ಬ್ರಾಡ್‌ಬ್ಯಾಂಡ್‌ ಸಮರ : ಬೆಲೆ ಇಳಿಕೆ ಮಾಡಿದ 'ವೊಡಾಫೋನ್ ಯೂ'!

|

ಜಿಯೋ ತನ್ನ ಗಿಗಾಫೈಬರ್ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಕಡಿಮೆ ಬೆಲೆಯ ಪ್ಲ್ಯಾನ್‌ಗಳಲ್ಲಿ ಪರಿಚಯಿಸಿದ ಬೆನ್ನಲ್ಲೇ, ಮಾರುಕಟ್ಟೆಯ ಇತರೆ ಪ್ರಮುಖ ಬ್ರಾಡ್‌ಬ್ಯಾಂಡ್‌ ನೆಟವರ್ಕ್‌ಗಳು ಸಹ ತಮ್ಮ ತಿಂಗಳ ಪ್ಲ್ಯಾನ್‌ಗಳಲ್ಲಿ ಬೆಲೆ ಇಳಿಕೆ ಮಾಡುತ್ತಿವೆ. ಆ ಪೈಕಿ ವೊಡಾಫೋನ್ ಸಹ ಇದೀಗ ಜಿಯೋಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಬ್ರಾಡ್‌ಬ್ಯಾಂಡ್‌ ದರದಗಳಲ್ಲಿ ಭಾರಿ ಇಳಿಕೆ ಮಾಡಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಯೂ ಬ್ರಾಡ್‌ಬ್ಯಾಂಡ್‌'

ಹೌದು, ವೊಡಾಫೋನ್ ಸಂಸ್ಥೆಯ 'ಯೂ ಬ್ರಾಡ್‌ಬ್ಯಾಂಡ್‌' ನೆಟ್‌ವರ್ಕ್ ತನ್ನ ಪ್ಲ್ಯಾನ್‌ಗಳ ಬೆಲೆಯಲ್ಲಿ ಬದಲಾವಣೆ ಮಾಡಿದ್ದು, ತಿಂಗಳ 944ರೂ. ಶುಲ್ಕ ನಿಗದಿ ಮಾಡಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 100 Mbps ವೇಗದಲ್ಲಿ ಇಂಟರ್ನೆಟ್‌ ಸೇವೆಯು ದೊರೆಯಲಿದ್ದು, ಈ ಸೇವೆಯು ಯಾವುದೇ FUP (Fair Usage Policy) ಲಿಮಿಟ್‌ ಇರುವುದಿಲ್ಲ ಎಂದು ತಿಳಿಸಿದೆ. ಸದ್ಯ ಭಾರತದ 22 ನಗರಗಳಲ್ಲಿ ವೊಡಾಫೋನ್ 'ಯು ಬ್ರಾಡ್‌ಬ್ಯಾಂಡ್' ಸೇವೆಯು ಲಭ್ಯವಿದೆ.

ವೊಡಾಫೋನ್

ವೊಡಾಫೋನ್ ಕಂಪನಿಯ 'ಯೂ ಬ್ರಾಡ್‌ಬ್ಯಾಂಡ್‌' ಒಟ್ಟು ನಾಲ್ಕು ಆಯ್ಕೆಗಳನ್ನು ಒಳಗೊಂಡಿದೆ. ಮೊದಲನೆಯ ಆಯ್ಕೆಯು 944ರೂ.ಗಳಿಗೆ 100 Mbps ವೇಗದಲ್ಲಿ 30ದಿನಗಳ ವಾಯಿದೆಯನ್ನು ಒಳಗೊಂಡಿದೆ. ಹಾಗೆಯೇ ಈ ಆಯ್ಕೆಯಲ್ಲಿ ಗ್ರಾಹಕರು ಅನಿಯಮಿತ ಡೇಟಾ ಬಳಸಬಹುದಾಗಿದ್ದು, ಯಾವುದೇ FUP ಲಿಮಿಟ್ ಇರುವುದಿಲ್ಲ. ಆದರೆ ಜಿಯೋದಲ್ಲಿ ನಿಗದಿ ಪಡೆಸಲಾಗಿದೆ.

