ವಾಟ್ಸಾಪ್‌ನಲ್ಲಿ ಈಗ ಹೊಸ ಫೀಚರ್; 2GB ಫೈಲ್‌ ಸಹ ಶೇರ್ ಮಾಡಬಹುದು!

|

ಮೆಟಾ ಮಾಲೀಕತ್ವದ ವಾಟ್ಸಾಪ್‌ ಇದೀಗ ಮಹತ್ತರ ಅಪ್‌ಡೇಟ್‌ ಅನ್ನು ಮಾಡಿದೆ. ಬಳಕೆದಾರರು ವಾಟ್ಸಾಪ್‌ನಲ್ಲಿ 2GB ಗಾತ್ರದ ಫೈಲ್‌ಗಳನ್ನು ಕಳುಹಿಸುವ ಸಾಮರ್ಥ್ಯದ ಆಯ್ಕೆಯನ್ನು ತಂದಿದೆ. ವಾಟ್ಸಾಪ್‌ನ ಫೈಲ್‌ಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿರುತ್ತದೆ. ಈ ಮೊದಲು ಬಳಕೆದಾರರಿಗೆ ಒಂದು ಸಮಯದಲ್ಲಿ 100MB ಅನ್ನು ಮಾತ್ರ ವರ್ಗಾಯಿಸಲು ಅವಕಾಶ ಮಾಡಿಕೊಟ್ಟಿತು.

ವಾಟ್ಸಾಪ್‌ನಲ್ಲಿ ಈಗ ಹೊಸ ಫೀಚರ್; 2GB ಫೈಲ್‌ ಸಹ ಶೇರ್ ಮಾಡಬಹುದು!

ವಾಟ್ಸಾಪ್‌ ಬಳಕೆದಾರರು 100MB ಗಾತ್ರದ ಫೈಲ್ ಅನ್ನು ಮಾತ್ರ ಕಳುಹಿಸಬಹುದು. ಹೀಗಾಗಿ, ಬಳಕೆದಾರರು ತಮ್ಮ ಸ್ನೇಹಿತರು/ ಕುಟುಂಬ/ ಸಹೋದ್ಯೋಗಿಗಳಿಗೆ ದೊಡ್ಡ ಫೈಲ್‌ಗಳನ್ನು ಕಳುಹಿಸಲು ಇತರ ಅಪ್ಲಿಕೇಶನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಆಶ್ರಯಿಸಬೇಕಾಗಿತ್ತು. ಆದರೆ ಈಗ ಇಲ್ಲ; ವಾಟ್ಸಾಪ್‌ ಅಂತಿಮವಾಗಿ ಬಳಕೆದಾರರು ತಮ್ಮ ಸಂಪರ್ಕಗಳಿಗೆ 2GB ಗಾತ್ರದ ಫೈಲ್‌ಗಳನ್ನು ಕಳುಹಿಸುವ ಸಾಮರ್ಥ್ಯವನ್ನು ತಂದಿದೆ.

ವಾಟ್ಸಾಪ್‌ನಲ್ಲಿ ಫೈಲ್ ಅನ್ನು ಹಂಚಿಕೊಳ್ಳಲು 100 MB ಗಾತ್ರದ ಮಿತಿಯನ್ನು ಈಗ 2GB ಗೆ ಬದಲಾಯಿಸಲಾಗಿದೆ ಎಂದು ಕಂಪನಿ ಹೇಳಿದೆ. ಇದು ಬಳಕೆದಾರರು ತಮ್ಮ ದೈನಂದಿನ ಸಂವಹನಕ್ಕಾಗಿ ವಾಟ್ಸಾಪ್‌ ನಿಯಂತ್ರಿಸುವ ಎಲ್ಲಾ ಸಣ್ಣ ವ್ಯಾಪಾರಗಳು ಮತ್ತು ಶೈಕ್ಷಣಿಕ ಗುಂಪುಗಳಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಬಳಕೆದಾರರು ದೊಡ್ಡ ಗಾತ್ರದ ಫೈಲ್ ಅನ್ನು ಅಪ್‌ಲೋಡ್ ಮಾಡಲು ಅಥವಾ ಡೌನ್‌ಲೋಡ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಅಂದಾಜು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಅಪ್ಲಿಕೇಶನ್ ಕೌಂಟರ್ ಅನ್ನು ಪ್ರದರ್ಶಿಸುತ್ತದೆ ಎಂದು ಕಂಪನಿ ತಿಳಿಸಿದೆ.

ವಾಟ್ಸಾಪ್‌ನಲ್ಲಿ ಈಗ ಹೊಸ ಫೀಚರ್; 2GB ಫೈಲ್‌ ಸಹ ಶೇರ್ ಮಾಡಬಹುದು!

ಇದಲ್ಲದೆ, ಸಂವಹನಕ್ಕಾಗಿ ಒಂದೇ ಗುಂಪಿನಲ್ಲಿ 512 ಬಳಕೆದಾರರನ್ನು ಸೇರಿಸುವ ಸಾಮರ್ಥ್ಯವನ್ನು ಬಳಕೆದಾರರಿಗೆ ಪರಿಚಯಿಸಲಿದೆ ಎಂದು ವಾಟ್ಸಾಪ್‌ ಹೇಳಿದೆ. ಹಾಗೆಯೇ ನೂತನವಾಗಿ ಎಮೋಜಿ ರಿಯಾಕ್ಷನ್ ಆಯ್ಕೆ ಈಗ ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ ಎಂದು ಕಂಪನಿಯು ಘೋಷಿಸಿದೆ. ಈ ಹೊಸ ಫೀಚರ್ಸ್‌ಗಳು ಎಲ್ಲರಿಗೂ ಒಂದೇ ಸಮಯದಲ್ಲಿ ಬರುವುದಿಲ್ಲ ಎಂಬುದನ್ನು ಗಮನಿಸಿ. ಯಾವ ಪ್ರದೇಶದ ಬಳಕೆದಾರರು ಮೊದಲು ನವೀಕರಣಗಳನ್ನು ಪಡೆಯುತ್ತಾರೆ ಎಂಬುದರ ಕುರಿತು ವಾಟ್ಸಾಪ್‌ ಕಾಮೆಂಟ್ ಮಾಡಿಲ್ಲ.

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಸೇರಿಸುತ್ತಿದೆ ಮತ್ತು ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಅಪ್ಲಿಕೇಶನ್‌ನ ವಿನ್ಯಾಸವನ್ನು ಬದಲಾಯಿಸುತ್ತಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್‌ಗಾಗಿ ನೀವು ಈ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಲು, ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಿ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಗಾಗಿ, ಅಪ್ಲಿಕೇಶನ್ ಅಪ್‌ಡೇಟ್ ರೋಲ್‌ಔಟ್ ಸಮಯ ಮತ್ತು ಆವೃತ್ತಿಗಳು ಭಿನ್ನವಾಗಿರುತ್ತವೆ.

Best Mobiles in India

English summary
WhatsApp Now Allows File Transfer Up to 2GB in Size: Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X