ಈ ವರ್ಷ ವಾಟ್ಸಾಪ್‌ಗೆ ಯಾವೆಲ್ಲಾ ಫೀಚರ್ಸ್‌ ಸೇರ್ಪಡೆ ಆಗಲಿವೆ ಗೊತ್ತಾ?

|

ಇಂದಿನ ದಿನಗಳಲ್ಲಿ ವಾಟ್ಸಾಪ್‌ ಪ್ರಮುಖ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಬಳಸುವ ಬಹುತೇಕ ಮಂದಿ ವಾಟ್ಸಾಪ್‌ ಅನ್ನು ತಮ್ಮ ಪ್ರಮುಖ ಅಪ್ಲಿಕೇಶನ್‌ ಆಗಿ ಬಳಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ವಾಟ್ಸಾಪ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರ ಮುಂದುವರೆದ ಭಾಗವಾಗಿ ಈ ವರ್ಷವೂ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಹೌದು, ವಾಟ್ಸಾಪ್‌ ಈ ವರ್ಷವೂ ಕೂಡ ಹಲವು ಅಚ್ಚರಿಯ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡೋದು ಪಕ್ಕಾ ಆಗಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ ಹಲವು ಫೀಚರ್ಸ್‌ಗಳು ಈಗಾಗಲೇ ಅಭಿವೃದ್ಧಿಯ ಹಂತದಲ್ಲಿವೆ ಎನ್ನಲಾಗಿದೆ. ಹಾಗಾದ್ರೆ ಈ ವರ್ಷ ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ ಸೇರಲಿರುವ ಹೊಸ ಫೀಚರ್ಸ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕಂಪ್ಯಾನಿಯನ್ ಮೋಡ್

ಕಂಪ್ಯಾನಿಯನ್ ಮೋಡ್

ವಾಟ್ಸಾಪ್‌ ಈ ವರ್ಷ ಪರಿಚಯಿಸಲಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಕಂಪ್ಯಾನಿಯನ್‌ ಮೋಡ್‌ ಕೂಡ ಒಂದಾಗಿದೆ. ಇದು ಬಳಕೆದಾರರಿಗೆ ಒಂದೇ ವಾಟ್ಸಾಪ್‌ ಖಾತೆಯನ್ನು ಹಲವು ಫೋನ್‌ಗಳಲ್ಲಿ ಬಳಸುವುದಕ್ಕೆ ಅವಕಾಶ ನೀಡಲಿದೆ. ಈ ಫೀಚರ್ಸ್‌ನ ವಿಶೇಷತೆ ಎಂದರೆ ಬಳಕೆದಾರರು ಏಕಕಾಲದಲ್ಲಿ ವಾಟ್ಸಾಪ್‌ ಅಕೌಂಟ್‌ ಎರಡಕ್ಕಿಂತ ಹೆಚ್ಚು ಡಿವೈಸ್‌ಗಳಲ್ಲಿ ಬಳಸುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ನಿಮ್ಮ ಪ್ರಾಥಮಿಕ ಮೊಬೈಲ್‌ನಿಂದ ವಾಟ್ಸಾಪ್‌ ಅಕೌಂಟ್‌ ಅನ್ನು ಲಾಗ್‌ಔಟ್‌ ಮಾಡುವ ಅವಶ್ಯಕತೆಯಿಲ್ಲ.

ವ್ಯೂ ಒನ್ಸ್‌ ನೋಟ್‌

ವ್ಯೂ ಒನ್ಸ್‌ ನೋಟ್‌

ವ್ಯೂ ಒನ್ಸ್‌ ನೋಟ್‌ ಫೀಚರ್ಸ್‌ ಕೂಡ ಇದೇ ವರ್ಷ ವಾಟ್ಸಾಪ್‌ ಸೇರಲಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ಕಳುಹಿಸಿದ ಟೆಕ್ಸ್ಟ್‌ ಆಧಾರಿತ ಸಂದೇಶವನ್ನು ಸ್ವೀಕರಿಸುವವರು ತೆರೆದಾಗ ಮತ್ತು ಓದಿದಾಗ ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗಲಿದೆ. ನಿಮ್ಮ ಗೌಪ್ಯ ಮತ್ತು ಪ್ರೈವೆಸಿ ಮಾಹಿತಿಯನ್ನು ಬೇರೆಯವರು ಸಂಗ್ರಹಿಸದಿರಲು ಬಯಸಿದರೆ ಈ ಫೀಚರ್ಸ್‌ ಅನ್ನು ನೀವು ಬಳಸಬಹುದಾಗಿದೆ.

