ಉದ್ಯೋಗ ಹುಡುಕುವವರಿಗೆ ಗುಡ್‌ ನ್ಯೂಸ್‌ ನೀಡಿದ ವಿ ಟೆಲಿಕಾಂ!

|

ದೇಶದ ಟೆಲಿಕಾಂ ವಲಯದಲ್ಲಿ ವಿ ಟೆಲಿಕಾಂ ಅಗ್ರ ಮೂರರಲ್ಲಿ ಗುರುತಿಸಿಕೊಂಡಿದೆ. ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳ ಜೊತೆಗೆ ಪೈಪೋಟಿಯನ್ನು ಎದುರಿಸುತ್ತಿದೆ. ಇದೇ ಕಾರಣಕ್ಕಾಗಿ ವಿ ಟೆಲಿಕಾಂ ತನ್ನ ಗ್ರಾಹಕರಿಗಾಗಿ ವಿಶೇಷ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದಲ್ಲದೆ ವಿಶೇಷ ಸೇವೆಗಳನ್ನು ಕೂಡ ಪರಿಚಯಿಸಿದೆ. ಸದ್ಯ ಇದೀಗ ವಿ ಟೆಲಿಕಾಂ ವಿ ಜಾಬ್ಸ್ ಆಂಡ್‌ ಎಜುಕೇಶನ್‌ ಎಂಬ ಹೊಸ ಸೇವೆಯನ್ನು ಲಾಂಚ್‌ ಮಾಡಿದೆ. ಈ ಹೊಸ ಸೇವೆಯು ದೇಶದ ಯುವಜನರು ಉದ್ಯೋಗಶೀಲರಾಗಲು ಮತ್ತು ಉದ್ಯೋಗವನ್ನು ಸರ್ಚ್‌ ಮಾಡುವುದಕ್ಕೆ ಸಹಾಯ ಮಾಡಲಿದೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ಭಾರತದಲ್ಲಿ ಹೊಸ ಜಾಬ್ಸ್‌ ಆಂಡ್‌ ಎಜುಕೇಶನ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಇದು ದೇಶದ ಅತಿದೊಡ್ಡ ಜಾಬ್ಸ್‌ ಸರ್ಚ್‌ ಪ್ಲಾಟ್‌ಫಾರ್ಮ್‌ ಆಪ್ನಾ, ಇಂಗ್ಲೀಷ್ ಲರ್ನಿಂಗ್‌ ಪ್ಲಾಟ್‌ಫಾರ್ಮ್‌, ಎನ್‌ಗುರು ಮತ್ತು ಸರ್ಕಾರಿ ಉದ್ಯೋಗ ಪರೀಕ್ಷೆಯ ತಯಾರಿಯಲ್ಲಿ ಪರಿಣತಿ ಹೊಂದಿರುವ ಪರೀಕ್ಷಾ ವೇದಿಕೆಯ ಜೊತೆಗೆ ಪಾಲುದಾರಿಕೆ ಹೊಂದಿದೆ. ಇನ್ನುಳಿದಂತೆ ಈ ಹೊಸ ಅಪ್ಲಿಕೇಶನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೋಡಾಫೋನ್‌ ಐಡಿಯಾ

ವೋಡಾಫೋನ್‌ ಐಡಿಯಾ ಭಾರತದಲ್ಲಿ ಜಾಬ್ಸ್‌ ಆಂಡ್‌ ಎಜುಕೇಶನ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಇದರಲ್ಲಿ ಉದ್ಯೋಗಗಳು ಮತ್ತು ಶಿಕ್ಷಣದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇದು ಪ್ರಾಥಮಿಕವಾಗಿ ಭಾರತದಲ್ಲಿ ಹೆಚ್ಚಿನ ಪ್ರಿಪೇಯ್ಡ್ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಿದೆ. ಇದು ಯುವಕರಿಗೆ ಉದ್ಯೋಗಗಳನ್ನು ಹುಡುಕಲು, ಇಂಗ್ಲಿಷ್ ಮಾತನಾಡುವ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಸರ್ಕಾರಿ ಉದ್ಯೋಗ ಪರೀಕ್ಷೆಗಳಿಗೆ ತಯಾರಾಗುವುದಕ್ಕೆ ಸ್ಟಾಪ್ ಸಲ್ಯೂಶನ್‌ ನೀಡಲಿದೆ. ವಿ ಜಾಬ್ಸ್‌ ಮತ್ತು ಎಜುಕೇಶನ್‌ ಅಪ್ಲಿಕೇಶನ್‌ ಬಳಕೆದಾರರಿಗೆ ಇಂಗ್ಲಿಷ್‌ನಲ್ಲಿ ಮಾತನಾಡುವುದಕ್ಕೆ ಸಹಾಯ ಮಾಡುವುದು, ಸರ್ಕಾರಿ ಉದ್ಯೋಗಗಳಿಗೆ ತಯಾರಿ ಮತ್ತು ಕ್ಷೇತ್ರಗಳಾದ್ಯಂತ ಉದ್ಯೋಗಗಳನ್ನು ಹುಡುಕುವುದಕ್ಕೆ ಸಹಾಯ ಮಾಡಲಿದೆ.

