Subscribe to Gizbot

ಶೀಘ್ರದಲ್ಲಿಯೇ ವಾಟ್ಸಾಪ್‌ನಲ್ಲಿ ಫೇಸ್‌ಬುಕ್ ಫೀಚರ್ಸ್

Written By:

ಫೇಸ್‌ಬುಕ್ ತಾಣ ವಾಟ್ಸಾಪ್ ಅನ್ನು $19 ಬಿಲಿಯನ್ ಡಾಲರ್‌ಗೆ ಖರೀದಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ವಾಟ್ಸಾಪ್‌ನ ಸ್ವಾಧೀನತೆಯ ನಂತರ ಜುಕರ್‌ಬರ್ಗ್ ಈ ತಾಣವನ್ನು ನಿಧಾನವಾಗಿ ಫೇಸ್‌ಬುಕ್‌ನಂತೆಯೇ ಮಾರ್ಪಡಿಸುತ್ತಿದ್ದಾರೆ.

ಶೀಘ್ರದಲ್ಲಿಯೇ ವಾಟ್ಸಾಪ್‌ನಲ್ಲಿ ಫೇಸ್‌ಬುಕ್ ಫೀಚರ್ಸ್

ತನ್ನ ಸ್ವತಂತ್ರ ಮೆಸೆಂಜರ್ ಅಪ್ಲಿಕೇಶನ್ ಅನ್ನು ವಾಟ್ಸಾಪ್‌ಗೆ ವರ್ಗಾಯಿಸುತ್ತಿರುವ ಈ ತಾಣ ಇದರ ಆವಿಷ್ಕಾರವಾಗಿಯೇ 'ಸೀನ್' ಬ್ಲ್ಯೂಟಿಕ್ ವಾಟ್ಸಾಪ್‌ನಲ್ಲಿ ಕಂಡುಬಂದಿದೆ. ಇನ್ನು ಲೈಕ್ ಮತ್ತು ಮಾರ್ಕ್ ಏಸ್ ರೀಡ್ ಆಯ್ಕೆಗಳನ್ನು ಫೇಸ್‌ಬುಕ್ ವಾಟ್ಸಾಪ್‌ನಲ್ಲಿ ಸೇರಿಸಲಿದೆ ಎಂಬ ವದಂತಿ ಇದೆ.

ಓದಿರಿ: ಫೇಸ್‌ಬುಕ್ ಒಡೆಯನ ಸುತ್ತ ವಿವಾದಗಳ ಹುತ್ತ

ಮುಂಬರುವ ದಿನಗಳಲ್ಲಿ ವಾಟ್ಸಾಪ್ "ಲೈಕ್" ಮತ್ತು "ಮಾರ್ಕ್ ಏಸ್ ಅನ್‌ರೀಡ್" ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ ಎಂದು ವಾಟ್ಸಾಪ್ ಬೀಟಾ ಪರೀಕ್ಷಕ ಪೆಕಾಟ್ಸ್ ತಿಳಿಸಿದ್ದಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇನ್ನು ನೋಡಬೇಕಾಗಿದ್ದು ಫೇಸ್‌ಬುಕ್ ಮೆಸೆಂಜರ್‌ನಲ್ಲಿರುವ ಹೆಬ್ಬೆರಳು ಗುರುತು ಮತ್ತು ಫೋಟೋಗಳು ವಿನಿಮಯಗೊಂಡಂತೆ ಇದು ಗೋಚರಿಸಲಿದೆ ಎಂಬುದು ದೊರೆತಿರುವ ಮಾಹಿತಿಯಾಗಿದೆ.

ಶೀಘ್ರದಲ್ಲಿಯೇ ವಾಟ್ಸಾಪ್‌ನಲ್ಲಿ ಫೇಸ್‌ಬುಕ್ ಫೀಚರ್ಸ್

"ಮಾರ್ಕ್ ಏಸ್ ಅನ್‌ರೀಡ್" ಫೀಚರ್ ಸಂದೇಶವನ್ನು ಓದಿದೆ ಎಂಬುದನ್ನು ಸೂಚಿಸುವ ಬ್ಲ್ಯೂ ಟಿಕ್ಸ್‌ನ ಕಾರ್ಯವನ್ನು ನಿಲ್ಲಿಸಲಿದೆ. ಈ ಫೀಚರ್ ಸಕ್ರಿಯಗೊಂಡಲ್ಲಿ ಬ್ಲ್ಯೂ ಟಿಕ್ಸ್ ಫೀಚರ್ ಮುಂದಿನ ದಿನಗಳಲ್ಲಿ ನಿಷ್ಕ್ರಿಯಗೊಳ್ಳಬಹುದು.

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ಇನ್ನು ಫೇಸ್‌ಬುಕ್‌ನ 'ಲೈಕ್' ಫೀಚರ್ ವಾಟ್ಸಾಪ್‌ಗೆ ಇನ್ನಷ್ಟು ಅತ್ಯುತ್ತಮ ಹಿರಿಮೆಯನ್ನು ನೀಡಲಿದ್ದು ವಾಟ್ಸಾಪ್‌ನಲ್ಲಿ ಈ ಅಳವಡಿಕೆ ಒಂದು ಅನೂಹ್ಯ ದಾಖಲೆಯಾಗಲಿದೆ.

English summary
acebook acquired Whatsapp last year for a whooping price of $19 billion. After the acquisition, Zuckerberg has been slowly been remodelling Whatsapp to the likes of Facebook.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot