ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್ಸ್‌; ಇದು ಎಲ್ಲರಿಗೂ ಅನುಕೂಲ!

|

ವಾಟ್ಸಾಪ್‌ನಲ್ಲಿ ನಿರಂತರವಾಗಿ ಸುಧಾರಿತ ಅಪ್‌ಡೇಟ್‌ ಪ್ರಕ್ರಿಯೆಗಳು ಜರುಗುತ್ತಲೇ ಇರುತ್ತವೆ. ಇದರ ಭಾಗವಾಗಿಯೇ ಬಳಕೆದಾರರು ವಾಟ್ಸಾಪ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಬಳಸಬಹುದಾಗಿದ್ದು, ಇದರ ನಡುವೆ ಚಾಟ್‌ಗಳನ್ನು ಪಿನ್‌ ಮಾಡಬಹುದಾದ ಆಯ್ಕೆ, ಬ್ಯಾಕಪ್‌ ಸಂಬಂಧದ ಹೊಸ ಫೀಚರ್ಸ್‌ ನೀಡುತ್ತಿರುವುದು ಮತ್ತಷ್ಟು ಅನುಕೂಲವಾಗಿದೆ. ಇದರ ನಡುವೆ ಹೊಸ ಶಾರ್ಟ್‌ ಕಟ್‌ ಸೌಲಭ್ಯವೊಂದನ್ನು ನೀಡಲು ವಾಟ್ಸಾಪ್‌ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್ಸ್‌; ಇದು ಎಲ್ಲರಿಗೂ ಅನುಕೂಲ!

ಹೌದು, ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ಹೊಸ 'ಬ್ಲಾಕ್' ಶಾರ್ಟ್‌ಕಟ್ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಳಕೆದಾರರು ನೋಟಿಫಿಕೇಶನ್ ಒಳಗೆ ಬ್ಲಾಕ್ ಶಾರ್ಟ್‌ಕಟ್ ಫೀಚರ್ಸ್‌ ಲಭ್ಯವಾಗಲಿದೆ. ಹಾಗಿದ್ರೆ, ಇದು ಯಾವಾಗ ಲಭ್ಯವಾಗಲಿದೆ. ಇದರಿಂದ ಅಗುವ ಪ್ರಯೋಜನ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏನಿದು 'ಬ್ಲಾಕ್' ಶಾರ್ಟ್‌ಕಟ್ ಫೀಚರ್ಸ್?
ವಾಟ್ಸಾಪ್‌ ಈ ಹೊಸ ಬ್ಲಾಕ್ ಶಾರ್ಟ್‌ಕಟ್ ಅನ್ನು ನೋಟಿಫಿಕೇಶನ್‌ ವಿಭಾಗದಲ್ಲಿ ಪರಿಚಯಿಸಲು ಯೋಜಿಸುತ್ತಿದ್ದು, ಬಳಕೆದಾರರು ಅಪರಿಚಿತ ಮತ್ತು ವಿಶ್ವಾಸಾರ್ಹವಲ್ಲದ ಸಂಪರ್ಕಗಳಿಂದ ಸಂದೇಶವನ್ನು ಸ್ವೀಕರಿಸಿದಾಗ ಈ ಬ್ಲಾಕ್ ಶಾರ್ಟ್‌ಕಟ್ ಕಾಣಿಸಿಕೊಳ್ಳುತ್ತದೆ ಎಂದು WABetaInfo ಮಾಹಿತಿ ನೀಡಿದೆ.

ಬಳಕೆದಾರರು ತಮ್ಮ ವಿಶ್ವಾಸಾರ್ಹ ಸಂಪರ್ಕಗಳಿಗೆ ನೋಟಿಫಿಕೇಶನ್‌ಗೆ ಪ್ರತ್ಯುತ್ತರಿಸುವಾಗ ಆಕಸ್ಮಿಕವಾಗಿ ಬ್ಲಾಕ್ ಕ್ರಿಯೆಯ ಮೇಲೆ ಟ್ಯಾಪ್ ಮಾಡಬಹುದಾದ್ದರಿಂದ ಈ ಮಿತಿಯ ಅಗತ್ಯವಿದೆ. ಅದರಂತೆ ಆಪ್‌ನ ಮುಂಬರುವ ನವೀಕರಣದಲ್ಲಿ ಹೊಸ ಶಾರ್ಟ್‌ಕಟ್ ಫೀಚರ್ಸ್‌ ಅನ್ನು ಅನಾವರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್ಸ್‌; ಇದು ಎಲ್ಲರಿಗೂ ಅನುಕೂಲ!

ಇದರಿಂದ ಪ್ರಯೋಜನ ಏನು?
ಸಂಪರ್ಕವನ್ನು ತ್ವರಿತವಾಗಿ ನಿರ್ಬಂಧಿಸಲು ಚಾಟ್ ಪಟ್ಟಿಯಲ್ಲಿರುವ ಚಾಟ್ ಆಯ್ಕೆಯೊಳಗೆ ವಾಟ್ಸಾಪ್‌ ಹೊಸ ಶಾರ್ಟ್‌ಕಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಗುರುವಾರ ವರದಿಯಾಗಿದ್ದು, ಈ ಫೀಚರ್ಸ್‌ ಮೂಲಕ ಚಾಟ್‌ ಅನ್ನು ಓಪನ್‌ ಮಾಡದೆಯೇ ಬ್ಲಾಕ್‌ ಮಾಡಬಹುದಾಗಿದ್ದು, ಸಮಯವನ್ನು ಉಳಿಸುವ ಕೆಲಸ ಮಾಡಲಿದೆ. ಹಾಗೆಯೇ ಅನಗತ್ಯ ಸಂಪರ್ಕಗಳನ್ನು ನಿರ್ಬಂಧಿಸುವುದು ಮೊದಲಿಗಿಂತ ಈಗ ಇನ್ನಷ್ಟು ಸುಲಭ ಮತ್ತು ವೇಗವಾಗಿರಲಿದೆ.

