WhatsApp New Features : ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಅಚ್ಚರಿಯ ಫೀಚರ್ಸ್‌! ಏನೆಲ್ಲಾ ಉಪಯೋಗಗಳು!

|

ವಾಟ್ಸಾಪ್‌ ಅಪ್ಲಿಕೇಶನ್‌ ಮತ್ತೊಂದು ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್‌ ಈ ಫೀಚರ್ಸ್‌ ಮೂಲಕ ಇನ್ನಷ್ಟು ಉತ್ತಮ ಅನುಭವ ನೀಡುವುದಕ್ಕೆ ಮುಂದಾಗಿದೆ. ಸದ್ಯ ಈ ಹೊಸ ಫೀಚರ್ಸ್‌ ಅನ್ನು ಐಒಎಸ್‌ ಆವೃತ್ತಿಯಲ್ಲಿ ತರಲಿದೆ ಎಂದು ಹೇಳಲಾಗಿದೆ. ಇದನ್ನು ಇನ್‌ ಆಪ್‌ ಬ್ಯಾನರ್‌ ಎಂದು ಹೆಸರಿಸಲಾಗಿದೆ. ಇದರ ಮೂಲಕ ನೀವು ಅನೌನ್ಸ್‌ಮೆಂಟ್‌ ಗ್ರೂಪ್‌ನಲ್ಲಿರುವ ಸಂದೇಶಗಳಿಗೆ ರಿಯಾಕ್ಷನ್‌ ನೀಡುವುದಕ್ಕೆ ಸಾಧ್ಯವಾಗಲಿದೆ.

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಅಚ್ಚರಿಯ ಫೀಚರ್ಸ್‌! ಏನೆಲ್ಲಾ ಉಪಯೋಗಗಳು!

ಹೌದು, ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಇನ್‌ ಆಪ್‌ ಬ್ಯಾನರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಮೆಸೇಜ್‌ ರಿಯಾಕ್ಷನ್‌ ಮಾಡುವುದು ಸುಲಭವಾಗಲಿದೆ ಎಂದು ಹೇಳಲಾಗಿದೆ. ವಾಟ್ಸಾಪ್‌ ಅನ್ನು ಪ್ರಮುಖ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿ ಮಾಡುವ ಮೆಟಾ ಪ್ರಯತ್ನದ ಮುಂದುವರೆದ ಭಾಗವೇ ಈ ಹೊಸ ಆಯ್ಕೆ ಎಂದು ಹೇಳಲಾಗಿದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಐಒಎಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಇನ್‌ ಆಪ್‌ ಬ್ಯಾನರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಾಬೇಟಾ ಇನ್ಫೋ ವರದಿ ಮಾಡಿದೆ. ಇದು ಅನೌನ್ಸ್‌ಮೆಂಟ್‌ ಗ್ರೂಪ್‌ನಲ್ಲಿರುವ ಸಂದೇಶಗಳಿಕೆ ರಿಯಾಕ್ಷನ್‌ ನೀಡಲು ಸಹಾಯ ಮಾಡಲಿದೆ ಎಂದು ಹೇಳಲಾಗಿದೆ. ಜೊತೆಗೆ ಅನೌನ್ಸ್‌ಮೆಂಟ್‌ ಗ್ರೂಪ್‌ನಲ್ಲಿ ಮೆಸೇಜ್‌ ರಿಯಾಕ್ಸನ್‌ನಲ್ಲಿನ ಅಪ್ಡೇಟ್‌ ಲಭ್ಯವಿದ್ದಾಗ ಬಳಕೆದಾರರಿಗೆ ಆಲರ್ಟ್‌ ಮಾಡಲಿದೆ. ಇದು ಐಒಎಸ್‌ ಅಪ್ಲಿಕೇಶನ್‌ನ ಭವಿಷ್ಯದ ಅಪ್ಡೇಟ್‌ ಮೂಲಕ ಲಭ್ಯವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಅಚ್ಚರಿಯ ಫೀಚರ್ಸ್‌! ಏನೆಲ್ಲಾ ಉಪಯೋಗಗಳು!

