ವಾಟ್ಸಾಪ್‌ನಿಂದ ಮತ್ತೊಂದು ಹೊಸ ಫೀಚರ್ಸ್‌; ಮಿಸ್ಡ್ ಕಾಲ್‌ಗಳ ಬಗ್ಗೆ ಎಚ್ಚರಿಕೆ!

|

ಸಾಮಾನ್ಯವಾಗಿ ಫೋನ್‌ಗಳಿಗೆ ದಿನವೂ ಯಾರಾದರೂ ಕರೆ ಮಾಡುತ್ತಲೇ ಇರುತ್ತಾರೆ. ಈ ಕಾರಣಕ್ಕೆ ಟೆಲಿಕಾಂ ಸಂಸ್ಥೆಗಳು 'ಮಿಸ್ಡ್ ಕಾಲ್ ಅಲರ್ಟ್‌' ಎಂಬ ಫೀಚರ್ಸ್‌ ಪರಿಯಿಸಿದ್ದು, ನಿಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದಾಗ ಅಥವಾ ನೆಟ್‌ವರ್ಕ್‌ ಕ್ಷೇತ್ರದ ಹೊರಗಿದ್ದಾಗ ಬರುವ ಕರೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದೇ ಫೀಚರ್ಸ್‌ ಈಗ ವಾಟ್ಸಾಪ್‌ನಲ್ಲೂ(WhatsApp) ಲಭ್ಯವಾಗಲಿದೆ.

ವಾಟ್ಸಾಪ್‌

ಹೌದು, ಬಹುಪಾಲು ಜನರು ವಾಟ್ಸಾಪ್‌ ಬಳಕೆ ಮಾಡುವುದು ಗೊತ್ತಿರುವ ಸಂಗತಿ. ಇದರಲ್ಲಿ ಮೆಸೆಜ್‌ ಮಾಡುವುದಕಷ್ಟೇ ಅಲ್ಲದೆ ಹಲವು ರೀತಿಯಲ್ಲಿ ಬಳಕೆ ಮಾಡಬಹುದು. ಅದರಲ್ಲೂ ಡಿಜಿಟಲ್‌ ಕಾಲ್‌ ಉದ್ದೇಶಕ್ಕೆ ವಾಟ್ಸಾಪ್‌ನ ಆಡಿಯೋ ಹಾಗೂ ವಿಡಿಯೋ ಕರೆ ಫೀಚರ್ಸ್‌ ಅನ್ನು ಬಳಸಬಹುದಾಗಿದೆ. ಇದರ ನಡುವೆ ಸ್ಮಾರ್ಟ್‌ ಫೋನ್‌ ಅನ್ನು 'ಡೋಂಟ್ ಡಿಸ್ಟರ್ಬ್‌ ಮೋಡ್‌'ನಲ್ಲಿ ಇರಿಸಿದ್ದಾಗ ಈ ಫೀಚರ್ಸ್‌ ನಿಮಗೆ ಸಹಾಯಕವಾಗಲಿದೆ.

ಫೀಚರ್ಸ್‌

ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಮೂಲಕ ನೀವು ಯಾವುದೇ ಕರೆಯನ್ನು ಮಿಸ್‌ ಮಾಡಿಕೊಂಡಿದ್ದರೆ ಅದರ ಮಾಹಿತಿ ಲಭ್ಯವಾಗಲಿದೆ. ಅದರಲ್ಲೂ ನಿಮ್ಮ ಮೊಬೈಲ್‌ ಅನ್ನು ಡೋಂಟ್ ಡಿಸ್ಟರ್ಬ್ ಮೋಡ್‌ನಲ್ಲಿ ಇರಿಸಿದ್ದಾಗ ಬರುವ ವಾಟ್ಸಾಪ್‌ ಕಾಲ್‌ ಬಗ್ಗೆ ಮಾಹಿತಿ ತಿಳಿಯಲಿದೆ. ಪ್ರಮುಖ ವಿಷಯ ಎಂದರೆ ಮಾರುಕಟ್ಟೆಯಲ್ಲಿ ಲಭ್ಯ ಇರುವ ಹಲವಾರು ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ವಿವಿಧ ಫೀಚರ್ಸ್ ಹೊಂದಿದ್ದರೂ ಸಹ ಈ ರೀತಿಯ ಫೀಚರ್ಸ್‌ ನೀಡುವ ಮೊದಲಿಗನಾಗಿ ವಾಟ್ಸಾಪ್‌ ಗುರುತಿಸಿಕೊಳ್ಳಲಿದೆ.

