ವೊಡಾಫೋನ್‌ ಹೊಸ 299ರೂ. ಪ್ಲ್ಯಾನ್‌!..3GB ಡೇಟಾ ಮತ್ತು 70 ದಿನ ವ್ಯಾಲಿಡಿಟಿ!

|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿಗ ದರ ಸಮರ ಜೋರಾಗಿದ್ದು, ಟೆಲಿಕಾಂ ಆಪರೇಟಿಂಗ್ ಕಂಪನಿಗಳು ಬೆಸ್ಟ್‌ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಗ್ರಾಹಕರನ್ನು ಸೆಳೆಯಲು ಹೆಣಗಾಡುತ್ತಿವೆ.ಈ ಪೈಪೋಟಿಯಲ್ಲಿ ಜಿಯೊ ಮತ್ತು ಏರ್‌ಟೆಲ್‌ ಮುಂಚೂಣಿಯಲ್ಲಿದ್ದು, ಅವುಗಳ ಬೆನ್ನಲ್ಲೇ ವೊಡಾಫೋನ್‌ ಕಂಪನಿಯು ಸಹ ವಿವಿಧ ಆಕರ್ಷಕ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡುತ್ತ ಸಾಗಿದೆ.

ವೊಡಾಫೋನ್‌ ಹೊಸ 299ರೂ. ಪ್ಲ್ಯಾನ್‌!..3GB ಡೇಟಾ ಮತ್ತು 70 ದಿನ ವ್ಯಾಲಿಡಿಟಿ!

ಹೌದು, ಜನಪ್ರಿಯ ವೊಡಾಫೋನ್‌ ಟೆಲಿಕಾಂ ಕಂಪನಿಯು 299ರೂ.ಗಳ ಹೊಸ ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಘೋಷಿಸಿದ್ದು, ಈ ಪ್ಯಾಕ್‌ನಲ್ಲಿ ಗ್ರಾಹಕರಿಗೆ ಅನಿಯಮಿತ ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌, ಸೇರಿದಂತೆ ಭರ್ಜರಿ 3GB ಉಚಿತ ಡೇಟಾದ ಪ್ರಯೋಜನ ಲಭ್ಯವಾಗಲಿವೆ. ಜಿಯೊ ಮತ್ತು ಏರ್‌ಟೆಲ್‌ ಕಂಪನಿಗಳ ಜನಪ್ರಿಯ ಆಫರ್‌ಗಳಿಗೆ ಸೆಡ್ಡು ಹೊಡೆಯಲು ಈ ಪ್ಲ್ಯಾನ್‌ ಜಾರಿಮಾಡಿದೆ.

ವೊಡಾಫೋನ್‌ ಹೊಸ 299ರೂ. ಪ್ಲ್ಯಾನ್‌!..3GB ಡೇಟಾ ಮತ್ತು 70 ದಿನ ವ್ಯಾಲಿಡಿಟಿ!

ಹಾಗೆಯೇ ವೊಡಾಫೋನ್ ಈ ಹೊಸ ರೀಚಾರ್ಜ್‌ ಪ್ಯಾಕ್‌ 1000 ಉಚಿತ ಎಸ್‌ಎಮ್‌ಎಸ್‌ಗಳನ್ನು ಸಹ ಒಳಗೊಂಡಿದ್ದು, ಒಟ್ಟು 70 ದಿನಗಳ ಕಾಲ ವ್ಯಾಲಿಡಿಟಿಯನ್ನು ಪಡೆದಿದೆ. ಉಚಿತ ರೋಮಿಂಗ್‌ ಮತ್ತು ಎಸ್‌ಟಿಡಿ ಕರೆಗಳ ಪ್ರಯೊಜನಗಳು ಸೇರಿವೆ. ಹಾಗಾದರೇ ವೊಡಾಫೋನ್‌ ಕಂಪನಿಯ 299ರೂ ರೀಚಾರ್ಜ್‌ ಪ್ಲ್ಯಾನ್ ಇತರೆ ಪ್ರಯೋಜನಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌! ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ಬಿಗ್‌ ವ್ಯಾಲಿಡಿಟಿ

ಬಿಗ್‌ ವ್ಯಾಲಿಡಿಟಿ

ವೊಡಾಫೋನ್ 299ರೂ ರೀಚಾರ್ಜ್‌ ಪ್ಲ್ಯಾನ್ ಹೆಚ್ಚು ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಬೆಸ್ಟ್‌ ಆಯ್ಕೆ ಎನ್ನಬಹುದು. ಏಕೆಂದರೇ ಈ ಪ್ಲ್ಯಾನ್‌ ಒಟ್ಟು 70 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಕಂಪನಿಯ 299ರೂ ಮೊತ್ತದ ಇನ್ನೊಂದು ಪ್ಲ್ಯಾನ್‌ ಕೇವಲ 28ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಹೀಗಾಗಿ ವ್ಯಾಲಿಡಿಟಿ ಬೇಕೆನ್ನುವವರಿಗೆ ಇದು ಸೂಕ್ತ ಪ್ಲ್ಯಾನ್‌.

ಓದಿರಿ : ಏನಿದು ವೈ-ಫೈ ಬೂಸ್ಟರ್?..ಇದರಿಂದ ಇಂಟರ್ನೆಟ್ ಸ್ಪೀಡ್‌ ಆಗುತ್ತಾ? ಓದಿರಿ : ಏನಿದು ವೈ-ಫೈ ಬೂಸ್ಟರ್?..ಇದರಿಂದ ಇಂಟರ್ನೆಟ್ ಸ್ಪೀಡ್‌ ಆಗುತ್ತಾ?

ಉಚಿತ ಕರೆ ಮತ್ತು ಎಸ್‌ಎಮ್‌ಎಸ್‌

ಉಚಿತ ಕರೆ ಮತ್ತು ಎಸ್‌ಎಮ್‌ಎಸ್‌

70 ದಿನಗಳ ವ್ಯಾಲಿಡಿಟಿ ಲೈಫ್‌ ಅನ್ನ ಪಡೆದಿರುವ ವೊಡಾಫೋನ್‌ 299ರೂ. ರೀಚಾರ್ಜ್‌ ಪ್ಯಾಕ್‌ನಲ್ಲಿ ಗ್ರಾಹಕರಿಗೆ ಅನಿಯಮಿತ ಉಚಿತ ಕರೆಗಳು ದೊರೆಯಲಿದ್ದು, ಇದರೊಂದಿಗೆ ರೋಮಿಂಗ್‌ ಕರೆಗಳು ಸೇರಿರಲಿವೆ. 70 ದಿನಗಳಿಗೆ ಉಚಿತ 1000 ಎಸ್‌ಎಮ್‌ಎಸ್‌ಗಳು ಸಹ ಲಭ್ಯವಾಗಲಿವೆ. ಗ್ರಾಹಕರು ಇದರ ಪ್ರಯೋಜನ ಪಡೆದಬಹುದಾಗಿದೆ.

3GB ಡೇಟಾ

3GB ಡೇಟಾ

ವೋಡಾಫೋನ್ ಪರಿಚಯಿಸಿರುವ 299ರೂ. ಹೊಸ ಪ್ಲ್ಯಾನ್ 70 ದಿನಗಳಿಗೆ 3GB ಡೇಟಾವನ್ನು ಒಳಗೊಂಡಿದೆ. ಇಂಟರ್ನೆಟ್ ಅನ್ನು ಹೆಚ್ಚಾಗಿ ಬಳಸದ ಗ್ರಾಹಕರಿಗೆ ಈ ರೀಚಾರ್ಜ್‌ ಪ್ಲ್ಯಾನ್‌ ಅನುಕೂಲ ಎನಿಸಲಿದೆ. ಪ್ರಸ್ತುತ ಪ್ರತಿದಿನ 3GB ಡೇಟಾ ನಿರೀಕ್ಷಿಸುವ ಗ್ರಾಹಕರಿಗೆ ಈ ರೀಚಾರ್ಜ್‌ ಪ್ಲ್ಯಾನ್‌ ಇದು ನಿರಾಶೆಯನಿಸಲಿದೆ.

ಓದಿರಿ : 'ರಿಯಲ್‌ ಮಿ 3 ಪ್ರೊ' ಫೋನ್‌ ಖರೀದಿಸಲು ಇನ್ನು ಕಾಯಬೇಕಿಲ್ಲ!..24x7 ಲಭ್ಯ!ಓದಿರಿ : 'ರಿಯಲ್‌ ಮಿ 3 ಪ್ರೊ' ಫೋನ್‌ ಖರೀದಿಸಲು ಇನ್ನು ಕಾಯಬೇಕಿಲ್ಲ!..24x7 ಲಭ್ಯ!

ಪೈಪೋಟಿ

ಪೈಪೋಟಿ

ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಜಿಯೊ ಮತ್ತು ಏರ್‌ಟೆಲ್‌ ಮೊದಲೆರಡು ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ. ಹೆಚ್ಚಿನ ಡೇಟಾ ಮತ್ತು ವ್ಯಾಲಿಡಿಟಿ ಆಯ್ಕೆಗಳನ್ನು ಪರಿಚಯಿಸಿ ಗ್ರಾಹಕರಿಗೆ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಈ ಎರಡು ಕಂಪನಿಗಳೊಂದಿಗೆ ವೊಡಾಫೋನ್ ತೀವ್ರ ಪೈಪೋಟಿ ನೀಡಲು ಈ ಹೊಸ ಪ್ಲ್ಯಾನ್ ಪರಿಚಯಿಸಿದೆ.

ಗ್ರಾಹಕರ ನಿರೀಕ್ಷೆ

ಗ್ರಾಹಕರ ನಿರೀಕ್ಷೆ

ಪ್ರಸ್ತುತ ಇಂಟರ್ನೆಟ್ ಪ್ರತಿಯೊಬ್ಬರ ಅಗತ್ಯ ಮತ್ತು ಅನಿವಾರ್ಯ. ಈ ನಿಟ್ಟಿನಲ್ಲಿ ನೋಡುವುದಾದರೇ ಸಹಜವಾಗಿ ಗ್ರಾಹಕರು ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಹೆಚ್ಚಿನ ಡೇಟಾವನ್ನು ಮತ್ತು ವ್ಯಾಲಿಡಿಟಿ ನಿರೀಕ್ಷಿಸುತ್ತಾರೆ ಎನ್ನಬಹುದು. ಇದರೊಂದಿಗೆ ಮುಖ್ಯವಾಗಿ ನೆಟವರ್ಕ್‌ ವೇಗವಾಗಿರಬೇಕು.

ಓದಿರಿ : ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಲ್ಯಾಪ್‌ಟಾಪ್‌ ಘೋಷಣೆ!..ಮ್ಯಾಕ್‌ಬುಕ್‌ ಹೋಲಿಕೆ!ಓದಿರಿ : ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಲ್ಯಾಪ್‌ಟಾಪ್‌ ಘೋಷಣೆ!..ಮ್ಯಾಕ್‌ಬುಕ್‌ ಹೋಲಿಕೆ!

Best Mobiles in India

English summary
Vodafone has introduced new Rs 299 prepaid plan which offers 3GB data for the entire 70 day validity period along with free unlimited local, STD and roaming calls. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X