ದೀಪಾವಳಿ ಪ್ರಯುಕ್ತ ವಿವೋ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಕೊಡುಗೆ!

|

ದೀಪಾವಳಿ ಹಬ್ಬ ಇನ್ನೇನು ಬಂದೇ ಬಿಡ್ತು. ಹಬ್ಬದ ಪ್ರಯುಕ್ತ ಪ್ರಮುಖ ಇ ಕಾಮರ್ಸ್‌ ತಾಣಗಳು ಬಂಫರ್ ಕೊಡುಗೆ ನೀಡುತ್ತಾ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿವೆ. ಅದೇ ರೀತಿ ಕೆಲವು ಮೊಬೈಲ್‌ ಸಂಸ್ಥೆಗಳು ಸಹ ಗ್ರಾಹಕರನ್ನು ಸೆಳೆಯಲು ತಮ್ಮ ವೆಬ್‌ಸೈಟ್‌ಗಳಲ್ಲಿ ಹಬ್ಬದ ಸೇಲ್‌ ಆಯೋಜಿಸುತ್ತಿವೆ. ಜನಪ್ರಿಯ ವಿವೋ (Vivo) ಸಂಸ್ಥೆಯು ಸಹ ಇದೀಗ ದೀಪಾವಳಿ ಹಬ್ಬದ ಅಂಗವಾಗಿ ಬಿಗ್ ಜಾಯ್‌ ದೀಪಾವಳಿ ಸೇಲ್‌ (Big Joy Diwali Sale) ಅನ್ನು ಘೋಷಿಸಿದೆ.

ಬಿಗ್ ಜಾಯ್ ದೀಪಾವಳಿ

ಹೌದು, ವಿವೋ (Vivo) ಕಂಪನಿಯು ಬಿಗ್ ಜಾಯ್ ದೀಪಾವಳಿ ಕೊಡುಗೆಗಳನ್ನು ಘೋಷಿಸಿದೆ. ಈ ಮಾರಾಟದಲ್ಲಿ ವಿವೋ ತನ್ನ ವಿವೋ X80 ಸರಣಿ, ವಿವೋ V25 ಸರಣಿ, ವಿವೋ Y75 ಸರಣಿ, ವಿವೋ Y35 ಸೇರಿದಂತೆ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌ ತಿಳಿಸಿದೆ. ಇನ್ನು ಬಿಗ್ ಜಾಯ್ ದೀಪಾವಳಿ ಕೊಡುಗೆಗಳು ಈಗಾಗಲೇ ಪ್ರಾರಂಭವಾಗಿದ್ದು, ಇದೇ ಅಕ್ಟೋಬರ್ 31 ರವರೆಗೆ ಚಾಲ್ತಿ ಇರಲಿದೆ ಎನ್ನಲಾಗಿದೆ.

ವಿವೋ ಕೇವಲ 101 ರೂ.

ವಿವೋ ಆಯೋಜಿಸಿರುವ ಬಿಗ್ ಜಾಯ್ ದೀಪಾವಳಿ ಕೊಡುಗೆಯಲ್ಲಿ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್, ವಿಸ್ತೃತ ವಾರಂಟಿ ಸೇರಿದಂತೆ ಕೆಲವು ಮತ್ತಷ್ಟು ಆಕರ್ಷಕ ಕೊಡುಗೆ ಲಭ್ಯ ಮಾಡಲಿದೆ. ಪ್ರಮುಖ ಆಕರ್ಷಣೆಯೆಂದರೆ, ವಿವೋ ಕೇವಲ 101 ರೂ. ಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದಾಗಿ ತಿಳಿಸಿದೆ. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ದೀಪಾವಳಿ

ಬಿಗ್ ಜಾಯ್ಸ್ ದೀಪಾವಳಿ ಮಾರಾಟದ ಸಂದರ್ಭದಲ್ಲಿ ವಿವೋ ಬಹು ಕೊಡುಗೆಗಳನ್ನು ತಿಳಿಸಿದ್ದು, ಕಂಪನಿಯು V, X ಅಥವಾ Y ಸರಣಿಯ ಫೋನ್‌ಗಳಿಗೆ ಪ್ರತ್ಯೇಕ ಕೊಡುಗೆಗಳನ್ನು ಘೋಷಿಸಿದೆ. ಕೊಡುಗೆಯಲ್ಲಿ ಗ್ರಾಹಕರು ICICI ಅಥವಾ SBI EMI ಆಯ್ಕೆಗಳೊಂದಿಗೆ ವಿವೋ X80 ಅಥವಾ ವಿವೋ X80 ಪ್ರೊ ನಲ್ಲಿ 8,000 ರೂ. ಗಳ ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ವಿಸ್ತೃತ ವಾರಂಟಿ

