ವಾಟ್ಸಾಪ್‌ಗೂ ಟೆಲಿಗ್ರಾಮ್‌ಗೂ ಇರುವ ಭಿನ್ನತೆ ಏನು?... ಯಾವುದು ಜನಪ್ರಿಯ ಆಪ್‌?

|

ಈಗಂತೂ ಹಲವು ಮಂದಿ ತಮ್ಮ ಸ್ಮಾರ್ಟ್‌‌ಫೋನ್‌ನಲ್ಲಿ ವಾಟ್ಸಾಪ್ ಹಾಗೂ ಟೆಲಿಗ್ರಾಮ್‌ ಆಪ್‌ಗಳನ್ನು ಸಮಾನಾಗಿ ಬಳಕೆ ಮಾಡುತ್ತಾರೆ. ಇದರ ನಡುವೆ ಟೆಲಿಗ್ರಾಮ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ವಾಟ್ಸಾಪ್‌ ಹಲವಾರು ಫೀಚರ್ಸ್‌ಗಳನ್ನು ಬಳಕೆದಾರರಿಗೆ ನೀಡಿದರೆ ಇದೇ ರೀತಿ ಟೆಲಿಗ್ರಾಮ್ ಸಹ ಇತ್ತೀಚೆಗೆ ಸಿಮ್‌ ಕಾರ್ಡ್‌ ಇಲ್ಲದೆ ಲಾಗಿನ್‌ ಆಗುವ ಫೀಚರ್ಸ್‌ ಪರಿಚಯಿಸಿದೆ. ಅದಾಗ್ಯೂ ಈ ಎರಡೂ ಮೆಸೆಜಿಂಗ್ ಆಪ್‌ಗಳಲ್ಲಿ ಯಾವುದು ಬೆಸ್ಟ್‌ ಗೊತ್ತಾ?

ಫೀಚರ್ಸ್‌

ಹೌದು, ಈ ಎರಡೂ ಆಪ್‌ಗಳು ತಮ್ಮದೇ ಆದ ಫೀಚರ್ಸ್‌ ಮೂಲಕ ಹೆಚ್ಚಿನ ಬಳಕೆದಾರರನ್ನು ಪಡೆದುಕೊಂಡಿವೆ. ಅದಾಗ್ಯೂ ಈ ಆಪ್‌ಗಳ ನಡುವೆ ಸಾಕಷ್ಟು ಭಿನ್ನತೆಯನ್ನು ಕಾಣಬಹುದು. ಅದರಲ್ಲಿ ಪ್ರಮುಖವಾಗಿ ದೊಡ್ಡ ಮಟ್ಟದ ಸಮುದಾಯ ಅಥವಾ ಆನ್‌ಲೈನ್ ಕ್ಲಬ್ ಮಾಡಲು ಮುಂದಾದರೆ ಟೆಲಿಗ್ರಾಮ್ ಇದಕ್ಕೆ ಪೂರಕವಾಗಿದೆ. ಹಾಗೆಯೇ ಖಾಸಗಿಯಾಗಿ ಹಾಗೂ ಹೆಚ್ಚು ಸುರಕ್ಷತೆಯಿಂದ ಯಾರೊಂದಿಗಾದರೂ ಚಾಟ್‌ ಮಾಡಲು ಬಯಸಿದರೆ ವಾಟ್ಸಾಪ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಹಾಗಿದ್ರೆ, ಈ ಎರಡೂ ಆಪ್‌ಗಳಿಗೆ ಇರುವ ಪ್ರಮುಖ ವ್ಯತ್ಯಾಸ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಯಾವ ಆಪ್‌ ಎಷ್ಟು ಬಳಕೆದಾರರನ್ನು ಹೊಂದಿದೆ?

ಯಾವ ಆಪ್‌ ಎಷ್ಟು ಬಳಕೆದಾರರನ್ನು ಹೊಂದಿದೆ?

