ಫೋನ್‌ನಲ್ಲಿ ದಿನಪೂರ್ತಿ ಡೇಟಾ ಆನ್‌ ಮಾಡಿರುತ್ತೀರಾ?... ಇಂದೇ ಈ ಅಭ್ಯಾಸ ಚೇಂಜ್‌ ಮಾಡಿಕೊಳ್ಳಿ!

|

ಸಾಮಾನ್ಯವಾಗಿ ಈಗಂತೂ ಬಹುಪಾಲು ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇರುತ್ತದೆ. ಅದರಲ್ಲೂ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಏನಾದರೂ ಖಾಲಿಯಾದರೆ ಯಾರೇ ಆದರೂ ಸ್ವಲ್ಪ ಸಮಯಕ್ಕಾದರೂ ಯಾತನೆ ಅನುಭವಿಸುತ್ತಾರೆ. ಯಾಕೆಂದರೆ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಇಲ್ಲದಿದ್ದಾಗ ಫೋನ್‌ ನಿರ್ಜಿವಿಯಂತೆ ಭಾಸವಾಗುತ್ತದೆ. ಅಷ್ಟಕ್ಕೂ ಈ ಎಲ್ಲಾ ಪೀಠಿಕೆ ಯಾಕೆ ಆಂತೀರಾ?, ವಿಷಯ ಇದೆ. ಏನಂದರೆ ಈ ಡೇಟಾದಿಂದ ನಿಮಗೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿದೆ.

ಸ್ಮಾರ್ಟ್‌ಫೋನ್‌

ಹೌದು, ಬಹುಪಾಲು ಎಲ್ಲರೂ ಸ್ಮಾರ್ಟ್‌ಫೋನ್‌ ಅನ್ನು ಯಾವಾಗಲೂ ಸ್ವಿಚ್‌ ಆಫ್‌ ಆಗದ ಹಾಗೆ ನೋಡಿಕೊಳ್ಳುತ್ತಾರೆ. ಅದರಲ್ಲೂ ಡೇಟಾ ಆನ್‌ ಆಗಿರುವ ರೀತಿಯಲ್ಲಿ. ಯಾಕೆಂದರೆ ನೋಟಿಫಿಕೇಶನ್‌ಗಳು ಸರಿಯಾದ ಸಮಯಕ್ಕೆ ಲಭ್ಯವಾಗುವುದರಿಂದ ಅನುಕೂಲ ಆಗುತ್ತದೆ ಎಂದು. ಅದಾಗ್ಯೂ ದಿನ ಪೂರ್ತಿ ಈ ಡೇಟಾ ಬಳಕೆಯಿಂದ ಸಾಕಷ್ಟು ತೊಂದರೆ ಎದುರಾಗುತ್ತವೆ ಎನ್ನುವುದು ನಿಮಗೆ ಗೊತ್ತಾ?. ಹಾಗಿದ್ರೆ ಏನೆಲ್ಲಾ ಸಮಸ್ಯೆ ಇದೆ, ಪರಿಹಾರ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ಡೇಟಾ ಯಾವಾಗಲೂ ಆನ್ ಆಗಿದ್ರೆ ಏನಾಗುತ್ತೆ?

ಡೇಟಾ ಯಾವಾಗಲೂ ಆನ್ ಆಗಿದ್ರೆ ಏನಾಗುತ್ತೆ?

ಖಂಡಿತಾ ಈ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತದೆ. ಅದರಲ್ಲೂ ನೀವು ಅಂದುಕೊಳ್ಳಬಹುದು ನಾನು ಮೊಬೈಲ್‌ ತೆಗೆದುಕೊಂಡಾಗಲಿಂದ ಇಲ್ಲಿವರೆಗೂ ಡೇಟಾ ಯಾವಾಗಲೂ ಆನ್‌ ನಲ್ಲೇ ಇಟ್ಟಿರುತ್ತೇವೆ, ಏನು ಆಗೇ ಇಲ್ಲ ಎಂದು. ನಿಜ ಈಗ ಏನೂ ಆಗಿಲ್ಲದಿರಬಹುದು. ಆದರೆ, ಸ್ಮಾರ್ಟ್‌ಫೋನ್‌ ಎಷ್ಟು ಉಪಯೋಗವೋ ಅಷ್ಟೇ ಮಾರಕ. ಇದರ ವಿಕಿರಣಗಳು ಜೀವಿಗಳ ಪೀಳಿಗೆಯನ್ನೇ ನಿಧಾನವಾಗಿ ನಿರ್ನಾಮ ಮಾಡುವಷ್ಟು ಶಕ್ತಿ ಹೊಂದಿವೆ. ಈ ಮೂಲಕ ಸ್ಮಾರ್ಟ್‌ಫೋನ್‌ ನಿಮ್ಮ ಆರೋಗ್ಯ ಹಾಗೂ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸ್ಮಾರ್ಟ್‌ಫೋನ್‌ ಬ್ಯಾಟರಿಗೂ ದೊಡ್ಡ ಹೊಡೆತ

