2022 ರಲ್ಲಿ ಈ ಪ್ರಮುಖ ಆಪ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದ ಬಳಕೆದಾರರು... ಕಾರಣ ಇಲ್ಲಿದೆ!?

|

ಸಾಮಾನ್ಯವಾಗಿ ಟೆಕ್‌ ವಲಯದಲ್ಲಿ ಹಲವಾರು ಆಪ್‌ಗಳು ತಮ್ಮದೇ ಆದ ಸೇವೆಯನ್ನು ಬಳಕೆದಾರರಿಗೆ ನೀಡುತ್ತವೆ. ಅದರಲ್ಲೂ ವಾಟ್ಸಾಪ್‌, ಟ್ವಿಟ್ಟರ್‌ ಸೇರಿದಂತೆ ಇನ್ನಿತರೆ ಆಪ್‌ಗಳು ಮೆಸೇಜಿಂಗ್‌ ಸೇವೆಯ ಜೊತೆಗೆ ಮಾಹಿತಿ ವಿನಿಯಮ ಮಾಡಿಕೊಳ್ಳಲು ಹಾಗೂ ಜಾಗತಿಕ ಆಗು ಹೋಗುಗಳನ್ನು ತಿಳಿದುಕೊಳ್ಳಲು ಸಹಕಾರಿ. ಅದಾಗ್ಯೂ ಇಷ್ಟೆಲ್ಲಾ ಸೇವೆ ನೀಡುವ ಈ ಪ್ಲಾಟ್‌ಫಾರ್ಮ್‌ಗಳು ಸಹ ಅನಿರೀಕ್ಷಿತವಾಗಿ ಕೆಲವೊಮ್ಮೆ ಸಂಕಷ್ಟಕ್ಕೆ ಸಿಲುಕುತ್ತವೆ.

ಆಪ್‌ಗಳು

ಹೌದು, ಹಲವು ಆಪ್‌ಗಳು ತಮ್ಮದೇ ಆದ ಸೇವೆ ನೀಡಲು ಎಲ್ಲಾ ಸಮಯದಲ್ಲೂ ನಿರಂತರವಾಗಿ ಕೆಲಸ ಮಾಡುತ್ತವೇ ಇರುತ್ತವೆ. ಅದಾಗ್ಯೂ ಕೆಲವೊಂದು ಸಂದರ್ಭದಲ್ಲಿ ತಾಂತ್ರಿಕ ತೊಂದರೆಗಳು ಹಾಗೂ ಸರ್ವರ್‌ ಸೇವೆಗಳಲ್ಲಿ ಅಡಚಣೆ ಉಂಟಾಗಿ ಬಳಕೆದಾರರ ಸಮೂಹವನ್ನೇ ಒಮ್ಮೆ ನಡುಗಿಸಿಬಿಡುತ್ತವೆ. ಹಾಗೆಯೇ ಯಾವುದಾದರೂ ಒಂದು ಪ್ಲಾಟ್‌ಫಾರ್ಮ್‌ ಸರ್ವರ್‌ ನಿಧಾನವಾದರೆ ಅದರ ವಿರುದ್ಧ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹೋಗಿ ವ್ಯಂಗ್ಯಮಾಡುವ, ಕಿಡಿಕಾರುವ ಹಾಗೂ ಆಕ್ರೋಶ ಹೊರಹಾಕುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ಇವೆ.

ಸೈಟ್ ಡೌನ್

ಈ ಆಪ್‌ ಅಥವಾ ಸೈಟ್ ಡೌನ್ ಆಗಿದೆಯೇ ಅಥವಾ ಇಲ್ಲವೇ ಹಾಗೆಯೇ ಯಾವ ಪ್ರದೇಶಗಳಲ್ಲಿ ಸ್ಥಗಿತಗೊಂಡಿದೆ ಎಂಬುದನ್ನು ಪರಿಶೀಲಿಸಲು ಡೌನ್‌ಡೆಕ್ಟರ್ ಸಹಾಯಕವಾಗಿದ್ದು, ಡೌನ್‌ಡೆಕ್ಟರ್ 2022 ರ 10 ಅತಿದೊಡ್ಡ ಜಾಗತಿಕ ಸ್ಥಗಿತಗಳ ಪಟ್ಟಿಯನ್ನು ಪ್ರಕಟಿಸಿದೆ. ಅವುಗಳ ವಿವರವನ್ನು ಇಲ್ಲಿ ನೀಡಲಾಗಿದೆ ಓದಿರಿ.

