ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್‌ಗೆ ಬಳಕೆದಾರರು ದಿಲ್‌ಖುಷ್‌!

|

ಸದ್ಯ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್‌ ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಮೆಟಾ ಮಾಲೀಕತ್ವದ ವಾಟ್ಸಾಪ್‌ ಇದೀಗ ಬಳಕೆದಾರರು ಖುಷಿಪಡುವಂತಹ ಮತ್ತೊಂದು ಬಹುಮುಖ್ಯ ಫೀಚರ್‌ ಅನ್ನು ತಿಳಿಸಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಡಿಲೀಟ್ ಮಾಡಿದ ಮೆಸೆಜ್‌ ಮತ್ತೆ ಹಿಂಪಡೆಯಬಹುದಾಗಿದೆ.

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್‌ಗೆ ಬಳಕೆದಾರರು ದಿಲ್‌ಖುಷ್‌!

ಹೌದು, ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ಅಪ್ಲಿಕೇಶನ್ ಈಗ ಹೊಸದಾಗಿ 'ಡಿಲೀಟ್ ಮಾಡಿದ ಮೆಸೆಜ್‌ ರದ್ದುಗೊಳಿಸು' (Undo Deleted Messages) ಪರಿಚಯಿಸುವ ತಯಾರಿಯಲ್ಲಿದೆ. ಕೆಲವು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಈ ಆಯ್ಕೆ ಆರಂಭಿಕ ಪರೀಕ್ಷೆಯಲ್ಲಿ ಕಂಡುಬಂದಿದೆ. ವಾಟ್ಸಾಪ್‌ನ ಈ ಫೀಚರ್‌ ಡಿಲೀಟ್‌ ಮಾಡಿದ ಮೆಸೆಜ್‌ಗಳನ್ನು ಹಿಂಪಡೆಯಲು ಬಳಕೆದಾರರಿಗೆ ಅನುವು ಮಾಡಲಿದೆ.

ಡಿಲೀಟ್ ಮಾಡಿದ ಮೆಸೆಜ್‌ ರದ್ದುಗೊಳಿಸು (Undo) ಆಯ್ಕೆ:
ಹೊಸ ಫೀಚರ್‌ ಬಳಕೆದಾರರಿಗೆ ತಪ್ಪಾಗಿ ಡಿಲೀಟ್ ಮಾಡಿದ ಮೆಸೆಜ್‌ಗಳನ್ನು ಮತ್ತೆ ಹಿಂಪಡೆಯಲು ಅನುಮತಿಸುತ್ತದೆ ಎಂದು ವರದಿಯಾಗಿದೆ. 'Undo' ಬಟನ್ ಸಂಕ್ಷಿಪ್ತವಾಗಿ ಪರದೆಯ ಕೆಳಗಿನ ತುದಿಯಲ್ಲಿ ಪಾಪ್ ಅಪ್ ಆಗುತ್ತದೆ. ಈ ಆಯ್ಕೆಯು ಡಿಲೀಟ್ ಮಾಡಿದ ಮೆಸೆಜ್‌ಗಳನ್ನು ಹಿಂಪಡೆಯಲು ಬಳಕೆದಾರರನ್ನು ಅನುಮತಿಸುತ್ತದೆ.

ವಾಟ್ಸಾಪ್ ಅಪ್‌ಡೇಟ್ ಟ್ರ್ಯಾಕರ್ Wabetanifo ಪ್ರಕಾರ, ವಾಟ್ಸಾಪ್ ಬಳಕೆದಾರರು ಬದಲಾವಣೆಗಳನ್ನು ಮಾಡಲು ಸೀಮಿತ ಸಮಯವನ್ನು ಹೊಂದಿರುತ್ತಾರೆ. ಈ ಫೀಚರ್ 2.22.13.5 ಎಂದು ಗುರುತಿಸಲಾದ ಆಂಡ್ರಾಯ್ಡ್‌ ಬೀಟಾ ಆವೃತ್ತಿಗೆ ವಾಟ್ಸಾಪ್ ನೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್‌ಗೆ ಬಳಕೆದಾರರು ದಿಲ್‌ಖುಷ್‌!

ಈ ಹೊಸ ಫೀಚರ್ ಕಾರ್ಯವೇನು?
ವಾಟ್ಸಾಪ್‌ನ ಈ ಹೊಸ ಆಯ್ಕೆಯು ನೀವು 'ಸೆಂಡ್' ಆಯ್ಕೆ ಅನ್ನು ಕ್ಲಿಕ್ ಮಾಡಿದಾಗ, ಜಿ ಮೇಲ್‌ ನಲ್ಲಿನ 'Undo' ಫೀಚರ್‌ನಂತೆಯೇ ಕೆಲಸ ಮಾಡಲಿದೆ. ಪೂರ್ಣಗೊಂಡ ಮೇಲ್ ಅನ್ನು ಹಿಂತೆಗೆದುಕೊಳ್ಳಲು ನಿಮಗೆ ಕೆಲವು ಹೆಚ್ಚುವರಿ ಸೆಕೆಂಡುಗಳನ್ನು ಅನುಮತಿಸುತ್ತದೆ. ಇನ್ನು ಟೆಲಿಗ್ರಾಮ್‌ ಮೆಸೆಜಿಂಗ್ ಆಪ್‌ನಲ್ಲಿ ಈಗಾಗಲೇ ಈ ರೀತಿಯ ಫೀಚರ್‌ ಲಭ್ಯವಿದೆ. ಇದೀಗ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡ ವಾಟ್ಸಾಪ್‌ನಲ್ಲಿ ಕಾಣಿಸಿಕೊಳ್ಳಲಿದೆ.

Undo ಆಯ್ಕೆ ಸದ್ಯದಲ್ಲೇ ಸೇರ್ಪಡೆ:
Undo ಆಯ್ಕೆ ಬಟನ್ ಮತ್ತು ಹೊಸ ಚಾಟ್ ಫಿಲ್ಟರ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಈ ಅಚ್ಚರಿಯ ಫೀಚರ್‌ ಬಳಕೆದಾರರಿಗೆ ಯಾವಾಗ ಮುಕ್ತ ಆಗಲಿದೆ ಎಂಬುದು ಇನ್ನೂ ಅಸ್ಪಷ್ಟ ಆಗಿದೆ. ಈ ಕುರಿತಂತೆ ವಾಟ್ಸಾಪ್ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ.

Best Mobiles in India

English summary
WhatsApp may soon add an 'undo' button for deleted messages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X