ಗುಡ್‌ನ್ಯೂಸ್‌: ವಾಟ್ಸಪ್‌ ಗ್ರೂಪ್‌ ಕರೆ ಮಿತಿಯಲ್ಲಿ ಹೆಚ್ಚಳ!

|

ಕೊರೊನಾ ನಿಯಂತ್ರಣಕ್ಕಾಗಿ ಸದ್ಯ ಲಾಕ್‌ಡೌನ್ ಜಾರಿಯಲ್ಲಿದ್ದು, ಮನೆಯಿಂದ ಕೆಲಸ ಮಾಡುವ ಅನೇಕ ಉದ್ಯೋಗಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ವಿಡಿಯೊ ಕಾಲಿಂಗ್ ಆಪ್‌ಗಳು ನೆರವಾಗಿವೆ. ಆ ಪೈಕಿ ಒಂದೇ ಬಾರಿಗೆ ಹೆಚ್ಚಿನ ಸದಸ್ಯರನ್ನು ಕನೆಕ್ಟ್ ಮಾಡುವ ಸೌಲಭ್ಯ ಪಡೆದಿರುವ ಜೂಮ್ ಆಪ್‌ ಸದ್ಯ ಹೆಚ್ಚಿನ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಇದೀಗ ಜನಪ್ರಿಯ ವಾಟ್ಸಪ್‌ ಸಹ ವಿಡಿಯೊ ಕರೆ ಸದಸ್ಯರ ಮಿತಿ ಹೆಚ್ಚಳ ಮಾಡಿದೆ.

ಫೇಸ್‌ಬುಕ್ ಒಡೆಯನ್ ವಾಟ್ಸಪ್

ಹೌದು, ಫೇಸ್‌ಬುಕ್ ಒಡೆಯನ್ ವಾಟ್ಸಪ್ ಈಗ ತನ್ನ ಗ್ರೂಪ್ ವಿಡಿಯೊ ಕರೆಯ ಮಿತಿಯನ್ನು ಹೆಚ್ಚಿಸಿದೆ. ವಾಟ್ಸಪ್‌ನಲ್ಲಿ ಒಂದು ಗ್ರೂಪ್ ಕರೆಯಲ್ಲಿ ಗರಿಷ್ಠ ನಾಲ್ಕು ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಇತ್ತು, ಆದ್ರೆ ಇದೀಗ 8 ಸದಸ್ಯರನ್ನು ಕನೆಕ್ಟ್‌ ಮಾಡಬಹುದಾಗಿದೆ. ಈ ಹೊಸ ಸೌಲಭ್ಯವನ್ನು ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಆವೃತ್ತಿಯಲ್ಲಿ ರೋಲ್‌ ಔಟ್ ಮಾಡಿದೆ.

ಅಪ್‌ಡೇಟ್‌ ಆವೃತ್ತಿ

ವಾಟ್ಸಪ್‌ನ ಹೊಸ ಅಪ್‌ಡೇಟ್‌ ಆವೃತ್ತಿಯಲ್ಲಿ ಒಂದೇ ವೇಳೆಗೆ 8 ಸದಸ್ಯರು ವಿಡಿಯೊ ಕರೆಯಲ್ಲಿ ಭಾಗವಹಿಸುವ ಸೌಲಭ್ಯ ಸೇರಿದೆ. ಬಳಕೆದಾರರು ಅವರ ಕುಟುಂಬ ಸದಸ್ಯರು ಅಥವಾ ಸ್ನೇಹಿತರ ದೊಡ್ಡ ಗುಂಪಿನೊಂದಿಗೆ ಮಾತನಾಡಲು ಈ ಸೌಲಭ್ಯ ನೆರವಾಗಲಿದೆ. ಪ್ರಸ್ತುತ ವಾಟ್ಸಪ್‌ ಬೀಟಾ ಆವೃತ್ತಿಯ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದ್ದು, ಶೀಘ್ರದಲ್ಲೇ ಸಾಮಾನ್ಯ ಆವೃತ್ತಿಯಲ್ಲಿ ಈ ಸೌಲಭ್ಯ ಸೇರಿಕೊಳ್ಳಲಿದೆ.