ಹಾಗೆಯೇ, ಕಂಪನಿಯು ತನ್ನ X ಸರಣಿಯ ಫೋನ್‌ನಲ್ಲಿ ಪೂರ್ಣವಾಗಿ ಪಾವತಿಸಿದರೆ ಹೆಚ್ಚುವರಿ ಆರು ತಿಂಗಳ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ಅದೇ ರೀತಿ, ವಿವೋ V25 ಸರಣಿಯ ಖರೀದಿದಾರರು ICICI ಅಥವಾ SBI EMI ಆಯ್ಕೆಗಳನ್ನು ಬಳಸಿಕೊಂಡು 4,000ರೂ. ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಕಂಪನಿಯು ವಿವೋ V25 ಸರಣಿಯ ಫೋನ್‌ಗಳಲ್ಲಿ ಆರು ತಿಂಗಳ ಹೆಚ್ಚುವರಿ ವಾರಂಟಿಯನ್ನು ಸಹ ನೀಡುತ್ತಿದೆ.

ಕ್ಯಾಶ್‌ಬ್ಯಾಕ್

ವಿವೋ Y ಸರಣಿಯ ಖರೀದಿದಾರರು ICICI ಅಥವಾ SBI EMI ಆಯ್ಕೆಗಳನ್ನು ಬಳಸಿಕೊಂಡು 2,000ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ವಿವೋ Y ಸರಣಿಯ ಫೋನ್‌ಗಳಲ್ಲಿ 10,000ರೂ. ಮೌಲ್ಯದ ಜಿಯೋ ಡಿಜಿಟಲ್ ಲೈಫ್ ಪ್ರಯೋಜನಗಳನ್ನು ಲಭ್ಯ ಮಾಡುತ್ತದೆ. ಹಾಗೆಯೇ ವಿವೋ Y75, ವಿವೋ Y35 ಸೇರಿದಂತೆ ಇತರೆ ವಿವೋ Y ಸರಣಿಯ ಫೋನ್‌ಗಳಲ್ಲಿ ಬಳಕೆದಾರರು ಆರು ತಿಂಗಳ ಹೆಚ್ಚುವರಿ ವಾರಂಟಿಯನ್ನು ಸಹ ದೊರೆಯಲಿದೆ.

ಏನಿದು ವಿವೋ 101ರೂ. ಕೊಡುಗೆ?

ಏನಿದು ವಿವೋ 101ರೂ. ಕೊಡುಗೆ?

ವಿವೋ ಬಿಗ್ ಜಾಯ್ ದೀಪಾವಳಿ ಸೇಲ್‌ನಲ್ಲಿ ಆಕರ್ಷಕ ಕೊಡುಗೆಯನ್ನು ಘೋಷಿಸಿದೆ. ಇದರ ಮೂಲಕ ಗ್ರಾಹಕರು ಕೇವಲ 101 ರೂ. ಗಳಲ್ಲಿ ಯಾವುದೇ ವಿವೋ ಫೋನ್ ಅನ್ನು ಪಡೆಯಬಹುದು. ಆಫರ್‌ನ ಪ್ರಕಾರ, ಖರೀದಿದಾರರು ಕೇವಲ 101ರೂ.ಗಳ ಆರಂಭಿಕ ಪಾವತಿಯನ್ನು ಪಾವತಿಸಿ ಮನೆಗೆ V, X ಅಥವಾ Y ಸರಣಿಯ ಫೋನ್‌ ಅನ್ನು ತೆಗೆದುಕೊಂಡು ಹೋಗಬಹುದು.

ಫೋನ್‌ಗಳಿಗೆ

ಆದಾಗ್ಯೂ, ಈ ಕೊಡುಗೆ ರೀಟೇಲ್‌ ಸ್ಟೋರ್‌ಗಳಲ್ಲಿ ಈ ಕೊಡುಗೆ ಲಭ್ಯ ಇರಲಿದೆಯಾ ಎನ್ನುವ ಬಗ್ಗೆ ಕಂಪನಿಯು ಸ್ಪಷ್ಟ ಮಾಹಿತಿ ಹೊರಹಾಕಿಲ್ಲ. ಬಹುಶಃ ವಿವೋ ಸಂಸ್ಥೆಯು 101ರೂ. ಕೊಡುಗೆಯ ಫೋನ್‌ಗಳಿಗೆ ಆಕರ್ಷಕ EMI ಆಯ್ಕೆಯನ್ನು ನೀಡಬಹುದು ಎನ್ನಲಾಗುತ್ತಿದೆ.

Best Mobiles in India

English summary
Vivo Diwali Offer: Best Offers On These Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X