Subscribe to Gizbot

ವಾಟ್ಸಾಪ್‌ನಲ್ಲಿ ವಾಯ್ಸ್ ಕಾಲ್ ಬೆಂಬಲವನ್ನು ಆದಷ್ಟು ಬೇಗ!!!

Written By:

ವಾಟ್ಸಾಪ್‌ನಲ್ಲಿರುವ VoIP ವಿಶೇಷತೆಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಯಾವುದೇ ಸುದ್ದಿ ಪ್ರಕಟವಾಗಿಲ್ಲ. ಅದಾಗ್ಯೂ, ವಾಯ್ಸ್ ಕಾಲ್ ಕುರಿತಂತೆ ವದಂತಿಗಳು ಮತ್ತು ಲೀಕ್‌ಗಳು ಇದರ ಪ್ರಚಾರವನ್ನು ಹೆಚ್ಚಿಸುತ್ತಿದೆ.

ಇನ್ನು ಇತ್ತೀಚೆಗೆ ತಾನೇ ಲಭ್ಯವಾಗಿರುವ ಸ್ಕ್ರೀನ್ ಶಾಟ್ ಪ್ರಕಾರ ವಾಟ್ಸಾಪ್‌ನಲ್ಲಿ ವಾಯ್ಸ್ ಕಾಲ್ ಫೀಚರ್ ಇದೆ ಎಂಬುದಾಗಿ ತೋರಿಸಲಾಗುತ್ತಿದೆ. ಇನ್ನು ಕಳೆದ ಸಪ್ಟೆಂಬರ್‌ನಲ್ಲಿ, ವಾಯ್ಸ್ ಕಾಲಿಂಗ್ ಫೀಚರ್ ಕುರಿತಾದ ಸುದ್ದಿ ಬಿತ್ತರವಾಗಿದ್ದು, ಈ ವಿಶೇಷತೆ ಪ್ರಮುಖವಾಗಿ ಐಫೋನ್ ಬಳಕೆದಾರರಿಗಾಗಿ ಒದಗಿಸಲಾಗಿದ್ದು ಫೋನ್‌ನಲ್ಲಿ ಮೈಕ್ರೋಫೋನ್ ಅನ್ನು ಬಳಸಲು ಇವರು ವಿಫಲರಾಗಿದ್ದಾರೆ. ಬಿತ್ತರವಾಗಿರುವ ಸಂದೇಶವು ವಿಶೇಷವಾಗಿ ವಾಯ್ಸ್ ಕರೆಗಳನ್ನು ಪ್ರಸ್ತುತಪಡಿಸಿದೆ.

ವಾಟ್ಸಾಪ್ ಮಿಂಚಲಿದೆ ವಾಯ್ಸ್ ಕಾಲ್ ಬೆಂಬಲದೊಂದಿಗೆ

ಇದನ್ನೂ ಓದಿ: ಅತ್ಯುತ್ತಮ ಫೋನ್ ಜಿಯೋನಿ ಮ್ಯಾರಥಾನ್ ಎಮ್3

ಇನ್ನು ಫೋನ್ ಅರೇನಾದ ಟಿಪ್‌ಸ್ಟರ್ ಪ್ರಕಾರ, ವಾಟ್ಸಾಪ್‌ನ ಎಪಿಕೆ ಆವೃತ್ತಿ 2.11.426" ಅನ್ನು ಬಳಸುತ್ತಿರುವವರು ಈ ಐಕಾನ್ ಉಳ್ಳ ಚಿತ್ರವನ್ನು ಗಮನಿಸಿದ್ದು ನಿಜಕ್ಕೂ ಇದು ಅಚ್ಚರಿಯ ವಿಷಯವಾಗಿದೆ. ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಸ್ಕ್ರೀನ್ ಶಾಟ್‌ನಲ್ಲಿ ಬರೆದಿದ್ದು ಇದನ್ನು ಟಿಪ್‌ಸ್ಟರ್ ಎದ್ದಗಾಣಿಸಿದೆ.

ಈ ವರ್ಷದ ಆರಂಭದಲ್ಲಿ, ಫೇಸ್‌ಬುಕ್ ವಾಟ್ಸಾಪ್ ಅನ್ನು 21 ಬಿಲಿಯನ್‌ಗೆ ಖರೀದಿಸಿದ್ದು ವಾಟ್ಸಾಪ್‌ನ ವಿಸ್ತಾರವಾಗಿ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುತ್ತಿದೆ. ಇನ್ನು ಬಾರತದಲ್ಲಿ ಈ ಮೆಸೇಜಿಂಗ್ ಅಪ್ಲಿಕೇಶನ್ ಸಾಧಿಸಿದ ದಾಖಲೆ 70 ಮಿಲಿಯನ್‌ಗಿಂತಲೂ ಅಧಿಕವಾಗಿದೆ.

ಇದನ್ನೂ ಓದಿ: ಸೋನಿ ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್ ಅತ್ಯುತ್ತಮ ಫೋನ್ ಹೇಗೆ?

ಇನ್ನು ವಾಟ್ಸಾಪ್, ಹೊಸ VoIP ವಿಶೇಷತೆಯನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದ್ದು, ಆದಷ್ಟು ಬೇಗನೇ ವಾಟ್ಸಾಪ್ ಬಳಕೆದಾರರು ಇದನ್ನು ತಮ್ಮ ಫೋನ್‌ಗಳಲ್ಲಿ ಕಾಣಲಿದ್ದಾರೆ.

English summary
This article tells about WhatsApp To Get Voice Call Support Soon [Leak].
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot