ಭಾರತದಲ್ಲಿ ಇನ್ಮುಂದೆ VLC ಪ್ಲೇಯರ್ ಲಭ್ಯ; ನಿಷೇಧ ವಾಪಸ್‌ ಪಡೆದ ಸರ್ಕಾರ

|

ಈ ಹಿಂದೆ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಅಥವಾ ಇನ್ನಿತರೆ ಡಿವೈಸ್‌ಗಳಲ್ಲಿ ಬಹುಪಾಲು ವಿಎಲ್‌ಸಿ (VLC media player) ಮೂಲಕ ವಿಡಿಯೋಗಳನ್ನು ವೀಕ್ಷಣೆ ಮಾಡಲಾಗುತ್ತಿತ್ತು. ಕಾರಣ ಇದರಲ್ಲಿನ ಹಲವು ಆಯ್ಕೆಗಳು ಹಾಗೂ ವಿಡಿಯೋ ವೀಕ್ಷಿಸಲು ಇದ್ದ ಹಲವು ವಿಶೇಷ ಫೀಚರ್ಸ್‌. ಆದರೆ, ಕೆಲವು ಕಾರಣಾಂತರಗಳಿಂದ ಭಾರತ ಸರ್ಕಾರ ಈ ಆಪ್‌ಗೆ ನಿರ್ಬಂಧ ವಿಧಿಸಿತ್ತು. ಪ್ರಮುಖ ವಿಷಯ ಏನೆಂದರೆ ಈಗ ಸರ್ಕಾರ ವಿಎಲ್‌ಸಿಗೆ ವಿಧಿಸಿದ್ದ ನಿಷೇಧವನ್ನು ತೆಗದುಹಾಕಿದೆ.

 ಭಾರತೀಯ ಎಲೆಕ್ಟ್ರಾನಿಕ್ಸ್

ಹೌದು, ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಈ ಮೂಲಕ ಭಾರತದಲ್ಲಿನ ಜನರು ಇನ್ಮುಂದೆ ವಿವಿಧ ಫೀಚರ್ಸ್‌ ಇರುವ ವಿಎಲ್‌ಸಿ ಆಪ್‌ ಅನ್ನು ಬಳಕೆ ಮಾಡಬಹುದು. ಈ ಆಪ್‌ ವಿಡಿಯೋವನ್ನಷ್ಟೇ ಪ್ಲೇ ಮಾಡದೆ, ಆಡಿಯೋ, ಫೋಟೋಗಳಿಗೂ ಬೆಂಬಲ ನೀಡುತ್ತದೆ.

73 ಮಿಲಿಯನ್

ಇಲ್ಲಿಯವರೆಗೆ ಸುಮಾರು 73 ಮಿಲಿಯನ್ ಜನರು ಈ ವಿಎಲ್‌ಸಿ ಪ್ಲೇಯರ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ವಿಎಲ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ. ಇನ್ನು ಭಾರತವು ನಿಷೇಧದ ಹಿಂದಿನ ಕಾರಣವನ್ನು ಬಹಿರಂಗಪಡಿಸುವ ಮುನ್ನವೇ ತನ್ನ ಆದೇಶವನ್ನು ವಾಪಸ್‌ ಪಡೆದುಕೊಂಡಿದೆ.

ಡೌಲ್‌ಲೋಡ್‌ಗಾಗಿ 'ವಿಡಿಯೋಲ್ಯಾನ್‌' ಗೆ ಭೇಟಿ ಕೊಡಿ

ಡೌಲ್‌ಲೋಡ್‌ಗಾಗಿ 'ವಿಡಿಯೋಲ್ಯಾನ್‌' ಗೆ ಭೇಟಿ ಕೊಡಿ

ಇನ್ನು ನಿಮಗೇನಾದರೂ ಈ ವಿಎಲ್‌ಸಿ ಮೀಡಿಯಾ ಪ್ಲೇಯರ್ ಆಪ್‌ ಬೇಕು ಎಂದಾದರೆ ವಿಡಿಯೋಲ್ಯಾನ್‌ನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅದರಂತೆ 73 ಮಿಲಿಯನ್ ಜನರನ್ನು ಹೊರತು ಪಡಿಸಿ ಈಕ್ಷಣದ ವರೆಗೂ ಜನರು ಈ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪ್‌ ತನ್ನ ವೆಬ್‌ಸೈಟ್‌ ಮೂಲಕ ತಿಳಿಸಿದೆ.

ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದ ವಿಎಲ್‌ಸಿ

ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದ ವಿಎಲ್‌ಸಿ

ಈ ವರ್ಷದ ಅಕ್ಟೋಬರ್‌ನಲ್ಲಿ ವಿಎಲ್‌ಸಿ ಮಾಲೀಕರು ಭಾರತ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದರು. ಅದರಂತೆ ಭಾರತದಲ್ಲಿ ನಮ್ಮ ಸೇವೆಯನ್ನು ಏಕೆ ನಿಷೇಧಿಸಲಾಗಿದೆ?, ಈ ಬಗ್ಗೆ ವರ್ಚುವಲ್ ವಿಚಾರಣೆಯ ಮೂಲಕ ತನ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದರು.

