ಐಫೋನ್ 7 ಮೇಲೆ ರಿಯಾಯಿತಿ ನೀಡಿದ ಆಮೆಜಾನ್

|

ಆಪಲ್ ಐಫೋನ್ ಗಳ ಮೇಲೆ ಆನ್‌ಲೈನ್ ಶಾಪಿಂಗ್ ತಾಣಗಳು ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಅಮೆಜಾನ್ ಸಹ ಐಫೋನ್ 7 ಮೇಲೆ ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಹಿಂದೆದೂ ನೀಡದ ಬೆಲೆಯಲ್ಲಿ ಐಫೋನ್ 7 ಅನ್ನು ಮಾರಾಟಕ್ಕೆ ಇಟ್ಟಿದೆ. ಈಗಾಗಲೇ ನೂತನ ಆವೃತ್ತಿ ಐಫೋನ್ ಮಾರುಕಟ್ಟೆಗೆ ಬರಲಿದ್ದು, ಈ ಹಿನ್ನಲೆಯಲ್ಲಿ ಐಫೋನ್ 7 ಬೆಲೆಯಲ್ಲಿ ಇಳಿಕೆಯಾಗಿದೆ.

ಐಫೋನ್ 7 ಮೇಲೆ ರಿಯಾಯಿತಿ ನೀಡಿದ ಆಮೆಜಾನ್

ಓದಿರಿ: ಹಿಂದೆಂದೂ ಕಾಣದ ಬೆಲೆಗೆ ಐಫೋನ್ ಫೋನ್ ಮಾರಾಟ: ಫ್ಲಿಪ್ ಕಾರ್ಟಿನಲ್ಲಿ ರೂ.21,999ಕ್ಕೆ ಐಫೋನ್ 6..!

ಇದೇ ಮೊದಲ ಬಾರಿ ಐಫೋನ್ 7 ರೂ. 44,700ಕ್ಕೆ ಮಾರಾಟವಾಗುತ್ತಿದ್ದು, ಹಿಂದೆದೂ ಇಷ್ಟು ಬೆಲೆಗೆ ಈ ಫೋನ್ ಮಾರಾಟಕ್ಕೆ ಲಭ್ಯವಿರಲಿಲ್ಲ. 32 GB ಐಫೋನ್ 7 ಬೆಲೆ 44,700 ರೂ. ಆಗಿದ್ದು, ಇದೇ ಮಾದರಿಯಲ್ಲಿ 128 GB ಐಫೋನ್ 7 ಆವೃತ್ತಿಯ ಬೆಲೆ 52,999 ಹಾಗೂ 256 GB ಆವೃತ್ತಿಯ ಬೆಲೆ 69,300 ರೂ. ಆಗಿದೆ.

ಈ ಐಫೋನ್ 7 4.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಆಕ್ಟಾ ಕೋರ್ ಆಪಲ್ A10 ಪ್ರೋಸೆಸರ್ ಜೊತೆಗೆ 2GB RAM ಇದೆ. ಇಲ್ಲದೇ ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 7 MP ವನ್ನು ಕಾಣಬಹುದಾಗಿದೆ. 3G ಮತ್ತು 4G ಸಫೋರ್ಟ್ ಮಾಡಲಿದೆ. ಇದರಲ್ಲಿ 1960 mAh ಬ್ಯಾಟರಿ ಅಳವಡಿಸಲಾಗಿದೆ.

ಐಫೋನ್ 7 ಮೇಲೆ ರಿಯಾಯಿತಿ ನೀಡಿದ ಆಮೆಜಾನ್

ಓದಿರಿ: ಆಪಲ್ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ ಶಿಯೋಮಿ..!!!!

ಐಫೋನ್ 7 ಕಳೆದ ಸೆಪ್ಟೆಂಬರ್ ನಲ್ಲಿ ಲಾಂಚ್ ಆಗಿತ್ತು, ಇಲ್ಲಿಯ ವರೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಹೊಸ ಐಫೋನ್ ಗಳು ಮಾರುಕಟ್ಟೆಗೆ ಬರಲಿರುವ ಕಾರಣ ಇದರ ಬೇಡಿಕೆ ಕೊಂಚ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿದೆ.

Best Mobiles in India

Read more about:
English summary
Amazon India is now offering iPhone 7 at discounted prices in India. The online retailer is currently offering discounts across the different storage. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X