ಇನ್ನು ಈ ಹೊಸ ಫೀಚರ್ಸ್‌ ಪ್ರವೇಶಿಸಬೇಕಾದರೆ ಆಪ್ ಸ್ಟೋರ್ ನಲ್ಲಿ ವಾಟ್ಸಾಪ್‌ ಅನ್ನು ಅಪ್ಡೇಟ್‌ ಮಾಡಬೇಕಾದ ಅಗತ್ಯವಇದೆ. ಸದ್ಯ ಈ ಫೀಚರ್ಸ್‌ ಅಭಿವೃದ್ದಿಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಇದರೊಂದಿಗೆ ವಾಟ್ಸಾಪ್‌ ತನ್ನ ಐಒಎಸ್‌ ಆವೃತ್ತಿಯಲ್ಲಿ ಗ್ರೂಪ್ ಅಡ್ಮಿನ್‌ಗಳಿಗೆ ಕೆಲವು ಹೊಸ ಶಾರ್ಟ್‌ಕಟ್‌ಗಳನ್ನು ಹೊರತಂದಿದೆ ಎಂದು ವರದಿಯಾಗಿದೆ. ಇದರಿಂದ ಗ್ರೂಪ್‌ ಅಡ್ಮಿನ್‌ಗಳು ಮತ್ತು ಗ್ರೂಪ್‌ನಲ್ಲಿ ಭಾಗವಹಿಸುವವರ ಜೊತೆ ಖಾಸಗಿಯಾಗಿ ಸಂವಹನ ನಡೆಸುವುದಕ್ಕೆ ಸಹಾಯ ಮಾಡಲಿದೆ.

ವಾಟ್ಸಾಪ್‌ನ ಈ ಹೊಸ ಅಪ್‌ಡೇಟ್ ಗ್ರೂಪ್‌ ಅಡ್ಮಿನ್‌ಗಳಿಗೆ ಸಾಕಷ್ಟು ಉಪಯುಕ್ತವಾಗಲಿದೆ. ಏಕೆಂದರೆ ಈಗ ವಾಟ್ಸಾಪ್‌ ಗ್ರೂಪ್‌ನಲ್ಲಿ 1024 ಮಂದಿ ಭಾಗವಹಿಸುವುದಕ್ಕೆ ಅವಕಾಶವಿರುವುದರಿಂದ ಪ್ರತ್ಯೇಕವಾಗಿ ಸಂವಹನ ನಡೆಸುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೂಲಗುಣಮಟ್ಟದ ಫೋಟೋಗಳನ್ನು ಸೆಂಡ್‌ ಮಾಡುವುದಕ್ಕೆ ಅವಕಾಶವನ್ನು ನೀಡಲು ಮುಂದಾಗಿದೆ. ಇದು ಇತ್ತೀಚಿನ ಬೀಟಾ ಅಪ್‌ಡೇಟ್ 2.23.2.11 ನಲ್ಲಿ ಲಭ್ಯವಾಗಲಿದೆ.

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಅಚ್ಚರಿಯ ಫೀಚರ್ಸ್‌! ಏನೆಲ್ಲಾ ಉಪಯೋಗಗಳು!

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸರ್ಚ್‌ ಬೈ ಡೇಟ್‌ ಫೀಚರ್ಸ್‌ ಸೇರ್ಪಡೆ ಮೂಲಕ ಬಳಕೆದಾರರಿಗೆ ಹೊಸ ಅವಕಾಶ ಕಲ್ಪಿಸಿದೆ. ಇದರಿಂದ ನೀವು ವಾಟ್ಸಾಪ್‌ನಲ್ಲಿ ನಿಮ್ಮ ಹಳೆಯ ಚಾಟ್‌ ಅನ್ನು ಸರ್ಚ್‌ ಮಾಡೋದು ಸುಲಭವಾಗಲಿದೆ. ದಿನಾಂಕದ ಆಧಾರದ ಮೇಲೆ ನೀವು ಸೆಂಡ್‌ ಮಾಡಿರುವ ಸಂದೇಶಗಳನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ. ಅಲ್ಲದೆ ಆ ದಿನದಂದ ನೀವು ಸೆಂಡ್‌ ಮಾಡಿದ ಫೋಟೋಗಳು, ವೀಡಿಯೋಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ವಟ್ಸಾಪ್‌ನಲ್ಲಿ ನೀವು ಬಹುಮುಖ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದು, ಅದರ ಬಗ್ಗೆ ಮತ್ತೊಮ್ಮೆ ತಿಳಿದುಕೊಳ್ಳಲು ಬಯಸಿದರೆ ಚಾಟ್‌ ವಿಂಡೋದಲ್ಲಿ ಹಳೆಯ ಸಂದೇಶವನ್ನು ಸರ್ಚ್‌ ಮಾಡಲು ಸಂದೇಶಗಳ್ನು ಸ್ಕ್ರೋಲ್‌ ಮಾಡುತ್ತಾ ಹೋಗಬೇಕಾಗುತ್ತದೆ. ಇದರಿಂದ ಸಾಕಷ್ಟು ಸಮಯ ಸ್ಕ್ರೋಲಿಂಗ್‌ನಲ್ಲಿಯೇ ಕಳೆಯುತ್ತಿದೆ. ಆದರೆ ಸರ್ಚ್‌ ಬೈ ಡೇಟ್‌ ಫೀಚರ್ಸ್‌ ನಿಮಗೆ ನೀವು ಸಂದೇಶ ಕಳುಹಿಸಿದ ದಿನಾಂಕ ನಮೂದಿಸಿದರೆ ಸಾಕು ಆ ದಿನಂದು ನೀವು ಕಳುಹಿಸಿದ ಸಂದೇಶಗಳನ್ನು ತೆರೆದಿಡುತ್ತದೆ. ಇದರಿಂದ ನೀವು ಸ್ಕ್ರೋಲಿಂಗ್‌ ಮಾಡಬೇಕಾದ ಅಗತ್ಯವೇ ಬರುವುದಿಲ್ಲ.

ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಅಚ್ಚರಿಯ ಫೀಚರ್ಸ್‌! ಏನೆಲ್ಲಾ ಉಪಯೋಗಗಳು!

ಇದರೊಂದಿಗೆ ವಾಟ್ಸಾಪ್‌ ಹೊಸ ಅಪ್ಡೇಟ್‌ನಲ್ಲಿ ಮೀಡಿಯಾ ಫೈಲ್‌ಗಳನ್ನು ಬೇರೆ ಅಪ್ಲಿಕೇಶನ್‌ಗಳಿಂದ ವಾಟ್ಸಾಪ್‌ಗೆ ಡೈರೆಕ್ಟ್‌ ಆಗಿ ಡ್ರ್ಯಾಗ್‌ ಮಾಡುವ ಅವಕಾಶ ನೀಡಲಿದೆ. ಇದರಿಂದ ನೀವು ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ನಲ್ಲಿರುವ ಫೋಟೋ, ಫೈಲ್‌, ವೀಡಿಯೊಗಳನ್ನು ವಾಟ್ಸಾಪ್‌ ಚಾಟ್‌ಗಳಿಗೆ ಶೇರ್‌ ಮಾಡಲು ಡ್ರ್ಯಾಗ್‌ ಮತ್ತು ಡ್ರಾಪ್‌ ಅನ್ನು ಬಳಸಬಹುದು ಎನ್ನಲಾಗಿದೆ. ಇನ್ನು ಈ ಎರಡೂ ಫೀಚರ್ಸ್‌ಗಳು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ವರದಿಯಾಗಿದೆ.

Best Mobiles in India

English summary
WhatsApp working on a new feature within community announcement group: Details Here

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X