ಭಾರತಕ್ಕೆ ಎಚ್ಚರಿಕೆ ನೀಡಿದ್ದ ವಿಎಲ್‌ಸಿ

ಭಾರತಕ್ಕೆ ಎಚ್ಚರಿಕೆ ನೀಡಿದ್ದ ವಿಎಲ್‌ಸಿ

ಇನ್ನು ಭಾರತ ಸರ್ಕಾರ ಈ ಆಪ್‌ಅನ್ನು ನಿಷೇಧ ಮಾಡಿದ ಕಾರಣ ಕೇಳುವ ಜೊತೆಗೆ ಭಾರತದ ಸಂವಿಧಾನವು ಖಾತ್ರಿಪಡಿಸಿರುವ ನಮ್ಮ ಹಕ್ಕುಗಳನ್ನು ರಕ್ಷಿಸಲು ವಿಫಲವಾದ ಕಾರಣಕ್ಕಾಗಿ ವಿಡಿಯೋಲ್ಯಾನ್ ನಿಮ್ಮ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ಮುಂದಾಗುತ್ತದೆ. ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ನಿಮ್ಮ ಜವಾಬ್ದಾರಿಗಳ ಉಲ್ಲಂಘನೆ ಮಾಡುವುದರ ಜೊತೆಗೆ ನಿಮ್ಮ ಸ್ವಂತ ನಿಯಮಗಳನ್ನು ನೀವು ಈ ಮೂಲಕ ಉಲ್ಲಂಘನೆ ಮಾಡುತ್ತಿದ್ದೀರ ಎಂದು ಹೇಳಿದ್ದು, ಈ ಮೂಲಕ ಭಾರತ ಸರ್ಕಾರಕ್ಕೆ ಒಂದು ರೀತಿಯ ಬೆದರಿಕೆ ಹಾಕಿತ್ತು.

ಮೀಡಿಯಾ ಪ್ಲೇಯರ್

ವಿಎಲ್‌ಸಿ ಮೀಡಿಯಾ ಪ್ಲೇಯರ್ ಭಾರತ ಸರ್ಕಾರದ ವಿರುದ್ಧ ಈ ಮೂಲಕ ಗೆಲುವು ಸಾಧಿಸಿದಂತಾಗಿದ್ದು, ಭಾರತಕ್ಕೆ ತನ್ನ ಸೇವೆಯನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ವಿಎಲ್‌ಸಿ ಸೈಟ್ ಅನ್ನು ಪ್ರವೇಶಿಸಲು ಮುಂದಾದರೆ ವೆಬ್‌ಸೈಟ್ 404 ದೋಷವನ್ನು ತೋರಿಸುತ್ತಿತ್ತು. ಹಾಗೆಯೇ ಈ ನಿಷೇದಕ್ಕೆ ಒಳಗಾಗುವ ಮುನ್ನ ವಿಎಲ್‌ಸಿ ಭಾರತದಲ್ಲಿ ಪ್ರತಿವರ್ಷ ಸುಮಾರು 25 ಮಿಲಿಯನ್ ಡೌನ್‌ಲೋಡ್‌ಗಳನ್ನು ನಿರಂತರವಾಗಿ ಪಡೆಯುತ್ತಿತ್ತು ಎಂದು ವರದಿಯಿಂದ ತಿಳಿದು ಬಂದಿದೆ. ಆದರೆ, ಈ ವರ್ಷ ಫೆಬ್ರವರಿಯಿಂದ ಇದಕ್ಕೆ ಪ್ರವೇಶವನ್ನು ಪಡೆಯಲು ಸಾಧ್ಯವಾಗದ ಹಾಗೆ ಸರ್ಕಾರವು ಕಾನೂನು ಸೂಚನೆ ನೀಡದೆ ಅದನ್ನು ನಿಷೇಧ ಮಾಡಿತ್ತು.

ಚೀನಾ ಸರ್ಕಾರ

ಚೀನಾ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಹ್ಯಾಕರ್ ಗ್ರೂಪ್ ಸಿಕಾಡಾ, ಕೆಲವು ಕಂಪ್ಯೂಟರ್‌ಗಳಿಗೆ ರಿಮೋಟ್ ಪ್ರವೇಶವನ್ನು ಪಡೆಯಲು ವಿಎಲ್‌ಸಿ ಮೀಡಿಯಾ ಪ್ಲೇಯರ್ ಮತ್ತು ಇತರೆ ಆಪ್‌ಗಳನ್ನು ಬಳಕೆ ಮಾಡುತ್ತಿದೆ ಎಂದು ಅಮೆರಿಕ ಮೂಲಕ ಭದ್ರತಾ ಸಂಸ್ಥೆ ಸಿಮ್ಯಾಂಟೆಕ್ ಈ ವರ್ಷ ಏಪ್ರಿಲ್‌ನಲ್ಲಿ ವರದಿ ಮಾಡಿತ್ತು.

Best Mobiles in India

Read more about:
English summary
VLC Player has been unbanned in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X