ಸದ್ಯದಲ್ಲೇ ವಾಟ್ಸಾಪ್‌ ಸೇರಲಿವೆ ಮತ್ತೆರಡು ಉಪಯುಕ್ತ ಹೊಸ ಫೀಚರ್‌ಗಳು!

|

ವಿಶ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ಬಳಕೆದಾರರ ಈಗಾಗಲೇ ಹತ್ತು ಹಲವು ವಿನೂತನ ಫೀಚರ್ಸ್‌ಗಳನ್ನು ಪರಿಚಯಿಸಿರುವ ಸಂಸ್ಥೆಯು ಇತ್ತೀಚಿಗೆ ಕೆಲವು ಪ್ರೈವೆಸಿ ಫೀಚರ್‌ ಹಾಗೂ ವಿಡಿಯೊ ಕಾಲಿಂಗ್ ಆಯ್ಕೆಯಲ್ಲಿ ಹೊಸ ಆಯ್ಕೆಗಳನ್ನು ಅಳವಡಿಸಿದೆ. ಇದೀಗ ವಾಟ್ಸಾಪ್ ಮತ್ತೊಂದು ಆಕರ್ಷಕ ಫೀಚರ್‌ ಅನ್ನು ಸೇರ್ಪಡೆ ಮಾಡುವ ಕಾರ್ಯದಲ್ಲಿದೆ.

ಜಾಯ್ನ ಮಿಸ್ಡ್‌ ಕಾಲ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ಇದೀಗ ''ಜಾಯ್ನ ಮಿಸ್ಡ್‌ ಕಾಲ್‌''-Join Missed Call ಫೀಚರ್‌ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಆಂಡ್ರಾಯ್ಡ್‌ ಆವೃತ್ತಿ 2.20.203.3 ಬೀಟಾದಲ್ಲಿ "ಜಾಯ್ನ ಮಿಸ್ಡ್‌ ಕಾಲ್‌" ಫೀಚರ್‌ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಹೇಳಲಾಗ್ತಿದೆ. ಗುಂಪು ಕರೆಗಳಿಗೆ ಸುಲಭವಾಗಿ ಸೇರಲು ಅನುಕೂಲವಾಗುವ ಆಯ್ಕೆ ಇದಾಗಿರಲಿದೆ ಎನ್ನಲಾಗಿದೆ.

ಐಓಎಸ್‌

ಆಪಲ್‌ನ ಐಓಎಸ್‌ ಆವೃತ್ತಿಯಲ್ಲಿ ವಾಟ್ಸಾಪ್ ಈಗಾಗಲೇ ಫೇಸ್ ಐಡಿ ಮತ್ತು ಟಚ್ ಐಡಿ ಎರಡನ್ನೂ ಬೆಂಬಲಿಸುತ್ತದೆ. ಅದೇ ರೀತಿ ಈ ಎರಡೂ ವಿಶೇಷ ಫೀಚರ್ಸ್‌ಗಳನ್ನು ಮುಂಬರುವ ಅಪ್‌ಡೇಟ್‌ನಲ್ಲಿ ಆಂಡ್ರಾಯ್ಡ್‌ ಆವೃತ್ತಿಯ ಬಳಕೆದಾರರಿಗೂ ಲಭ್ಯವಾಗಲಿದೆ. ಹಾಗೆಯೇ ಬೀಟಾ ಚಾನಲ್‌ನಲ್ಲಿಯೂ ಸಹ ದೊರೆಯಲಿದೆ ಎನ್ನಲಾಗಿದೆ. WaBetaInfo ವರದಿಯ ಪ್ರಕಾರ, ಮುಂಬರುವ ತಿಂಗಳಿನಲ್ಲಿ ಆಂಡ್ರಾಯ್ಡ್‌ 2.20.203.3 ಬೀಟಾ ಆವೃತ್ತಿಯಲ್ಲಿ ಬಳಕೆದಾರರು ನಿರೀಕ್ಷಿಸುವ ಎರಡು ಕುತೂಹಲಕಾರಿ ಫೀಚರ್ಸ್‌ಗಳು ಸೇರ್ಪಡೆ ಆಗಲಿವೆ ಎಂದು ಹೇಳಲಾಗಿದೆ.

ಫೀಚರ್

ಅವುಗಳಲ್ಲಿ "ಜಾಯ್ನ ಮಿಸ್ಡ್‌ ಕಾಲ್‌''-Join Missed Call" ಫೀಚರ್ ಸಹ ಒಂದಾಗಿರಲಿದೆ. ಇದು ಕರೆ ನಡೆಯುವಾಗ ತಪ್ಪಿದ ಯಾವುದೇ ಗುಂಪು ಕರೆಗಳಿಗೆ ಸೇರಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇದೀಗ, ವಾಟ್ಸಾಪ್ ಬಳಕೆದಾರರು ಈ ಮೊದಲು ಕರೆಯನ್ನು ತಪ್ಪಿಸಿಕೊಂಡ ವ್ಯಕ್ತಿಯನ್ನು ಸೇರಿಸಲು ಬಯಸಿದರೆ ಗುಂಪು ಕರೆಯನ್ನು ಮರುಪ್ರಾರಂಭಿಸಲು ಒತ್ತಾಯಿಸಲಾಗುತ್ತದೆ.

ಫಿಂಗರ್‌ಪ್ರಿಂಟ್

ಹಾಗೆಯೇ ಆಂಡ್ರಾಯ್ಡ್‌ನಲ್ಲಿ ಮುಖ ಗುರುತಿಸುವಿಕೆ-facial recognition ಆಯ್ಕೆ ಲಭ್ಯವಾಗಲಿದೆ. ಫಿಂಗರ್‌ಪ್ರಿಂಟ್ ಗುರುತಿಸುವಿಕೆ-fingerprint recognition ಲಭ್ಯವಿಲ್ಲದಿದ್ದಾಗ ಮುಖ ಗುರುತಿಸುವಿಕೆಯನ್ನು ಬೆಂಬಲಿಸಲು ಆಂಡ್ರಾಯ್ಡ್‌ನಲ್ಲಿ ಬಯೋಮೆಟ್ರಿಕ್ ಅನ್ಲಾಕ್ ವೈಶಿಷ್ಟ್ಯವನ್ನು ಹೆಚ್ಚಿಸಲು ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ. ಫೋನ್‌ಗೆ ಸರಿಯಾದ ಫೇಸ್ ಸೆನ್ಸಾರ್ ಇದ್ದರೆ, ಈ ಫೀಚರ್‌ಅನ್ನು ಬೆಂಬಲಿಸಲಾಗುತ್ತದೆ.

Best Mobiles in India

English summary
The chat app was spotted developing the “Join Missed Call” feature in the version 2.20.203.3 beta for Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X