ನಿಮಗೆ ಯಾವ ಫೋನ್ ಸೂಕ್ತ ಎಂದು ಬಲ್ಲಿರಾ?
ಸ್ಮಾರ್ಟ್‌ಫೋನ್‌ಗಳ ವಿಷಯದಲ್ಲಿ ಅತ್ಯುತ್ತಮ ಎಂಬ ಮಾತು ಬಂದಾಗ ಆ ಫೋನ್‌ಗಳಲ್ಲಿ ಏನಾದರೂ ವಿಶೇಷತೆ ಇದೆ ಎಂಬುದನ್ನು ನಾವು ಮನಗಾಣಲೇಬೇಕು. ಇಂದು ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳು ಒಂದಿಲ್ಲೊಂದು ವಿಶೇಷತೆಗಳಿಂದ ಬಳಕೆದಾರರ ಮನವನ್ನು ಸೆಳೆಯುತ್ತಿವೆ. ಯಾವ ಫೋನ್ ಅನ್ನು ಖರೀದಿಸಬೇಕು ಎಂಬ ಗೊಂದಲ ಈ ಸಮಯದಲ್ಲಿ ಅವರ ಮನದಲ್ಲಿ ಸುಳಿಯುವುದು ಸಾಮಾನ್ಯ.
ಇದನ್ನೂ ಓದಿ: ರೂ 7,000 ದ ಒಳಗೆ ಖರೀದಿಸಬಹುದಾದ ಬಜೆಟ್ ಸ್ನೇಹಿ ಫೋನ್‌ಗಳು
ಅದಕ್ಕೆಂದೇ ಇಂದಿನ ಲೇಖನದಲ್ಲಿ ಬಜೆಟ್ ಬೆಲೆಗೆ ಅತ್ಯಂತ ಸೂಕ್ತ ಎಂದೆನಿಸುವ ಎರಡು ಅದ್ಭುತ ಫೋನ್‌ಗಳೊಂದಿಗೆ ನಾವು ನಿಮ್ಮನ್ನು ಸಮೀಪಿಸುತ್ತಿದ್ದೇವೆ. ಈ ಫೋನ್‌ಗಳು ರೂ 6,999 ರಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೋನ್‌ಗಳ ವಿಶೇಷತೆಗಳನ್ನು ಅರಿಯೋಣ.

ಶ್ಯೋಮಿ ರೆಡ್ಮೀ 2
ರೆಡ್ಮೀ 1ಎಸ್‌ನ ನಂತರದ ಆವೃತ್ತಿ ಎಂದೆನಿಸಿರುವ ಶ್ಯೋಮಿ ರೆಡ್ಮೀ 2 ಸ್ಮಾರ್ಟ್‌ಫೋನ್‌ಗೆ ಹೇಳಿ ಮಾಡಿಸಿದ್ದಾಗಿದೆ. 4.7 ಇಂಚಿನ ಗಾತ್ರದೊಂದಿಗೆ ಬಂದಿರುವ ಈ ಫೋನ್ ಸಾಮಾನ್ಯ ಸ್ಮಾರ್ಟ್‌ಫೋನ್‌ನಂತೆ ಕಂಡುಬಂದರೂ ಸರಳವಾಗಿದೆ.

ಶ್ಯೋಮಿ ರೆಡ್ಮೀ 2: ಡಿಸ್‌ಪ್ಲೇ
4.7 ಇಂಚಿನ ಐಪಿಎಸ್ ಸ್ಕ್ರೀನ್‌ನೊಂದಿಗೆ ಬಂದಿರುವ ಈ ಡಿವೈಸ್ 720x1280 ರೆಸಲ್ಯೂಶನ್ ಅನ್ನು ಹೊಂದಿದೆ. ಇನ್ನು ಸಣ್ಣ ಗಾತ್ರದ ಡಿಸ್‌ಪ್ಲೇ ಎಂದರೆ ಉತ್ತಮ ಪಿಕ್ಸೆಲ್ ಡೆನ್ಸಿಟಿ ಎಂಬ ಮಾತನ್ನು ನಾವಿಲ್ಲಿ ಒಪ್ಪಲೇಬೇಕು. ಗೋರಿಲ್ಲಾ ಗ್ಲಾಸ್ 2 ರಕ್ಷಣೆಯೊಂದಿಗೆ ಈ ಫೋನ್ ಬಂದಿದೆ.

ಶ್ಯೋಮಿ ರೆಡ್ಮೀ 2: ಹಾರ್ಡ್‌ವೇರ್
1.2GHZ ಕ್ವಾಲ್‌ಕಾಮ್ ಎಸ್4 10 ಸಾಕ್ ಕಾರ್ಯನಿರ್ವಹಣೆಯನ್ನು ಇದು ಹೊಂದಿದ್ದು 4 ಜಿ ಸೌಲಭ್ಯವನ್ನು ಇದು ನೀಡುತ್ತಿದೆ. 2,200mAh ಬ್ಯಾಟರಿಯನ್ನು ಇದು ಒಳಗೊಂಡಿದ್ದು 4ಜಿಯಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಶ್ಯೋಮಿ ರೆಡ್ಮೀ 2: ಓಎಸ್
ಶ್ಯೋಮಿ ತನ್ನದೇ ಬಳಕೆದಾರ ಇಂಟರ್ಫೇಸ್ ಅನ್ನು ಚಾಲನೆ ಮಾಡುತ್ತಿದ್ದು, ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿದ್ದು, ಲಾಲಿಪಪ್ ಆವೃತ್ತಿ ಇದರಲ್ಲಿ ಬರಲಿದೆಯೇ ಎಂಬುದಕ್ಕೆ ಖಾತ್ರಿ ಇಲ್ಲ.

ಶ್ಯೋಮಿ ರೆಡ್ಮೀ 2: ಕ್ಯಾಮೆರಾ
ಶ್ಯೋಮಿ ರೆಡ್ಮೀ 2, ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಅನ್ನು ಹೊಂದಿದ್ದು ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ. ಇದು ಎಚ್‌ಡಿಆರ್ ಮತ್ತು ಬಿಎಸ್‌ಐ ಸೆನ್ಸಾರ್‌ಗೆ ಬೆಂಬಲವನ್ನು ಒದಗಿಸುತ್ತಿದ್ದು ಅತ್ಯುತ್ತಮ ಫೋಟೋಗ್ರಫಿಗೆ ಸಹಕಾರಿ ಎಂದೆನಿಸಿದೆ.

ಮೋಟೋ ಇ 2 (ಸೆಕೆಂಡ್ ಜನರೇಶನ್): ವಿನ್ಯಾಸ
ಮೋಟೋ ಜಿಯನ್ನು ಹೊರತರಬೇಕಾದರೆ ಕಂಪೆನಿ ಪ್ರಸ್ತುತಪಡಿಸಿದ್ದ ಅದೇ ಪ್ರಯತ್ನ ಮತ್ತು ಏಕಾಗ್ರತೆಯನ್ನು ಮೋಟೋ ಇ ತನ್ನ ಸೆಕೆಂಡ್ ಜನರೇಶನ್‌ಗೂ ಪ್ರಸ್ತುತಪಡಿಸಿದೆ. ರೂ 7,000 ದ ಒಳಗಿನ ಫೋನ್ ಶ್ರೇಣಿಗೆ ಸೂಕ್ತವಾಗಿರುವ ಮೋಟೋ ಇ2, ಅತ್ಯುನ್ನತವಾಗಿದೆ.

ಮೋಟೋ ಇ 2 (ಸೆಕೆಂಡ್ ಜನರೇಶನ್): ಡಿಸ್‌ಪ್ಲೇ
ಮೋಟೋ ಇಗಿಂತಲೂ ಮೋಟೋ ಇ 2 ಉತ್ತಮವಾಗಿದೆ. ಇದು 4.5 ಇಂಚಿನ ಐಪಿಎಸ್ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು 540x960 ರೆಸಲ್ಯೂಶನ್ ಇದರಲ್ಲಿದೆ. ಇದು ಗೋರಿಲ್ಲಾ ಗ್ಲಾಸ್ 3 ಸುರಕ್ಷಾ ಕವಚವನ್ನು ಹೊಂದಿದ್ದು ಅಸಾಧಾರಣವಾಗಿದೆ.

ಮೋಟೋ ಇ 2 (ಸೆಕೆಂಡ್ ಜನರೇಶನ್): ಹಾರ್ಡ್‌ವೇರ್
1.2GHz ಕ್ವಾಡ್‌ಕೋರ್ ಕೋರ್ಟೆಕ್ಸ್ A7 ಪ್ರೊಸೆಸರ್ ಅನ್ನು ಇದು ಹೊಂದಿದ್ದು ನಮ್ಮ ಹೆಚ್ಚಿನ ಅವಶ್ಯಕತೆಗಳನ್ನು ಪೂರೈಸುವ ಮಾದರಿಯಲ್ಲಿ ಈ ಫೋನ್ ಬಂದಿದೆ. ಗೇಮ್ಸ್ ಆಡಲು ಈ ಸೆಟ್ ಹೇಳಿಮಾಡಿಸಿದ್ದಾಗಿದ್ದು, ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಡ್ಯುಯಲ್ ಸಿಮ್ ಫೋನ್ ಆಗಿರುವ ಇದು 2ಜಿ ಮತ್ತು 3ಜಿಗೆ ಸೀಮಿತವಾಗಿದೆ.

ಮೋಟೋ ಇ 2 (ಸೆಕೆಂಡ್ ಜನರೇಶನ್): ಓಎಸ್
ಮೋಟೋ ಇ2 ಆಂಡ್ರಾಯ್ಡ್ ಲಾಲಿಪಪ್ 5.0 ವೊಂದಿಗೆ ಬಂದಿದ್ದು, ಡಿವೈಸ್‌ನಲ್ಲಿ ಹೆಚ್ಚು ಆಕರ್ಷಕ ಭಾಗ ಇದಾಗಿದೆ. ಸ್ಲೀಪ್ ಮೋಡ್, ಶೇಕ್ ಟು ವೇಕಪ್ ಫೋನ್ ಮೊದಲಾದ ವಿಶೇಷತೆಗಳು ಮೋಟೋ ಇ2 ನಲ್ಲಿ ಲಭ್ಯವಿದೆ.

ಮೋಟೋ ಇ 2 (ಸೆಕೆಂಡ್ ಜನರೇಶನ್): ಕ್ಯಾಮೆರಾ
ಮೋಟೋ ಇ2 ಮುಂಭಾಗದಲ್ಲಿ 0.3 ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು ರಿಯರ್ ಕ್ಯಾಮೆರಾ 5 ಎಮ್‌ಪಿಯಾಗಿದೆ ಆಟೊ ಫೋಕಸ್ ಇದರಲ್ಲಿದ್ದು ಫ್ಲ್ಯಾಶ್ ಇಲ್ಲ.


Click it and Unblock the Notifications