ಇದರೊಂದಿಗೆ ವಾಟ್ಸಪ್‌ನಲ್ಲಿ ಮೀಡಿಯಾವನ್ನು ಫಾರ್ವರ್ಡ್ ಮಾಡುವ ಮೊದಲು ಶೀರ್ಷಿಕೆಯನ್ನು ತೆಗೆದುಹಾಕುವ ಸಾಮರ್ಥ್ಯವನ್ನು ನೀಡಲಾಗಿದೆ. ಈ ಫೀಚರ್ಸ್‌ ಮೊದಲು ಐಓಎಸ್‌ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಇದೀಗ ಆಂಡ್ರಾಯ್ಡ್‌ ಬಳಕೆದಾರರು ಸಹ ಈ ಸೌಲಭ್ಯ ಪಡೆದುಕೊಳ್ಳಬಹುದು. ಬಳಕೆದಾರರಿಗೆ GIF ಗಳು, ವಿಡಿಯೋಗಳು ಮತ್ತು ಇತರ ಮೀಡಿಯಾ ಫೈಲ್‌ಗಳನ್ನು ಶೀರ್ಷಿಕೆಯೊಂದಿಗೆ ಸೆಂಡ್‌ ಮಾಡಲು ಇದು ಅನುಮತಿಸುತ್ತದೆ.

ಈ ಫೀಚರ್ಸ್‌ ಮೂಲಕ ಬಳಕೆದಾರರು ಶೀರ್ಷಿಕೆಯಿಂದ ಕೀವರ್ಡ್‌ಗಳನ್ನು ಹುಡುಕುವ ಮೂಲಕ ಹಳೆಯ ಫೈಲ್‌ಗಳನ್ನು ತ್ವರಿತವಾಗಿ ಸರ್ಚ್‌ ಮಾಡಲು ಇದು ಸಹಾಯಕ. ಜೊತೆಗೆ ಶೀರ್ಷಿಕೆಯೊಂದಿಗೆ ಮಾಧ್ಯಮವನ್ನು ಫಾರ್ವರ್ಡ್ ಮಾಡಿದ ನಂತರ ಡಿಸ್‌ಪ್ಲೇ ಕೆಳಭಾಗದಲ್ಲಿ ಹೊಸ ವೀಕ್ಷಣೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರ ಆಪ್‌ನಲ್ಲಿ ಈ ಫೀಚರ್ಸ್‌ ಸಕ್ರಿಯಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಹ ಸುಲಭವಾದ ಮಾರ್ಗ ನೀಡಲಾಗಿದೆ.

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್ಸ್‌; ಇದು ಎಲ್ಲರಿಗೂ ಅನುಕೂಲ!

ಗ್ರಾಹಕರೇ.. ದೂರು ಸಲ್ಲಿಸಿ
ಅದರಂತೆ ಭಾರತೀಯ ವಾಟ್ಸಾಪ್‌ ಬಳಕೆದಾರರಿಗೆ ವಿಶೇಷ ಅನುಕೂಲ ಮಾಡಿಕೊಡಲು ವಾಟ್ಸಾಪ್‌ ಮುಂದಾಗಿದ್ದು, ಗ್ರಾಹಕರು ತಮ್ಮ ದೂರುಗಳನ್ನು ಸುಲಭವಾಗಿ ನೋಂದಾಯಿಸಲು ಮತ್ತು ಸಮಸ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಲು ವಾಟ್ಸಾಪ್‌ ಅನುವು ಮಾಡಿಕೊಡಲಿದೆ. ಈ ಮೂಲಕ ದೂರನ್ನು ದಾಖಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದರ ಜೊತೆಗೆ ಗ್ರಾಹಕರಿಗೆ ತಮ್ಮ ದೂರಿನ ಸ್ಟೇಟಸ್‌ ಅನ್ನು ಸಹ ಟ್ರ್ಯಾಕ್ ಮಾಡಲು ಇದು ಸಹಾಯ ಮಾಡಲಿದೆ.

ಸದ್ಯಕ್ಕೆ ಭಾರತದಲ್ಲಿ ಈ ಸೇವೆಯನ್ನು ಗ್ರಾಹಕರಿಗೆ ಉತ್ತಮವಾಗಿ ನೀಡಲಾಗುತ್ತಿದ್ದು, 1800-11-4000 ಅಥವಾ 1915 (ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ) ಅಥವಾ 8800001915 ಗೆ ಎಸ್‌ಎಮ್‌ಎಸ್‌ ಕಳುಹಿಸುವ ಮೂಲಕ ದೂರುಗಳನ್ನು ದಾಖಲು ಮಾಡಬಹುದಾಗಿದೆ. ಇದ್ಯಾವುದು ಬೇಡ ಎಂದರೆ https://consumerhelpline.gov.in ಮೂಲಕವೂ ದೂರು ದಾಖಲು ಮಾಡಬಹುದು. ಅಥವಾ NCH ಆಪ್‌ ಅಥವಾ Umang ಆಪ್‌ ಮೂಲಕವೂ ಈ ಕೆಲಸ ಮಾಡಬಹುದಾಗಿದೆ. ಆದರೆ ಇನ್ಮುಂದೆ ಅತ್ಯಂತ ಸುಲಭವಾಗಿ ವಾಟ್ಸಾಪ್‌ ಮೂಲಕವೂ ಈ ಸೇವೆ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
WhatsApp to bring 'Block' shortcut Soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X