ಓದಿರಿ : ಫ್ಲಿಪ್‌ಕಾರ್ಟ್‌ನ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!ಓದಿರಿ : ಫ್ಲಿಪ್‌ಕಾರ್ಟ್‌ನ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!

ಬ್ರಾಡ್‌ಬ್ಯಾಂಡ್‌

ಇದಲ್ಲದೇ ವೊಡಾಫೋನ್ ಯೂ ಬ್ರಾಡ್‌ಬ್ಯಾಂಡ್‌ 90ದಿನಗಳು, 180ದಿನಗಳು ಮತ್ತು 360ದಿನಗಳ ವ್ಯಾಲಿಡಿಟಿಯ ಅವಧಿಯ ಇನ್ನಿತರೇ ಮೂರು ಆಯ್ಕೆಗಳನ್ನು ಸಹ ಹೊಂದಿದೆ. 90ದಿನಗಳ ಅನಿಯಮಿತ ಡೇಟಾ ಪ್ಲ್ಯಾನ್ ಬೆಲೆಯು 2,744ರೂ.ಗಳು ಆಗಿದೆ. ಹಾಗೆಯೇ 180 ದಿನಗಳು ಅವಧಿಯ ಪ್ಯಾನ್‌ ಬೆಲೆಯು 5,133ರೂ ಆಗಿದ್ದು, 360ದಿನಗಳ ವಾಯಿದೆಯ ಪ್ಲ್ಯಾನ್‌ ಬೆಲೆಯು 9,558ರೂ.ಗಳು ಆಗಿದೆ.

ವೊಡಾಫೋನ್‌

ವೊಡಾಫೋನ್‌ 150 Mbps ಮತ್ತು 200 Mbps ವೇಗದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಯ ಪ್ಲ್ಯಾನ್‌ಗಳನ್ನು ಒಳಗೊಂಡಿದ್ದು, 150 Mbps ವೇಗದ ಪ್ಲ್ಯಾನ್‌ಗೆ 30ದಿನಗಳಿಗೆ 1,403ರೂ.ಗಳು (1000GB), 90ದಿನಗಳಿಗೆ 4,209ರೂ.ಗಳು( 3,300GB ), 8,418ರೂ.ಗಳಿಗೆ 180ದಿನಗಳ ವ್ಯಾಲಿಡಿಟಿ ಸಿಗಲಿದೆ (7,200GB) ಮತ್ತು 12,036ರೂ.ಬೆಲೆಯ ಪ್ಲ್ಯಾನ್‌ನಲ್ಲಿ 360ದಿನಗಳಿಗೆ (15,600GB) ವ್ಯಾಲಿಡಿಟಿ ದೊರೆಯಲಿದೆ. ಸದ್ಯ ತಿಂಗಳಿಗೆ 944ರೂ.ಪ್ಲ್ಯಾನ್ ಹೈದ್ರಾಬಾದ ನಗರದಲ್ಲಿ ಚಾಲ್ತಿಯಿದೆ.

ಓದಿರಿ : ಭಾರತದಲ್ಲಿ 'ರೆಡ್ಮಿ 70 ಇಂಚಿನ' ಸ್ಮಾರ್ಟ್‌ಟಿವಿ ಸ್ವಾಗತಕ್ಕೆ ದಿನಾಂಕ ಫಿಕ್ಸ್!ಓದಿರಿ : ಭಾರತದಲ್ಲಿ 'ರೆಡ್ಮಿ 70 ಇಂಚಿನ' ಸ್ಮಾರ್ಟ್‌ಟಿವಿ ಸ್ವಾಗತಕ್ಕೆ ದಿನಾಂಕ ಫಿಕ್ಸ್!

Best Mobiles in India

English summary
Vodafone-owned You Broadband is now shipping a single month 100 Mbps broadband at just Rs 944. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X