ಪಾಕ್‌ ಓಟಿಟಿ ಪ್ಲಾಟ್‌ಫಾರ್ಮ್ ನಿಷೇಧಿಸಿದ ಭಾರತ; ಕಾರಣ ಏನು ಗೊತ್ತಾ!?

|

ಭಾರತ ಹಾಗೂ ಪಾಕ್ ನಡುವೆ ಮುಸುಕಿನ ಗುದ್ದಾಟಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದರ ನಡುವೆ ಡಿಜಿಟಲ್ ವಲಯದಲ್ಲೂ ಸಹ ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಯಾಕೆಂದರೆ ಭಾರತ ವಿರೋಧಿ ಪ್ರಚಾರ ಮತ್ತು ಭಯೋತ್ಪಾದಕ ದಾಳಿಯ ಬಗ್ಗೆ ತಪ್ಪು ಮಾಹಿತಿಯ ಪ್ರಸಾರ ಮಾಡಿದ್ದಕ್ಕಾಗಿ ಭಾರತ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ನಿಯಮದಿಂದ ಸಾಕಷ್ಟು ಭಾರತೀಯರಿಗೆ ಸಂತಸವಾಗಿದೆ.

ಕೊರೊನಾ

ಹೌದು, ಕೊರೊನಾ ನಂತರ ಸಾಕಷ್ಟು ಓಟಿಟಿ ಪ್ಲಾಟ್‌ಫಾರ್ಮ್‌ಗಳು ವೆಬ್‌ಶೋಗಳನ್ನು ನಡೆಸಿಕೊಂಡು ಬರುತ್ತಿವೆ. ಅದೇ ರೀತಿ ಪಾಕ್‌ನಲ್ಲೂ ಸಹ ಈ ಬೆಳವಣಿಗೆ ಕಂಡುಬಂದಿದ್ದು, ಅಲ್ಲಿನ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಭಾರತದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದು, ಇದರ ವಿರುದ್ಧ ಭಾರತ ಸರ್ಕಾರ ಎಚ್ಚರಿಕೆ ವಹಿಸಿದೆ. ಅದರಂತೆ ಸಂಬಂಧಿಸಿದ ಓಟಿಟಿ ಪ್ಲಾಟ್‌ಫಾರ್ಮ್‌ ಅನ್ನು ಬ್ಯಾನ್‌ ಮಾಡಲು ಮುಂದಾಗಿದೆ. ಹಾಗಿದ್ರೆ ಯಾವ ವಿಷಯದ ಮೇಲೆ ಭಾರತದ ವಿರುದ್ಧ ಶೋ ಮಾಡಲಾಗಿದೆ ಎಂಬ ವಿವರಕ್ಕಾಗಿ ಈ ಲೇಖನ ಓದಿ.

ನಕಲಿ ಶೋ ಯಾವುದು?

ನಕಲಿ ಶೋ ಯಾವುದು?

ಭಾರತದ ಬಗ್ಗೆ ಸದಾ ಕಿಡಿಕಾರುತ್ತಿರುವ ಪಾಕ್‌ ಈಗ ಉತ್ತರ ಪ್ರದೇಶದ ಬಾಬರಿ ಮಸೀದಿ ಧ್ವಂಸ ಮತ್ತು ಪಂಜಾಬ್‌ನ ಆಪರೇಷನ್ ಬ್ಲೂ ಸ್ಟಾರ್‌ನಂತಹ ಹಲವಾರು ಸೂಕ್ಷ್ಮ ವಿಷಯಗಳ ಕುರಿತು ತಪ್ಪು ಮಾಹಿತಿಯನ್ನು ನೀಡುತ್ತಿದೆ ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಪಾಕಿಸ್ತಾನದ ಓಟಿಟಿ ಪ್ಲಾಟ್‌ಫಾರ್ಮ್ ವೆಬ್‌ಸೈಟ್ ವಿಡ್ಲಿ ಟಿವಿಯನ್ನು ಭಾರತದಲ್ಲಿ ನಿಷೇಧಿಸಿದೆ.

ವಿಡ್ಲಿ ಟಿವಿ ಮಾಡಿದ್ದೇನು?

ವಿಡ್ಲಿ ಟಿವಿ ಮಾಡಿದ್ದೇನು?

ಓಟಿಟಿ ಪ್ಲಾಟ್‌ಫಾರ್ಮ್ ವೆಬ್‌ಸೈಟ್ ವಿಡ್ಲಿ ಟಿವಿ ಇತ್ತೀಚೆಗೆ 26/11 ಮುಂಬೈ ಭಯೋತ್ಪಾದನಾ ದಾಳಿಯ ವಾರ್ಷಿಕೋತ್ಸವದಂದು 'ಸೇವಕ್: ದಿ ಕನ್ಫೆಷನ್ಸ್' ಎಂಬ ವೆಬ್ ಸರಣಿಯನ್ನು ಲಾಂಚ್‌ ಮಾಡಿತ್ತು. ಈ ವೆಬ್‌ ಸರಣಿಯು ಭಾರತದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕಾರಕವಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಈ ವೆಬ್‌ಸೈಟ್‌ನಲ್ಲಿ ಮೂರು ಸಂಚಿಕೆಗಳನ್ನು ಪ್ರಸಾರ ಮಾಡಿದೆ.

ಸಚಿವಾಲಯ ಹೇಳಿದ್ದೇನು?

ಸಚಿವಾಲಯ ಹೇಳಿದ್ದೇನು?

ಸೇವಕ್‌ ಎಂಬ ಪ್ರಚೋದನಕಾರಿ ಮತ್ತು ಸಂಪೂರ್ಣ ಸುಳ್ಳು ಇರುವ ವೆಬ್ ಸರಣಿಯನ್ನು ಪಾಕಿಸ್ತಾನ ಮೂಲದ ವಿಡ್ಲಿ ಟಿವಿ ಪ್ರಸಾರ ಮಾಡುತ್ತಿದೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಮಾಹಿತಿ ನೀಡಿದ್ದಾರೆ. ಹಾಗೆಯೇ ವಿಡ್ಲಿ ಟಿವಿಯಲ್ಲಿ ತೋರಿಸುತ್ತಿರುವ ವಿಷಯವು ಭಾರತ ವಿರೋಧಿ ನಿರೂಪಣೆಯನ್ನು ಹೊಂದಿದೆ. ಹಾಗೆಯೇ ದೇಶದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ವರದಿಯಾಗಿದೆ. ಇದಿಷ್ಟೇ ಅಲ್ಲದೆ, ಭಾರತದ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವಾರು ಸೂಕ್ಷ್ಮ ವಿಷಯಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಹೇಳಿದೆ.

ವೆಬ್‌ ಸರಣಿಯಲ್ಲಿ ತೋರಿಸಿದ ವಿಷಯ ಯಾವುದು?

ವೆಬ್‌ ಸರಣಿಯಲ್ಲಿ ತೋರಿಸಿದ ವಿಷಯ ಯಾವುದು?

ವಿಡ್ಲಿ ಟಿವಿಯ ಸೇವಕ್‌ನಲ್ಲಿ ಆಪರೇಷನ್ ಬ್ಲೂ ಸ್ಟಾರ್ ಮತ್ತು ಅದರ ನಂತರದ ಘಟನೆಗಳು, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ, ಗ್ರಹಾಂ ಸ್ಟೇನ್ಸ್ ಎಂಬ ಕ್ರಿಶ್ಚಿಯನ್ ಮಿಷನರಿ ಹತ್ಯೆ, ಮಾಲೆಗಾಂವ್ ಸ್ಫೋಟಗಳು, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳು ಮತ್ತು ಅಂತರರಾಜ್ಯಗಳ ಸಮಸ್ಯೆ, ಸಟ್ಲೆಜ್ ಯಮುನಾ ಲಿಂಕ್ ಕಾಲುವೆಗೆ ಸಂಬಂಧಿಸಿದ ನದಿ ನೀರಿನ ವಿವಾದ ಸೇರಿದಂತೆ ಇನ್ನಿತರೆ ವಿಷಯಗಳ ಮೇಲೆ ಕಥೆ ರೂಪಿಸಲಾಗಿದೆ.

ಓಟಿಟಿ

ಪಾಕಿಸ್ತಾನ ಮೂಲದ ಓಟಿಟಿ ಪ್ಲಾಟ್‌ಫಾರ್ಮ್‌ನ ವಿಡ್ಲಿ ಟಿವಿ ವೆಬ್‌ಸೈಟ್, ಎರಡು ಮೊಬೈಲ್ ಆಪ್‌ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಹಾಗೂ ಸ್ಮಾರ್ಟ್ ಟಿವಿ ಆಪ್‌ ಸೇರಿದಂತೆ ಪಾಕಿಸ್ತಾನ ಮೂಲದ ಹಲವಾರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ವಿಡ್ಲಿ

ಅದರಂತೆ ವಿಡ್ಲಿ ಟಿವಿ ಪಾಕಿಸ್ತಾನಿ ಕಂಪನಿಗಳು ಅಭಿವೃದ್ಧಿಪಡಿಸಿದ ಹೊಸ ಓಟಿಟಿ ಪ್ಲಾಟ್‌ಫಾರ್ಮ್ ಆಗಿದ್ದು, ಇದರ ಸೇವೆಗಳು ಜಗತ್ತಿನಾದ್ಯಂತ ಲಭ್ಯವಿದೆ. ವಿಡ್ಲಿ ಟಿವಿಯಲ್ಲಿ ಲಭ್ಯವಿರುವ ಕಂಟೆಂಟ್‌ ಅನ್ನು ಮೊಬೈಲ್ ಅಥವಾ ಕಂಪ್ಯೂಟರ್ ಡಿವೈಸ್‌ಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ ಹಾಗೆಯೇ ಚಂದಾದಾರಿಕೆ ಆಯ್ಕೆ ಸಹ ಲಭ್ಯ ಇದೆ. ಅದರಂತೆ ಭಾರತದಲ್ಲಿ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಭಾಗವಾಗಿ ಸರ್ಕಾರ ಈ ರೀತಿಯ ಪ್ಲಾಟ್‌ಫಾರ್ಮ್‌ ಅನ್ನು ಬ್ಯಾನ್‌ ಮಾಡುವ ಕಾರ್ಯಕ್ಕೆ ಮುಂದಾಗಿದೆ.

Best Mobiles in India

English summary
Why Indian Govt has banned Pakistani OTT platform Vidly TV.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X