ವಾಟ್ಸಪ್‌ನಲ್ಲಿ ಗ್ರೂಪ್‌ ವಿಡಿಯೊ ಕರೆ ಈಗ ಇನ್ನಷ್ಟು ಸುಲಭ!

|

ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ ಅಪ್ಲಿಕೇಶನ್ ಸದ್ಯ ಅತೀ ಹೆಚ್ಚು ಬಳಕೆಯಲ್ಲಿರುವ ಇನ್‌ಸ್ಟಂಟ್ ಮೆಸೆಜ್‌ ಆಪ್ ಆಗಿದೆ. ವಾಟ್ಸಪ್‌ ಆಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ನೂತನ ಫೀಚರ್ಸ್‌ಗಳನ್ನು ಅಳವಡಿಸಿದೆ. ಆ ಪೈಕಿ 2018ರಲ್ಲಿ ಸಂಸ್ಥೆಯು ವಾಟ್ಸಪ್‌ನಲ್ಲಿ ವಾಯಿಸ್‌ ಕರೆ ಹಾಗೂ ವಿಡಿಯೊ ಕರೆಗಳ ಸೌಲಭ್ಯವನ್ನು ಪರಿಚಯಿಸಿದೆ. ಆದ್ರೆ ಇದೀಗ ವಿಡಿಯೊ ಕಾಲಿಂಗ್‌ ಸೇವೆಯನ್ನು ಮತ್ತಷ್ಟು ಸರಳವಾಗಿಸಿದೆ.

ವಿಡಿಯೊ ಕಾಲಿಂಗ್ ಸೌಲಭ್ಯ

ಹೌದು, ಟೆಕ್ಸ್ಟ್‌ ಮೆಸೆಜ್‌ ಜೊತೆಗೆ ವಾಟ್ಸಪ್‌ನ ವಿಡಿಯೊ ಕಾಲಿಂಗ್ ಸೌಲಭ್ಯವನ್ನು ಹೆಚ್ಚಿನ ಬಳಕೆದಾರರು ಬಳಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ವಾಟ್ಸಪ್‌ ಮಲ್ಟಿ ವಿಡಿಯೊ ಕಾಲಿಂಗ್‌ ಸೇವೆಯನ್ನು ಪರಿಚಯಿಸಿದೆ. ವಾಟ್ಸಪ್‌ನಲ್ಲಿ ಬಳಕೆದಾರರು ಮಲ್ಟಿ ವಿಡಿಯೊ ಕರೆಯಲ್ಲಿ ಇತರರನ್ನು ವಿಡಿಯೊ ಕರೆ ಸೇರಿಸಿಕೊಳ್ಳಲು ಪ್ರತ್ಯೇಕವಾಗಿ ಕರೆ ಮಾಡಬೇಕಿದೆ. ಇದೀಗ ಈ ಸೇವೆಯನ್ನು ಸರಳಗೊಳಿಸಿದ್ದು, ಕೇವಲ ಒಂದು ಟ್ಯಾಪ್ ಮಾಡುವ ಮೂಲಕ ನಾಲ್ಕು ಬಳಕೆದಾರರನ್ನು ವಿಡಿಯೊ ಕರೆಗಳಿಗೆ ಸೇರಿಸಬಹುದು.

ವಾಟ್ಸಪ್‌ನ ಅಪ್‌ಡೇಟ್‌

ಕೇವಲ ಒಂದು ಟ್ಯಾಪ್ ಮಾಡುವ ಮೂಲಕ ಗುಂಪು ವಿಡಿಯೊ ಅಥವಾ ವಾಯಿಸ್‌ ಕರೆ ಮಾಡುವ ಹೊಸ ಸೌಲಭ್ಯವು ವಾಟ್ಸಪ್‌ನ ಅಪ್‌ಡೇಟ್‌ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಗುಂಪು ವಿಡಿಯೊ ಕರೆ ಸೇವೆಯಲ್ಲಿ ಬಳಕೆದಾರರು ಗರಿಷ್ಠ ನಾಲ್ಕು ಬಳಕೆದಾರರನ್ನು ಸೇರಿಸಬಹುದಾಗಿದೆ. ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ ಹಾಗೂ ಆಪಲ್ ಆಪ್‌ ಸ್ಟೋರ್‌ನಲ್ಲಿ ವಾಟ್ಸಪ್‌ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ವಾಟ್ಸಪ್ ಗ್ರೂಪ್ ಕರೆ ಮಾಡುವುದು ಹೇಗೆ?

