Just In
- 8 hrs ago
ಇತ್ತೀಚಿನ ಒಪ್ಪೋ ಮೊಬೈಲ್ಗಳಿಗೆ ಅಮೆಜಾನ್ನಲ್ಲಿ ಭರ್ಜರಿ ಡಿಸ್ಕೌಂಟ್!
- 21 hrs ago
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- 23 hrs ago
ಗ್ರಾಹಕರಿಗೆ ಬಿಗ್ ಶಾಕ್!..ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ!
- 24 hrs ago
20,000ರೂ.ಒಳಗೆ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!
Don't Miss
- News
ಆರ್ ಅಶೋಕ್ 1998 ಉಪ ಚುನಾವಣೆಯಲ್ಲಿ ಗೆದ್ದಿದ್ದು ಕಳ್ಳ ವೋಟಿನಿಂದ!
- Finance
Gold Rate Today: ಸತತವಾಗಿ ಚಿನ್ನದ ದರ ಹೆಚ್ಚಳ, ಮೇ 22ರ ಬೆಲೆ ಪರಿಶೀಲಿಸಿ
- Sports
ಥಾಮಸ್ ಕಪ್ ವಿಜೇತರನ್ನು ಅಭಿನಂದಿಸಿದ ಪ್ರಧಾನಿ; ಮೋದಿಗೆ ನೀಡಿದ್ದ ಭರವಸೆ ಈಡೇರಿಸಿದ ಲಕ್ಷ್ಯ ಸೇನ್
- Movies
ರಿಲೀಸ್ಗೂ ಮೊದಲೇ 'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಭವಿಷ್ಯ ನುಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
- Education
ICSI CS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಸ್ಟ್ ಸೆಲ್ಫಿ ಫೋಟೊ ಕ್ಲಿಕ್ ಮಾಡಬೇಕೆ?..ಹಾಗಿದ್ರೆ ಈ ಟಿಪ್ಸ್ ನಿಮಗೆ ಸಹಾಯಕ!
ಸದ್ಯ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಹಿಂಬದಿಯ ಕ್ಯಾಮೆರಾ ಜೊತೆಗೆ ಸೆಲ್ಫಿ ಕ್ಯಾಮೆರಾ ಸಹ ಉತ್ತಮ ಸೆನ್ಸಾರ್ ಪಡೆದಿವೆ. ಉನ್ನತ ಸೆನ್ಸಾರ್ ಫೋಟೊಗಳನ್ನು ಅತ್ಯುತ್ತಮವಾಗಿ ಮೂಡಿಬರುವಂತೆ ಮಾಡುತ್ತವೆ. ಅದರೊಂದಿಗೆ ಫೋಟೊ ಸೆರೆ ಹಿಡಿಯುವಾಗ ಫಿಲ್ಟರ್ ಆಯ್ಕೆಗಳು ಲಭ್ಯ ಇವೆ. ಅದಾಗ್ಯೂ, ಅತ್ಯುತ್ತಮ ಸೆಲ್ಫಿ ಫೋಟೊ ಕ್ಲಿಕ್ ಮಾಡುವತ್ತ ಬಹುತೇಕ ಬಳಕೆದಾರರ ಗಮನ ಇರುತ್ತದೆ.

ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿನಲ್ಲಿಯೇ ಅತ್ಯುತ್ತಮ ಸೆಲ್ಫಿ ಫೋಟೊ ಸೆರೆ ಕ್ಲಿಕ್ ಮಾಡಬಹುದಾಗಿದೆ. ಫೋಟೊ ಸೆರೆ ಹಿಡಿಯುವಾಗ ಫೋಟೊಗ್ರಫಿಯ ಕೆಲವು ಬೇಸಿಕ್ ಕ್ರಮಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಬೇಕು. ಇದರೊಂದಿಗೆ ಬಳಕೆದಾರರಿಗೆ ಸ್ವಲ್ಪ ಫೋಟೊಗ್ರಫಿ ಬಗ್ಗೆ ಆಸಕ್ತಿ ಇದ್ರೆ ಉತ್ತಮ. ಇವೆರಡರ ಸಮ್ಮಿಶ್ರಣದಿಂದ ಅತ್ಯುತ್ತಮ ಸೆಲ್ಫಿ ಫೋಟೊಗಳನ್ನು ಸೆರೆ ಹಿಡಿಯಲು ಸಾಧ್ಯ. ಹಾಗಾದರೆ ಸೆಲ್ಫಿ ಫೋಟೊ ಸೆರೆ ಹಿಡಿಯುವಾಗ ಅನುಸರಿಸಬೇಕಾದ ಟಿಪ್ಸ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.
ಫೋಟೊ ಕ್ಲಿಕ್ ಮಾಡುವಾಗ ಸರಿಯಾದ ಬೆಳಕು ಅಗತ್ಯ
ಸೆಲ್ಪಿ ಫೋಟೊ ಅತ್ಯುತ್ತಮವಾಗಿ ಮೂಡಿಬರಲು ಬೆಳಕಿನ ಪಾತ್ರ ತುಂಬಾ ಮಹತ್ವವಾಗಿದ್ದು, ಈ ಅಂಶ ಸೆಲ್ಫಿ ಫೋಟೊಗೂ ಅನ್ವಯಿಸುತ್ತದೆ. ಹೀಗಾಗಿ ಸೆಲ್ಫಿ ಸೆರೆಹಿಡಿಯುವಾಗ ಸಾಧ್ಯವಾದಷ್ಟು ಬೆಳಕಿನತ್ತ ಮುಖ ಮಾಡಿರಿ ಆಗ ಫೋಟೊ ಉತ್ತಮವಾಗಿ ಮೂಡಿಬರುತ್ತದೆ. ಮುಂಜಾನೆಯ ತಿಳಿ ಬಿಸಿಲು ಇದ್ದರಂತೂ ಬೆಸ್ಟ್. ಹಾಗಂತ ಹೆಚ್ಚು ಪ್ರಖರವಾದ ಬೆಳಕು, ಹೆಚ್ಚು ಬಿಸಿಲು ಇದ್ದರೂ ಒಳ್ಳೆಯದಲ್ಲ.
ಗುಂಪು ಸೆಲ್ಫಿ ಫೋಟೊಗೆ ವೈಲ್ಡ್ ಆಂಗಲ್ ಬಳಸಿ
ಗುಂಪು ಸೆಲ್ಫಿ ಫೋಟೊ ಸೆರೆಹಿಡಿಯುವುದಿದ್ದರೇ ವೈಲ್ಡ್ ಆಂಗಲ್ ಮೋಡ್‌ನಲ್ಲಿ ಫೋಟೊ ಕ್ಲಿಕ್ಕಿಸಿ, ಆಗ ಅದು ಪರ್ಫೆಕ್ಟ್ ಸೆಲ್ಫಿ ಎಂದೆನಿಸಿಕೊಳ್ಳುತ್ತದೆ. ಪೋರ್ಟಟ್ ಆಂಗಲ್‌ನಲ್ಲಿ ಗ್ರೂಪ್ ಸೆಲ್ಫಿ ತೆಗೆದರೇ ಸರಿಯಾಗಿ ಕವರ್ ಆಗುವುದಿಲ್ಲ. ಇತ್ತೀಚಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿಯೂ ವೈಲ್ಡ್ ಆಂಗಲ್ ಮೋಡ್ ಆಯ್ಕೆ ನೀಡಿರುತ್ತಾರೆ.

ಕ್ಯಾಮೆರಾ ಫ್ಲ್ಯಾಶ್ ಲೈಟ್ ಬಳಸಿ
ಒಂದು ವೇಳೆ ರಾತ್ರಿ ಸಮಯದಲ್ಲಿ ಅಥವಾ ಮಂದ ಬೆಳಕಿನಲ್ಲಿ ಸೆಲ್ಫಿ ಸೆರೆಹಿಡಿಯಬೇಕಿದ್ದರೇ ಫ್ರಂಟ್ ಫ್ಲ್ಯಾಶ್ ಲೈಟ್ ಬಳಸಿ ಫೋಟೊದ ಗುಣಮಟ್ಟವನ್ನು ಹೆಚ್ಚಿಸಬಹುದು. ಪ್ರಸ್ತುತ ಇತ್ತೀಚಿನ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲ್ಯಾಶ್ ಲೈಟ್ ಆಯ್ಕೆಯನ್ನು ಹೊಂದಿರುತ್ತವೆ. ಒಂದು ವೇಳೆ ಫ್ಲ್ಯಾಶ್ ಲೈಟ್ ಇಲ್ಲದಿದ್ದರೇ ಅತ್ಯುತ್ತಮ ಸೆಲ್ಫಿ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಳ್ಳಿರಿ.
ಮುಖದಲ್ಲಿ ಮುಗುಳುನಗೆ ಇರಲಿ
ಸೆಲ್ಫಿ ಫೋಟೊವು ಅತ್ಯುತ್ತಮವಾಗಿ ಮೂಡಿಬರಲು ಫೋಟೊದಲ್ಲಿ ನೀವು ಚೆನ್ನಾಗಿ ಕಾಣುವುದು ಅಷ್ಟೇ ಮುಖ್ಯ. ಹೀಗಾಗಿ ಫೋಟೊ ಸೆರೆಹಿಡಿಯುವಾಗ ಸೆಲ್ಫಿಗೆ ಮುಗುಳುನಗೆ ಸ್ಮೈಲ್ ನೀಡಿರಿ. ನಗುಮೋಗವು ಫೋಟೊದ ಅಂಧವನ್ನು ಮತ್ತಷ್ಟು ಬ್ಯೂಟಿಫುಲ್ ಆಗಿಸುತ್ತದೆ. ಕ್ಯಾಮೆರಾವನ್ನು ನಿಮ್ಮ ಕಣ್ಣುಗಳ ನೇರಕ್ಕಿಂತ ಎತ್ತರದಲ್ಲಿ ಹಿಡಿಯಿರಿ ಮತ್ತು ಕ್ಯಾಮೆರಾ ಲೆನ್ಸ್‌ಗಳತ್ತ ನಿಮ್ಮ ದೃಷ್ಠಿ ಇರಲಿ.
ಸೂಕ್ತ ಸೆಲ್ಫಿ ಆಪ್ಸ್‌ಗಳನ್ನು ಬಳಸಿ
ಸೆಲ್ಫಿ ಫೋಟೋಗಳನ್ನು ಮತ್ತಷ್ಟು ಉತ್ತಮವಾಗಿಸುವ ಸಲುವಾಗಿ ಅನೇಕ ಸೆಲ್ಫಿ ಪೋಟೊ ಆಪ್ಸ್‌ಗಳು ಪ್ಲೇ ಸ್ಟೋರ್‌ಗಳಲ್ಲಿ ಲಭ್ಯ ಇವೆ. ಉತ್ತಮ ಸೆಲ್ಫಿಗೆ ನಿಮ್ಮ ಸ್ಮಾರ್ಟ್‌ಪೋನ್ ಫೀಚರ್ಸ್‌ಗಳು ಅತ್ಯುತ್ತಮ ಸೆಲ್ಫಿ ಫೋಟೊಗೆ ಬೆಂಬಲಿಸದಿದ್ದರೇ, ಸೆಲ್ಫಿ ಆಪ್ಸ್‌ಗಳನ್ನು ಬಳಸಬಹುದಾಗಿದೆ. ಈ ಸೆಲ್ಫಿ ಆಪ್ಸ್‌ಗಳು ಫೋಟೋ ಉತ್ತಮಗೊಳಿಸುವ ಅನೇಕ ಆಯ್ಕೆಗಳನ್ನು ಹೊಂದಿರುತ್ತವೆ.

ಫೋನಿನಲ್ಲಿ ಬೆಸ್ಟ್ ಫೋಟೊ ಸೆರೆಹಿಡಿಯಬೇಕೆ?..ಹಾಗಿದ್ರೆ ಇಲ್ಲಿವೆ ನೋಡಿ ಟಿಪ್ಸ್!
ಫೋಟೊಗ್ರಫಿ ಎಂದರೇ ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ. ಆದರೆ ಕೆಲವರಿಗೆ ಫೋಟೊಗ್ರಫಿ ಅನ್ನೋದು ಹವ್ಯಾಸವಾಗಿದ್ದರೇ. ಇನ್ನೂ ಕೇಲವರಿಗೆ ಅದೇ ವೃತ್ತಿಯಾಗಿರುತ್ತದೆ. ಹವ್ಯಾಸಿ ಫೋಟೊಗ್ರಫರ್‌ಗಳು ಸಹ ಈಗ ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸುತ್ತಾರೆ. ಆದರೆ ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿಯೇ ಉತ್ತಮ ಫೋಟೊ ಸೆರೆಹಿಡಿಯುವ ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ.
ಹೌದು, ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ಗಳನ್ನು ಹೊಂದಿದ್ದು, ಫೋಟೊಗ್ರಫಿಗೆ ಉತ್ತಮ ಪ್ಲಾಟ್‌ಫಾರ್ಮ್ ಒದಗಿಸುತ್ತಿವೆ. ಫೋಟೊ ಸೆರೆಹಿಡಿಯುವವರಲ್ಲಿ ಆಸಕ್ತಿ ಜೊತೆಗೆ ಫೋಟೊ ಕ್ಲಿಕ್ಕಿಸಲು ವಾತಾವರಣದ ಬೇಸಿಕ್ ಟಿಪ್ಸ್ ಬಗ್ಗೆ ಗೊತ್ತಿದ್ದರೇ, ಲಭ್ಯ ಇರುವ ಫೋನ್ ಕ್ಯಾಮೆರಾ ಸೆನ್ಸಾರ್‌ಗಳಲ್ಲಿಯೇ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ. ಫೋನಿನಲ್ಲಿ ಫೋಟೊ ಸೆರೆಹಿಡಿಯುವ ಕೆಲವು ಅಗತ್ಯ ಟಿಪ್ಸ್‌ಗಳನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.
ಅಗತ್ಯ ಇದ್ದಾಗ ಮಾತ್ರ ಫ್ಲ್ಯಾಶ್ ಬಳಸಿ
ಇಂದಿನ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲ್ಯಾಶ್ ಲೈಟ್ ನೀಡಿರುತ್ತಾರೆ. ಪ್ರತಿ ಬಾರಿ ಫೋಟೊ ಸೆರೆಹಿಡಿಯುವಾಗಲು ಫ್ಲ್ಯಾಶ್ ಲೈಟ್ ಬಳಸುವುದು ಉತ್ತಮವಲ್ಲ. ಡಾರ್ಕ/ಮಂದಬೆಳಕು ಇದ್ದಾಗ ಮತ್ತು ಎಕ್ಸ್‌ಟ್ರಾ ಲೈಟಿಂಗ್ ಬೇಕು ಅಂದಾಗ ಮಾತ್ರ ಫ್ಲ್ಯಾಶ್ ಲೈಟ್ ಬಳಕೆ ಮಾಡಿ. ಅನಗತ್ಯವಾಗಿ ಫ್ಲ್ಯಾಶ್ ಲೈಟ್ ಬಳಸಿದರೇ ಫೋಟೊದಲ್ಲಿ ಲೈಟ್ ಸ್ಪಾಟ್ ಕಾಣಿಸುತ್ತದೆ.
ಜೂಮ್ ಜರೂರಿ ಇಲ್ಲ
ಫೋನಿನಲ್ಲಿ ಫೋಟೊ ಕ್ಲಿಕ್ಕಿಸುವಾಗ ಇಮೇಜ್‌ಗಳನ್ನು ಕ್ಲೋಸ್‌ಅಪ್‌ನಲ್ಲಿ ಇರಲಿ ಎಂದು ಜೂಮ್ ಮಾಡುವುದರಿಂದ ಫೋಟೊ ಪಿಕ್ಸಲ್ ಗುಣಮಟ್ಟ ಉತ್ತಮವಾಗಿ ಮೂಡಿಬರುವುದಿಲ್ಲ. ಜೊತೆಗೆ ಫೋಟೊ ಕ್ವಾಲಿಟಿ ಸಹ ಅಷ್ಟೇನು ಗುಣಮಟ್ಟದಲ್ಲಿ ಸೆರೆಯಾಗುವುದಿಲ್ಲ. ಹೀಗಾಗಿ ಫೋಟೊ ಕ್ಲಿಕ್ಕಿಸುವಾಗ ಅನಗತ್ಯವಾಗಿ ಜೂಮ್ ಮಾಡಲೇಬೇಡಿ.
ನೆರಳಿದ್ದರೇ ಬೆಸ್ಟ್
ಮರದ ಅಥವಾ ಕಟ್ಟಡದ ನೆರಳಿನಲ್ಲಿ ನಿಂತು ಫೋಟೊ ಕ್ಲಿಕ್ಕಿಸುವುದು ಉತ್ತಮ. ಹಾಗೇ ಫೋಟೊ ಸೆರೆಹಿಡಿಯುವಾಗ ಮುಖದ ಸುತ್ತಲೂ ಉತ್ತಮ ಬೆಳಕನ್ನು ಇರುವುದನ್ನು ಗಮನಿಸಿ. ಈಗಂತೂ ಫೋನ್ ಕ್ಯಾಮೆರಾಗಳಲ್ಲಿ ಅಗತ್ಯ ಸೆಟ್ಟಿಂಗ್ ಆಯ್ಕೆಗಳು ಲಭ್ಯ ಇದ್ದು, ಅವುಗಳನ್ನು ಅಗತ್ಯತೆಗೆ ಸೆಟ್‌ಮಾಡಿಕೊಂಡು ಫೋಟೊ ಸೆರೆಹಿಡಿಯಿರಿ. ಇಲ್ಲವೇ ಆಟೋ ಮೋಡ್‌ನಲ್ಲಿ ಇಡಿ.
ಫೋಕಸ್ ಮಾಡಿ
ಫೋಟೊ ಸೆರೆಹಿಡಿಯುವಾಗ ಫೋನ್ ಕ್ಯಾಮೆರಾ ತೆರೆದು ತಕ್ಷಣಕ್ಕೆ ಫೋಟೊ ಕ್ಲಿಕ್ ಮಾಡಬೇಡಿ. ನೀವು ಫೋಟೊ ಸೆರೆಹಿಡಿಯುವ ವ್ಯಕ್ತಿ/ಇಮೇಜ್ ಅನ್ನು ಫೋಕಸ್ ಮಾಡಿ. ಇಂದಿನ ಪ್ರತಿ ಫೋನ್‌ಗಳಲ್ಲಿ ಫೋಕಸ್ ಆಯ್ಕೆ ಇರುತ್ತದೆ. ಫೋಕಸ್ ಮಾಡದೇ ಸೆರೆಹಿಡಿದ ಫೋಟೊಗಳು ಸಾಧಾರಣ ಮಟ್ಟದಲ್ಲಿ ಇರುತ್ತವೆ. ಅದೇ ಫೋಕಸ್ ಮಾಡಿದಾಗ ಫೋಟೊ ಅತ್ಯುತ್ತಮವಾಗಿ ಮೂಡಿಬರಲಿದೆ.
ಕ್ಯಾಮೆರಾ ಸ್ಟಡಿ ಇರಲಿ
ಫೋನಿನಲ್ಲಿ ಫೋಟೊ ಸೆರೆಹಿಡಿಯುವಾಗ ಫೋಕಸ್ ಮಾಡಿ ಜೊತೆಗೆ ಕ್ಯಾಮೆರಾ ಸ್ಟಡಿಯಾಗಿ ಹಿಡಿದು ಕ್ಲಿಕ್ ಮಾಡಿ. ಫೋಟೊ ಕ್ಲಿಕ್ಕಿಸುವಾಗ ಕೈ ಶೇಕ್ ಮಾಡಿದರೇ ಫೋಟೊಗಳು ಮರ್ಜ/ಮಸಕು ಮಸಕಾಗಿ ಮೂಡಿಬಂದಂತೆ ಕಾಣಿಸುತ್ತವೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999