Subscribe to Gizbot

ಜಿಯೋಫೆನ್ಸಿಂಗ್ ಬಗ್ಗೆ ಎಲ್ಲಾದ್ರೂ ಕೇಳಿದ್ರಾ..? ಏನಿದು..?

Written By:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಬಳಕೆಯೂ ನಮ್ಮ ಜೀನವದ ಅವಿಭಾಜ್ಯ ಅಂಗವಾಗಿದೆ. ಬದಲಾದ ದಿನಗಳಲ್ಲಿ ಸ್ಮಾರ್ಟ್‌ಫೋನಿನ ಮೇಲೆ ಅವಲಂಬನೆ ಹೆಚ್ಚಾಗುತ್ತಾ ಸಾಗಿದೆ. ಕೇವಲ ಕೆರೆ ಮಾಡಲು ಬಳಸುತ್ತಿದ್ದಂತ ಫೋನ್ ಇಂದು ಊಟ-ತಿಂಡಿ ತರಿಸಿಕೊಳ್ಳಲು, ಹೊರಗೆ ಹೋಗಲು ಕ್ಯಾಬ್ ಬುಕ್ ಮಾಡಲು, ವಸ್ತುಗಳನ್ನು ಖರೀದಿಸಿ ಬಿಲ್ ಪೇ ಮಾಡಲು ಸೇರಿದಂತೆ ಹಲವಾರು ಕೆಲಸಗಳಿಗೆ ಬಳಕೆಯಾಗುತ್ತಿದೆ.

ಜಿಯೋಫೆನ್ಸಿಂಗ್ ಬಗ್ಗೆ ಎಲ್ಲಾದ್ರೂ ಕೇಳಿದ್ರಾ..? ಏನಿದು..?

ಓದಿರಿ: ಹಿಂದೆಂದೂ ಕಾಣದ ಬೆಲೆಗೆ ಐಫೋನ್ ಫೋನ್ ಮಾರಾಟ: ಫ್ಲಿಪ್ ಕಾರ್ಟಿನಲ್ಲಿ ರೂ.21,999ಕ್ಕೆ ಐಫೋನ್ 6..!

ಜಿಯೋಫೆನ್ಸಿಂಗ್ ಕುರಿತು ಹೇಳಲೂ ಹೊರಟವರು ಇದೇನು ಸ್ಮಾರ್ಟ್‌ಫೋನ್ ಮಾಡುವ ಕಾರ್ಯಗಳ ಬಗ್ಗೆ ತಿಳಿಸಲು ಶುರು ಮಾಡಿದರಲ್ಲ ಎಂದುಕೊಳ್ಳಬೇಡಿ. ಸ್ಮಾರ್ಟ್‌ಫೋನ್ ಬಳಕೆದಾರಿಗೆ ಮಾತ್ರವೇ ಜಿಯೋಫೆನ್ಸಿಂಗ್ ಅನುಭವಕ್ಕೆ ಬಂದಿರುತ್ತದೆ. ಹಾಗಾಗಿ ಸ್ಮಾರ್ಟ್‌ಫೋನ್ ಕೆಲಸ ಮಾಡುವುದು ಇದೇ ಜಿಯೋಫೆನ್ಸಿಂಗ್ ನಿರ್ಧಾರದ ಮೇಲೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋಫೆನ್ಸಿಂಗ್ ಅನುಭವಕ್ಕೆ ಬರುವುದೆಲ್ಲಿ..!

ಜಿಯೋಫೆನ್ಸಿಂಗ್ ಅನುಭವಕ್ಕೆ ಬರುವುದೆಲ್ಲಿ..!

ಜಿಯೋಫೆನ್ಸಿಂಗ್ ನಿಮ್ಮ ಅನುಭವಕ್ಕೆ ಬರುವುದು ಎಲ್ಲಿ ಎಂದರೆ ನೀವು ಓಲಾ ಇಲ್ಲದೇ ಊಬರ್ ಬುಕ್ ಮಾಡಲು ಮುಂದಾದ ಸಂದರ್ಭದಲ್ಲಿ. ನೀವಿದ್ದ ಸ್ಥಳದಲ್ಲಿ ಟ್ಯಾಕ್ಸಿ ಬುಕ್ ಮಾಡಬೇಕಾದರೆ ಕೆಲವು ಕಾರುಗಳು ಮಾತ್ರವೇ ಘೋಚರಿಸಲಿದೆ, ಅಲ್ಲದೇ ನೀವು ತಲುಪಬೇಕಾದ ಸ್ಥಳಗಳಿಗೆ ನೋಸರ್ವಿಸ್ ಎನ್ನುವ ಮಾಹಿತಿಯೋ ದೊರೆಯಲಿದೆ ಇದಕ್ಕೆ ಕಾರಣ ಜಿಯೋಫೆನ್ಸಿಂಗ್.