ಸ್ಪಾಟಿಫೈ

ಸ್ಪಾಟಿಫೈ

ಸ್ಪಾಟಿಫೈ ಸಂಗೀತ ಪ್ರಿಯರ ಅಚ್ಚುಮೆಚ್ಚಿನ ಆಪ್‌ ಆಗಿದ್ದು, ಇದು ಮಾರ್ಚ್ 8, 2022 ರಂದು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಆ ವೇಳೆ ಮೂರು ಮಿಲಿಯನ್ ವರದಿಗಳು ದಾಖಲಾಗಿದ್ದವು. ಬಳಕೆದಾರರು ತಮ್ಮ ನೆಚ್ಚಿನ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಈ ಆಪ್‌ ಮೂಲಕ ಆಲಿಸಬಹುದಾಗಿದೆ.

ವಾಟ್ಸಾಪ್‌

ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರ ಅಚ್ಚುಮೆಚ್ಚಿನ ಆಪ್‌ ಆಗಿದೆ. ಈ ಆಪ್‌ ಅಕ್ಟೋಬರ್ 25, 2022 ರಂದು ಎರಡು ಗಂಟೆಗಳ ಕಾಲ ಸ್ಥಗಿತಗೊಂಡು ಸುಮಾರು 29 ಮಿಲಿಯನ್ ಜನರು ಈ ಸಮಸ್ಯೆ ವಿರುದ್ಧ ವರದಿ ಮಾಡಿದ್ದರು. ಇದನ್ನು ಸಂದೇಶ, ಫೈಲ್, ವಿಡಿಯೋ ಹಾಗೂ ಆಡಿಯೋ ಕಳುಹಿಸಲು ಹಾಗೂ ಸ್ವೀಕರಿಸಲು ಬಳಕೆ ಮಾಡಲಾಗುತ್ತದೆ. ಇದರಲ್ಲಿ ವಿಡಿಯೋ ಹಾಗೂ ವಾಯ್ಸ್‌ ಕಾಲ್‌ ಸಹ ಮಾಡಬಹುದು.

ಡಿಸ್ಕೋರ್ಡ್

ಡಿಸ್ಕೋರ್ಡ್

ಡಿಸ್ಕೋರ್ಡ್ ಮಾರ್ಚ್ 8, 2022 ರಂದು ಎರಡು ಗಂಟೆಗಳ ಕಾಲ ಕೆಲಸ ಮಾಡಿಲ್ಲ. ಈ ವೇಳೆ 1.1 ಮಿಲಿಯನ್ ವರದಿಗಳು ಕಂಡುಬಂದಿವೆ. ಸ್ಪಾಟಿಫೈ ಸ್ಥಗಿತದ ಸಮಯದಲ್ಲೇ ಈ ಸಾಫ್ಟ್‌ವೇರ್‌ ಕೂಡ ಸ್ಥಗಿತಗೊಂಡಿತ್ತು. ಇದೊಂದು ಮೆಸೆಜಿಂಗ್‌ ಆಪ್‌ ಆಗಿದೆ.

ರೋಬ್ಲಾಕ್ಸ್

ರೋಬ್ಲಾಕ್ಸ್

ರೋಬ್ಲಾಕ್ಸ್ ಗೇಮಿಂಗ್‌ ಆಪ್ ಮೇ, 4 2022 ರಂದು ಹಲವು ಗಂಟೆಗಳ ಕಾಲ ಸ್ಥಗಿತಗೊಂಡು ಬಳಕೆದಾರರಲ್ಲಿ ಆತಂಕ ಉಂಟು ಮಾಡಿತ್ತು. ಈ ಕಾರಣಕ್ಕೆ 700,000 ದೂರುಗಳನ್ನು ಆ ವೇಳೆ ಸ್ವೀಕರಿಸಲಾಗಿದೆ. ವಿಶ್ವದ ಅತ್ಯಂತ ಜನಪ್ರಿಯ ಮಲ್ಟಿಪ್ಲೇಯರ್ ಆಟಗಳಲ್ಲಿ ಇದೂ ಒಂದು.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಜುಲೈ 14, 2022 ರಂದು ಮೂರು ಗಂಟೆಗಳ ಸ್ಥಗಿತಗೊಂಡಿದ್ದು, 600,000 ವರದಿಗಳು ದಾಖಲಾಗಿವೆ. ಆ ಸಮಯದಲ್ಲಿ ಇನ್‌ಸ್ರಾಗ್ರಾಮ್‌ನಲ್ಲಿ ಯಾವುದೇ ಫೋಟೋಗಳನ್ನು ವೀಕ್ಷಣೆ ಮಾಡಲು ಹಾಗೂ ಪ್ರಭಾವಿಗಳ ಪ್ರೊಫೈಲ್‌ ವೀಕ್ಷಿಸಲು ಸಾಧ್ಯವಾಗಿಲ್ಲ.

