ಕೊನೆಗೂ ವಾಟ್ಸಾಪ್‌ನಲ್ಲಿ ಸೇರಿತು ಈ ಬಹುನಿರೀಕ್ಷಿತ ಫೀಚರ್!

|

ಫೇಸ್‌ಬುಕ್ ಒಡೆತನದ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್ ಆಪ್‌ ವಾಟ್ಸಾಪ್ ಬಹುನಿರೀಕ್ಷಿತ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕ್‌ಅಪ್‌ಗಳನ್ನು ಪರಿಚಯಿಸಿದೆ. ಈ ಸೇವೆಯು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ಮಾಡಿದೆ. ಈ ಬಗ್ಗೆ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.

ಫೇಸ್‌ಬುಕ್

ಈ ಹೊಸ ಫೀಚರ್ ಬಳಕೆದಾರರ ಅವರ ಡಿಜಿಟಲ್ ಸಂಭಾಷಣೆಗಳಿಗೆ ಹೆಚ್ಚಿನ ಗೌಪ್ಯತೆ ಮತ್ತು ಭದ್ರತೆಯನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ಸಂಪೂರ್ಣ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ ಅನುಭವವನ್ನು ಒದಗಿಸುವ ಅಂತಿಮ ಹಂತವನ್ನು ನಾವು ಪೂರ್ಣಗೊಳಿಸಿದ್ದೇವೆ ಎಂದು ಫೇಸ್‌ಬುಕ್ ಅಪ್ಲಿಕೇಶನ್ ಹೇಳಿದೆ.

ಸಕ್ರಿಯ

ಬಳಕೆದಾರರು ಪಾಸ್‌ವರ್ಡ್‌ ಅಥವಾ 64-ಅಂಕಿಯ ಎನ್‌ಕ್ರಿಪ್ಶನ್ ಕೀ ಮೂಲಕ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕ್ ಅಪ್ ಚಾಟ್‌ಗಳನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುತ್ತದೆ ಎಂದು ವಾಟ್ಸಾಪ್‌ ಹೇಳಿದೆ. ಹಾಗಾದರೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕ್‌ಅಪ್‌ ಸಕ್ರಿಯ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕ್‌ಅಪ್‌ ಸಕ್ರಿಯ ಈ ಕ್ರಮ ಫಾಲೋ ಮಾಡಿ:

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕ್‌ಅಪ್‌ ಸಕ್ರಿಯ ಈ ಕ್ರಮ ಫಾಲೋ ಮಾಡಿ:

* ಸೆಟ್ಟಿಂಗ್‌ಗಳನ್ನು ತೆರೆಯಿರಿ.

* ಟ್ಯಾಪ್ ಚಾಟ್ಸ್ > ಚಾಟ್ ಬ್ಯಾಕಪ್ > ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್.

* Continue ಆಯ್ಕೆ ಟ್ಯಾಪ್ ಮಾಡಿ, ನಂತರ ಪಾಸ್‌ವರ್ಡ್‌ ಅಥವಾ ಕೀಲಿಯನ್ನು ರಚಿಸಲು ಸೂಚನೆಗಳನ್ನು ಅನುಸರಿಸಿ.

* Done ಆಯ್ಕೆ ಟ್ಯಾಪ್ ಮಾಡಿ, ಮತ್ತು ನಿಮ್ಮ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕ್‌ಅಪ್ ಅನ್ನು ತಯಾರಿಸಲು ವಾಟ್ಸಾಪ್‌ ಗಾಗಿ ಕಾಯಿರಿ.

ಗಮನಿಸಬೇಕಾದ ಅಂಶ

ಗಮನಿಸಬೇಕಾದ ಅಂಶ

ಬಳಕೆದಾರರು ವಾಟ್ಸಾಪ್‌ ಚಾಟ್‌ಗಳನ್ನು ಕಳೆದುಕೊಂಡರೆ ಮತ್ತು ನಿಮ್ಮ ಪಾಸ್‌ವರ್ಡ್ ಅಥವಾ ಕೀಲಿಯನ್ನು ಮರೆತಲ್ಲಿ ಬ್ಯಾಕ್‌ಅಪ್ ಅನ್ನು ರೀ ಇನ್‌ಸ್ಟಾಲ್‌ ಮಾಡಲು ಸಾಧ್ಯವಾಗುವುದಿಲ್ಲ. ವಾಟ್ಸಾಪ್‌ ಬಳಕೆದಾರರ ಪಾಸ್‌ವರ್ಡ್ ಅನ್ನು ರೀಸೆಟ್‌ ಮಾಡಲು ಅಥವಾ ನಿಮ್ಮ ಬ್ಯಾಕ್‌ಅಪ್ ಅನ್ನು ರೀ ಇನ್‌ಸ್ಟಾಲ್‌ ಮಾಡಲು ಸಾಧ್ಯವಿಲ್ಲ.

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕ್‌ಅಪ್ ಆಫ್ ಮಾಡಲು ಹೀಗೆ ಮಾಡಿ:

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕ್‌ಅಪ್ ಆಫ್ ಮಾಡಲು ಹೀಗೆ ಮಾಡಿ:

* ಸೆಟ್ಟಿಂಗ್‌ಗಳನ್ನು ತೆರೆಯಿರಿ.

* ಚಾಟ್ಸ್ > ಚಾಟ್ ಬ್ಯಾಕ್‌ಅಪ್ > ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕ್‌ಅಪ್ ಅನ್ನು ಟ್ಯಾಪ್ ಮಾಡಿ.

* ಆಫ್ ಮಾಡಿ ಟ್ಯಾಪ್ ಮಾಡಿ.

* ನಿಮ್ಮ ಪಾಸ್‌ವರ್ಡ್ ನಮೂದಿಸಿ.

* ನೀವು ಎನ್‌ಕ್ರಿಪ್ಟ್ ಮಾಡಿದ ಬ್ಯಾಕ್‌ಅಪ್ ಅನ್ನು ಆಫ್ ಮಾಡಲು ಬಯಸುವುದನ್ನು ಖಚಿತಪಡಿಸಿ.

ಸದ್ಯದಲ್ಲೇ 'ವಾಟ್ಸಾಪ್‌'ನಲ್ಲಿ ಕಾಣಿಸಲಿವೆ ನಿಮ್ಮನ್ನು ಚಕಿತಗೊಳಿಸುವ ಫೀಚರ್ಸ್

ಸದ್ಯದಲ್ಲೇ 'ವಾಟ್ಸಾಪ್‌'ನಲ್ಲಿ ಕಾಣಿಸಲಿವೆ ನಿಮ್ಮನ್ನು ಚಕಿತಗೊಳಿಸುವ ಫೀಚರ್ಸ್

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ ತನ್ನ ಮುಂದಿನ ಅಪ್‌ಡೇಟ್‌ನಲ್ಲಿ ಕೆಲವು ಹೊಸ ಫೀಚರ್ಸ್‌ ಪರಿಚಯಿಸಲಿದೆ. ಅವುಗಳೆಂದರೇ ಮ್ಯಾನೇಜ್ ಚಾಟ್ಸ್‌ ಬ್ಯಾಕ್‌ಅಪ್ ಸೈಜ್‌(Manage Chats Backup Size), ಕಮ್ಯೂನಿಟಿ ಫೀಚರ್ ಫಾರ್ ಗ್ರೂಪ್ ಕನ್ವರ್ಸೇಶನ್ (Community Feature for Group Conversations) ಎನ್ನಲಾಗಿದೆ. ಸದ್ಯ ವಾಟ್ಸಾಪ್‌ನ ಈ ಫೀಚರ್ಸ್‌ಗಳು ಪ್ರಾಯೋಗಿಕ ಹಂತದಲ್ಲಿವೆ ಎಂದು ಹೇಳಲಾಗಿದೆ.

