ಬಳಕೆದಾರರಿಗೆ ಎಚ್ಚರಿಕೆ ನೀಡಿದ ವಾಟ್ಸಾಪ್‌: ಈ ರೀತಿ ಮಾಡಿದ್ರೆ ಖಾತೆ ಬ್ಲಾಕ್‌!

|

ಪ್ರಮುಖ ಇನ್‌ಸ್ಟಂಟ್‌ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ವಾಟ್ಸಾಪ್‌ ಈಗಾಗಲೇ ಬಳಕೆದಾರರಿಗೆ ಹಲವಾರು ರೀತಿಯ ಫೀಚರ್ಸ್‌ ಪರಿಚಯಿಸಿ ವಿಶೇಷ ಅನುಭವ ನೀಡುತ್ತಾ ಬರುತ್ತಿದೆ. ಈ ನಡುವೆ ಬಳಕೆದಾರರಿಗೆ ಎಚ್ಚರಿಕೆಯನ್ನೂ ನೀಡಿದೆ. ವಾಟ್ಸಾಪ್‌ನಲ್ಲಿ ಈ ಪ್ರಕ್ರಿಯೆ ನಡೆಸುವ ಬಳಕೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದು, ವಾಟ್ಸಾಪ್‌ ಬಳಕೆದಾರರಿಗೆ ಈಗ ಆತಂಕ ಎದುರಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಈ ಹಿಂದಿನಿಂದಲೂ ಬಳಕೆದಾರರ ಗೌಪ್ಯತೆ ಹಾಗೂ ಭದ್ರತೆಗೆ ಹೆಚ್ಚಿನ ಮಹತ್ವ ನೀಡುತ್ತಾ ಬರುತ್ತಿದೆ. ಈ ಕಾರಣಕ್ಕೆ ಬಳಕೆದಾರರು ಯಾವುದೇ ಭಯವಿಲ್ಲದೆ ವಾಟ್ಸಾಪ್‌ ಅನ್ನು ವ್ಯವಹಾರಿಕವಾಗಿ ಹಾಗೂ ಖಾಸಗಿಯಾಗಿ ಬಳಕೆ ಮಾಡುತ್ತಾ ಬರುತ್ತಿದ್ದಾರೆ. ಆದರೆ, ಕೆಲವು ಬಳಕೆದಾರರು ಮಾತ್ರ ವಾಟ್ಸಾಪ್‌ ನಿಮಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಇವರ ವಿರುದ್ಧ ಈಗ ವಾಟ್ಸಾಪ್‌ ಸಮರ ಸಾರಿದೆ.

ವಾಟ್ಸಾಪ್ ವ್ಯೂ ಒನ್ಸ್ ಮೆಸೇಜ್ ಫೀಚರ್

ವಾಟ್ಸಾಪ್ ವ್ಯೂ ಒನ್ಸ್ ಮೆಸೇಜ್ ಫೀಚರ್

ಈಗಾಗಲೇ ವಾಟ್ಸಾಪ್‌ನಲ್ಲಿ ವಾಟ್ಸಾಪ್ ವ್ಯೂ ಒನ್ಸ್ ಮೆಸೇಜ್ ಫೀಚರ್ ಆಯ್ಕೆ ನೀಡಲಾಗಿದೆ. ಅಂದರೆ, ಈ ಮೆಸೆಜ್‌ ಅನ್ನು ಒಮ್ಮೆ ಮಾತ್ರ ನೋಡಬಹುದು. ಇದಾದ ನಂತರ ಯಾವುದೇ ಕಾರಣಕ್ಕೂ ಮತ್ತೆ ಆ ಮೆಸೆಜ್‌ ನೋಡಲು ಸಾಧ್ಯವಾಗುವುದಿಲ್ಲ. ಈ ಫೀಚರ್ಸ್‌ನಲ್ಲಿ ಫೋಟೋ, ವಿಡಿಯೋ ಹಾಗೂ ಇನ್ನಿತರೆ ಫೈಲ್‌ಗಳನ್ನು ಸೆಂಡ್‌ ಮಾಡಿಕೊಳ್ಳಬಹುದು. ಆದಾಗ್ಯೂ, ಈ ಫೀಚರ್ಸ್‌ನಲ್ಲಿ ಸಣ್ಣ ಭದ್ರತಾ ಸಮಸ್ಯೆ ಕಂಡುಬಂದಿದ್ದು, ಇದನ್ನು ನಿಯಂತ್ರಿಸಲೆಂದೇ ವಾಟ್ಸಾಪ್‌ ಈ ರೀತಿಯ ಎಚ್ಚರಿಕೆ ರವಾನಿಸಿದೆ.

ಸ್ಕ್ರೀನ್‌ಶಾಟ್ ತೆಗೆದುಕೊಂಡರೆ ನಿಮ್ಮ ವಾಟ್ಸಾಪ್‌ ಕಥೆ ಅಷ್ಟೇ...

ಸ್ಕ್ರೀನ್‌ಶಾಟ್ ತೆಗೆದುಕೊಂಡರೆ ನಿಮ್ಮ ವಾಟ್ಸಾಪ್‌ ಕಥೆ ಅಷ್ಟೇ...

ಈ ವಾಟ್ಸಾಪ್ ವ್ಯೂ ಒನ್ಸ್ ಮೆಸೇಜ್ ಫೀಚರ್ ನಲ್ಲಿ ಒಮ್ಮೆ ಮಾತ್ರ ಮೆಸೆಜ್‌ ವೀಕ್ಷಣೆ ಮಾಡಲು ಆಗುವುದರಿಂದ ಹಲವಾರು ಬಳಕೆದಾರರು ಅದನ್ನು ಸ್ಕ್ರೀನ್ ಶಾಟ್‌ ತೆಗೆದುಕೊಳ್ಳುವುದು ಹಾಗೂ ಸ್ಕ್ರೀನ್‌ ರೆಕಾರ್ಡ್‌ ಮಾಡಿಕೊಳ್ಳುವುದನ್ನು ಮಾಡುತ್ತಿದ್ದರು. ಇದಕ್ಕೆ ವಾಟ್ಸಾಪ್‌ ಕಂಪೆನಿಯೇ ಅನುಮತಿಸಿತ್ತು. ಆದರೆ, ಇದು ಗೌಪ್ಯತೆ ಉಲ್ಲಂಘನೆಯನ್ನು ಹೆಚ್ಚಿಗೆ ಮಾಡುತ್ತಿರುವುದನ್ನು ಕಂಡು ಹೊಸ ನಿಯಮಕ್ಕೆ ನಾಂದಿಯಾಡಿದೆ.

ಭದ್ರತಾ ಸಮಸ್ಯೆ ಉಲ್ಬಣ

ಭದ್ರತಾ ಸಮಸ್ಯೆ ಉಲ್ಬಣ

ಈ ಸ್ಕ್ರೀನ್‌ ಶಾಟ್‌ ಹಾಗೂ ಸ್ಕ್ರೀನ್‌ ರೆಕಾರ್ಡ್‌ ನಿಂದ ಹೆಚ್ಚಿನ ಭದ್ರತಾ ದೋಷ ಕಂಡುಬಂದಿದ್ದರಿಂದ ವಾಟ್ಸಾಪ್‌ ಹೊಸ ಅಪ್‌ಡೇಟ್‌ ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಯಾರೇ ಆದರೂ ಸ್ಕ್ರೀನ್‌ಶಾಟ್ ಅಥವಾ ಸ್ಕ್ರೀನ್ ರೆಕಾರ್ಡ್ ಮಾಡಲು ಮುಂದಾದರೆ ವಾಟ್ಸಾಪ್‌ ಅದಕ್ಕೆ ಅನುಮತಿಸುವುದಿಲ್ಲ.

ಹೊಸ ನಿಯಮವೇನು?

ಹೊಸ ನಿಯಮವೇನು?

ನೀವೆನಾದರೂ ಗೊತ್ತಿದ್ದೋ ಅಥವಾ ಗೊತ್ತೊಲ್ಲದೆಯೋ ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಕಂಪೆನಿಯು ನೇರವಾಗಿ ಬಳಕೆದಾರರಿಗೆ ಎಚ್ಚರಿಕೆ ಸಂದೇಶದ ನೋಟಿಫಿಕೇಶನ್‌ ಒಂದನ್ನು ಕಳುಹಿಸುತ್ತದೆ. ಈ ಮೂಲಕ ಎಚ್ಚೆತ್ತುಕೊಂಡರೆ ಏನು ಸಮಸ್ಯೆ ಇರುವುದಿಲ್ಲ.

ನಿಮ್ಮ ವಾಟ್ಸಾಪ್ ನಿರ್ಬಂಧ

ನಿಮ್ಮ ವಾಟ್ಸಾಪ್ ನಿರ್ಬಂಧ

ವಾಟ್ಸಾಪ್‌ನ ಗೌಪ್ಯತೆ ನೀತಿಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆಯೂ ವಾಟ್ಸಾಪ್ ಮಾಹಿತಿ ನೀಡಿತ್ತು. ಅದರಂತೆ ಈಗ ನೀವು ಈ ಫೀಚರ್ಸ್‌ ಅನ್ನು ದುರುಪಯೋಗಪಡಿಸಿಕೊಂಡರೆ ನಿಮ್ಮ ವಾಟ್ಸಾಪ್‌ ಖಾತೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಸ್ಕ್ರೀನ್ ಶಾಟ್‌ ಮಾಡಿದರೂ ಪ್ರಯೋಜನವಿಲ್ಲ

ಸ್ಕ್ರೀನ್ ಶಾಟ್‌ ಮಾಡಿದರೂ ಪ್ರಯೋಜನವಿಲ್ಲ

ಅದೇನಾಗುತ್ತೋ ಆಗಲಿ ಎಂದು ಏನಾದರೂ ಮಾಡಿ ಎಂದುಕೊಂಡು ನೀವು ವಾಟ್ಸಾಪ್‌ ನೀತಿ ವಿರುದ್ಧ ಸ್ಕ್ರೀನ್‌ ಶಾಟ್‌ ಅಥವಾ ಸ್ಕ್ರೀನ್ ರೆಕಾರ್ಡ್‌ ಮಾಡಲು ಮುಂದಾದರೆ ಕೇವಲ ಬ್ಲ್ಯಾಕ್‌ ಡಿಸ್‌ಪ್ಲೇಯನ್ನಷ್ಟೇ ನೋಡಬಹುದಾಗಿದೆ. ಹಾಗೆಯೇ ಈ ಸಂದೇಶಗಳನ್ನು ಇತರರಿಗೆ ಶೇರ್‌ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ಎಚ್ಚರಿಕೆ ವಹಿಸಿ

ಎಚ್ಚರಿಕೆ ವಹಿಸಿ

ಇನ್ಮುಂದೆ ನಿಮ್ಮ ವಾಟ್ಸಾಪ್‌ ಅನ್ನು ಸಕ್ರಿಯವಾಗಿರಿಸಿಕೊಳ್ಳಲು ಈ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಅದರಲ್ಲೂ ಈ ನಿಯಮ ಪಾಲಿಸುವುದರಿಂದ ಇತರೆ ಬಳಕೆದಾರರ ಗೌಪ್ಯತೆಗೆ ನೀವು ಗೌರವ ಕೊಟ್ಟಂತೆ ಆಗುತ್ತದೆ. ಹೀಗಾಗಿ ನಿಮಗೆ ತಿಳಿದೋ ತಿಳಿಯದೆಯೋ ಯಾವುದೇ ಕಾಣಕ್ಕೂ ಈ ಫೀಚರ್ಸ್‌ನಲ್ಲಿ ಸ್ಕ್ರೀನ್‌ಶಾಟ್‌ ಹಾಗೂ ಸ್ಕ್ರೀನ್‌ ರೆಕಾರ್ಡ್‌ ಪ್ರಕ್ರಿಯೆ ಮಾಡುವುದಕ್ಕೆ ಮುಂದಾಗಬೇಡಿ.

Best Mobiles in India

English summary
whatsapp warning users to who take screenshot and screen record the messages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X