ಈ ಎರಡು ಇನ್‌ಸ್ಟಂಟ್‌ ಮೆಸೆಜಿಂಗ್‌ ಆಪ್‌ಗಳಲ್ಲಿ ವಾಟ್ಸಾಪ್‌ 2 ಬಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಟೆಲಿಗ್ರಾಮ್‌ ಅನ್ನು ದೊಡ್ಡ ಮಟ್ಟದಲ್ಲಿ ಹಿಂದಿಕ್ಕಿದೆ. ಅದರಂತೆ ಟೆಲಿಗ್ರಾಮ್‌ ಸಹ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರನ್ನು ಪಡೆದುಕೊಂಡಿದೆ. ಆದರೂ ಟೆಲಿಗ್ರಾಮ್ ತನ್ನದೇ ಆದ ರೀತಿಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಭಾರತದಲ್ಲಿ ಈ ಆಪ್‌ ಬಳಕೆದಾರರ ಸಂಖ್ಯೆ ಹೆಚ್ಚಿದೆ.

ಯಾವುದು ಹೆಚ್ಚು ಸೆಕ್ಯೂರ್‌ ?

ಯಾವುದು ಹೆಚ್ಚು ಸೆಕ್ಯೂರ್‌ ?

ಬಳಕೆದಾರರು ಈಗಂತೂ ಹೆಚ್ಚು ಗೌಪ್ಯತೆ ವಿಷಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸುತ್ತಾರೆ. ಇದನ್ನು ಮನಗಂಡು ಎರಡೂ ಆಪ್‌ಗಳು ಸಹ ಬಳಕೆದಾರರಿಗೆ ಹೆಚ್ಚಿನ ಭದ್ರತೆ ನೀಡಿದೆ. ಈ ಎರಡೂ ಆಪ್‌ಗಳಲ್ಲಿ ಎಂಡ್‌‌ ಟು ಎಂಟ್ ಎನ್‌ಕ್ರಿಪ್ಶನ್ ಆಯ್ಕೆ ಇದ್ದು, ಇದರಿಂದ ಬಳಕೆದಾರರು ಯಾವುದೇ ಸಂಕೋಚ ಅಥವಾ ಭಯ ಇಲ್ಲದೆ ತಮಗೆ ಬೇಕಾದವರ ಜೊತೆ ಮೆಸೆಜ್‌ ಮಾಡಬಹುದು. ಇದನ್ನೂ ಮೀರಿ ಇತ್ತೀಚೆಗೆ ಟೆಲಿಗ್ರಾಮ್ 'ರಹಸ್ಯ ಚಾಟ್' ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ. ರಹಸ್ಯ ಚಾಟ್‌ನಲ್ಲಿ ಮೆಸೆಜ್‌ಗಳನ್ನು ಸ್ಕ್ರೀನ್‌ಶಾಟ್‌ ಮಾಡಲು, ಫಾರ್ವರ್ಡ್ ಮಾಡಲು ಆಗುವುದಿಲ್ಲ.

ಟೆಲಿಗ್ರಾಮ್

ಇದರೊಂದಿಗೆ ಟೆಲಿಗ್ರಾಮ್ ಬಳಕೆದಾರರಿಗೆ ತಮ್ಮ ಫೋನ್ ಸಂಖ್ಯೆಯನ್ನು ಖಾಸಗಿಯಾಗಿಡುವ ಆಯ್ಕೆ ಸಹ ನೀಡುತ್ತದೆ. ಅದರಲ್ಲೂ ಟೆಲಿಗ್ರಾಮ್‌ಗೆ ಸೈನ್ ಅಪ್ ಮಾಡಲು ಫೋನ್‌ ಸಂಖ್ಯೆ ಅಗತ್ಯವಿದ್ದರೂ ನಿಮ್ಮ ಫೋನ್ ಸಂಖ್ಯೆಯನ್ನು ಸಾರ್ವಜನಿಕಗೊಳಿಸದೆ ಈ ಆಪ್‌ನಲ್ಲಿ ಸಕ್ರಿಯವಾಗಿರಬಹುದು. ಇದಿಷ್ಟೇ ಅಲ್ಲದೆ, ಯಾವುದಾದರೂ ಗ್ರೂಪ್‌ನಲ್ಲಿ ಫೋನ್‌ ಸಂಖ್ಯೆ ಪ್ರದರ್ಶಿಸುವುದು ಬೇಡ ಎಂದರೂ ಅದಕ್ಕೂ ಆಯ್ಕೆ ನೀಡಲಾಗಿದೆ.

ಫೈಲ್ ಶೇರಿಂಗ್‌

ಫೈಲ್ ಶೇರಿಂಗ್‌

ಫೈಲ್ ಹಂಚಿಕೆ ಮಿತಿಗೆ ಬಂದಾಗ ಟೆಲಿಗ್ರಾಮ್‌ ಈವರೆಗೂ ಒಂದು ಹೆಜ್ಜೆ ಮುಂದೆ ಇತ್ತು. ಆದರೆ, ಕೆಲವು ತಿಂಗಳ ಹಿಂದೆ ವಾಟ್ಸಾಪ್‌ ಟೆಲಿಗ್ರಾಮ್‌ ಗೆ ಪೈಪೋಟಿ ನೀಡಿದೆ. ಯಾಕೆಂದರೆ ಬಳಕೆದಾರರು 2GB ವರೆಗಿನ ಫೈಲ್‌ಗಳನ್ನು ಹಂಚಿಕೊಳ್ಳಬಹುದು ಎಂದು ವಾಟ್ಸಾಪ್‌ ಘೋಷಿಸಿದೆ. ಇನ್ನು ಟೆಲಿಗ್ರಾಮ್‌ನಲ್ಲಿ 4GB ಗಾತ್ರದ ಫೈಲ್‌ಗಳನ್ನು ಹಂಚಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಜೊತೆಗೆ ಟೆಲಿಗ್ರಾಮ್ ಬಳಕೆದಾರರು ಉಚಿತ ಕ್ಲೌಡ್ ಸ್ಟೋರೇಜ್ ಅನ್ನು ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ.

ಗ್ರೂಪ್‌ ರಚನೆ

ಗ್ರೂಪ್‌ ರಚನೆ

ಗ್ರೂಪ್‌ ರಚನೆ ಸಂಬಂಧ ಟೆಲಿಗ್ರಾಮ್‌ ಒಂದು ಹೆಜ್ಜೆ ಮುಂದಿದೆ. ಯಾಕೆಂದರೆ ಇದರಲ್ಲಿ ಬರೋಬ್ಬರಿ 200,000 ಸದಸ್ಯರ ಗ್ರೂಪ್‌ ರಚಿಸಬಹುದು. ಆದರೆ, ವಾಟ್ಸಾಪ್‌ನಲ್ಲಿ 1,024 ಸದಸ್ಯರ ಗ್ರೂಪ್‌ ರಚಿಸಲು ಮಾತ್ರ ಅವಕಾಶ ಇದೆ. ಈ ಹಿಂದೆ ಈ ಸದಸ್ಯರ ಸಂಖ್ಯೆ ತುಂಬಾ ಕಡಿಮೆ ಇತ್ತು. ಸಮುದಾಯಗಳು ಮತ್ತು ಆನ್‌ಲೈನ್ ಕ್ಲಬ್‌ಗಳನ್ನು ಹೋಸ್ಟ್ ಮಾಡಲು ಟೆಲಿಗ್ರಾಮ್ ಉತ್ತಮ ವೇದಿಕೆಯಾಗಿದೆ. ಹಾಗೆಯೇ ಟೆಲಿಗ್ರಾಮ್‌ ಗ್ರೂಪ್‌ನಲ್ಲಿ ಮಾಡರೇಟ್ ಮಾಡಲು ನೀವು ಹಲವಾರು ಬಾಟ್‌ಗಳನ್ನು ಬಳಸಬಹುದು.

ಪ್ರೊಫೈಲ್‌ನಲ್ಲಿ ಭಿನ್ನತೆ

ಪ್ರೊಫೈಲ್‌ನಲ್ಲಿ ಭಿನ್ನತೆ

ಪ್ರೊಫೈಲ್‌ ವಿಚಾರದಲ್ಲಿ ಎರಡೂ ಆಪ್‌ಗಳಿಗೂ ಭಿನ್ನತೆ ಇದೆ. ವಾಟ್ಸಾಪ್‌ನಲ್ಲಿ ನೀವು ಒಂದು ಫೋಟೋವನ್ನು ಮಾತ್ರ ಹಾಕಬಹುದಾಗಿದೆ. ಆದರೆ, ಟೆಲಿಗ್ರಾಮ್‌ನಲ್ಲಿ ಒಂದಕ್ಕಿಂತ ಹೆಚ್ಚು ಫೋಟೋಗಳನ್ನು ಪ್ರೊಫೈಲ್‌ಗೆ ಸೇರಿಸಬಹುದಾಗಿದೆ. ಆದರೆ, ವಾಟ್ಸಾಪ್‌ನಲ್ಲಿ ಸ್ಟೇಟಸ್‌ ಎಂಬ ಫೀಚರ್ಸ್‌ ಇದ್ದು, ಇದರಲ್ಲಿ ಹಲವು ಫೋಟೋ ಅಥವಾ ವಿಡಿಯೋಗಳನ್ನು ಅಪ್ಲೋಡ್‌ ಮಾಡುವ ಆಯ್ಕೆ ಇರುವುದರಿಂದ ವಿಶೇಷ ಎನಿಸುತ್ತದೆ.