ಟ್ರ್ಯಾಕರ್

ವಾಟ್ಸಾಪ್‌ ಬೀಟಾ ಟ್ರ್ಯಾಕರ್ WABetaInfo ವರದಿಯ ಪ್ರಕಾರ, ಬಳಕೆದಾರರು ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಅನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡುವ ಮೊದಲು ತಮ್ಮ ಬ್ಯಾಕ್‌ಅಪ್ ಗಾತ್ರವನ್ನು ನಿರ್ವಹಿಸಲು ಅನುಮತಿಸಲು ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. ಹಾಗೆಯೇ 'ಕಮ್ಯೂನಿಟಿ ಫೀಚರ್ ಫಾರ್ ಗ್ರೂಪ್ ಕನ್ವರ್ಸೇಶನ್' ಆಯ್ಕೆಯು ಬಳಕೆದಾರರಿಗೆ ಉತ್ತಮ ಗ್ರೂಪ್‌ ಸಂಭಾಷಣೆಯ ಅನುಭವವನ್ನು ಒದಗಿಸಲು ಸಹಾಯ ಮಾಡಲು ವಾಟ್ಸಾಪ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ವಾಟ್ಸಾಪ್‌ನ ಬರಲಿರುವ ಈ ಹೊಸ ಫೀಚರ್ಸ್‌ಗಳು ಆರಂಭದಲ್ಲಿ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಆಡಿಯೋ

ವಾಟ್ಸಾಪ್‌ನ ನೂತನ ಆಂಡ್ರಾಯ್ಡ್ ಬೀಟಾ 2.21.21.7 ಅಪ್‌ಡೇಟ್ ನ ಕುರಿತಾಗಿ WABetaInfo ಸೈಟ್ ಕೆಲವು ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಿದೆ. ವಾಟ್ಸಾಪ್‌ನಲ್ಲಿ ಕಾಣಿಸಿಕೊಲ್ಳುವ ನೂತನ ಆಯ್ಕೆಯು ಬಳಕೆದಾರರು ತಮ್ಮ ಬ್ಯಾಕ್‌ಅಪ್‌ಗಳಿಂದ ಫೋಟೋಗಳು, ಆಡಿಯೋ ಅಥವಾ ಡಾಕ್ಯುಮೆಂಟ್‌ಗಳನ್ನು ಹೊರತುಪಡಿಸಿ ತಮ್ಮ ಬ್ಯಾಕ್‌ಅಪ್ ಗಾತ್ರ ನಿರ್ವಹಿಸುವುದು ಎಂಬುದನ್ನು ಸೂಚಿಸುತ್ತದೆ.

ಆಗಲಿದೆ

ಇನ್ನು WABetaInfo ಸೈಟ್‌ನ ಮಾಹಿತಿ ಪ್ರಕಾರ 'ಕಮ್ಯೂನಿಟಿ ಫೀಚರ್ ಫಾರ್ ಗ್ರೂಪ್ ಕನ್ವರ್ಸೇಶನ್' ಫೀಚರ್ ಬಳಕೆದಾರರಿಗೆ ತಮ್ಮ ವಾಟ್ಸಾಪ್‌ ಗ್ರೂಪ್‌ಗಳನ್ನು ಅತ್ಯುತ್ತಮವಾಗಿ ಸಂಘಟಿಸಲು ಒಂದು ವೇದಿಕೆ ಆಗಲಿದೆ ಎಂದು ತಿಳಿಸಿದೆ. ಈ ಆಯ್ಕೆಯು ಈಗಾಗಲೇ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಪ್ಲಾಟ್‌ಫಾರ್ಮ್ ಗಳಲ್ಲಿ ಲಭ್ಯ ಇರುವ ಕಮ್ಯೂನಿಟಿ ಆಯ್ಕೆಯಂತೆ ಇರುವುದಿಲ್ಲ. ಇದೊಂದು ಭಿನ್ನ ಮಾದರಿಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

Most Read Articles
Best Mobiles in India

English summary
WhatsApp Roll Out End-To-End Encrypted Backups For iOS, Android: How To Enable.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X