ವಾಟ್ಸಾಪ್‌ನ ಅತಿ ಆಕರ್ಷಕ ವಿಶೇಷತೆಗಳು

By Prasad
|

ಯಾವುದೇ ದರವನ್ನು ನಿಗದಿಪಡಿಸದೇ ಬಳಕೆದಾರರಿಗೆ ಸಂದೇಶಗಳನ್ನು ರವಾನಿಸಬಹುದಾದ ಅತಿ ಹೆಚ್ಚು ಜನಪ್ರಿಯ ಮೊಬೈಲ್ ಪ್ಲಾಟ್‌ಫಾರ್ಮ್ ಆಗಿ ವಾಟ್ಸಾಪ್ ಹೊರಬಂದಿದೆ. ಆಂಡ್ರಾಯ್ಡ್, ನೋಕಿಯಾ, ಬ್ಲ್ಯಾಕ್‌ಬೆರ್ರಿ ಮತ್ತು ಐಓಎಸ್‌ನಲ್ಲೂ ವಾಟ್ಸಾಪ್ ಲಭ್ಯವಿದ್ದು ಹೆಚ್ಚಿನ ಬಳಕೆದಾರರನ್ನು ಪಡೆದುಕೊಂಡಿರುವ ಅತಿ ಜನಪ್ರಿಯ ವೇದಿಕೆ ಇದಾಗಿದೆ.

ಇದನ್ನೂ ಓದಿ: ಉಪಯೋಗಕಾರಿ ಕಂಪ್ಯೂಟರ್ ಶಾರ್ಟ್ ಕಟ್ ಕೀಗಳು

ಇಂದಿನ ಲೇಖನದಲ್ಲಿ ವಾಟ್ಸಾಪ್‌ನ ಹತ್ತು ಹಲವು ವಿಶೇಷತೆಗಳನ್ನು ನಾವು ನೋಡಬಹುದಾಗಿದ್ದು ವಾಟ್ಸಾಪ್‌ನ ಪ್ರಯೋಜನವನ್ನು ಈ ಲೇಖನದಲ್ಲಿ ಅರಿತುಕೊಳ್ಳೋಣ.

#1

#1

ಸ್ಕೈಪ್, ಎಮ್‌ಎಸ್‌ಎನ್ ಮತ್ತು ಇತರ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್‌ನಂತೆ ವಾಟ್ಸಾಪ್ ಕ್ರಾಸ್ ಪ್ಲಾಟ್‌ಫಾರ್ಮ್ ಆಗಿದ್ದು ಇದನ್ನು ಹೆಚ್ಚಿನ ಪ್ರಮಾಣದ ಗ್ಯಾಜೆಟ್‌ಗಳಲ್ಲಿ ಅಳವಡಿಸಬಹುದಾಗಿದೆ. ಅಂದರೆ ಮೊಬೈಲ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲೂ ವಾಟ್ಸಾಪ್ ಇದೀಗ ಲಭ್ಯ.

#2

#2

ನೀವು ಈ ಅಪ್ಲಿಕೇಶನ್ ಮಾತ್ರ ಡೌನ್‌ಲೋಡ್ ಮಾಡಿದರೆ ಸಾಕು, ಅಂತರ್ಜಾಲ ಸೌಲಭ್ಯವನ್ನು ಪಡೆದುಕೊಂಡು ನಿಮ್ಮ ಫೋನ್‌ಗಳಲ್ಲಿ ಸಂದೇಶಗಳನ್ನು ಸ್ನೇಹಿತರಿಗೆ ರವಾನಿಸಬಹುದು. ಇನ್ನು ಕರೆಗಳನ್ನು ಕೂಡ ನೀವು ಮಾಡಬಹುದಾಗಿದೆ.

#3

#3

ವಾಟ್ಸಾಪ್ ಅನ್ನು ಬಳಸಿಕೊಂಡು ನೀವು ಸಂದೇಶಗಳನ್ನು ಜೊತೆಗೆ ಆಡಿಯೊ ಫೈಲ್‌ಗಳನ್ನು ಕೂಡ ಲಗತ್ತಿಸಬಹುದಾಗಿದೆ. ಸಂದೇಶಗಳಿಗೆ ಇಮೇಜ್‌ಗಳು ಮತ್ತು ವೀಡಿಯೊಗಳ ಬಳಕೆಯನ್ನು ಕೂಡ ಮಾಡಬಹುದು.

#4

#4

ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡುವುದು ಅತಿ ಸರಳ ವಿಧಾನವಾಗಿದ್ದು, ಇದನ್ನು ಬಳಸಲು ಯಾವುದೇ ವೃತ್ತಿಪರ ಸಲಹೆಯನ್ನು ಪಡೆದುಕೊಳ್ಳಬೇಕಾಗಿಲ್ಲ. ಇದು ತ್ವರಿತ ಸಂವಹನವನ್ನು ಒದಗಿಸುತ್ತದೆ.

#5

#5

ವಾಟ್ಸಾಪ್ ಯಾವುದೇ ಜಾಹೀರಾತು ಪ್ಲಾಟ್‌ಫಾರ್ಮ್ ಅನ್ನು ಹೊಂದಿಲ್ಲ. ಜಾಹೀರಾತುಗಳ ತೊಂದರೆ ಇಲ್ಲದೆ ನಿಮ್ಮ ಕುಟುಂಬ ಸದದ್ಯರೊಂದಿಗೆ, ಸ್ನೇಹಿತರೊಂದಿಗೆ ನೀವು ಸಂವಾದವನ್ನು ನಡೆಸಬಹುದು.

Best Mobiles in India

English summary
This article tells about WhatsApp Free Download is Now The Popular Mobile Messaging App.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X