ವಾಟ್ಸಪ್ ಗ್ರೂಪ್ ಕರೆ ಮಾಡುವುದು ಹೇಗೆ?

- ವಾಟ್ಸಾಪ್ ಆಪ್‌ನಲ್ಲಿ ಗ್ರೂಪ್ ಕರೆ ಆಯ್ಕೆ ತೆರೆಯಿರಿ.

- ಪರದೆಯ ಮೇಲಿರುವ ವೀಡಿಯೊ ಅಥವಾ ವಾಯಿಸ್‌ ಕರೆಯನ್ನು ಟ್ಯಾಪ್ ಮಾಡಿ.

- ಒಂದೇ ಬಾರಿಗೆ ನೀವು ಗರಿಷ್ಠ ನಾಲ್ಕು ಸದಸ್ಯರೊಂದಿಗೆ ಗುಂಪು ಕರೆಯನ್ನು ಆರಂಭಿಸಬಹುದಾಗಿದೆ.

ಮೆಸೆಜ್‌ ಫಾರ್ವರ್ಡ್‌ಗೆ ಮಿತಿ

ಮೆಸೆಜ್‌ ಫಾರ್ವರ್ಡ್‌ಗೆ ಮಿತಿ

ಹಾಗೆಯೇ ವಾಟ್ಸಪ್‌ ಸಕಲಿ ಸುದ್ದಿಗಳಿಗೆ ಕಡಿವಾಣ ಹಾಕುವ ಫೀಚರ್ಸ್‌ ಪರಿಚಯಿಸಿದೆ. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ನಕಲಿ/ತಪ್ಪು ಮಾಹಿತಿಯ ಫಾರ್ವರ್ಡ್ ಮೆಸೆಜ್‌ಗಳು ಮೇಲಿಂದ ಮೇಲೆ ಒಬ್ಬರಿಂದ ಇನ್ನೊಬ್ಬರಿಗೆ ಶೇರ್ ಆಗುತ್ತಲೆ ಇರುತ್ತವೆ. ತಪ್ಪು ಮಾಹಿತಿ ಈ ರೀತಿಯ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಾಟ್ಸಾಪ್ ಹೊಸ ಫೀಚರ್ ಪರಿಚಯಿಸಿದೆ. ಈ ಫೀಚರನಲ್ಲಿ ಅತೀ ಹೆಚ್ಚು ಫಾರ್ವರ್ಡ್‌ ಆಗಿರುವ ಮೆಸೆಜ್‌ ಅನ್ನು ಒಂದು ಬಾರಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್‌ ಮಾಡುವುದಕ್ಕೆ ಮಾತ್ರ ಅವಕಾಶ ನೀಡುತ್ತದೆ.

ಮಾಹಿತಿ ಸತ್ಯಾಂಶ ಪರಿಶೀಲಿಸುವ ಆಯ್ಕೆ

ಮಾಹಿತಿ ಸತ್ಯಾಂಶ ಪರಿಶೀಲಿಸುವ ಆಯ್ಕೆ

ಸುರಕ್ಷತೆಯಡೆಗೆ ವಾಟ್ಸಪ್ನಿಂದ ಮತ್ತೊಂದು ಹೊಸ ಹೆಜ್ಜೆ. ಮೆಸೆಜ್ ಮಾಹಿತಿ ಪರಿಶೀಲಿಸುವ ಆಯ್ಕೆಯನ್ನು ವಾಟ್ಸಪ್‌ ಪರಿಚಯಿಸಿದ್ದು, ಬಳಕೆದಾರರು ತಮಗೆ ಬಂದಿರುವ ಮೆಸೆಜ್‌ನ ಸತ್ಯ ಸತ್ಯೆತೆಯನ್ನು ತಿಳಿಯಲು ವೆಬ್‌ನಲ್ಲಿ ಆ ಮಾಹಿತಿ ಸರ್ಚ್ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ಆದರೆ ಸದ್ಯ ಈ ಫೀಚರ್ ಇನ್ನು ವಾಟ್ಸಪ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಆವೃತ್ತಿಗೂ ಲಭ್ಯವಾಗಲಿದೆ.

Most Read Articles
Best Mobiles in India

English summary
The instant messaging platform has now released an update which makes video group calling easier for both Android and iOS users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X