ವಿವೋ ಫೋನ್‌ಗಳಿಗೆ ಈಗ ಭರ್ಜರಿ ಕ್ಯಾಶ್‌ಬ್ಯಾಕ್‌!..ಆಫರ್‌ ಎಷ್ಟು ದಿನ ಇರುತ್ತೆ?

|

ವಿವೋ ಮೊಬೈಲ್‌ ಸಂಸ್ಥೆಯು ಗಣೇಶ ಚತುರ್ಥಿಯ ಭಾರತದಲ್ಲಿ ತನ್ನ ಕೆಲವು ಪ್ರಮುಖ ಫೋನ್‌ಗಳಿಗೆ ಆಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಘೋಷಿಸಿದೆ. ಸಂಸ್ಥೆಯ ವಿವೋ V25 ಪ್ರೊ, ವಿವೋ Y75 ಮತ್ತು ವಿವೋ X80 ಸರಣಿಯ, ವಿವೋ X80 ಮತ್ತು ವಿವೋ X80 ಪ್ರೊ ಸ್ಮಾರ್ಟ್‌ಫೋನ್‌ಗಳು ಕ್ಯಾಶ್‌ಬ್ಯಾಕ್ ಆಫರ್‌ಗಳ ಪಡೆದ ಪ್ರಮುಖ ಸ್ಮಾರ್ಟ್‌ಫೋನ್‌ಗಳಾಗಿ ಕಾಣಿಸಿವೆ.

ಸೆಪ್ಟೆಂಬರ್

ಹೌದು, ವಿವೋ ಸಂಸ್ಥೆಯು ಕೆಲವು ಫೋನ್‌ಗಳಿಗೆ ಭರ್ಜರಿ ಕ್ಯಾಶ್‌ಬ್ಯಾಕ್‌ ನೀಡಿದೆ. ಇನ್ನು ಈ ಕ್ಯಾಶ್‌ಬ್ಯಾಕ್ ಕೊಡುಗೆಗಳು ಇದೇ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತವೆ. ಈ ಕೊಡುಗೆಯು ಪ್ರಮುಖ ರೀಟೆಲ್‌ ಸ್ಟೋರ್‌ಗಳಲ್ಲಿ ಅನ್ವಯಿಸುತ್ತವೆ ಎನ್ನಲಾಗಿದೆ. ಆಯ್ದ ಕೆಲವು ಬ್ಯಾಂಕ್ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಆಕರ್ಷಕ ಕ್ಯಾಶ್‌ಬ್ಯಾಕ್ ಸಿಗಲಿದೆ. ಮುಖ್ಯವಾಗಿ ವಿವೋ X80 ಮತ್ತು ವಿವೋ X80 ಪ್ರೊ ಫೋನ್‌ಗಳು ಬೊಂಬಾಟ್‌ ಕೊಡುಗೆ ಪಡೆದಿವೆ.

ಕ್ಯಾಶ್‌ಬ್ಯಾಕ್

ಕಂಪನಿಯು HDFC ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ವಿವೋ X80 ಫೋನ್‌ ಮೇಲೆ 3,500 ರೂ. ಗಳ ಕ್ಯಾಶ್‌ಬ್ಯಾಕ್ ಮತ್ತು ವಿವೋ X80 ಪ್ರೊ ಫೋನ್‌ ಮೇಲೆ ಸುಮಾರು 4,000 ರೂ.ಗಳ ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ. ಹಾಗಾದರೇ ವಿವೋ X80 ಮತ್ತು ವಿವೋ X80 ಪ್ರೊ ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಿವೋ X80 ಪ್ರೊ ಸ್ಮಾರ್ಟ್‌ಫೋನ್‌

ವಿವೋ X80 ಪ್ರೊ ಸ್ಮಾರ್ಟ್‌ಫೋನ್‌

ವಿವೋ X80 ಪ್ರೊ ಸ್ಮಾರ್ಟ್‌ಫೋನ್‌ 1,440 x 3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ OriginOS ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

ಕ್ಯಾಮೆರಾ

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್‌ ಐಸೋಸೆಲ್‌ GNV ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೋನಿ IMX598 ಸೆನ್ಸಾರ್‌, ಮೂರನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೋನಿ IMX663 ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ 8 ಮೆಗಾ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4,700 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ಫ್ಲ್ಯಾಶ್ ಚಾರ್ಜ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6, ಬ್ಲೂಟೂತ್ v5.2, NFC, ಮತ್ತು ಇನ್ಫ್ರಾರೆಡ್ (IR) ಬ್ಲಾಸ್ಟರ್ ವೈರ್‌ಲೆಸ್ ಆಯ್ಕೆಗಳನ್ನು ಒಳಗೊಂಡಿದೆ.

ವಿವೋ X80 ಸ್ಮಾರ್ಟ್‌ಫೋನ್‌

ವಿವೋ X80 ಸ್ಮಾರ್ಟ್‌ಫೋನ್‌

ವಿವೋ X80 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಮತ್ತು 120Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.

ಕ್ಯಾಮೆರಾ

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX866 RGBW ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4,500 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ.

Best Mobiles in India

English summary
Vivo announces offers of up to Rs 4,000 on Vivo X80 series Phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X