ಬೀಟಾ

ವಾಟ್ಸಾಪ್‌ ಇದೀಗ ಈ ಫೀಚರ್ಸ್‌ ಹೊರತರಲು ಬಹುತೇಕ ಸಿದ್ಧವಾಗಿದೆ, ಹಾಗೆಯೇ ಮೆಟಾ-ಮಾಲೀಕತ್ವದ ವಾಟ್ಸಾಪ್‌ನ ಇತ್ತೀಚಿನ ಬೀಟಾ ಆವೃತ್ತಿ 2.22.24.7 ಯಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದೆ. ಜೊತೆಗೆ ಕೆಲವು ಬೀಟಾ ವಾಟ್ಸಾಪ್ ಬಳಕೆದಾರರಿಗೆ ಈ ಫೀಚರ್ಸ್‌ ಅನ್ನು ಈಗಾಗಲೇ ಪರಿಚಯಿಸಲಾಗಿದೆ ಎಂದು ತಿಳಿದುಬಂದಿದೆ.

ಕರೆ ಮಾಡಿದವರಿಗೆ ನೀವು ವಾಸ್ತವತೆ ತಿಳಿಸಬಹುದು

ಕರೆ ಮಾಡಿದವರಿಗೆ ನೀವು ವಾಸ್ತವತೆ ತಿಳಿಸಬಹುದು

ಇನ್ನು ಕೆಲವು ಬೀಟಾ ಬಳಕೆದಾರರು ಸಹ ಈ ಬಗ್ಗೆ ಮಾಹಿತಿ ನೀಡಿದ್ದು, ಬೀಟಾ ಪ್ರೋಗ್ರಾಂ ಮೂಲಕ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಅನ್ನು ಗಮನಿದ್ದೇವೆ ಎಂದಿದ್ದಾರೆ. ಜೊತೆಗೆ ಆಂಡ್ರಾಯ್ಡ್ ಪೋಲಿಸ್ ಸೈಟ್‌ ವರದಿ ಮಾಡಿದ್ದು, ವಾಟ್ಸಾಪ್‌ ಬಳಕೆದಾರರು ಮಿಸ್ಡ್ ಕಾಲ್ ಹಿಸ್ಟರಿ ಐಟಂನ ಅಡಿಯಲ್ಲಿ ಸೂಕ್ತ ಟ್ಯಾಗ್‌ಲೈನ್ ಅನ್ನು ನೋಡುತ್ತಾರೆ, ಅದು ಡೋಂಟ್‌ ಡಿಸ್ಟರ್ಬ್‌ ಮೂಲಕ ಕರೆಯನ್ನು ಮ್ಯೂಟ್‌ ಮಾಡಲಾಗಿತ್ತು ಎಂದು ತಿಳಿಸುತ್ತದೆ. ಇದಿಷ್ಟೇ ಅಲ್ಲದೆ, ಯಾರು ಕರೆ ಮಾಡಿದ್ದಾರೋ ಆ ವ್ಯಕ್ತಿಯ ಚಾಟ್ ಥ್ರೆಡ್ ಅನ್ನು ಓಪನ್‌ ಮಾಡಿದಾಗ ಇದೇ ರೀತಿಯ ಸಂದೇಶ ಡಿಸ್‌ಪ್ಲೇ ಆಗಲಿದೆ ಎಂದು ಉಲ್ಲೇಖಿಸಿದೆ.

