹ್ಲಿ ಭಾರತದಲ್ಲಿ ಒಟ್ಟಾರೆ 5ನೇ ಸ್ಥಾನ ಪಡೆದಿದ್ದಾರೆ.!! ಇನ್ನು ಈ ಪಟ್ಟಿಯಲ್ಲಿ ಜನಪ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲ ಸ್ಥಾನ ಅಲಂಕರಿಸಿದ್ದಾರೆ.!!

ಓದಿರಿ: ಎಂದೂ ಒಡೆಯದ ಹಾಗೂ ಒಡೆದರೂ ಸ್ವತಃ ಗುಣಪಡಿಸಿಕೊಳ್ಳುವ ಮೊಬೈಲ್ ಡಿಸ್‌ಪ್ಲೇ!!

English summary
Virat Kohli is the highest run getter across all formats this year and is ranked No. 1 in the shorter format.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot