Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್‌; ಖರೀದಿಗೆ ಕ್ಯೂ ಖಚಿತ!

|

ಪ್ರತಿಷ್ಠಿತ ಮೊಬೈಲ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ವಿವೋ, ಈಗಾಗಲೇ ವಿವೋ X ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಅದೇ ಸರಣಿಯಲ್ಲಿ ಹೊಸದಾಗಿ ವಿವೋ X90 ಸ್ಮಾರ್ಟ್‌ಫೋನ್‌ ಸರಣಿಯನ್ನು ಅನಾವರಣ ಮಾಡಿದೆ. ಈ ಸರಣಿಯು ವಿವೋ X90, ವಿವೋ X90 ಪ್ರೊ, ವಿವೋ X90 ಪ್ರೊ ಪ್ಲಸ್‌ ಮಾಡೆಲ್‌ಗಳನ್ನು ಒಳಗೊಂಡಿದೆ.

ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್‌; ಖರೀದಿಗೆ ಕ್ಯೂ ಖಚಿತ!

ಹೌದು ವಿವೋ ಕಂಪನಿಯು ನೂತನವಾಗಿ ಈಗ ವಿವೋ X90 ಸ್ಮಾರ್ಟ್‌ಫೋನ್‌ ಸರಣಿಯನ್ನು ಗ್ಲೋಬಲ್‌ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಸರಣಿಯು ವಿವೋ X90 ಪ್ರೊ (Vivo X90 Pro) ಸ್ಮಾರ್ಟ್‌ಫೋನ್‌ ದೈತ್ಯ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆದಿದ್ದು, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಪಡೆದಿದೆ. ಹಾಗೆಯೇ ಈ ಫೋನ್‌ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ.

ವಿವೋ ಸಂಸ್ಥೆಯು ನೂತನ ವಿವೋ X90 ಫೋನ್‌ ಸರಣಿಯನ್ನು ಭಾರತ, ಹಾಂಗ್ ಕಾಂಗ್, ತೈವಾನ್, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಪೋಲೆಂಡ್, ಆಸ್ಟ್ರಿಯಾ, ರೊಮೇನಿಯಾ, ಕ್ರೊಯೇಷಿಯಾ, ಗ್ರೀಸ್, ಥೈಲ್ಯಾಂಡ್, ಮಲೇಷ್ಯಾ ಮತ್ತು ಕೆಲವು ಇತರ ಮಾರುಕಟ್ಟೆಗಳು ಅನಾವರಣ ಮಾಡಿದೆ. ಹಾಗೆಯೇ ಈ ಫೋನ್‌ 120W ಸಾಮರ್ಥ್ಯದ ಫ್ಲಾಶ್‌ ಚಾರ್ಜ್‌ ಸೌಲಭ್ಯವನ್ನು ಪಡೆದಿದೆ. ಹಾಗಾದರೇ ವಿವೋ X90 ಪ್ರೊ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್‌; ಖರೀದಿಗೆ ಕ್ಯೂ ಖಚಿತ!

ವಿವೋ X90 ಪ್ರೊ ಫೋನ್‌: ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ವಿವೋ X90 ಪ್ರೊ ಫೋನ್ 6.78 ಇಂಚಿನ ಅಲ್ಟ್ರಾ ವಿಷನ್ AMOLED ಡಿಸ್‌ಪ್ಲೇಯನ್ನು ಪಡೆದಿದ್ದು, ಇದು 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಸ್ಕ್ರೀನ್ ಕರ್ವ್ ಮಾದರಿಯ ರಚನೆಯನ್ನು ಒಳಗೊಂಡಿದ್ದು, ಹೋಲ್‌-ಪಂಚ್ ಕಟೌಟ್‌ ವಿನ್ಯಾಸದಲ್ಲಿದೆ.

ವಿವೋ X90 ಪ್ರೊ ಫೋನ್‌: ಪ್ರೊಸೆಸರ್‌ ಮತ್ತು ಮೆಮೊರಿ

ವಿವೋ X90 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಅಲ್ಲದೇ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ.

ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್‌; ಖರೀದಿಗೆ ಕ್ಯೂ ಖಚಿತ!

ವಿವೋ X90 ಪ್ರೊ ಫೋನ್‌: ಟ್ರಿಪಲ್‌ ಕ್ಯಾಮೆರಾ

ವಿವೋ X90 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ವಿವೋ X90 ಪ್ರೊ ಫೋನ್‌: ಬಿಗ್ ಬ್ಯಾಟರಿ ಪವರ್

ವಿವೋ X90 ಪ್ರೊ ಫೋನ್ 4870mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, 120W ಸಾಮರ್ಥ್ಯದ ಫ್ಲಾಶ್‌ ಚಾರ್ಜ್‌ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ 50W ಸಾಮರ್ಥ್ಯದಲ್ಲಿ ವಾಯರ್‌ಲೆಸ್‌ ಚಾರ್ಜಿಂಗ್ ಸಪೋರ್ಟ್‌ ಆಯ್ಕೆ ಪಡೆದಿಕೊಂಡಿದೆ. IP64 ಸೌಲಭ್ಯ ಸಹ ಈ ಫೋನ್‌ ಪಡೆದಿದೆ.

ವಿವೋ X90 ಪ್ರೊ ಫೋನ್‌: ಬೆಲೆ ಮತ್ತು ಲಭ್ಯತೆ

ವಿವೋ X90 ಪ್ರೊ ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅಂದಹಾಗೆ ದೇಶಿಯ ಮಾರುಕಟ್ಟೆಯಲ್ಲಿ ವಿವೋ X90 ಪ್ರೊ ಫೋನ್‌ ಫೋನಿನ ಬೆಲೆ ಎಷ್ಟಿರಲಿದೆ ಎನ್ನುವ ಬಗ್ಗೆ ಇನ್ನು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಸುಮಾರು 99,162ರೂ. ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Vivo X90 Pro has 6.78-inch AMOLED display with a 120Hz refresh rate. along with 4,870mAh battery with 120W FlashCharge support. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X