ದಿನಾಂಕದ ಪ್ರಕಾರ ಸಂದೇಶಗಳನ್ನು ಸರ್ಚ್‌ ಮಾಡುವ ಆಯ್ಕೆ

ದಿನಾಂಕದ ಪ್ರಕಾರ ಸಂದೇಶಗಳನ್ನು ಸರ್ಚ್‌ ಮಾಡುವ ಆಯ್ಕೆ

ನೀವು ಯಾವುದಾದರೂ ಪ್ರಮುಖ ಚಾಟ್‌ನಲ್ಲಿ ಸಂದೇಶಗಳನ್ನು ಹುಡುಕುವುದಕ್ಕೆ ಈ ಆಯ್ಕೆಯು ಸೂಕ್ತವಾಗಲಿದೆ. ಇದರಿಂದ ನೀವು ಎಲ್ಲಾ ಸಂದೇಶಗಳನ್ನು ಹುಡುಕುವ ಬದಲು ನಿಖರವಾದ ದಿನಾಂಕವನ್ನು ನಮೂದಿಸಿ ಆ ದಿನದಂದು ಮಾಡಿದ ಸಂದೇಶಗಳನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಪ್ರಸ್ತುತ ಬೀಟಾ ವರ್ಷನ್‌ನಲ್ಲಿ ಈ ಫೀಚರ್ಸ್‌ ಲಭ್ಯವಿದೆ. ಇದರಲ್ಲಿ ಬಳಕೆದಾರರು ಚಾಟ್‌ನಲ್ಲಿ 'ಸರ್ಚ್‌' ಆಯ್ಕೆಯನ್ನು ಆರಿಸಿದ ನಂತರ ತೋರಿಸಲಾಗುವ 'ಕ್ಯಾಲೆಂಡರ್' ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

iOS ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಮೋಡ್‌

iOS ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಮೋಡ್‌

ಈಗಾಗಲೇ ವಾಟ್ಸಾಪ್‌ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ ಆಯ್ಕೆಯನ್ನು ನೀಡಿದೆ. ಆದರೆ ಶೀಘ್ರದಲ್ಲೇ ಐಒಎಸ್‌ ನಲ್ಲಿ ಕೂಡ ಪಿಕ್ಚರ್‌ ಇನ್‌ ಪಿಕ್ಚರ್‌ ಮೋಡ್‌ ಅನ್ನು ನೀಡುವ ಸಾಧ್ಯತೆಯಿದೆ. ಇದರಿಂದ ವಾಟ್ಸಾಪ್‌ ವೀಡಿಯೊ ಕರೆಗಳನ್ನು ಪಿಕ್ಚರ್‌ ಇನ್‌ ಪಿಕ್ಚರ್‌ ಮೋಡ್‌ನಲ್ಲಿ ಆನಂದಿಸಬಹುದಾಗಿದೆ. ಇನ್ನು ಈ ಫೀಚರ್ಸ್‌ನ ವಿಶೇಷತೆ ಎಂದರೆ ನೀವು ವಾಟ್ಸಾಪ್‌ ವೀಡಿಯೋ ಕರೆಯಲ್ಲಿ ಇರುವಾಗಲೂ ಇತರೆ ಅಪ್ಲಿಕೇಶನ್‌ಗಳನ್ನು ತೆರೆಯುವುದಕ್ಕೆ ಅವಕಾಶ ಸಿಗಲಿದೆ.

ಡೆಸ್ಕ್‌ಟಾಪ್‌ನಲ್ಲಿ ಕಾಲ್‌ ಟ್ಯಾಬ್

ಡೆಸ್ಕ್‌ಟಾಪ್‌ನಲ್ಲಿ ಕಾಲ್‌ ಟ್ಯಾಬ್

ವಾಟ್ಸಾಪ್‌ ಈ ವರ್ಷ ಪರಿಚಯಿಸಲಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಡಸ್ಕ್‌ಟಾಪ್‌ ಕಾಲ್‌ ಟ್ಯಾಬ್‌ ಕೂಡ ಒಂದಾಗಿದೆ. ಈ ಫೀಚರ್ಸ್‌ ನಿಮಗೆ ಸಾಕಷ್ಟು ಉಪಯುಕ್ತವಾಗಿದೆ. ಇದರಿಂದ ನೀವು ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಇದ್ದಾಗಲೂ ವಾಟ್ಸಾಪ್‌ ಕರೆ ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ಡೆಸ್ಕ್‌ಟಾಪ್‌ನಲ್ಲಿ ಬಳಕೆದಾರರಿಗೆ ಅಪ್-ಟು-ಡೇಟ್ ಕಾಲ್‌ ಹಿಸ್ಟರಿ ಒದಗಿಸಲು ಕಾಲ್‌ ಲಾಗ್ ರಿಯಲ್‌ ಟೈಂನಲ್ಲಿ ಫೋನ್‌ನೊಂದಿಗೆ ಸಿಂಕ್ ಆಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
WhatsApp is all set to launch a new features in 2023 include a companion mode

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X