Subscribe to Gizbot

ಜಿಯೋ ಮುಗಿಸಲು ವೊಡಾಫೋನ್ ಅಸ್ತ್ರ: ಕಡಿಮೆ ಬೆಲೆಗೆ ಅನ್‌ಲಿಮಿಟೆಡ್ ವೇಗದ ಡೇಟಾ ಪ್ಲಾನ್‌..!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿದೆ. ಜಿಯೋದೊಂದಿಗೆ ಜಿದ್ದಿಗೆ ಬಿದ್ದಿರುವ ವೊಡಾಫೋನ್ ಮಾರುಕಟ್ಟೆಯಲ್ಲಿ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಲಾಂಚ್ ಮಾಡಿರುವ ಆಫರ್ ಗೆ ಸೆಡ್ಡು ಹೊಡೆಯುವ ಸಲುವಾಗಿ ವೊಡಾಫೋನ್ ಹೊಸ ಅನ್‌ಲಿಮಿಡೆಟ್ ಆಫರ್ ಅನ್ನು ನೀಡಲು ಮುಂದಾಗಿದೆ.

ವೊಡಾಫೋನ್ ಅಸ್ತ್ರ: ಕಡಿಮೆ ಬೆಲೆಗೆ ಅನ್‌ಲಿಮಿಟೆಡ್ ವೇಗದ ಡೇಟಾ ಪ್ಲಾನ್‌..!

ಮಾರುಕಟ್ಟೆಯಲ್ಲಿ ಜಿಯೋ ಮಣಿಸುವ ಸಲುವಾಗಿ ವೊಡಾಫೋನ್ ರೂ.21ರ ಪ್ಲಾನ್‌ ಅನ್ನು ಘೋಷಣೆ ಮಾಡಿದೆ. ಈ ಆಫರ್ ನಲ್ಲಿ ಬಳಕೆದಾರರಿಗೆ ಆನ್‌ಲಿಮಿಟೆಡ್ ಇಂಟರ್ನೆಟ್ ಸೇವೆಯನ್ನು ವೊಡಾಫೋನ್ ನೀಡಲಿದೆ. ಇದು ಜಿಯೋ ಘೋಷಣೆ ಮಾಡಿರುವ ರೂ.19 ಪ್ಲಾನ್‌ಗೆ ಸೆಡ್ಡು ಹೊಡೆಯುವ ಸಲುವಾಗಿಯೇ ನೀಡಲಾಗಿರುವ ಆಫರ್ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
3G-4G ಬಳಕೆದಾರರಿಗೆ:

3G-4G ಬಳಕೆದಾರರಿಗೆ:

ವೊಡಾಫೋನ್ ಘೋಷಣೆ ಮಾಡಿರುವ ರೂ.21ರ ಪ್ಲಾನ್‌ 3G-4G ಬಳಕೆದಾರರಿಬ್ಬರಿಗೂ ಲಭ್ಯವಿರಲಿದ್ದು, ಈ ಕುರಿತು ತನ್ನ ವೆಬ್‌ಸೈಟಿನಲ್ಲಿ ಮಾಹಿತಿಯನ್ನು ನೀಡಿದೆ. ಇಂದು ಒಂದು ಗಂಟೆಗಳ ಬಳಕೆಗೆ ಇಂಟರ್ನೆಟ್ ನೀಡುವ ಆಫರ್ ಆಗಿದ್ದು, ಈ ಒಂದು ಗಂಟೆಯಲ್ಲಿ ದೊರೆಯುವ ವೇಗದ ಇಂಟರ್ನೆಟ್‌ನಲ್ಲಿ ಬಳಕೆದಾರರು ಏನ್ನನ್ನು ಬೇಕಾದರು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಒಂದು ದಿನ:

ಒಂದು ದಿನ:

ಈ ಪ್ಲಾನ್‌ ಒಂದು ದಿನದ ವ್ಯಾಲಿಡಿಟಿಯನ್ನು ಹೊಂದಿರಲಿದ್ದು, ಒಂದು ಗಂಟೆ ವೇಗದ ಇಂಟರ್ನೆಟ್ ಬಳಕೆಯ ನಂತರದಲ್ಲಿ ಕಡಿಮೆ ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಒಂದು ಗಂಟೆಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ. ಯಾವುದನ್ನು ಬೇಕಾದರು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

ಮಿತಿ ಇಲ್ಲ:

ಮಿತಿ ಇಲ್ಲ:

ಇದರಿಂದಾಗಿ ಹೆಚ್ಚಿನ ಡೇಟಾವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಈ ಪ್ಲಾನ್‌ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಳಕೆದಾರರಿಗೆ ಡೇಟಾ ಡೌನ್‌ಲೋಡ್ ಮಿತಿಯನ್ನು ವಿಧಿಸಲಾಗಿಲ್ಲ. ಬಳಕೆದಾರರು ಅವರ ಅವಶ್ಯಕತೆಗೆ ತಕ್ಕಂತೆ ಈ ಆಫರ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಜಿಯೋ ಆಫರ್:

ಜಿಯೋ ಆಫರ್:

ಆದರೆ ಜಿಯೋ ರೂ.19ರ ಆಫರ್ ನಲ್ಲಿ ಬಳಕೆದಾರರಿಗೆ ಮಿತಿಗಳನ್ನು ವಿಧಿಸಿದ್ದು, ಒಂದು ದಿನದ ಬಳಕೆಗೆ 0.15GB ಡೇಟಾವನ್ನು ಮಾತ್ರವೇ ಬಳಕೆಗೆ ನೀಡಿದೆ. ಆದರೆ ಕರೆ ಮಾಡುವ ಅವಕಾಶ ಮತ್ತು ಮೇಸೆಜ್ ಗಳನ್ನು ಕಳುಹಿಸಲು ಅವಕಾಶವನ್ನು ಮಾಡಿಕೊಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: ಆಂಡ್ರಾಯ್ಡ್‌ನಲ್ಲಿಯೇ ಆಕ್ಸಿಜನ್ OS ಬೆಸ್ಟ್‌ ಯಾಕೆ..? ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಹಿಂದಿರುವ ಶಕ್ತಿ..!

English summary
Vodafone launches Rs. 21 prepaid plan to compete with Reliance Jio. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot