ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?

|

ವಾಟ್ಸಾಪ್‌ನಲ್ಲಿ ಈಗಾಗಲೇ ಹಲವಾರು ಫೀಚರ್ಸ್‌ ಮೂಲಕ ಬಳಕೆದಾರರು ವಿಶೇಷ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಮ್ಯಾಕ್‌ನಲ್ಲಿ ವಾಟ್ಸಾಪ್‌ ಬಳಸುವುದಕ್ಕೆ ಅನುಕೂಲಕರವಾದ ಮ್ಯಾಕ್‌ಓಎಸ್‌ ಆಪ್‌ ಅನ್ನು ಸಹ ನಿನ್ನೆಯಷ್ಟೇ ಲಾಂಚ್‌ ಮಾಡಲಾಗಿದ್ದು, ಇದರ ಜೊತೆಗೆ ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಈಗ ಡ್ರಾಯಿಂಗ್ ಎಡಿಟರ್‌ ಮೂಲಕ ಹೊಸ ಸೌಲಭ್ಯಗಳನ್ನು ಕಲ್ಪಿಸಲು ವಾಟ್ಸಾಪ್‌ ಮುಂದಾಗಿದೆ.

ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?

ಹೌದು, ವಾಟ್ಸಾಪ್‌ ಡ್ರಾಯಿಂಗ್ ಎಡಿಟರ್ ಟೂಲ್‌ಗಾಗಿ ಟೆಕ್ಸ್ಟ್ ಎಡಿಟರ್ ಎಂಬ ಹೊಸ ಫೀಚರ್ಸ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಸೌಲಭ್ಯ ಈಗಾಗಲೇ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಹಾಗಿದ್ರೆ, ಈ ಟೆಕ್ಸ್ಟ್ ಎಡಿಟರ್ರ್ ಹೇಗೆ ಕೆಲಸ ಮಾಡಲಿದೆ? ಇದರೊಂದಿಗೆ ಪಠ್ಯದ ಶೈಲಿ ಬದಲಾವಣೆ, ಪಠ್ಯ ಜೋಡಣೆ ಫೀಚರ್ಸ್‌ಗಳು ಹೇಗೆಲ್ಲಾ ಉಪಯೋಗ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ವಾಟ್ಸಾಪ್‌ನಲ್ಲಿ ಟೆಕ್ಸ್ಟ್ ಎಡಿಟರ್ ಫೀಚರ್ಸ್‌
ಮೆಟಾ ಮಾಲೀಕತ್ವದ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್ ಆದ ವಾಟ್ಸಾಪ್‌ ತನ್ನ ಡ್ರಾಯಿಂಗ್ ಟೂಲ್‌ಗಾಗಿ ಮರುವಿನ್ಯಾಸಗೊಳಿಸಲಾದ ಟೆಕ್ಸ್ಟ್ ಎಡಿಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಈ ಡ್ರಾಯಿಂಗ್ ಎಡಿಟರ್ ಅನ್ನು ಸುಧಾರಿಸಲು ಮೂರು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು WABetaInfo ತಿಳಿಸಿದೆ.

ವಾಟ್ಸಾಪ್‌ನಲ್ಲಿ ಪಠ್ಯದ ಶೈಲಿ ಬದಲಾವಣೆ
ಇನ್ನು ಈ ಟೆಕ್ಸ್ಟ್ ಎಡಿಟರ್ ಫೀಚರ್ಸ್‌ ನಲ್ಲಿ ಕೀಬೋರ್ಡ್ ಮೇಲೆ ಪ್ರದರ್ಶಿಸಲಾದ ಫಾಂಟ್ ಆಯ್ಕೆಗಳಲ್ಲಿ ಒಂದನ್ನು ಟ್ಯಾಪ್ ಮಾಡುವ ಮೂಲಕ ವಿವಿಧ ಫಾಂಟ್‌ಗಳನ್ನು ತ್ವರಿತವಾಗಿ ಬದಲಾಯಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಈ ಮೂಲಕ ಬಳಕೆದಾರರು ತಮಗಿಷ್ಟವಾದ ಶೈಲಿಯ ಟೆಕ್ಸ್ಟ್ ಅನ್ನು ಬಳಕೆ ಮಾಡಿಕೊಂಡು ವಾಟ್ಸಾಪ್‌ನಲ್ಲಿ ತಲ್ಲೀನವಾಗಬಹುದಾಗಿದೆ.

ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?

ವಾಟ್ಸಾಪ್‌ನಲ್ಲಿ ಪಠ್ಯ ಜೋಡಣೆ
ಎರಡನೆಯ ಫೀಚರ್ಸ್‌ ಪಠ್ಯ ಜೋಡಣೆ (text alignment). ಇದರ ಸಹಾಯದಿಂದ ಬಳಕೆದಾರರು ಪಠ್ಯವನ್ನು ಎಡ, ಮಧ್ಯ ಅಥವಾ ಬಲಕ್ಕೆ ಸುಲಭವಾಗಿ ಇರಿಸಲು ಸಾಧ್ಯವಾಗುತ್ತದೆ. ಅಂದರೆ ಫೋಟೋಗಳು, ವಿಡಿಯೋ, GIF ಗಳ ಮೇಲೆ ಪಠ್ಯವನ್ನು ಫಾರ್ಮಾಟ್ ಮಾಡಲು ಬಳಕೆದಾರರಿಗೆ ಹೆಚ್ಚಿನ ಕಂಟ್ರೋಲ್‌ ಅನ್ನು ಈ ಫೀಚರ್ಸ್‌ ನೀಡಲಿದೆ.

ವಾಟ್ಸಾಪ್‌ ಪಠ್ಯದ ಹಿನ್ನೆಲೆ ಬಣ್ಣ ಬದಲಾವಣೆ
ಇನ್ನು ಮೂರನೇ ಫೀಚರ್ಸ್‌ ಎಂದರೆ ಪಠ್ಯದ ಹಿನ್ನೆಲೆ ಬಣ್ಣವನ್ನು ಬದಲಾವಣೆ ಮಾಡುವ ಅವಕಾಶ. ಇದು ಬಳಕೆದಾರರಿಗೆ ಸುಲಭವಾಗಿ ಪಠ್ಯದ ಹಿನ್ನೆಲೆ ಬಣ್ಣವನ್ನು ಬದಲಾಯಿಸುವಲ್ಲಿ ಸಹಕಾರ ನೀಡುವುದರ ಜೊತೆಗೆ ಪಠ್ಯವನ್ನು ಪ್ರತ್ಯೇಕಿಸಲು ಇದು ಸುಲಭವಾಗಿ ಸಹಾಯ ಮಾಡಲಿದೆ. ಈ ಮೂಲಕ ನೀವು ಬರೆಯುವ ಪಠ್ಯ ಆಕರ್ಷಕ ನೋಟದೊಂದಿಗೆ ಕಾಣಿಸಿಕೊಳ್ಳುತ್ತವೆ.

ಇನ್ನು ಈ ಹೊಸ ಟೆಕ್ಸ್ಟ್ ಎಡಿಟಿಂಗ್‌ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು, ಮುಂದೆ ನವೀಕೃತಗೊಂಡ ಆಪ್‌ ಅಪ್‌ಡೇಟ್‌ ನಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲು ವಾಟ್ಸಾಪ್‌ ಮುಂದಾಗಿದೆ ಎಂದು ತಿಳಿದುಬಂದಿದೆ.

ಗುಣಮಟ್ಟದ ಫೋಟೋ ಕಳುಹಿಸಿ
ಇದರ ನಡುವೆ ಬಳಕೆದಾರರು ಸೆರೆಹಿಡಿಯಲಾದ ಅದೇ ಗುಣಮಟ್ಟದಲ್ಲಿ ಚಿತ್ರಗಳನ್ನು ಸೆಂಡ್‌ ಮಾಡುವ ಫೀಚರ್ಸ್‌ ಬಗ್ಗೆ ಘೋಷಣೆ ಮಾಡಲಾಗಿತ್ತು. ಅದರಂತೆ ಡ್ರಾಯಿಂಗ್ ಟೂಲ್ ಹೆಡರ್‌ನಲ್ಲಿ ಹೊಸ ಸೆಟ್ಟಿಂಗ್ ಐಕಾನ್ ಅನ್ನು ನೀಡಲು ವಾಟ್ಸಾಪ್‌ ಮುಂದಾಗಿದೆ.ಈ ಮೂಲಕ ಯಾವುದೇ ಫೋಟೋದ ಗುಣಮಟ್ಟವನ್ನು ಕಾನ್ಫಿಗರ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಹಾಗೆಯೇ ಫೋಟೋಗಳ ಗುಣಮಟ್ಟದ ಮೇಲೆ ಹೆಚ್ಚಿನ ಕಂಟ್ರೋಲ್‌ ಅನ್ನು ಬಳಕೆದಾರರಿಗೆ ಒದಗಿಸುತ್ತದೆ.

ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?

ವಾಟ್ಸಾಪ್‌ ವಾಯ್ಸ್‌ ನೋಟ್‌
ಇದರೊಂದಿಗೆ ಕೆಲವು ದಿನಗಳ ಹಿಂದಷ್ಟೇ ವಾಟ್ಸಾಪ್‌ ಸ್ಟೇಟಸ್‌ ವಿಭಾಗಕ್ಕೆ ವಾಯ್ಸ್‌ ನೋಟ್‌ ಫೀಚರ್ಸ್‌ ಅನ್ನು ಘೋಷಣೆ ಮಾಡಿದೆ. ಅಂದರೆ, ಈ ಫೀಚರ್ಸ್‌ ಮೂಲಕ ಬಳಕೆದಾರರು ತಮ್ಮದೇ ಆದ ವಾಯ್ಸ್‌ ನೋಟ್‌ ಅನ್ನು ಸ್ಟೇಟಸ್‌ನಲ್ಲಿ ಶೇರ್‌ ಮಾಡಬಹುದು. ಇದರೊಂದಿಗೆ ಶೀರ್ಷಿಕೆಯೊಂದಿಗೆ ಮೀಡಿಯಾ ಫೈಲ್‌ ಅನ್ನು ಫಾರ್ವರ್ಡ್ ಮಾಡುವ ಫೀಚರ್ಸ್‌ ಅನ್ನು ಸಹ ಪರಿಚಯಿಸಲಾಗಿದೆ. ಹಾಗೆಯೇ ಯಾವೆಲ್ಲಾ ಚಾಟ್‌ಗಳನ್ನು ಓದಿಲ್ಲ ಎಂಬುದನ್ನು ಸುಲಭವಾಗಿ ಪತ್ತೆ ಮಾಡಲು ಹೊಸ ಅನುಕೂಲಕರ ಸೌಲಭ್ಯವನ್ನು ಸಹ ಕಲ್ಪಿಸಲಾಗಿದ್ದು, ಈ ಮೂಲಕ ವಾಟ್ಸಾಪ್‌ ಬಳಕೆದಾರರಿಗೆ ಅಗತ್ಯ ಹಾಗೂ ವಿಶೇಷ ಫೀಚರ್ಸ್‌ಗಳನ್ನು ವಾಟ್ಸಾಪ್ ಪರಿಚಯಿಸಿಕೊಂಡು ಬರುತ್ತಿದೆ.

Best Mobiles in India

English summary
WhatsApp is already providing many features to users. Meanwhile, WhatsApp is working on a new feature called a text editor for the drawing editor tool. details are in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X