ಕೊನೆಗೂ 5G ಘೋಷಣೆ ಮಾಡಿದ ವಿ; ಈ ಸೇವೆ ಪಡೆಯುವ ಮೊದಲ ನಗರ ಯಾವುದು ಗೊತ್ತಾ!?

|

5G ಸೇವೆ ಈಗ ಭಾರತದ ಎಲ್ಲಾ ಕಡೆ ತಲುಪಲು ಮುಂದಾಗಿದ್ದು, ಪ್ರಮುಖ ಟೆಲಿಕಾಂ ಸೇವೆಗಳಾದ ಜಿಯೋ ಹಾಗೂ ಏರ್‌ಟೆಲ್‌ ಮೊದಲ ಬಾರಿಗೆ ಈ 5G ಸೇವೆಯನ್ನು ಪ್ರಮುಖ ನಗರಗಳಲ್ಲಿ ಆರಂಭ ಮಾಡಿವೆ. ಆದರೆ ಇತರೆ ಟೆಲಿಕಾಂ ಸೇವೆಯಾದ ವಿ ಇನ್ನೂ ಸಹ ಈ ಬಗ್ಗೆ ಯಾವುದೇ ನಿಖರ ಮಾಹಿತಿಯನ್ನು ನೀಡಿರಲಿಲ್ಲ. ಆದರೆ, ಇದೀಗ ವಿ ತನ್ನ ಗ್ರಾಹಕರಿಗೆ 5G ಸಂಬಂಧ ಗುಡ್‌ ನ್ಯೂಸ್ ನೀಡಿದೆ.

ವೋಡಾಫೋನ್

ಹೌದು, ವೋಡಾಫೋನ್ ಐಡಿಯಾ (ವಿ) ತನ್ನ 5G ಸೇವೆಯನ್ನು ಈ ಪ್ರಮುಖ ನಗರದಲ್ಲಿ ಆರಂಭಿಸುವ ಬಗ್ಗೆ ಮಾಹಿತಿ ನೀಡಿದೆ. ಈ ಮೂಲಕ ಅದೆಷ್ಟೋ ಗ್ರಾಹಕರಿಗೆ ಸಂತಸದ ಮಾಹಿತಿ ನೀಡಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಿದ್ರೆ, ಯಾವ ನಗರದಲ್ಲಿ ಈ ಸೇವೆ ಆರಂಭವಾಗಲಿದೆ?, ವಿ ಹೇಳಿದ್ದೇನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಟೆಲಿಕಾಂ

ಪ್ರಮುಖ ಟೆಲಿಕಾಂ ಸೇವೆಗಳಲ್ಲಿ ಒಂದಾಗಿರುವ ವಿ ನೇರವಾಗಿ ಮಾಧ್ಯಮ ಹಾಗೂ ತನ್ನ ಗ್ರಾಹಕರಿಗೆ ಈ ಮಾಹಿತಿ ನೀಡದಿದ್ದರೂ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲರಲ್ಲೂ ಅಚ್ಚರಿ ಉಂಟುಮಾಡಿದೆ. ಅದರಂತೆ ಆರಂಭದಲ್ಲಿ ದೆಹಲಿಯಲ್ಲಿನ ಬಳಕೆದಾರರಿಗೆ ಈ ಸೇವೆ ಲಭ್ಯವಾಗಲಿದೆ. ಅದರಲ್ಲೂ ವಿ ನ ಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ಗ್ರಾಹಕರಿಗೆ ಅಚ್ಚರಿ ಸಂಗತಿಯೂ ಹೌದು.

 ವಿ ಹೇಳಿದ್ದೇನು?

ವಿ ಹೇಳಿದ್ದೇನು?

5G ಲಾಂಚ್ ಸಂಬಂಧ ತಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವವರೆಗೆ ಈ ಸಂಬಂಧ ಯಾವುದೇ ಮಾಹಿತಿಯನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ವಿ ಆಡಳಿತ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೂ ದೆಹಲಿಯಲ್ಲಿ 5G ಯ ಸಾಫ್ಟ್ ಲಾಂಚ್ ಅನ್ನು ಮಾಡಿದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.

ಮ್ಯಾಪ್‌

ಕ್ರೌಡ್‌ಸೋರ್ಸ್ಡ್ 5G ಮ್ಯಾಪ್‌ನಲ್ಲಿ ವಿ ನ 5G ಯನ್ನು ದೆಹಲಿಯಲ್ಲಿ ಪ್ರದರ್ಶಿಸುತ್ತಿಲ್ಲ. ಜಿಯೋ ಮತ್ತು ಏರ್‌ಟೆಲ್‌ನ 5G ಮಾತ್ರ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿ ತನ್ನ ಬಳಕೆದಾರರ ತಲೆಗೆ ಉಳ ಬಿಟ್ಟಂತೆ ಮಾಡಿದೆ. ಆದ್ದರಿಂದ ಇದು ತುಂಬಾ ಗೊಂದಲಮಯಕ್ಕೆ ಕಾರಣವಾಗಿದೆ ಎಂದೇ ಹೇಳಬಹುದು. ವಿ ನ ಈ 5G ವಾಣಿಜ್ಯಿಕವಾಗಿ ಲಭ್ಯವಿದೆಯೇ? ಅಥವಾ ಮೌನವಾಗಿ ಬೀಟಾ ಪರೀಕ್ಷೆಯನ್ನು ಮಾಡುತ್ತಿದೆಯೇ ಎಂಬುದು ಇನ್ನೂ ಅರ್ಥವಾಗಿಲ್ಲ.

ವಿ 5G ಕುರಿತು ಔಪಚಾರಿಕ ಪ್ರಕಟಣೆ ಹೊರಡಿಸಿಲ್ಲ

ವಿ 5G ಕುರಿತು ಔಪಚಾರಿಕ ಪ್ರಕಟಣೆ ಹೊರಡಿಸಿಲ್ಲ

5G ಬಗ್ಗೆ ವಿ ಈವರೆಗೂ ಯಾವುದೇ ರೀತಿಯ ಔಪಚಾರಿಕ ಪ್ರಕಟಣೆ ಹೊರಡಿಸಿಲ್ಲ. ಆದ್ದರಿಂದ ದೆಹಲಿಯಲ್ಲಿರುವವರು ಒಮ್ಮೆ ಈ 5G ಸೇವೆ ಲಭ್ಯವಾಗುತ್ತದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬಹುದು. ಇದರೊಂದಿಗೆ ನಿಮ್ಮ ಫೋನ್‌ ಸಹ 5G ಗೆ ಬೆಂಬಲ ನೀಡಲಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ವಿಗೆ ಸಾಲದ ಬಿಕ್ಕಟ್ಟು

ವಿಗೆ ಸಾಲದ ಬಿಕ್ಕಟ್ಟು

ಒಂದೆಡೆ 5G ಬಗ್ಗೆ ಮಾತುಗಳು ಕೇಳಿಬರುತ್ತಿದ್ದರೆ ಮತ್ತೊಂದೆಡೆ ವೊಡಾಫೋನ್ ಐಡಿಯಾ ತನ್ನ ಸಾಲದ ಬಿಕ್ಕಟ್ಟಿನಿಂದ ಹೊರಬರಲು 7000 ಕೋಟಿ ರೂಪಾಯಿ ಸಾಲ ಮಾಡುವ ಅಗತ್ಯತೆ ನಿರ್ಮಾಣ ಆಗಿದೆ. ಈ ಸಂಬಂಧ 7,000 ಕೋಟಿ ಸಾಲ ಪಡೆದುಕೊಳ್ಳಲು ಹಲವಾರು ಬ್ಯಾಂಕ್‌ಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಇಂಡಸ್ ಟವರ್ಸ್‌ಗೆ ನೀಡಬೇಕಾದ ಕಂಪೆನಿಯ ಸಾಲದ ಒಂದು ಭಾಗವನ್ನು ಹೆಚ್ಚಿನ ಸಾಲಗಳೊಂದಿಗೆ ಪಾವತಿಸಲಾಗುತ್ತದೆ.

ಇಂಡಿಯಾ

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್‌ಗೆ ವಿನಂತಿ ಮಾಡಲಾಗಿದ್ದು, ಈ ಬ್ಯಾಂಕ್‌ಗಳು ಹೊಸ ಸಾಲ ನೀಡಲು ಹಿಂದೇಟು ಹಾಕುತ್ತಿವೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಇದರೊಂದಿಗೆ 2 ಲಕ್ಷ ಕೋಟಿಗೂ ಅಧಿಕ ಸಾಲದ ಹೊರೆಯೊಂದಿಗೆ, ವೊಡಾಫೋನ್ ಐಡಿಯಾವು ಸರಿಸುಮಾರು 16,000 ಕೋಟಿ ರೂ.ಗಳ ಬಡ್ಡಿ ಬಾಧ್ಯತೆಗಳನ್ನು ಸರ್ಕಾರಕ್ಕೆ ಈಕ್ವಿಟಿಯಾಗಿ ಪರಿವರ್ತಿಸಲು ನಿರ್ಧರಿಸಿದೆ. ಇದು ಸಂಸ್ಥೆಯಲ್ಲಿ ಸುಮಾರು 33% ಮಾಲೀಕತ್ವವನ್ನು ಹೊಂದಿರುತ್ತದೆ.

Best Mobiles in India

English summary
Vodafone Idea Claims it has Launched 5G in this City of India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X