Subscribe to Gizbot

ಹೊಸ ಅಪ್‌ಡೇಟ್‌ಗಳೊಂದಿಗೆ ಇನ್ನಷ್ಟು ಹೊಸ ರೂಪದಲ್ಲಿ ವಾಟ್ಸಾಪ್

Posted By:

ಫೇಸ್‌ಬುಕ್ ಮಾಲೀಕತ್ವದಲ್ಲಿರುವ ವಾಟ್ಸಾಪ್ ಎಂಬ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಸ್ಮಾರ್ಟ್‌ಫೋನ್‌ಗಳಿಗಾಗಿ ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಪರಿಷ್ಕರಿಸಿದೆ.

ಹೊಸ ಅಪ್‌ಡೇಟ್‌ಗಳೊಂದಿಗೆ ಇನ್ನಷ್ಟು ಹೊಸ ರೂಪದಲ್ಲಿ ವಾಟ್ಸಾಪ್

ವಾಟ್ಸಾಪ್‌ನ ಇತ್ತೀಚಿನ 2.12.38 ರಚನಾ ಆವೃತ್ತಿ ಪ್ರಸ್ತುತ ಕಂಪೆನಿಯ ಸೈಟ್‌ನಲ್ಲಿ ಲಭ್ಯವಿದ್ದು, ಕೆಲವೊಂದು ಬದಲಾವಣೆಗಳನ್ನು ಒಳಗೊಂಡಿದೆ. ಐಕಾನ್ಸ್, ಅನಿಮೇಶನ್ಸ್, ಎಮೋಜಿ ಟ್ರೆ ಹೀಗೆ ವಿವಿಧ ರೀತಿಯ ಫೀಚರ್‌ಗಳನ್ನೊಳಗೊಂಡು ಬಳಕೆದಾರರನ್ನು ಸಮೀಪಿಸುತ್ತಿದೆ. ಮೇಲ್ಭಾಗದಲ್ಲಿರುವ ಅಪ್ಲಿಕೇಶನ್ ಟಾಸ್ಕ್ ಬಾರ್ ಅನ್ನು ಕರೆಗಳು, ಸಂದೇಶಗಳು ಮತ್ತು ಚಾಟ್‌ಗಳಿಗಾಗಿ ಮರ್ಜ್ ಮಾಡಲಾಗಿದೆ. ಇದಕ್ಕೆ ಒಂದೇ ಬಣ್ಣವನ್ನು ಬಳಸಲಾಗಿದೆ.

ಓದಿರಿ: ಬದಲಾದ ವಾಟ್ಸಾಪ್ ಸೆಟ್ಟಿಂಗ್ಸ್ ಕುರಿತು ತಿಳಿಯಬೇಕೇ?

ಹೊಸ ಅಪ್‌ಡೇಟ್‌ಗಳೊಂದಿಗೆ ಇನ್ನಷ್ಟು ಹೊಸ ರೂಪದಲ್ಲಿ ವಾಟ್ಸಾಪ್

ಚಾಟ್ ಅನ್ನು ತೆರೆಯುವಾಗ, ಇನ್ನು ಪಠ್ಯ ಪಟ್ಟಿಯ ಬದಿಯಲ್ಲಿ ಹಸಿರು ಬಣ್ಣದ ಧ್ವನಿ ರೆಕಾರ್ಡಿಂಗ್ ಐಕಾನ್ ಅನ್ನು ಬಳಕೆದಾರರು ಕಾಣಬಹುದಾಗಿದೆ. ಕೆಲವೊಂದು ಸಣ್ಣಪುಟ್ಟ ಅನಿಮೇಶನ್ ಬದಲಾವಣೆಗಳೊಂದಿಗೆ ಚಾಟ್ ಸಂವಾದ ಬಬಲ್ ರೀತಿಯಲ್ಲಿರುವ ಚಾಟ್ ವಿನ್ಯಾಸವನ್ನು ಒಳಗೊಳ್ಳಲಿದೆ.

ಹೊಸ ಅಪ್‌ಡೇಟ್‌ಗಳೊಂದಿಗೆ ಇನ್ನಷ್ಟು ಹೊಸ ರೂಪದಲ್ಲಿ ವಾಟ್ಸಾಪ್

ಅಟ್ಯಾಚ್‌ಮೆಂಟ್ ಐಕಾನ್‌ಗಳು ದೊಡ್ಡದು ಅಂತೆಯೇ ಇನ್ನಷ್ಟು ವರ್ಣಮಯವಾಗಲಿದೆ. ಹೊಸ ಅನಿಮೇಶನ್‌ಗಳನ್ನು ಇದಕ್ಕೆ ಸೇರ್ಪಡೆಗೊಳಿಸಲಾಗುತ್ತಿದ್ದು, ಅಪ್ಲಿಕೇಶನ್‌ನಿಂದ ನೇರವಾಗಿ ಚಿತ್ರವನ್ನು ಕ್ಲಿಕ್ ಮಾಡುವಾಗ ಅಂತೆಯೇ ಅದನ್ನು ಹಂಚಿಕೊಳ್ಳುವಾಗ ಬದಲಾವಣೆಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಓದಿರಿ: ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ

ಹ್ಯಾಂಡ್‌ಸೆಟ್ ಅನ್ನು ಪಕ್ಕಕ್ಕೆ ಸರಿಸುವಾಗ ಅಂದರೆ ಇಲ್ಲಿ ನೀವು ಸ್ಕ್ರೀನ್ ರೊಟೇಶನ್ ಅನ್ನು ಆನ್ ಮಾಡಿರಬೇಕು ಆಗ ನಿಮ್ಮ ದೊಡ್ಡದಾದ ವಾಟ್ಸಾಪ್ ಪ್ರೊಫೈಲ್ ಅನ್ನು ಉಳಿದ ಎಲ್ಲಾ ಮಾಹಿತಿ ಚಿತ್ರದ ಪಕ್ಕಕ್ಕೆ ಬರುವಂತೆ ಇದು ಪ್ರದರ್ಶಿಸುತ್ತದೆ.

ಹೊಸ ಅಪ್‌ಡೇಟ್‌ಗಳೊಂದಿಗೆ ಇನ್ನಷ್ಟು ಹೊಸ ರೂಪದಲ್ಲಿ ವಾಟ್ಸಾಪ್

ಈ ಎಲ್ಲಾ ನವೀಕರಣಗಳು ನಿಮ್ಮ ಫೋನ್‌ಗೆ ಸದ್ಯದಲ್ಲಿಯೇ ಬರಲಿದ್ದು, ಓಟಿಎ ಅನ್ನು ಕಾಯಲು ಇಷ್ಟವಿರದೇ ಇರುವ ಬಳಕೆದಾರರಿಗೆ ತನ್ನ ಎಪಿಕೆ ಫೈಲ್ ಅನ್ನು ವೆಬ್‌ಸೈಟ್‌ನಲ್ಲಿ ವಾಟ್ಸಾಪ್ ನೀಡಲಿದೆ. ವೆಬ್‌ಸೈಟ್‌ನಿಂದ ಈ ಫೈಲ್ ಅನ್ನು ಹಸ್ತಚಾಲಿತವಾಗಿ ಬಳಕೆದಾರರು ಡೌನ್‌ಲೋಡ್ ಮಾಡಬಹುದಾಗಿದ್ದು ಮೆಟೀರಿಯಲ್ ವಿನ್ಯಾಸದ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

English summary
WhatsApp, the popular cross-platform messenger app owned by Facebook, has revamped its Android app for smartphones with a Material Design makeover.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot