ವಾಟ್ಸಾಪ್‌ನಲ್ಲಿ Two Step ವೇರಿಫಿಕೇಶನ್‌ ಪ್ರಯೋಜನವೇನು?

By Gizbot Bureau
|

ನಿಮ್ಮ ಪ್ರೀತಿ ಪಾತ್ರರೊಂದಿಗೆ, ನಿಮ್ಮ ಹತ್ತಿರದವರೊಂದಿಗೆ ಯಾವಾಗಲೂ ಸಂಪರ್ಕದಲ್ಲಿರಲು ಸಹಾಯ ಮಾಡುವ ಪ್ರಸಿದ್ಧ ಮೆಸೇಜಿಂಗ್ ಆಪ್ ಅಂದರೆ ಅದು ವಾಟ್ಸ್ ಆಪ್. ಈ ಆಪ್ ನಲ್ಲಿ ಸಾಕಷ್ಟು ಫೀಚರ್ ಗಳಿದ್ದು ಅವುಗಳಲ್ಲಿ ಎರಡು ಹಂತದ ವೆರಿಫಿಕೇಷನ್ ಕೂಡ ಪ್ರಮುಖವಾದದ್ದು.ಇದು ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ನೆರವು ನೀಡುತ್ತದೆ.ಇದು ಹೆಚ್ಚುವರಿ ಸೇರಿಸಬಹುದಾದ ಫೀಚರ್ ಆಗಿದ್ದು ನಿಮಗೆ ಹೆಚ್ಚಿನ ಸುರಕ್ಷತೆಯನ್ನು ನಿಮ್ಮ ಖಾತೆಗೆ ಒದಗಿಸಿಕೊಳ್ಳಬೇಕು ಎಂದೆನಿಸಿದ ಪಕ್ಷದಲ್ಲಿ ಮಾತ್ರವೇ ಸೇರಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ವಾಟ್ಸಾಪ್‌ನಲ್ಲಿ Two Step ವೇರಿಫಿಕೇಶನ್‌ ಪ್ರಯೋಜನವೇನು?

ವಾಟ್ಸ್ ಆಪ್ ನ ಎರಡು ಹಂತದ ವೆರಿಫಿಕೇಷನ್ ಫೀಚರ್ ನ್ನು ಅನೇಬಲ್ ಮಾಡುವ ಮೂಲಕ ನಿಮ್ಮ ಇಮೇಲ್ ಅಡ್ರೆಸ್ ಗೆ ಎಂಟರ್ ಆಗುವ ಆಯ್ಕೆಯನ್ನು ಹೊಂದಿರುತ್ತೀರಿ. ಒಂದು ವೇಳೆ ನಿಮ್ಮ ಪಿನ್ ನಂಬರ್ ಮರೆತು ಹೋದರೆ ವಾಟ್ಸ್ ಆಪ್ ನಿಮಗೆ ಇಮೇಲ್ ಮೂಲಕ ರಿಸೆಟ್ ಲಿಂಕ್ ನ್ನು ಕಳುಹಿಸುತ್ತದೆ.

ಎರಡು ಹಂತದ ವೆರಿಫಿಕೇಷನ್ ನ್ನು ನಿಮ್ಮ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳಲ್ಲಿಯೂ ಕೂಡ ಅನೇಬಲ್ ಮಾಡುವುದಕ್ಕೆ ಸಲಹೆ ನೀಡಲಾಗುತ್ತದೆ. ಹಾಗೆಯೇ ವಾಟ್ಸ್ ಆಪ್ ನಲ್ಲಿಯೂ ಕೂಡ ಮಾಡಬಹುದು.

1. ವಾಟ್ಸ್ ಆಪ್ ನಲ್ಲಿ ಎರಡು ಹಂತದ ವೆರಿಫಿಕೇಷನ್ ನ್ನು ಅನೇಬಲ್ ಮಾಡುವುದು ಹೇಗೆ?

. ನಿಮ್ಮ ಫೋನಿನಲ್ಲಿ ವಾಟ್ಸ್ ಆಪ್ ನ್ನು ತೆರೆಯಿರಿ.

. ಮೇಲ್ಬಾಗದ ಬಲಕಡೆಯಲ್ಲಿ ಕಾಣುವ ಲಂಬವಾಗಿ ಇರುವ ಮೂರು ಚುಕ್ಕಿಗಳ ಐಕಾನ್ ನ್ನು ಟ್ಯಾಪ್ ಮಾಡಿ.

. ಅಕೌಂಟ್>ಟು ಸ್ಟೆಪ್ ವೆರಿಫಿಕೇಷನ್>ಅನೇಬಲ್ ನ್ನು ಟ್ಯಾಪ್ ಮಾಡಿ.

.ನಂತರ ನಿಮ್ಮ ಇಚ್ಛೆಯ 6 ಡಿಜಿಟ್ ಪಿನ್ ನ್ನು ಎಂಟರ್ ಮಾಡಿ ಮತ್ತು ಕನ್ಫರ್ಮ್ ಮಾಡಿ.

.ನಂತರ ನಿಮ್ಮ ಇಮೇಲ್ ಅಡ್ರೆಸ್ ನ್ನು ಟೈಪ್ ಮಾಡಿ. ಒಂದು ವೇಳೆ ನಿಮಗೆ ಇಷ್ಟವಿಲ್ಲದೆ ಇದ್ದರೆ ಈ ಹಂತವನ್ನು ಸ್ಕಿಪ್ ಕೂಡ ಮಾಡಬಹುದು.

. ಇದೀಗ ನೆಕ್ಸ್ಟ್ ಬಟನ್ ನ್ನು ಟ್ಯಾಪ್ ಮಾಡಿ.

.ಇಮೇಲ್ ವಿಳಾಸವನ್ನು ಕನ್ಫರ್ಮ್ ಮಾಡಿ ಮತ್ತು ಸೇವ್ ಬಟನ್ ನ್ನು ಕ್ಲಿಕ್ಕಿಸಿ.

2. ವಾಟ್ಸ್ ಆಪ್ ನಲ್ಲಿ ಟು-ಸ್ಟೆಪ್ ವೆರಿಫಿಕೇಷನ್ ಸುರಕ್ಷಿತವೇ?

ನಿಮ್ಮ ವಾಟ್ಸ್ ಆಪ್ ಖಾತೆಗೆ ಈ ಟು ಸ್ಟೆಪ್ ವೆರಫಿಕೇಷನ್ ಎರಡು ಹಂತದ ಭದ್ರತೆಯನ್ನು ಒದಗಿಸುತ್ತದೆ.ಇದು ಬಳಕೆದಾರರಿಗೆ ತಮ್ಮ ಓಟಿಪಿಯನ್ನು ಸುರಕ್ಷಿತವಾಗಿಡಲು ನೆರವು ನೀಡುತ್ತದೆ.ಆಪ್ ಮೂಲಕ ಹಂಚಿಕೊಳ್ಳುವ ದಾಖಲಾತಿಗಳನ್ನು ಸೇಫ್ ಆಗಿ ಇಟ್ಟುಕೊಳ್ಳುವುದಕ್ಕೂ ಕೂಡ ನೆರವು ನೀಡುತ್ತದೆ.

3. ವಾಟ್ಸ್ ಆಪ್ ಎರಡು ಹಂತದ ಸೆಕ್ಯುರಿಟಿಯನ್ನು ಎಷ್ಟು ದಿನಗಳಿಗೊಮ್ಮೆ ಕೇಳುತ್ತದೆ?

ಸಾಮಾನ್ಯವಾಗಿ ಎರಡು ಹಂತದ ಸೆಕ್ಯುರಿಟಿಯನ್ನು ಆಗಾಗ ಕೇಳುತ್ತದೆ. ಏಳು ದಿನಗಳಿಗೊಮ್ಮೆ ಇದನ್ನು ನಡೆಸಲಾಗುತ್ತದೆ.

4. ವಾಟ್ಸ್ ಆಪ್ ನಲ್ಲಿ ಎರಡು ಹಂತದ ಸೆಕ್ಯುರಿಟಿಯನ್ನು ಬೈಪಾಸ್ ಮಾಡುವುದು ಹೇಗೆ?

. ವಾಟ್ಸ್ ಆಪ್ ನ್ನು ತೆರೆಯಿರಿ.

. ಪಿನ್ ಮರೆತಿದ್ದೇನೆ ಅಥವಾ ಫರ್ಗಾಟ್ ಪಿನ್ ನ್ನು ಟ್ಯಾಪ್ ಮಾಡಿ>ಇಮೇಲ್ ಕಳುಹಿಸಿಯನ್ನು ಒತ್ತಿ. ನೀವು ನೀಡಿರುವ ಇಮೇಲ್ ವಿಳಾಸಕ್ಕೆ ಲಿಂಕ್ ನ್ನು ಕಳುಹಿಸಿ.

. ಇಮೇಲ್ ನಲ್ಲಿ ರಿಸೆಟ್ ಲಿಂಕ್ ನ್ನು ಫಾಲೋ ಮಾಡಿ ಮತ್ತು ಕನ್ಫರ್ಮ್ ನ್ನು ಟ್ಯಾಪ್ ಮಾಡಿ.

.ನಂತರ ವಾಟ್ಸ್ ಆಪ್ ನ್ನು ಫಾಲೋ ಮಾಡಿ ಮತ್ತು ಫರ್ಗಾಟ್ ಪಿನ್ >ರಿಸೆಟ್ ನ್ನು ಒತ್ತಿ.

Most Read Articles
Best Mobiles in India

Read more about:
English summary
WhatsApp Two-Step Verification Explained: What Is It And How Does It Help?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X