ಬ್ಯೂಸಿನೆಸ್‌ಗೆ ಸಹಕಾರ

ಬ್ಯೂಸಿನೆಸ್‌ಗೆ ಸಹಕಾರ

ಬ್ಯೂಸಿನೆಸ್‌ ವಿಚಾರಕ್ಕೆ ಬಂದರೆ ವಾಟ್ಸಾಪ್‌ನಲ್ಲಿ ತ್ವರಿತವಾಗಿ ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ವ್ಯಾಪಾರಗಳಿಗೆ ಅನುಕೂಲ ಮಾಡಿಕೊಡುತ್ತದೆ. ಇದರಲ್ಲಿ ಉತ್ಪನ್ನಗಳನ್ನು ಆರ್ಡರ್ ಮಾಡಲು, ಟಿಕೆಟ್‌ಗಳನ್ನು ಬುಕ್ ಮಾಡಲು ಮತ್ತು ಗ್ರಾಹಕರ ಬೆಂಬಲದೊಂದಿಗೆ ಸಂಪರ್ಕದಲ್ಲಿರಲು ಅನುಕೂಲ ಸಿಗಲಿದೆ. ಇದರೊಂದಿಗೆ ವಾಟ್ಸಾಪ್‌ ಯುಪಿಐ ಆಧಾರಿತ ಪಾವತಿ ಪೋರ್ಟಲ್ ಅನ್ನು ಸಹ ಹೊಂದಿದೆ. ಈ ವಿಷಯದಲ್ಲಿ ಟೆಲಿಗ್ರಾಮ್ ವಾಟ್ಸಾಪ್‌ಗೆ ಹೊಂದಿಕೆಯಾಗಲು ಸಾಧ್ಯವಿಲ್ಲ.

ಹಲವು ಡಿವೈಸ್‌ ಒಂದು ಖಾತೆ

ಹಲವು ಡಿವೈಸ್‌ ಒಂದು ಖಾತೆ

ಟೆಲಿಗ್ರಾಮ್ ಬಳಕೆದಾರರಿಗೆ ಬಹು ಡಿವೈಸ್‌ಗಳಲ್ಲಿ ಒಂದು ಖಾತೆಯನ್ನು ಪ್ರವೇಶಿಸಲು ಅನುಮತಿಸುತ್ತದೆ. ವಾಟ್ಸಾಪ್‌ ಹಲವು ವಿಧದ ಡಿವೈಸ್‌ ಸಂಪರ್ಕ ನೀಡಲಿದೆ. ಅಂದರೆ ನೀವು ಒಂದು ಸ್ಮಾರ್ಟ್‌ಫೋನ್‌ನಲ್ಲಿ ಕೇವಲ ಒಂದು ಖಾತೆಯನ್ನು ಮಾತ್ರ ಬಳಸಬಹುದಾಗಿದ್ದರೂ ವಾಟ್ಸಾಪ್‌ ನ ವೆಬ್ ಪೋರ್ಟಲ್ ಅನ್ನು ಬಳಸಿಕೊಂಡು ವೆಬ್ ಬ್ರೌಸರ್‌ನಲ್ಲಿ ನಿಮ್ಮ ಖಾತೆಯನ್ನು ಬಳಕೆ ಮಾಡಬಹುದಾಗಿದೆ. ಇದರ ನಡುವೆ ವಾಟ್ಸಾಪ್‌ ಮೊನ್ನೆಯಷ್ಟೇ ಒಂದು ಹೊಸ ಫೀಚರ್ಸ್‌ ಪರಿಚಯಿಸಿದ್ದು, ಎರಡು ಡಿವೈಸ್‌ಗಳಲ್ಲಿಯೂ ಲಾಗಿನ್‌ ಆಗಬಹುದು.

Best Mobiles in India

English summary
WhatsApp V/s Telegram; Which one is better?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X