ಡೋಂಟ್‌ ಡಿಸ್ಟರ್ಬ್‌

ಇದರ ಹೊರತಾಗಿಯ ಡೋಂಟ್‌ ಡಿಸ್ಟರ್ಬ್‌ ಮೋಡ್‌ನಲ್ಲಿ ಇದ್ದಾಗ ಬಂದ ಕರೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿಲ್ಲ ಎಂದು ಕರೆ ಮಾಡಿದವರಿಗೆ ತಿಳಿಸಲು ಸಹ ಅನುವು ಮಾಡಿಕೊಡಲಾಗಿದೆ. ಹಾಗೆಯೇ ಈ ಸಂಬಂಧ ತೋರಿಸಲಾಗುವ ಮಾಹಿತಿಯ ಸ್ಕ್ರೀನ್‌ಶಾಟ್ ಅನ್ನು ಕರೆ ಮಾಡಿದವರಿಗೆ ಶೇರ್‌ ಮಾಡಿಕೊಳ್ಳಬಹುದಾದ ಆಯ್ಕೆಯನ್ನೂ ಈ ಮೂಲಕ ಬಳಕೆದಾರರು ಪಡೆಯಬಹುದಾಗಿದೆ.

ಗ್ರೂಪ್‌ ವಾಯ್ಸ್‌ ಕರೆಗಳಿಗೆ ಫೀಚರ್ಸ್‌

ಗ್ರೂಪ್‌ ವಾಯ್ಸ್‌ ಕರೆಗಳಿಗೆ ಫೀಚರ್ಸ್‌

ವಾಟ್ಸಾಪ್‌ ಬೀಟಾದ ಇತ್ತೀಚಿನ ಅಪ್‌ಡೇಟ್ ಕೆಲವು ಬೀಟಾ ಪರೀಕ್ಷಕರಿಗೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇದರ ನಡುವೆ ಜೂನ್‌ನಲ್ಲಿ, ವಾಟ್ಸಾಪ್ ಗ್ರೂಪ್‌ ವಾಯ್ಸ್‌ ಕರೆಗಳಿಗಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಗ್ರೂಪ್‌ ಕಾಲ್‌ನಲ್ಲಿ ಇರುವಾಗ ಬ್ಯಾನರ್ ನೋಟಿಫಿಕೇಶನ್‌ ಜೊತೆಗೆ ಕರೆಯಲ್ಲಿ ಭಾಗಿಯಾಗಿರುವವರನ್ನು ಮ್ಯೂಟ್ ಮಾಡಬಹುದು ಹಾಗೆಯೇ ಅವರಿಗೆ ಸಂದೇಶ ಕಳುಹಿಸಬಹುದು.

ಕಂಪ್ಯಾನಿಯನ್ ಮೋಡ್

ಕಂಪ್ಯಾನಿಯನ್ ಮೋಡ್

ಇದರ ಜೊತಗೆ ಇದೀಗ ಮತ್ತೊಂದು ಹೊಸ ಫೀಚರ್ಸ್‌ ಬಗ್ಗೆಯೂ ಘೋಷಣೆ ಮಾಡಿದೆ. ಅದರಂತೆ ವಾಟ್ಸಾಪ್‌ ಕಂಪ್ಯಾನಿಯನ್ ಮೋಡ್ ಎಂಬ ಹೊಸ ಫೀಚರ್ಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೀಚರ್ಸ್ ಮೂಲಕ ನೀವು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸಾಪ್‌ ಬಳಸುವುದಕ್ಕೆ ಅನಕೂಲ ಮಾಡಿಕೊಡಲಿದೆ. ಅಂದರೆ ಎರಡು ಮೊಬೈಲ್‌ಗಳಲ್ಲಿ ಒಂದೇ ಬಾರಿಗೆ ಬಳಕೆ ಮಾಡಬಹುದು. ಮೊಬೈಲ್ ಮಾತ್ರವಲ್ಲ, ಲ್ಯಾಪ್‌ಟಾಪ್‌, ಟ್ಯಾಬ್‌ ನಲ್ಲೂ ಈ ಫೀಚರ್ಸ್‌ ಲಭ್ಯವಾಗಲಿದೆ.

Best Mobiles in India

Read more about:
English summary
WhatsApp announces new features for missed calls due to DND

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X