ವಾಯಿಸ್‌ ಕರೆ

ಹಾಗೆಯೇ ವಾಟ್ಸಪ್‌ ಇತ್ತೀಚಿಗೆ ವಾಟ್ಸಪ್ ಗ್ರೂಪ್‌ ಕಾಲಿಂಗ್ ಫೀಚರ್‌ನಲ್ಲಿ ಹೊಸ ಅಪ್‌ಡೇಟ್ ಮಾಡಿದ್ದು, ಕೇವಲ ಒಂದು ಟ್ಯಾಪ್ ಮಾಡುವ ಮೂಲಕ ಗುಂಪು ವಿಡಿಯೊ ಅಥವಾ ವಾಯಿಸ್‌ ಕರೆ ಮಾಡುವ ಹೊಸ ಸೌಲಭ್ಯವು ವಾಟ್ಸಪ್‌ನ ಅಪ್‌ಡೇಟ್‌ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಗುಂಪು ವಿಡಿಯೊ ಕರೆ ಸೇವೆಯಲ್ಲಿ ಬಳಕೆದಾರರು ಗರಿಷ್ಠ ನಾಲ್ಕು ಬಳಕೆದಾರರನ್ನು ಸೇರಿಸಬಹುದಾಗಿದೆ. ಈ ಸೌಲಭ್ಯ ಅಪ್‌ಡೇಟ್ ಆವೃತ್ತಿಯಲ್ಲಿ ಲಭ್ಯವಾಗಲಿದ್ದು, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ ಹಾಗೂ ಆಪಲ್ ಆಪ್‌ ಸ್ಟೋರ್‌ನಲ್ಲಿ ವಾಟ್ಸಪ್‌ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ವಾಟ್ಸಪ್‌ನಲ್ಲಿ ಗ್ರೂಪ್ ಕರೆ ಮಾಡುವುದು ಹೇಗೆ?

ವಾಟ್ಸಪ್‌ನಲ್ಲಿ ಗ್ರೂಪ್ ಕರೆ ಮಾಡುವುದು ಹೇಗೆ?

* ವಾಟ್ಸಾಪ್ ಆಪ್‌ನಲ್ಲಿ ಗ್ರೂಪ್ ಕರೆ ಆಯ್ಕೆ ತೆರೆಯಿರಿ.

* ಪರದೆಯ ಮೇಲಿರುವ ವೀಡಿಯೊ ಅಥವಾ ವಾಯಿಸ್‌ ಕರೆಯನ್ನು ಟ್ಯಾಪ್ ಮಾಡಿ.

* ಒಂದೇ ಬಾರಿಗೆ ನೀವು ಗರಿಷ್ಠ ನಾಲ್ಕು ಸದಸ್ಯರೊಂದಿಗೆ ಗುಂಪು ಕರೆಯನ್ನು ಆರಂಭಿಸಬಹುದಾಗಿದೆ.

ಇತರೆ ಗ್ರೂಪ್‌ ವಿಡಿಯೊ ಕರೆಯ ಆಪ್‌ಗಳು

ಇತರೆ ಗ್ರೂಪ್‌ ವಿಡಿಯೊ ಕರೆಯ ಆಪ್‌ಗಳು

ಗ್ರೂಪ್‌ ವಿಡಿಯೊ ಕರೆಯನ್ನು ಬೆಂಬಲಿಸುವ ಹಲವು ಆಪ್‌ಗಳಿದ್ದು, ಆದರೆ ಅವುಗಳಲ್ಲಿ ಕೆಲವು ಮಾತ್ರ ಬೇಡಿಕೆಯಲ್ಲಿವೆ. ಸದ್ಯ ಅತೀ ಡಿಮ್ಯಾಂಡ್‌ನಲ್ಲಿರುವ ಗ್ರೂಪ್ ವಿಡಿಯೊ ಕರೆಯ ಆಪ್‌ ಅಂದ್ರೆ ಅದು ಚೀನಾ ಮೂಲದ ಜೂಮ್ ಆಪ್ ಆಗಿದೆ. ಉಳಿದಂತೆ ಹೌಸ್‌ಪಾರ್ಟಿ, ಗೂಗಲ್ ಡ್ಯುವ್, ಹ್ಯಾಂಗ್‌ಔಟ್‌ ಆಪ್‌ಗಳು ಬಳಕೆಯಲ್ಲಿವೆ.

Best Mobiles in India

English summary
WhatsApp Extends Group Call Limit to eight people on group video and voice calls in the latest update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X