ಜಿಯೋಫೆನ್ಸಿಂಗ್ ಎಂದರೆ..?

ಜಿಯೋಫೆನ್ಸಿಂಗ್ ಎಂದರೆ..?

ಜಿಯೋಫೆನ್ಸಿಂಗ್ ಎಂದರೆ ವರ್ಚುವಲ್ ಜಿಯೋಗ್ರಾಫಿಕ್ ಬೌಂಡರಿ (ವಾಸ್ತವ ಭೌಗೋಳಿಕ ಪರಿಮಿತಿ). ಒಬ್ಬ ವ್ಯಕ್ತಿ ಅಥಾವ ಒಂದು ಸಂಸ್ಥೆ ಆನ್‌ಲೈನಿನಲ್ಲಿ ಸೇವೆ ನೀಡುವ ಸಂದರ್ಭದಲ್ಲಿ ತನ್ನದೊಂದು ಬೌಂಡರಿ ಅಥಾವ ವ್ಯಾಪ್ತಿಯಲ್ಲಿ ಮಾತ್ರವೇ ಕೆಲಸ ನಿರ್ವಹಿಸಲು ಅಥಾವ ತಮ್ಮ ಸೇವೆಯನ್ನು ನೀಡುವುದಾಗಿ ಗುರುತಿಸಿಕೊಂಡಿರುತ್ತಾರೆ. ಅದನ್ನೇ ಜಿಯೋಫೆನ್ಸಿಂಗ್ ಎಂದು ಕರೆಯುವುದು.

ಜಿಯೋಫೆನ್ಸಿಂಗ್ ಉದಾಹರಣೆ:

ಜಿಯೋಫೆನ್ಸಿಂಗ್ ಉದಾಹರಣೆ:

ಇದಕ್ಕೆ ಮತ್ತೊಂದು ಉದಾಹರಣೆಯನ್ನು ನೀಡುವುದಾರೆ ಪಿಜಾ, ಬರ್ಗರ್ ಸೇರಿದಂತೆ ಆಪ್ ಮೂಲಕ ನೀವು ಫುಡ್ ಗಳನ್ನು ಆರ್ಡರ್ ಮಾಡಿದ ಸಂದರ್ಭದಲ್ಲಿ ನೀವು ಬಯಸಿದ ಕೆಲವು ರೆಸ್ಟೋರೆಂಟ್ ಗಳು ನೀವು ಬಯಸಿದ ಜಾಗಕ್ಕೆ ಸರ್ವಿಸ್ ನೀಡುವುದಿಲ್ಲ ಎಂಬ ಸಂದೇಶವೊಂದು ಬರಲಿದೆ. ಇದಕ್ಕೇ ಕಾರಣ ಆ ರೆಸ್ಟೋರೆಂಟ್ ಜಿಯೋಫೆನ್ಸಿಂಗ್ ಅನ್ನು ಒಂದು ನಿರ್ಧಿಷ್ಟ ಪ್ರದೇಶಕ್ಕೆ ಮಾತ್ರವೇ ಅನ್ವಯಿಸಿಕೊಂಡಿರುತ್ತದೆ.

ಲಾಭ ಯಾರಿಗೆ..?

ಲಾಭ ಯಾರಿಗೆ..?

ಈ ಜಿಯೋಫೆನ್ಸಿಂಗ್ ಬಳಕೆದಾರರಿಗಿಂತ ಜಾಹಿರಾತುದಾರರಿಗೆ ಮತ್ತು ಸೇವೆಗಳನ್ನು ನೀಡುವವರಿಗೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ. ತಮ್ಮ ನಿರ್ದಿಷ್ಟ ಪ್ರದೇಶದಲ್ಲಿರುವ ಗ್ರಾಹಕರನ್ನು ಹುಡಕು ಮತ್ತು ಸೇವೆಗಳನ್ನು ತಲುಪಿಸಲು, ಟ್ರಾಕ್ ಮಾಡಲು ಮುಂದಾದ ಸಂದರ್ಭದಲ್ಲಿ ಇದು ಸಹಾಯಕ್ಕೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
the use of GPS or RFID technology to create a virtual geographic boundary, enabling software to trigger a response when a mobile device enters. to know more visit.kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot