ಏರ್‌ಟೆಲ್ ನಂತರ ವೊಡಾಫೋನಿಂದ ಭರ್ಜರಿ ಆಫರ್..!!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ಕೊಡುವುದನ್ನು ನಿಲ್ಲಿಸಿದರೂ ಇತರೆ ಟೆಲಿಕಾಂ ಕಂಪನಿಗಳು ಮಾತ್ರ ಕಳೆದುಕೊಂಡಿರುವ ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫರ್ ಗಳನ್ನು ನೀಡಲು ಮುಂದಾಗಿದೆ. ಮೊನ್ನೆ ಉತ್ತರ ಪ್ರದೇಶದ ಸರ್ಕಲ್ ನಲ್ಲಿ ರೂ.5ಕ್ಕೆ ಅನ್‌ಲಿಮಿಟೆಡ್ ಆಫರ್ ನೀಡಿದ್ದ ವೊಡಾಫೋನ್ ಇಂದು ಮತ್ತೊಂದು ಬಪರ್ ಆಫರ್ ನೀಡಿದೆ.

ಏರ್‌ಟೆಲ್ ನಂತರ ವೊಡಾಫೋನಿಂದ ಭರ್ಜರಿ ಆಫರ್..!!!!

ಓದಿರಿ: ಜಿಯೋಫೆನ್ಸಿಂಗ್ ಬಗ್ಗೆ ಎಲ್ಲಾದ್ರೂ ಕೇಳಿದ್ರಾ..? ಏನಿದು..?

ರಂಜಾನ್ ಅಂಗವಾಗಿ ವೊಡಾಫೋನ್ ಫೋಸ್ಟ್ ಪೇಯ್ಡ್ ಗ್ರಾಹಕರಿಗೆ ಅಚ್ಚರಿಯ ಆಫರ್ ನೀಡಿದೆ. ರೂ.786ಕ್ಕೆ ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ರೋಮಿಂಗ್ ಕರೆಗಳನ್ನು ಉಚಿತವಾಗಿ ನೀಡಿದ್ದು, ಅಲ್ಲದೇ 25 GB 4G ಡೇಟಾವನ್ನು ಬಳಕೆಗೆ ನೀಡಲಿದೆ.

ಈ ಹಿಂದೆ ವೊಡಾಪೋನ್ ರೂ.346ಕ್ಕೆ ಪ್ರತಿದಿನ 1GB 4G ಡೇಟಾವನ್ನು ನೀಡುವ ಆಫರ್ ಘೋಷಣೆ ಮಾಡಿತ್ತು. ಆದರೆ ಅದು ಕೇವಲ ಮಾರ್ಚ್ 15 ರ ವರೆಗೆ ಮಾತ್ರವೇ ಜಾರಿಯಲ್ಲಿತ್ತು. ಅಲ್ಲದೇ ಈ ಆಫರ್ ಕೇವಲ ಪ್ರೀಪೆಯ್ಡ್ ಬಳಕೆದಾರಿಗೆ ಮಾತ್ರವೇ ದೊರೆಯುತ್ತಿತ್ತು. ಆದರೆ ಈ ಪ್ಲಾನ್ ಅನ್ನು ಬದಲಾಯಿಸಿದೆ.

ಏರ್‌ಟೆಲ್ ನಂತರ ವೊಡಾಫೋನಿಂದ ಭರ್ಜರಿ ಆಫರ್..!!!!

ಓದಿರಿ: ಐಫೋನ್ 7 ಮೇಲೆ ರಿಯಾಯಿತಿ ನೀಡಿದ ಆಮೆಜಾನ್

ಈಗ ಮತ್ತೇ ಅದೇ ಆಫರ್ ಬೆಲೆಯನ್ನು ಸ್ವಲ್ಪ ಏರಿಕೆ ಮಾಡಿ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಏರ್‌ಟೆಲ್ ಸಹ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಹೆಚ್ಚಿನ ಒಲೈಕೆಗೆ ಮುಂದಾಗಿದ್ದು, ವೊಡಾಫೋನ್ ಸಹ ಅದೇ ಹಾದಿಯಲ್ಲಿ ಸಾಗಲಿದೆ.

ಇಲ್ಲದೇ 4G ಬಳಕೆದಾರಿಗೆ ಉಚಿತವಾಗಿ 10 ದಿನಗಳ ವಾಲಿಡಿಟಿಗೆ 4GB 4G ಡೇಟಾವನ್ನು ನೀಡಲು ವೊಡಾಪೋನ್ ಮುಂದಾಗಿದ್ದು, ಇದಕ್ಕಾಗಿ ನೀವು ಹೊಸದಾಗಿ ವೊಡಾಫೋನ್ 4G ಸಿಮ್ ಖರೀದಿಸಬೇಕಾಗಿದೆ.

Read more about:
English summary
First Airtel and now Vodafone which is the second biggest telecom company in India is gearing up to launch a free call and data pack. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot