IND vs NZ: ಫೈನಲ್‌ ಟೆಸ್ಟ್‌ ಮ್ಯಾಚ್‌ ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ?

|

ಭಾರತದಲ್ಲಿ ಕ್ರಿಕೆಟ್‌ ಆಟವನ್ನು ಕೆಲವರು ಒಂದು ಜನಪ್ರಿಯ ಗೇಮ್‌ ಆಗಿ ನೋಡಿದರೇ, ಅದೆಷ್ಟೋ ಜನರು ಕ್ರಿಕೆಟ್‌ ಅನ್ನು ಆರಾಧಿಸುತ್ತಾರೆ. ಕ್ರಿಕೆಟ್‌ ಅಂದರೇ ಸಂಭ್ರಮಿಸುತ್ತಾರೆ. ಇದೇ ಕಾರಣಕ್ಕೆ ಟೀಂ ಇಂಡಿಯಾ ಕ್ರಿಕೆಟ್‌ ಮ್ಯಾಚ್‌ ಆಡುತ್ತಿದೆ ಎಂದರೆ ಸಾಕು ಕ್ರಿಕೆಟ್‌ ಪ್ರೇಮಿಗಳು ಮ್ಯಾಚ್‌ ಬಗ್ಗೆ ಸಾಕಷ್ಟು ಕುತೂಹಲ ಹೊಂದಿರುತ್ತಾರೆ. ಇದರ ನಡುವೆ ಇದೀಗ ಟೆಸ್ಟ್‌ ಕ್ರಿಕೆಟ್‌ ಮೊದಲ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ನಡೆಯುತ್ತಿದೆ. ಜೂನ್‌ 18 ರಂದು ಪ್ರಾರಂಭವಾಗಿರುವ ಈ ಪಂದ್ಯದ ಮೊದಲ ದಿನದಾಟ ಮಳೆಯಿಂದ ರದ್ದಾಗಿದೆ. ಸದ್ಯ ಇಂದು ಎರಡನೇ ದಿನದಾಟ ಪ್ರಾರಂಭವಾಗುವ ಸಾಧ್ಯತೆ ಇದೆ.

ಚಾಂಪಿಯನ್‌ಶಿಪ್

ಹೌದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಅಂತಿಮ ಪಂದ್ಯದ ಎರಡನೇ ದಿನವಾದ ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗಲಿದೆ. ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ರೋಸ್ ಬಾಲ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಈ ಪಂದ್ಯ ನಡೆಯಲಿದೆ. ಮೈದಾನಕ್ಕೆ ವೀಕ್ಷಕರಿಗೆ ಪ್ರವೇಶವಿಲ್ಲದಿರುವ ಕಾರಣ ಮನೆಯಲ್ಲಿಯೇ ಕ್ರಿಕೆಟ್‌ ಪ್ರೇಮಿಗಳು ಪಂದ್ಯವನ್ನು ನೋಡಬೇಕಾದ ಅನಿವಾರ್ಯತೆ ಇದೆ. ಇನ್ನು ನಿಮ್ಮ ಮನೆಯಲ್ಲಿ ಟಿವಿಯಿಲ್ಲದೆ ಹೋದರೆ ಆನ್‌ಲೈನ್‌ನಲ್ಲಿ ಈ ಮ್ಯಾಚ್‌ ನೋಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಸಿಸಿ ಟೆಸ್ಟ್‌ ಕ್ರಿಕೆಟ್‌

ಐಸಿಸಿ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅನ್ನು ನಡೆಸುತ್ತಿದೆ. ಇದರ ಫೈನಲ್‌ ಪಂದ್ಯ ಜೂನ್‌ 18ರಿಂದ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವೆ ನಡೆಯುತ್ತಿದೆ. ಈ ಪಂದ್ಯವನ್ನು ನೀವು ನಿಮ್ಮ ಮನೆಯಿಂದಲೇ ಆನ್‌ಲೈನ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು. ಇನ್ನು ಈ ಪಂದ್ಯ ಭಾರಿ ಕ್ರೇಜ್‌ ಸೃಷ್ಟಿಸಿದೆ. ಏಕೆಂದರೆ 2019 ರಲ್ಲಿ ಭಾರತದ ವಿಶ್ವಕಪ್‌ ಆಸೆ ಭಗ್ನಗೊಳಸಿದ ನ್ಯೂಜಿಲೆಂಡ್‌ ವಿರುದ್ದ ಭಾರತ ಸೇಡು ತೀರಿಸಿಕೊಳ್ಳುವುದಕ್ಕೆ ಇದು ಒಳ್ಳೆಯ ಸಮಯ ಎಂದು ಭಾರತದ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿ ಕೂಡ ಕಾತುರದಿಂದ ಕಾಯುತ್ತಿದ್ದಾರೆ.

IND vs NZ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಮ್ಯಾಚ್‌ ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ?

IND vs NZ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಮ್ಯಾಚ್‌ ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021 ಪಂದ್ಯವನ್ನು ಇಂಗ್ಲಿಷ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಮತ್ತು ಹಿಂದಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿಗಳಲ್ಲಿ ಪ್ರಸಾರವಾಗಲಿದೆ. ಒಂದು ವೇಳೆ ನೀವು ಟಿವಿ ಹೊಂದಿಲ್ಲದಿದ್ದರೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ಆನಂದಿಸಲು ಬಯಸಿದರೆ, ಇದಕ್ಕಾಗಿ ನಿಮಗೆ ಹಾಟ್‌ಸ್ಟಾರ್ ಅಪ್ಲಿಕೇಶನ್ ಅಗತ್ಯವಿದೆ. ಹಾಟ್‌ಸ್ಟಾರ್‌ನ ಹೊರತಾಗಿ, ನೀವು ಈ ಪಂದ್ಯವನ್ನು ಜಿಯೋ ಟಿವಿ ಅಪ್ಲಿಕೇಶನ್‌ನಲ್ಲಿಯೂ ವೀಕ್ಷಿಸಬಹುದು.

ಅಂತಿಮ ಇಲೆವನ್‌

ಇನ್ನು ಈ ಫಂದ್ಯದಲ್ಲಿ ಭಾರತದ ತಂಡದ ಅಂತಿಮ ಇಲೆವನ್‌ ನಲ್ಲಿ ಸ್ಥಾನ ಪಡೆದಿರುವವರ ಪಟ್ಟಿ ನೋಡುವುದಾದರೆ
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್ ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ,

Best Mobiles in India

Read more about:
English summary
Watch India Vs New Zealand WTC final live streaming on your smartphone, tablet, laptop, and smart TV.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X