ವೊಡಾಫೋನ್‌ನಿಂದ ಮತ್ತೆ ಹೊಸ ಪ್ಲ್ಯಾನ್: ಜಿಯೋ, ಏರ್‌ಟೆಲ್‌ ಕಂಗಾಲ!

|

ಭಾರಿ ಆರ್ಥಿಕ ಸಂಕಷ್ಟದ ಹೊರೆಯಲ್ಲಿರುವ ವೊಡಾಫೋನ್ ಟೆಲಿಕಾಂ ಇತ್ತೀಚಿಗೆ 1GB ಡೇಟಾಗೆ 35ರೂ. ನಿಗದಿ ಮಾಡಬೇಕೆಂದು ಟ್ರಾಯ್‌ಗೆ ಮನವಿ ಮಾಡಿಕೊಂಡಿತ್ತು. ಅದರ ಬೆನ್ನಲ್ಲೇ ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳು ಸಹ ಡೇಟಾ ಕನಿಷ್ಠ ಬೆಲೆ ನಿಗದಿ ಮಾಡಬೇಕೆಂದು ಬೇಡಿಕೆ ಸಲ್ಲಿಸಿವೆ. ಆದರೆ ವೊಡಾಫೋನ್ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದ್ದು, ಎರಡು ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ವೊಡಾಫೋನ್ ಟೆಲಿಕಾಂ

ಹೌದು, ವೊಡಾಫೋನ್ ಟೆಲಿಕಾಂ ಸಂಸ್ಥೆಯು ಇದೀಗ ಹೊಸದಾಗಿ ಮತ್ತು 248ರೂ. ಬೆಲೆಯ ಎರಡು ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ತನ್ನ ಯೋಜನೆಯ ಲಿಸ್ಟ್‌ಗೆ ಸೇರಿಸಿಕೊಂಡಿದೆ. ಈ ಎರಡು ಪ್ಲ್ಯಾನ್‌ಗಳು ಅಲ್ಪಾವಧಿಯ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, 218ರೂ.ಆದರೆ ಅಧಿಕ ಡೇಟಾ ಪ್ರಯೋಜನಗಳನ್ನು ಹೊಂದಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿವೆ. ಹಾಗಾದರೆ ವೊಡಾಫೋನ್‌ನ ಈ ಎರಡು ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವೊಡಾಫೋನ್ 218ರೂ.ಪ್ಲ್ಯಾನ್

ವೊಡಾಫೋನ್ 218ರೂ.ಪ್ಲ್ಯಾನ್

ವೊಡಾಫೋನ್‌ನ 218ರೂ.ಪ್ಲ್ಯಾನ್‌ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಸಿಗಲಿದೆ. ಹಾಗೂ ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ದೊರೆಯುತ್ತದೆ ಮತ್ತು 100 ರಾಷ್ಟ್ರೀಯ ಎಸ್‌ಎಮ್ಎಸ್‌ಗಳು ದೊರೆಯುತ್ತವೆ. ಜೊತೆಗೆ ವೊಡಾಫೋನ್ ಪ್ಲೇ ಮತ್ತು ಜೀ5 ಚಂದಾದಾರಿಕೆ ಸಹ ಸಿಗುತ್ತದೆ.

ವೊಡಾಫೋನ್ 248ರೂ.ಪ್ಲ್ಯಾನ್

ವೊಡಾಫೋನ್ 248ರೂ.ಪ್ಲ್ಯಾನ್

ವೊಡಾಫೋನ್‌ನ 248ರೂ.ಪ್ಲ್ಯಾನ್‌ ಸಹ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಇದು ಕೂಡಾ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಸಿಗಲಿದೆ. ಹಾಗೂ ಪೂರ್ಣ ವ್ಯಾಲಿಡಿಟಿ ಅವಧಿಗೆ 8GB ಡೇಟಾ ದೊರೆಯುತ್ತದೆ ಮತ್ತು 100 ಲೋಕಲ್ ಮತ್ತು ರಾಷ್ಟ್ರೀಯ ಎಸ್‌ಎಮ್ಎಸ್‌ಗಳು ದೊರೆಯುತ್ತವೆ. ಜೊತೆಗೆ ವೊಡಾಫೋನ್ ಪ್ಲೇ ಮತ್ತು ಜೀ5 ಚಂದಾದಾರಿಕೆ ಸಹ ಸಿಗುತ್ತದೆ.

ಆಯ್ದ ಪ್ರದೇಶಗಳಲ್ಲಿ ಮಾತ್ರ

ಆಯ್ದ ಪ್ರದೇಶಗಳಲ್ಲಿ ಮಾತ್ರ

ವೊಡಾಫೋನ್‌ ಸಂಸ್ಥೆಯ 218ರೂ.ಪ್ಲ್ಯಾನ್ ಮತ್ತು 248ರೂ.ಪ್ಲ್ಯಾನ್ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಸದ್ಯ ಹರಿಯಾಣ ಮತ್ತು ದೆಹಲಿ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ಮಾತ್ರ ಲಭ್ಯವಾಗಿದೆ. ಮುಂದೆ ಇತರೆ ಟೆಲಿಕಾಂ ಸರ್ಕಲ್ ವ್ಯಾಪ್ತಿಗೆ ವಿಸ್ತರಣೆ ಆಗುವ ಸಾಧ್ಯತೆಗಳಿವೆ. ಆದರೆ ಈ ಪ್ಲ್ಯಾನ್‌ಗಳ ಬೆಲೆಯಲ್ಲಿಯೇ ಪ್ರತಿದಿನ 3GB ಡೇಟಾ ಒದಗಿಸುವ ಬೆಸ್ಟ್ ಪ್ಲ್ಯಾನ್‌ಗಳು ವೊಡಾಫೋನಿನಲ್ಲಿವೆ. ಮುಂದೆ ಓದಿರಿ.

ವೊಡಾಫೋನ್ 249ರೂ.ಪ್ಲ್ಯಾನ್

ವೊಡಾಫೋನ್ 249ರೂ.ಪ್ಲ್ಯಾನ್

ವೊಡಾಫೋನಿನ 249ರೂ.ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಜೊತೆಗೆ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

ವೊಡಾಫೋನ್ 399ರೂ.ಪ್ಲ್ಯಾನ್

ವೊಡಾಫೋನ್ 399ರೂ.ಪ್ಲ್ಯಾನ್

ವೊಡಾಫೋನಿನ 399ರೂ.ಪ್ಲ್ಯಾನ್ ಸಹ 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

ವೊಡಾಫೋನ್ 599ರೂ.ಪ್ಲ್ಯಾನ್

ವೊಡಾಫೋನ್ 599ರೂ.ಪ್ಲ್ಯಾನ್

ವೊಡಾಫೋನಿನ 599ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಪ್ರತಿದಿನ 1.5GB ಡೇಟಾ+ ಹೆಚ್ಚುವರಿ 1.5GB ಡೇಟಾ ಒಟ್ಟು ಪ್ರತಿದಿನ 3GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೊಡಾಫೋನ್‌ ಪ್ಲೇ ಹಾಗೂ ಜೀ5 ಆಪ್ ಚಂದಾದಾರಿಕೆ ಸೌಲಭ್ಯ ಲಭ್ಯ.

Most Read Articles
Best Mobiles in India

English summary
Vodafone offers complimentary subscription of Vodafone Play and Zee5 on both recharges.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X