ಟ್ವಿಟ್ಟರ್‌

ಟ್ವಿಟ್ಟರ್‌

ಟ್ವಿಟ್ಟರ್‌ ಜುಲೈ 14, 2022 ರಂದು ಕೆಲವು ಗಂಟೆಗಳ ಸ್ಥಗಿತಗೊಂಡಿತ್ತು. ಆ ವೇಳೆ 500,000 ವರದಿಗಳು ದಾಖಲಾಗಿವೆ. ಪ್ರಮುಖ ವಿಷಯ ಎಂದರೆ ಇನ್‌ಸ್ರಾಗ್ರಾಮ್‌ ಸ್ಥಗಿತಗೊಂಡ ಕೆಲ ಸಮಯದಲ್ಲೇ ಟ್ವಿಟ್ಟರ್‌ ಸಹ ಸ್ಥಗಿತಗೊಂಡಿತ್ತು.

ಕಾಲ್ ಆಫ್ ಡ್ಯೂಟಿ

ಕಾಲ್ ಆಫ್ ಡ್ಯೂಟಿ

ಕಾಲ್ ಆಫ್ ಡ್ಯೂಟಿ ಆಗಸ್ಟ್ 16, 2022 ರಂದು ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಂಡು ಗೇಮರ್‌ಗಳಿಗೆ ಬೇಸರ ಉಂಟು ಮಾಡಿತ್ತು. ಅಂತೆಯೇ 350,000 ವರದಿಗಳು ಇದರ ವಿರುದ್ಧ ದಾಖಲಾಗಿದ್ದವು. ಇನ್ನು ಈ ಸ್ಥಗಿತ ಯುರೋಪ್ ಮತ್ತು ಪ್ರಪಂಚದ ಕೆಲವು ಭಾಗಗಳಲ್ಲಿ ಮಾತ್ರ ಸಂಭವಿಸಿತ್ತು.

ರೆಡ್ಡಿಟ್

ರೆಡ್ಡಿಟ್

ರೆಡ್ಡಿಟ್ ಆಪ್‌ ಏಪ್ರಿಲ್ 3, 2022 ರಂದು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿದ್ದು, ಡೌನ್‌ಡೆಕ್ಟರ್ ಪ್ರಕಾರ ಸುಮಾರು 300,000 ವರದಿಗಳನ್ನು ದಾಖಲಿಸಲಾಗಿದೆ. ರೆಡ್ಡಿಟ್ ಒಂದು ಅಮೇರಿಕನ್ ಸಾಮಾಜಿಕ ಸುದ್ದಿ ಒಟ್ಟುಗೂಡಿಸುವಿಕೆ, ವಿಷಯ ರೇಟಿಂಗ್ ಮತ್ತು ಚರ್ಚಾ ವೆಬ್‌ಸೈಟ್ ಅಗಿದೆ.

ಟಿಕ್‌ಟಾಕ್

ಟಿಕ್‌ಟಾಕ್

ಜನಪ್ರಿಯ ಆಪ್‌ಗಳಲ್ಲಿ ಒಂದಾದ ಟಿಕ್‌ಟಾಕ್ 15, 2022 ರಂದು ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಅದರಂತೆ 300,000 ವರದಿ ನೋಂದಣಿಯಾಗುದ್ದವು. ಅದರಲ್ಲೂ ಪ್ರಮುಖವಾಗಿ ಯುಎಸ್‌ ಬಳಕೆದಾರರು ಈ ಸ್ಥಗಿತದ ಹೆಚ್ಚಿನ ಪರಿಣಾಮ ಅನುಭವಿಸಿದ್ದಾರೆ.

ಸ್ನ್ಯಾಪ್‌ಚಾಟ್‌

ಸ್ನ್ಯಾಪ್‌ಚಾಟ್‌

ಸ್ನ್ಯಾಪ್‌ಚಾಟ್‌ ಆಪ್‌ ಜುಲೈ 12, 2022 ರಂದು ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪರಿಣಾಮ 300,000 ವರದಿ ದಾಖಲಾಗಿವೆ. ಈ ಮೂಲಕ ಸ್ನ್ಯಾಪ್‌ಚಾಟ್‌ನ ಹೊಸ ಫಿಲ್ಟರ್‌ಗಳೊಂದಿಗೆ ಬಳಕೆದಾರರು ತಮ್ಮ ಚಿತ್ರಗಳನ್ನು ಸೆಂಡ್‌ ಮಾಡಲು ಸಾಧ್ಯವಾಗಿರಲಿಲ್ಲ.

Best Mobiles in India

English summary
whatsapp, instagram , twitter and more apps that have been the target of intense user outrage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X