 ವಿ ಜಾಬ್ಸ್‌ ಮತ್ತು ಎಜುಕೇಶನ್‌

ಇದಲ್ಲದೆ ಬಳಕೆದಾರರಿಗೆ ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಪಡೆಯಲು ಸಹಾಯ ಮಾಡಲಿದೆ. ವಿ ಜಾಬ್ಸ್‌ ಮತ್ತು ಎಜುಕೇಶನ್‌ Enguru ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಪಾಲುದಾರಿಕೆಯ ಭಾಗವಾಗಿ, ಕಂಪನಿಯು ತಜ್ಞರು ನಡೆಸುವ ಅನಿಯಮಿತ ಸಂವಾದಾತ್ಮಕ ಲೈವ್ ತರಗತಿಗಳೊಂದಿಗೆ 14 ದಿನಗಳ ಉಚಿತ ಪ್ರಯೋಗವನ್ನು ನೀಡುತ್ತದೆ. ಇದರ ಪ್ರಾಯೋಗಿಕ ಅವಧಿಯ ನಂತರ ಕಲಿಯಲು ಇಚ್ಛಿಸುವವರು ಪ್ಲಾಟ್‌ಫಾರ್ಮ್‌ನೊಂದಿಗೆ 15% ರಿಂದ 25% ರಿಯಾಯಿತಿ ದರದಲ್ಲಿ ಮುಂದುವರಿಯಬಹುದು ಎಂದು ವಿ ಟೆಲಿಕಾಂ ಹೇಳಿದೆ. ಈ ಸಮಯದಲ್ಲಿ 1500ರೂ. ಮೌಲ್ಯದ ಸಂವಾದಾತ್ಮಕ, ಗ್ಯಾಮಿಫೈಡ್ ಮತ್ತು ಉದ್ಯಮದ ನಿರ್ದಿಷ್ಟ ಆಟೋ-ಲರ್ನಿಂಗ್‌ ಮಾಡ್ಯೂಲ್‌ಗಳಿಗೆ ಉಚಿತ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ.

ಸರ್ಕಾರಿ

ಇನ್ನು ಸರ್ಕಾರಿ ಉದ್ಯೋಗಗಳಿಗೆ ಉದ್ಯೋಗಾಕಾಂಕ್ಷಿಗಳನ್ನು ಸಿದ್ಧಪಡಿಸುವುದಕ್ಕೆ ಇದು ಸಹಾಯ ಮಾಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ಪ್ಲಾಟ್‌ಫಾರ್ಮ್‌ಗೆ ಒಂದು ತಿಂಗಳ ಉಚಿತ ಚಂದಾದಾರಿಕೆಯನ್ನು ನೀಡಲು ವಿ ಜಾಬ್ಸ್ ಮತ್ತು ಎಜುಕೇಶನ್ ಪ್ಲಾಟ್‌ಫಾರ್ಮ್‌ ಪರೀಕ್ಷಾ ಪ್ಲಾಟ್‌ಫಾರ್ಮ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದರ ಒಂದು ತಿಂಗಳ ಚಂದಾದಾರಿಕೆಯಲ್ಲಿ 150 ಪರೀಕ್ಷೆಗಳಿಗೆ ಅನಿಯಮಿತ ಮಾಕ್‌ ಟೆಸ್ಟ್‌ಗಳನ್ನು ಪಡೆದುಕೊಳ್ಳಬಹುದು. ಉಚಿತ ಬಳಕೆಯ ನಂತರ ಬಳಕೆದಾರರು ವರ್ಷಕ್ಕೆ 249ರೂ.ಗಳ ನಾಮಿನಲ್‌ ಚಂದಾದಾರಿಕೆಯ ಮೂಲಕ ಈ ಪ್ಲಾಟ್‌ಫಾರ್ಮ್ ಬಳಸುವುದನ್ನು ಮುಂದುವರಿಸಬಹುದು.

ವಿ ಟೆಲಿಕಾಂ

ಇದಲ್ಲದೆ ಉದ್ಯೋಗಾಕಾಂಕ್ಷಿಗಳಿಗೆ ಸಂಬಂಧಿತ ಉದ್ಯೋಗಗಳನ್ನು ಹುಡುಕಲು ಸಾಧ್ಯವಾಗುವಂತೆ ವಿ ಟೆಲಿಕಾಂ ಅಪ್ನಾ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರ ಭಾಗವಾಗಿ, ವಿ ಟೆಲಿಕಾಂ ಬಳಕೆದಾರರು ಅಪ್ನಾ ಪ್ಲಾಟ್‌ಫಾರ್ಮ್‌ಗೆ ಉಚಿತ ಆದ್ಯತೆಯ ಪ್ರವೇಶವನ್ನು ಪಡೆದುಕೊಳ್ಳಬಹುದು. ಈ ಸೇವೆಯು ಎಲ್ಲಾ Vi ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದೆ ಲಭ್ಯವಿರುತ್ತದೆ. ನಾವು ಅಪ್ನಾ, ಎನ್‌ಗುರು ಮತ್ತು ಪರೀಕ್ಷಾ ಸಹಭಾಗಿತ್ವದಲ್ಲಿ ವಿ ಜಾಬ್ಸ್‌ ಮತ್ತು ಎಜುಕೇಶನ್‌ ಅಪ್ಲಿಕೇಶನ್‌ ಪ್ರತಿಪಾದನೆಯನ್ನು ಸಂಗ್ರಹಿಸಿದ್ದೇವೆ ಎಂದು ವೊಡಾಫೋನ್ ಐಡಿಯಾ ಸಿಎಂಒ ಅವನೀಶ್ ಖೋಸ್ಲಾ ಹೇಳಿದ್ದಾರೆ.

Best Mobiles in India

Read more about:
English summary
Vodafone Idea launches Vi Jobs In India For Students and job aspirants

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X