ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಪೂರ್ಣ ಪ್ರಮಾಣದ 4G VoLTE ಸೇವೆಯನ್ನು ಆರಂಭಿಸಿದ ನಂತರದಲ್ಲಿ ಏರ್‌ಟೆಲ್ ಹೆಚ್ಚಿನ ಪ್ರಮಾಣದ 4G VoLTE ಸೇವೆಯನ್ನು ನೀಡಲು ಮುಂದಾಗಿದೆ. ಇದೇ ಹಾದಿಯಲ್ಲಿ ಸಾಗಿರುವ ವೊಡಾಫೋನ್ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 4G VoLTE ಯನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಇದೇ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ 4G VoLTE ಸೇವೆಯನ್ನು ವೊಡಾಫೋನ್ ಶುರು ಮಾಡಿದೆ. ಇದಲ್ಲದೇ ಮೈಸೂರು ಮತ್ತು ಬೆಳಗಾವಿಯಲ್ಲಿಯೂ 4G VoLTE ಸೇವೆಯನ್ನು ಆರಂಭ ಮಾಡುತ್ತಿದೆ.
ಸದ್ಯ ವೋಡಾಫೋನ್ 4G VoLTE ಸೇವೆಯೂ ಮುಂಬೈ, ದೆಹಲಿ, ಗುಜರಾತ್, ರಾಜಸ್ಥಾನ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಗೋವಾ, ಹರಿಯಾಣ, ತಮಿಳುನಾಡು, ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಲಭ್ಯವಿದ್ದು, ಶೀಘ್ರವೇ ಪ್ಯಾನ್ ಇಂಡಿಯಾದಲ್ಲಿ ತನ್ನ ಸೇವೆಯನ್ನು ಆರಂಭಿಸಲು ವೊಡಾಫೋನ್ ಯೋಜನೆಯನ್ನು ಹಾಕಿಕೊಂಡಿದೆ. ಅಲ್ಲದೇ ಇತರೆ ಟೆಲಿಕಾಂ ಕಂಪನಿಗಳಿಗಿಂತಲೂ ಹೆಚ್ಚಿನ ವೇಗದ ಸೇವೆಯನ್ನು ನೀಡಲು ಗುಣಮಟ್ಟದ ನೆಟ್‌ವರ್ಕ್ ಒದಗಿಸಲು ವೊಡಾಫೋನ್ ಶ್ರಮಿಸುತ್ತಿದೆ.
ಓದಿರಿ: ವೊಡಾಫೋನ್-ಜಿಯೋ ಹಿಂದಿಕ್ಕಿ ವೇಗದ 4G ಸೇವೆಯಲ್ಲಿ ಏರ್‌ಟೆಲ್ ಮುಂದು..!
ಒಟ್ಟು ದೇಶದ 100 ಸಿಟಿಗಳಲ್ಲಿ ಸಂಪೂರ್ಣ 4G VoLTE ಸೇವೆಯನ್ನು ಆರಂಭಿಸುವ ಯೋಜನೆಯನ್ನು ವೊಡಾಪೋನ್ ಹಮ್ಮಿಕೊಂಡಿದ್ದು, ಹಂತ-ಹಂತವಾಗಿ 4G VoLTE ಜಾಲವನ್ನು ವಿಸ್ತರಿಸುವ ಮೂಲಕ ದೇಶದಲ್ಲಿ ಹೆಚ್ಚಿನ 4G VoLTE ನೆಟ್ವವರ್ಕ್ ಜಾಲವನ್ನು ಹೊಂದಿರುವ ಜಿಯೋದೊಂದಿಗೆ ಸ್ಪರ್ಧೆಗೆ ಇಳಿಯಲು ಮುಂದಾಗಿದೆ. ಹೆಚ್ಚಿನ ಬಳಕೆದಾರರನ್ನು ಗುಣಮಟ್ಟದ ಸೇವೆಯೊಂದಿಗೆ ಆಕರ್ಷಕ ಪ್ಲಾನ್‌ಗಳನ್ನು ಘೋಷಿಸುವ ಮೂಲಕ ಸೆಳೆಯುವ ಪ್ಲಾನ್ ಅನ್ನು ವೊಡಾಫೋನ್ ಮಾಡುತ್ತಿದೆ. ಇದರಲ್ಲಿ ಕೊಂಚ ಪ್ರಮಾಣದಲ್ಲಿ ಯಶಸ್ಸು ಸಹ ಕಾಣುತ್ತಿದೆ.
ದೇಶಿಯ ಮಾರಕಟ್ಟೆಯಲ್ಲಿ ಜಿಯೋ ಆಬ್ಬರದ ಮುಂದೆ ಕೊಚ್ಚಿ ಹೋಗಿದ್ದ ವೊಡಾಫೋನ್, ಪ್ರಸ್ತುತವೂ ಬಳಕೆದಾರನ್ನು ಉಳಿಸಿಕೊಳ್ಳಲು ಪರದಡುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿದೆ. ಅಲ್ಲದೇ ವೊಡಾಫೋನ್ ಡೇಟಾ ಸೇವೆಯೂ ನಿಧಾನವಾಗಿದ್ದು, ಇದನ್ನು ಉತ್ತಮಪಡಿಸುವ ಕಾರ್ಯಕ್ಕೆ ವೊಡಾಫೋನ್ ಮುಂದಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಉಳಿಯಲು ಎಲ್ಲಾ ಮಾದರಿಯ ಕಸರತ್ತು ಮಾಡುತ್ತಿದೆ.
ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಇದಲ್ಲದೇ ಶೀಘ್ರವೇ ಮಾರುಕಟ್ಟೆಯಲ್ಲಿ ಐಡಿಯಾದೊಂದಿಗೆ ವೊಡಾಫೋನ್ ವಿಲೀನವಾಗಲಿದೆ ಎನ್ನವು ಮಾತು ಕೇಳಿಬರುತ್ತಿದೆ. ಶೀಘ್ರವೇ ಇದು ಸಾಧ್ಯವಾಗಲಿದ್ದು, ಈ ವಿಲೀನದ ಮೂಲಕ ಭಾರತದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಎನ್ನುವ ಖ್ಯಾತಿಗೆ ವೊಡಾಫೋನ್ ಪಾತ್ರವಾಗಲಿದೆ ಎನ್ನಲಾಗಿದೆ. ಈ ಮೂಲಕ ಏರ್‌ಟೆಲ್ ಮತ್ತು ಜಿಯೋವನ್ನು ಹಿಂದಿಕ್ಕಲಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.