ವಾಟ್ಸಪ್‌ನಲ್ಲಿ 'ಡಿಜಿಟಲ್ ಪೇಮೆಂಟ್' ಸೇವೆ!
ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ 'ವಾಟ್ಸಪ್' ಅಪ್ಲಿಕೇಶನ್, ಈಗಾಗಲೇ ಬಳಕೆದಾರರಿಗೆ ಸಾಕಷ್ಟು ಉಪಯುಕ್ತ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಮತ್ತೆ ಅದೇ ಮಾರ್ಗದಲ್ಲಿ ನಡೆದಿರುವ ಕಂಪನಿಯು ಹಲವು ನೂತನ ಫೀಚರ್ಸ್‌ಗಳನ್ನು ಘೋಷಿಸಿದೆ. ಜೊತೆಗೆ ಶೀಘ್ರದಲ್ಲೇ ಬಳಕೆದಾರರಿಗೆ ಬಿಗ್ ಸರ್‌ಪ್ರೈಸ್‌ವೊಂದನ್ನು ನೀಡುವ ಸಜ್ಜಾಗಿದೆ. ಅದುವೇ 'ವಾಟ್ಸಪ್ ಪೇಮೆಂಟ್' ಸೇವೆ.

ಹೌದು, ಫೇಸ್‌ಬುಕ್ ಒಡೆತನದ ವಾಟ್ಸಪ್ ಆಪ್ ಇದೀಗ ಹೊಸದಾಗಿ 'ಪೇಮೆಂಟ್ ಸೇವೆ'ಯನ್ನು ಅಳವಡಿಸಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದು, ಅದೀಗ ಅಂತಿಮಘಟ್ಟಕ್ಕೆ ಬಂದು ನಿಂತಿದೆ. ಆದರೆ, ಇತ್ತೀಚಿಗೆ ವಾಟ್ಸಪ್‌ನಲ್ಲಿ ಬಳಕೆದಾರರ ಪ್ರೈವೆಸಿಯಲ್ಲಿ ದೋಷಗಳು ಕಂಡುಬಂದಿದ್ದು, ಹೀಗಾಗಿ ಭಾರತದಲ್ಲಿ ವಾಟ್ಸಪ್ ಪೇಮೆಂಟ್ ಸೇವೆಗೆ ಸದ್ಯ ಭಾರತ ಸರ್ಕಾರದ ಪರವಾನಿಗೆ ನೀಡಿಲ್ಲ. ವಾಟ್ಸಪ್ ಸರ್ಕಾರದ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದೆ.

ಭಾರತದಲ್ಲಿ ಹಲವಾರು ಇ ಪೇಮೆಂಟ್ ಆಪ್ಸ್‌ಗಳು ಜನಪ್ರಿಯತೆಯನ್ನು ಗಳಿಸಿದ್ದು, ಹಾಗೆಯೇ ಪೈಪೋಟಿಯ ವಾತಾವಣರವು ಸೃಷ್ಠಿಯಾಗಿದೆ. ಈಗ ವಾಟ್ಸಪ್ ಸಹ ಪೇಮೆಂಟ್ ಸೇವೆ ಆರಂಭಿಸುವ ಮೂಲಕ ಪೈಪೋಟಿಗೆ ಅಣಿಯಾಗುತ್ತಿದೆ. ಹಾಗಾದರೇ ವಾಟ್ಸಪ್ ಹೊಸದಾಗಿ ಸೇರಿಸಲು ಸಿದ್ಧವಾಗಿರುವ ಪೇಮೆಂಟ್ ಫೀಚರ್ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಪೇಮೆಂಟ್ ಆಪ್‌ಗಳ ಜನಪ್ರಿಯತೆ
ಸದ್ಯ ಭಾರತದಲ್ಲಿ ಕ್ಯಾಶ್‌ಲೆಸ್ ವ್ಯವಹಾರ ಹೆಚ್ಚಾಗುತ್ತಲೇ ಸಾಗಿದ್ದು, ಈ ನಿಟ್ಟಿನಲ್ಲಿ ಇ-ಪೇಮೆಂಟ್ ಆಪ್ಸ್‌ಗಳ ಬೇಡಿಕೆ ಸಹ ದ್ವಿಗುಣಗೊಳ್ಳುತ್ತಲಿದೆ. ಇದನ್ನು ಮನಗಂಡಿರುವ ವಾಟ್ಸಪ್ ಅಪ್ಲಿಕೇಶನ್ ನೂತನವಾಗಿ 'ಪೇಮೆಂಟ್ ಫೀಚರ್' ಅನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಈ ಮೂಲಕ ಬಹುಬೇಗನೆ ವಾಟ್ಸಪ್ 'ಪೇಮೆಂಟ್' ಫೀಚರ್‌ನಲ್ಲಿ ಗುರುತಿಸಿಕೊಳ್ಳುವ ಆಕಾಂಕ್ಷೆ ಹೊಂದಿದೆ.

ಪೇಮೆಂಟ್ ಆಪ್‌ಗಳ ಪೈಪೋಟಿ
ಭಾರತದಲ್ಲಿ ಈಗಾಗಲೇ ಅನೇಕ ಡಿಜಿಟಲ್ ಪೇಮೆಂಟ್ ಆಪ್ಸ್‌ಗಳು ಲಗ್ಗೆ ಇಟ್ಟಿದ್ದು, ಎಲ್ಲ ಆಪ್‌ಗಳು ಬಳಕೆದಾರರಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡಿವೆ. ಅವುಗಳಲ್ಲಿ ಗೂಗಲ್ ಪೇ, ಫೋನ್‌ಪೇ, ಪೇಟಿಎಮ್, ಅಮೆಜಾನ್ ಪೇ, ಭಾರತ್ ಪೇ, ಆಪ್‌ಗಳು ಭಾರಿ ಜನಪ್ರಿಯತೆ ಪಡೆದುಕೊಂಡಿವೆ. ಇದೀಗ ವಾಟ್ಸಪ್ ಈ ಆಪ್ಸ್‌ಗಳೊಂದಿಗೆ ನೇರ ಪೈಪೋಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಗ್ರೀನ್ ಸಿಗ್ನಲ್ ಸಿಕ್ಕಿಲ್ಲ
ಫೇಸ್‌ಬುಕ್ ಒಡೆತನದ ವಾಟ್ಸಪ್, 'ಪೇಮೆಂಟ್ ಸೇವೆ'ಗೆ ಸಜ್ಜಾಗಿದ್ದು ಆದರೆ ಭಾರತ ಸರ್ಕಾರದ ಹಸಿರು ನಿಶಾನೆಗಾಗಿ ಕಾಯುತ್ತಿದೆ. ಇತ್ತೀಚಿಗೆ ವಾಟ್ಸಪ್‌ನಲ್ಲಿ ಭದ್ರತಾ ಲೋಪದೋಷಗಳು ಕಾಣಿಸಿಕೊಂಡಿದ್ದು, ಹೀಗಾಗಿ ಗ್ರಾಹಕರ ಪೇಮೆಂಟ್ ಕುರಿತಾದ ಡೇಟಾ ಮಾಹಿತಿಗಳನ್ನು ಭಾರತದಲ್ಲಿಯೇ ಸ್ಟೋರ್ ಮಾಡಬೇಕು ಎನ್ನುವ ಅಂಶಗಳನ್ನು ವಾಟ್ಸಪ್‌ಗೆ ಸರ್ಕಾರ ತಿಳಿಸಿದೆ.

ಯಶಸ್ಸಿನ ನಿರೀಕ್ಷೆ
ಪ್ರಸ್ತುತ ಸ್ಮಾರ್ಟ್‌ಫೋನ್ ಮೂಲಕವೇ ಹಣ ಪಾವತಿಸುವ ಪ್ರಕ್ರಿಯೆ ವ್ಯಾಪಕವಾಗಿದ್ದು, ಹೀಗಾಗಿ ವಾಟ್ಸಪ್ ಪೇಮೆಂಟ್ ಸೇವೆ ಆರಂಭಿಸಲು ಯೋಜಿಸಿದೆ. ಅಷ್ಟಕ್ಕೂ ವಾಟ್ಸಪ್ ಪ್ರತಿದಿನ ಸುಮಾರು 300 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹೀಗಾಗಿ ಕಂಪನಿಯ ಹೊಸ 'ಪೇಮೆಂಟ್ ಸೇವೆ' ಬಹುಬೇಗನೆ ಜನಪ್ರಿಯವಾಗಲಿದೆ ಎನ್ನುವ ವಿಶ್ವಾಸವನ್ನು ವಾಟ್ಸಪ್ ಹೊಂದಿದೆ.


Click it and Unblock the Notifications