ಸ್ಮಾರ್ಟ್‌ಫೋನ್‌ ಬ್ಯಾಟರಿಗೂ ದೊಡ್ಡ ಹೊಡೆತ

ಸ್ಮಾರ್ಟ್‌ಫೋನ್‌ ಬಳಕೆ ಮಾಡಬೇಕು ಎಂದರೆ ಮೊದಲು ಬ್ಯಾಟರಿಯಲ್ಲಿ ಚಾರ್ಜ್‌ ಇರಬೇಕು. ನೀವು ಯಾವಾಗಲೂ ಡೇಟಾ ಆನ್‌ ಮಾಡಿದರೆ ಬ್ಯಾಟರಿ ಸಾಮರ್ಥ್ಯ ಬೇಗನೆ ಕ್ಷೀಣಿಸುತ್ತದೆ. ಇದರಿಂದ ಸ್ಮಾರ್ಟ್‌ಫೋನ್‌ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹಾಳಾಗುತ್ತದೆ. ಅಥವಾ ಆಗಾಗ್ಗೆ ಆಫ್‌ ಆಗುವ ಮೂಲಕ ನಿಮಗೆ ಬರುವ ಮುಖ್ಯ ಕರೆಗಳನ್ನು ತಪ್ಪಿಸುತ್ತದೆ.

ಈ ಪ್ರದೇಶಗಳಲ್ಲಂತೂ ಡೇಟಾ ಆನ್‌ ಮಾಡಬೇಡಿ

ಈ ಪ್ರದೇಶಗಳಲ್ಲಂತೂ ಡೇಟಾ ಆನ್‌ ಮಾಡಬೇಡಿ

ಸಾಮಾನ್ಯವಾಗಿ ಡೇಟಾ ಪಡೆಯಲು ಯಾವ ಪ್ರದೇಶವಾದರೇನು?, ಅಂಥಹುದು ಏನಾಗಬಹುದು ಎಂದು ನೀವು ಅಂದುಕೊಳ್ಳಬಹುದು. ನೀವು ಎಲ್ಲಿರುತ್ತೀರೋ ಅಲ್ಲಿ ನೆಟ್‌ವರ್ಕ್‌ ಚೆನ್ನಾಗಿದ್ದರೆ ಡೇಟಾ ಆನ್‌ ಮಾಡಿ ತೊಂದರೆ ಇಲ್ಲ. ಆದರೆ, ಎಲ್ಲಿ ನೆಟ್‌ವರ್ಕ್‌ ಸಮಸ್ಯೆ ಇರುತ್ತದೆ ಅಲ್ಲಿ ಯಾವುದೇ ಕಾರಣಕ್ಕೂ ಡೇಟಾ ಆನ್‌ ಮಾಡಲು ಮುಂದಾಗಬೇಡಿ. ಯಾಕೆಂದರೆ ನಿಮ್ಮ ಫೋನ್‌ ಸಿಗ್ನಲ್‌ ಹುಡುಕಲು ಹಾತೊರೆಯುತ್ತಿರುತ್ತದೆ. ಅದರಲ್ಲೂ ಕಳಪೆ ಸಿಗ್ನಲ್‌ ಪ್ರದೇಶದಲ್ಲಿ ಸಿಗ್ನಲ್‌ಗಾಗಿ ನಿಮ್ಮ ಫೋನ್‌ ಹೆಚ್ಚಿನ ಶಕ್ತಿಯನ್ನು ಬಳಕೆ ಮಾಡುತ್ತದೆ. ಇದರಿಂದ ಬ್ಯಾಟರಿ ಸಾಮರ್ಥ್ಯವೂ ಹಾಳಾಗುತ್ತದೆ, ಹಾಗೆಯೇ ಫೋನ್‌ನ ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರುತ್ತದೆ.

ಅಗತ್ಯವಿದ್ದಾಗ ಮಾತ್ರ ಡೇಟಾ ಆನ್‌ ಮಾಡಿ

ಅಗತ್ಯವಿದ್ದಾಗ ಮಾತ್ರ ಡೇಟಾ ಆನ್‌ ಮಾಡಿ

ಹೌದು, ಅನಗತ್ಯವಾಗಿ ಯಾವುದೇ ಕೆಲಸವನ್ನು ಮಾಡಬಾರದು. ಅಂದರೆ ನಿಮ್ಮ ಫೋನ್‌ ಒಳ್ಳೆಯ ಸಿಗ್ನಲ್‌ ಹೊಂದಿದ್ದರೆ ಆ ವೇಳೆ ನಿಮಗೆ ಇಂಟರ್ನೆಟ್‌ ಸೌಲಭ್ಯ ಬೇಕು ಎಂದರೆ ಮಾತ್ರ ಡೇಟಾ ಆನ್‌ ಮಾಡಿ. ಆ ವೇಳೆ ಸರಾಗವಾಗಿ ನೀವು ಮೊಬೈಲ್‌ ಬಳಕೆ ಮಾಡಬಹುದು. ಹಾಗೆಯೇ ಬ್ಯಾಟರಿ ಸಾಮರ್ಥ್ಯ ಸಹ ಚೆನ್ನಾಗಿರುತ್ತದೆ.

ಭಯಾನಕ ಸಮಸ್ಯೆ ಏನಾದರೂ ಇದೆಯಾ?

ಭಯಾನಕ ಸಮಸ್ಯೆ ಏನಾದರೂ ಇದೆಯಾ?

ಡೇಟಾವನ್ನು ಯಾವಾಗಲು ಆನ್‌ ಮಾಡಿ ಇಡುವುದರಿಂದ ಅದರಲ್ಲೂ ಸಿಗ್ನಲ್‌ ಸಮಸ್ಯೆ ಇರುವ ಪ್ರದೇಶದಲ್ಲಿ ಫೋನ್ ಬ್ಯಾಟರಿ ಹೆಚ್ಚು ವಿಕಿರಣವನ್ನು ಹೊರಸೂಸುತ್ತದೆ. ಇದರಿಂದ ಫೋನ್‌ ಬೇಗನೆ ಬಿಸಿಯಾಗುತ್ತದೆ ಈ ಮೂಲಕ ನಿಮ್ಮ ಫೋನ್ ಆದಷ್ಟು ಬೇಗ ಮೂಲೆ ಸೇರಲು ದಿನಗಳನ್ನು ಎಣಿಸುತ್ತದೆ. ಇದಷ್ಟೇ ಅಲ್ಲದೆ, ಫೋನ್‌ನಿಂದ ಬರುವ ಹೆಚ್ಚಿನ ವಿಕಿರಣದಿಂದಾಗಿ ನಿಮ್ಮ ದೈಹಿಕ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಭದ್ರತಾ ಸಮಸ್ಯೆ ಎದುರಾಗುತ್ತದೆ

ಭದ್ರತಾ ಸಮಸ್ಯೆ ಎದುರಾಗುತ್ತದೆ

ಸಾಮಾನ್ಯವಾಗಿ ಹ್ಯಾಕರ್‌ಗಳು ಈ ರೀತಿಯ ಬಳಕೆದಾರರನ್ನೇ ಹೆಚ್ಚು ಟಾರ್ಗೆಟ್‌ ಮಾಡುತ್ತಾರೆ. ಈ ಮೂಲಕ ಅವರು ಫೋನ್‌ಒಳಗೆ ನುಸುಳಿ ಅವರಿಗೆ ಏನು ಬೇಕೋ ಅದನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಸುರಕ್ಷತೆ ದೃಷ್ಟಿಯಿಂದ ಯಾವಾಗ ಬೇಕೋ ಆ ಸಮಯದಲ್ಲಿ ಡೇಟಾ ಬಳಕೆ ಮಾಡಿದರೆ ಖಂಡಿತಾ ನಿಮ್ಮ ಸ್ಮಾರ್ಟ್‌ಫೋನ್‌ ದೀರ್ಘಕಾಲ ಬಾಳಿಕೆ ಬರುತ್ತದೆ. ಜೊತೆಗೆ ನೀವು ಸಹ ಸದಾ ಆರೋಗ್ಯದಿಂದ ಇರಬಹುದು.

Best Mobiles in India

English summary
what happens when you keep your smartphone mobile data on for 24/7.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X