ಫ್ಲಿಪ್‌ಕಾರ್ಟ್‌ನೊಂದಗೆ ಸೇರಿದ ವೊಡಾಫೋನ್‌: ರೂ.999ಕ್ಕೆ 4G ಸ್ಮಾರ್ಟ್‌ಫೋನ್..!

Written By:

ಜಿಯೋ ದೇಶದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದು, ಇದನ್ನು ಎಲ್ಲಾ ಟೆಲಿಕಾಂ ಕಂಪನಿಗಳು ಫಾಲೋ ಮಾಡುತ್ತಿದೆ. ಇದೇ ಮಾದರಿಯಲ್ಲಿ ಜಿಯೋ ಫೋನ್ ಲಾಂಚ್ ಮಾಡಿದ ನಂತರದಲ್ಲಿ ಏರ್‌ಟೆಲ್ ತನ್ನದೇ ಸ್ಮಾರ್ಟ್‌ಫೋನ್ ಮಾಡಲು ಮುಂದಾಗಿತ್ತು. ಸದ್ಯ ಈ ಸರದಿ ವೊಡಾಫೋನ್‌ನದ್ದು, ವೊಡಾಫೋನ್ ಆನ್‌ಲೈನ್‌ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನೊಂದಿಗೆ ಸೇರಿಕೊಂಡು ರೂ.999ಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಫ್ಲಿಪ್‌ಕಾರ್ಟ್‌ನೊಂದಗೆ ಸೇರಿದ ವೊಡಾಫೋನ್‌: ರೂ.999ಕ್ಕೆ 4G ಸ್ಮಾರ್ಟ್‌ಫೋನ್..!

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿದ್ದು, ಆದರೂ ಸಹ ವೊಡಾಫೋನ್ ಲಾಂಚ್ ಮಾಡುತ್ತಿರುವ ಹೊಸ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿದೆ. ಜನವರಿ 24 ರಿಂದ #MyFirst4GSmartphone ಹೆಸರಿನಲ್ಲಿ ಸೇಲ್ ಆರಂಭವಾಗಲಿದ್ದು, ಮಾರ್ಚ್ 31ರ ವರೆಗೆ ಮಾತ್ರವೇ ವೊಡಾಫೋನ್ ಸ್ಮಾರ್ಟ್‌ಫೋನ್ ಮಾರಾಟ ವಾಗಲಿದೆ ಎನ್ನಲಾಗಿದೆ.

ಓದಿರಿ: ಬಿಗ್ ಬಜಾರ್ ಮುಂದೆ ಜನಸಾಗರ: ರೂ.4000ಕ್ಕೆ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರಾಟ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಲವು ಆಯ್ಕೆಗಳು:

ಹಲವು ಆಯ್ಕೆಗಳು:

ವೊಡಾಫೋನ್ ಹೊಸ ಮಾದರಿಯ ಪ್ರಯತ್ನಕ್ಕೆ ಕೈ ಹಾಕಿದ್ದು, ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ನೀಡಲಿದರುವ ಸ್ಮಾರ್ಟ್‌ಫೋನ್‌ಗಳನ್ನು ವೊಡಾಫೋನ್ ಬಳಕೆದಾರರು ಖರೀದಿ ಮಾಡಿದರೆ ಅವರಿಗೆ ರೂ.2000ದ ವರೆಗೂ ಕ್ಯಾಷ್ ಬ್ಯಾಕ್ ಆಫರ್ ನೀಡಲಿದೆ. ಇದಕ್ಕಾಗಿ ಬಳಕೆದಾರರು ರೂ.150 ಪ್ರತಿ ತಿಂಗಳು ರಿಚಾರ್ಜ್ ಮಾಡಿಸಿಬೇಕಾಗಿದೆ.

ರೂ.2000 ಕ್ಯಾಷ್ ಬ್ಯಾಕ್:

ರೂ.2000 ಕ್ಯಾಷ್ ಬ್ಯಾಕ್:

ವೊಡಾಫೋನ್ ಬಳಕೆದಾರರು #MyFirst4GSmartphone ಸೇಲ್‌ನಲ್ಲಿ ಖರೀದಿಸುವ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ. 2000 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ. ಇದು ವೊಡಾಫೋನ್ ಎಂ-ಪೈಸಾ ಆಕೌಂಟ್‌ಗೆ ಬರಲಿದೆ ಎನ್ನಲಾಗಿದೆ. ಇದನ್ನು ಕ್ಯಾಷ್‌ ಮಾದರಿಯಲ್ಲಿ ಹಿಂಪಡೆಯಲುಬಹುದು.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಕ್ಯಾಷ್ ಬ್ಯಾಕ್ ಹೇಗೆ:

ಕ್ಯಾಷ್ ಬ್ಯಾಕ್ ಹೇಗೆ:

ಮೊದಲು ರೂ.150ಕ್ಕೆ 18 ತಿಂಗಳು ರಿಚಾರ್ಜ್ ಮಾಡಿಸಿದ ನಂತರದಲ್ಲಿ ರೂ.900 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದಾದ ನಂತರದಲ್ಲಿ 36 ತಿಂಗಳ ಕೊನೆಯಲ್ಲಿ ರೂ.1100 ಕ್ಯಾಷ್ ಬ್ಯಾಕ್ ನೀಡಲಿದೆ. ಒಟ್ಟಾಗಿ ಇದು ರೂ.2000 ಕ್ಯಾಷ್ ಬ್ಯಾಕ್ ಆಗಲಿದೆ.

ಫ್ಲಿಪ್‌ಕಾರ್ಟ್‌ ಸೇಲ್‌:

ಫ್ಲಿಪ್‌ಕಾರ್ಟ್‌ ಸೇಲ್‌:

ವೊಡಾಫೋನ್ ನೊಂದಿಗೆ ಫ್ಲಿಪ್‌ಕಾರ್ಟ್ ಒಪ್ಪಂದವನ್ನು ಮಾಡಿಕೊಡಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಯನ್ನು ಕಾಣಲು ಮುಂದಾಗಿದೆ. ಕಡಿಮೆ ಬೆಲೆಗೆ ದೊರೆಯುವ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone partners with Flipkart to offer 4G smartphones at Rs 999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot